HOME » NEWS » Lifestyle » SAY GOODBYE TO PREMATURE GREYING WITH THIS SECRET TIP STG KVD

ಕೂದಲು ಬೆಳ್ಳಗಾಗದಿರಲು ಈ ಆಹಾರಗಳನ್ನು ಸೇವಿಸಿದರೆ ಸಾಕು.. ಡೈ ಸಹವಾಸ ತಪ್ಪುತ್ತದೆ

ಕೂದಲಿನಲ್ಲಿ ಕಡಿಮೆ ಮೆಲನಿನ್ ಮತ್ತು ವರ್ಣದ್ರವ್ಯಕ್ಕೆ ಕಾರಣವಾಗಿ ಅದು ಬೆಳ್ಳಗಾಗಿ ಕಾಣುತ್ತದೆ. ಕೂದಲು ಬೆಳ್ಳಗಾಗುವುದು ವಯಸ್ಸಾಗುವುದರ ಲಕ್ಷಣ ಆದರೆ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಹೆಚ್ಚಿನವರಿಗೆ ಒತ್ತಡದಾಯಕವಾಗಿರುತ್ತದೆ.

Trending Desk
Updated:June 18, 2021, 6:45 AM IST
ಕೂದಲು ಬೆಳ್ಳಗಾಗದಿರಲು ಈ ಆಹಾರಗಳನ್ನು ಸೇವಿಸಿದರೆ ಸಾಕು.. ಡೈ ಸಹವಾಸ ತಪ್ಪುತ್ತದೆ
ಸಾಂದರ್ಭಿಕ ಚಿತ್ರ
  • Share this:

ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಆಹಾರ ತಜ್ಞೆ ಪೂಜಾ ಮಖೀಜಾ ಅವರ ಈ ಸಲಹೆಗಳನ್ನು ಪಾಲಿಸಿದರೆ, ಹಿಂದೆಂದೂ ಇರದಂತಹ ಸುಂದರ ಕೂದಲನ್ನು ಹೊಂದುವುದರಲ್ಲಿ ಸಂಶಯವಿಲ್ಲ. ಕೂದಲು ಅಕಾಲಿಕವಾಗಿ ಬೆಳ್ಳಗಾಗುತ್ತಿದ್ದರೆ, ಸಾಮಾನ್ಯವಾಗಿ ಅದಕ್ಕೆ ಕಲುಷಿತ ವಾತಾವರಣ, ರಾಸಾಯನಿಕಯುಕ್ತ ಉತ್ಪನ್ನಗಳು ಮತ್ತು ಒತ್ತಡ ಕಾರಣ ಎನ್ನುತ್ತಾರೆ. ಅದು ಸುಳ್ಳಲ್ಲ, ಆದರೆ ಕೂದಲು ಅಕಾಲಿಕವಾಗಿ ಬೆಳ್ಳಗಾಗಲು ಇನ್ನೂ ಒಂದು ಕಾರಣವಿದೆ. ಅದೇ ಪೋಷಕಾಂಶಗಳ ಕೊರತೆ. ಹಾಗಾದರೆ ಅದಕ್ಕೆ ಏನು ಮಾಡಬೇಕು?


ಆಹಾರತಜ್ಞೆ ಪೂಜಾ ಮಖೀಜಾ, ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪೋಷಕಾಂಶಗಳನ್ನು ಕೊನೆಯಲ್ಲಿ ಪಡೆಯುವ ಭಾಗಗಳು ಕೂದಲುಗಳು, ಹಾಗಾಗಿಯೇ ಅವು ತೊಂದರೆಯನ್ನು ಅನುಭವಿಸುತ್ತವೆ. ನಿಮ್ಮ ನೆತ್ತಿಯ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸಲು , ಕೆಲವು ನಿರ್ದಿಷ್ಟ ಪೋಷಕಾಂಶಗಳನ್ನು ಹೆಚ್ಚಾಗಿ ಸೇವಿಸುವುದು ಅಗತ್ಯ ಎಂದು ತಿಳಿಸಿದ್ದಾರೆ. ಕೂದಲು ಆಕಾಲಿಕವಾಗಿ ಬೆಳ್ಳಗಾಗದಂತೆ ತಡೆಯಲು ಅವರು ನೀಡಿರುವ ಸಲಹೆಗಳು ಈ ಕೆಳಗಿನಂತಿವೆ.



ಇದನ್ನೂ ಓದಿ: ಮುಟ್ಟಿನ ದಿನಗಳಲ್ಲಿ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗುವ ಸಾಧ್ಯತೆಗಳು ಎಷ್ಟಿರುತ್ತೆ.. ಪರಿಹಾರವೇನು?

“ನಿಮ್ಮ ಕೂದಲು ಸಾಯುವ ಮತ್ತು ಪುನರುತ್ಪಾದನೆ ಆಗುವ ನೈಸರ್ಗಿಕ ಚಕ್ರ ವ್ಯವಸ್ಥೆಯನ್ನು ಹೊಂದಿದೆ. ನಿಮ್ಮ ಕೂದಲಿನ ಫಾಲಿಕಲ್‍ಗಳಿಗೆ ವಯಸ್ಸಾದಂತೆ, ಕಡಿಮೆ ಬಣ್ಣ ಉತ್ಪಾದಿಸುತ್ತವೆ. ಅದರಿಂದ ಕೂದಲಿನಲ್ಲಿ ಕಡಿಮೆ ಮೆಲನಿನ್ ಮತ್ತು ವರ್ಣದ್ರವ್ಯಕ್ಕೆ ಕಾರಣವಾಗಿ ಅದು ಬೆಳ್ಳಗಾಗಿ ಕಾಣುತ್ತದೆ. ಕೂದಲು ಬೆಳ್ಳಗಾಗುವುದು ವಯಸ್ಸಾಗುವುದರ ಲಕ್ಷಣ ಆದರೆ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಹೆಚ್ಚಿನವರಿಗೆ ಒತ್ತಡದಾಯಕವಾಗಿರುತ್ತದೆ. ವಿಟಮಿನ್ ಬಿ12, ಜಿಂಕ್, ಕಾಪರ್ ಮತ್ತು ವಿಟಮಿನ್ ಸಿ ಕೂದಲಿನ ಆರೋಗ್ಯಕ್ಕೆ ಪೂರಕ ನಿಜ, ಆದರೆ ವಿಟಮಿನ್ ಬಿ5 ಕೂಡ ಅತ್ಯಂತ ಅಗತ್ಯ ಎಂದು ಪೂಜಾ ಮಖೀಜಾ ಒತ್ತಿ ಹೇಳಿದ್ದು, ಅದರಿಂದ ಅವರ ಕ್ಲೈಂಟ್ಸ್‌ಗಳಿಗೆ ಹೇಗೆ ಪ್ರಯೋಜನವಾಯಿತು ಎಂದು ತಿಳಿಸಿದ್ದಾರೆ.


ಪೋಷಕಾಂಶಯುಕ್ತ ಆಹಾರಗಳು


ನೈಸರ್ಗಿಕ ಪೋಷಕಾಂಶಗಳಿಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಮೊದಲನೆಯದಾಗಿ ಅವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಮತ್ತು ಎರಡನೆಯದಾಗಿ, ಅವು ದೇಹದ ಇತರ ಕಾರ್ಯಚಟುವಟಿಕೆಗಳಿಗೂ ಸಹಾಯ ಮಾಡುತ್ತವೆ. ನಿಮಗೆ ಅತ್ಯಂತ ಉತ್ತಮ ರೀತಿಯಲ್ಲಿ ಸಹಾಯ ಮಾಡಬಲ್ಲ, ಪೋಷಕಾಂಶಗಳ ಮಾಹಿತಿ ಇಲ್ಲಿದೆ.


1. ವಿಟಮಿನ್ ಬಿ12 :ಮೊಟ್ಟೆ, ಮೀನು, ಚೀಸ್, ಹಾಲು, ಮೊಸರು, ಸೋಯಾ, ಮಾಂಸ, ಏಡಿ, ಬಲವರ್ಧಿತ ಸಿರಿಧಾನ್ಯಗಳು ಮತ್ತು ಟೋಫು.2. ಜಿಂಕ್ :ಕೆಂಪು ಮಾಂಸ, ದ್ವಿದಳ ಧಾನ್ಯಗಳು (ಬಿಳಿ ಕಡಲೆ, ಮಸೂರ್ ಕಾಳು, ಬೀನ್ಸ್) ಕುಂಬಳಕಾಯಿ ಮತ್ತು ಎಳ್ಳಿನ ಬೀಜ, ಒಣ ಬೀಜಗಳು (ಪೈನ್, ಶೇಂಗಾ, ಗೋಡಂಬಿ ಮತ್ತು ಬಾದಾಮಿ), ಚೆಡ್ಡರ್ ಚೀಸ್, ಮೊಟ್ಟೆ, ಧಾನ್ಯ (ಗೋಧಿ, ಕಿನೋವಾ, ಅಕ್ಕಿ ಮತ್ತು ಓಟ್ಸ್) ಹಾಗೂ ಡಾರ್ಕ್ ಚಾಕೊಲೇಟ್.
3. ಕಾಪರ್ :ಬಾದಾಮಿ, ಗೋಡಂಬಿ, ಎಳ್ಳಿನ ಬೀಜ, ಲಾಬ್‍ಸ್ಟರ್, ಪಾಲಕ್, ಡಾರ್ಕ್ ಚಾಕೊಲೇಟ್, ಸಿಹಿ ಗೆಣಸು, ಟೋಫು, ಬಿಳಿ ಕಡಲೆ, ಸಾಲ್ಮನ್ ಮೀನು, ಅವಕಾಡೋ, ಕಿನೋವಾ ಮತ್ತು ಬಕ್‍ವೀಟ್.
4. ವಿಟಮಿನ್ ಸಿ: ಕಿತ್ತಳೆ, ಮೆಣಸು, ಸ್ಟ್ರಾಬೆರಿ, ಆಲೂಗಡ್ಡೆ, ಮೊಳಕೆಕಾಳು, ಸೀಬೆಕಾಯಿ, ಪಾಲಕ್, ಕಿವಿ, ಬ್ರಾಕೊಲಿ, ಲಿಂಬೆ ಹಣ್ಣು, ಲಿಚೀ ಮತ್ತು ಪಪ್ಪಾಯ.
5. ವಿಟಮಿನ್ ಬಿ5:ಬಲವರ್ಧಿತ ಸಿರಿಧಾನ್ಯಗಳು, ಬೀಫ್, ಚಿಕನ್ ಬ್ರೆಸ್ಟ್ಮ ಅಣಬೆ, ಅವಕಾಡೋ, ಒಣ ಬೀಜಗಳು, ಹಾಲು, ಮೊಸರು, ಮೊಟ್ಟೆ, ಓಟ್ಸ್, ಕೆಂಪಕ್ಕಿ, ಬ್ರೊಕೊಲಿ, ಬಟಾಣಿ, ಮಸೂರಿ ಧಾನ್ಯ ಮತ್ತು ಗೆಣಸು.


ಕೂದಲ ಆರೈಕೆಗೆ ಈ ಆಹಾರ ಕ್ರಮವನ್ನು ಅನುಸರಿಸಿ, ಸುಂದರವಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಿ. ಅಕಾಲಿಕ ಬಿಳಿ ಕೂದಲಿನಿಂದ ಬಚಾವ್​ ಆಗಿ ಸುಂದರ ಕೇಶರಾಶಿ ನಿಮ್ಮದಾಗುತ್ತದೆ.

Published by: Kavya V
First published: June 18, 2021, 6:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories