ಶ್ರಾವಣ ಮಾಸ: ಹಿಂದುಗಳ ಆಚರಣೆಯ ಮಹತ್ವವನ್ನು ತಿಳಿಯಿರಿ

news18
Updated:August 2, 2018, 6:29 PM IST
ಶ್ರಾವಣ ಮಾಸ: ಹಿಂದುಗಳ ಆಚರಣೆಯ ಮಹತ್ವವನ್ನು ತಿಳಿಯಿರಿ
news18
Updated: August 2, 2018, 6:29 PM IST
-ನ್ಯೂಸ್ 18 ಕನ್ನಡ

ಶ್ರಾವಣ ಮಾಸವನ್ನು ಹಿಂದೂಗಳ ಪವಿತ್ರ ಮಾಸವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಹೆಚ್ಚಾಗಿ ಶಿವನ ಆರಾಧನೆ ಮಾಡುವುದರಿಂದ ಈ ತಿಂಗಳನ್ನು ಶಿವನ ಮಾಸ ಎಂದು ಸಹ ಕರೆಯಲಾಗುತ್ತದೆ. 2018ರ ಶ್ರಾವಣವು ಜುಲೈ 28ರಿಂದ ಶುರುವಾಗಿದೆ. ಆಗಸ್ಟ್​ ತಿಂಗಳ 26ರವರೆಗೆ ಶ್ರಾವಣ ಮಾಸ ಇರಲಿದ್ದು, ಈ ಬಾರಿ ಶಿವನ ಮಾಸದಲ್ಲಿ ನಾಲ್ಕು ಸೋಮವಾರ ಸಿಗಲಿದೆ. ಸೋಮವಾರದ ವ್ರತ ಕೈಗೊಳ್ಳುವವರಿಗೆ ಶುಭ ಸೂಚಕವಾಗಿದೆ.

ಮೊದಲ ಸೋಮವಾರ : ಈ ಮಾಸದ ಮೊದಲ ಸೋಮವಾರ ಎಲ್ಲಾ ದೈವ ಭಕ್ತರಿಗೂ ವಿಶೇಷವಾಗಿರುತ್ತದೆ. ಈ ಬಾರಿಯ ಮೊದಲ ಸೋಮವಾರ ಎರಡು ಶುಭ ಯೋಗಳೊಂದಿಗೆ ಆಗಮಿಸಿದ್ದು ವಿಶೇಷ. ಈ ದಿನದಂದು ವ್ರತ ಕೈಗೊಂಡು ಶಿವ ಪೂಜಾ-ಆರಾಧನೆ ಮಾಡಿದರೆ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ತಮ್ಮ ಇಷ್ಟ ಸಿದ್ದಿಗಳನ್ನು ಪೂರೈಸಿಕೊಳ್ಳಲು ಶಿವನ ಕೃಪೆ ದೊರೆಯುತ್ತದೆ.

ಎರಡನೇ ಸೋಮವಾರ: ಈ ತಿಂಗಳ ಎರಡನೇ ಸೋಮವಾರ ಅಪಾರ ಮಹತ್ವದಿಂದ ಕೂಡಿದೆ. ಆಗಸ್ಟ್​ 6ರಂದು ಬರುವ ಈ ಸೋಮವಾರದ ವ್ರತದಿಂದ ಶಿವನನ್ನು ಒಲೈಸಿಕೊಳ್ಳಬಹುದು. ಈ ದಿನ ಪರಮೇಶ್ವರ ಪೂಜೆ ಮಾಡುವುದರಿಂದ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು.

ಮೂರನೇ ಸೋಮವಾರ: ಶ್ರಾವಣ ಮಾಸದ ಮೂರನೇ ಸೋಮವಾರದಲ್ಲಿ ಶಿವಶಂಕರನ ಪೂಜೆ ನಿರ್ವಹಿಸುವುದರಿಂದ ಕಷ್ಟ-ಕಾರ್ಯಗಳು ದೂರವಾಗುತ್ತದೆ. ಈ ಸೋಮವಾರ ಆಗಸ್ಟ್ 13ರಂದು ಬರಲಿದ್ದು,ಅಂದು ಪೂಜಾ ಕಾರ್ಯಗಳನ್ನು ಮಾಡಬಹುದು. ಈ ದಿನದಂದು ವ್ರತ ಮಾಡಿ ಶಿವ ಮಂತ್ರಗಳನ್ನು ಪಠಿಸುವುದರಿಂದ ಪರಶಿವನ ಕೃಪೆಗೆ ಪಾತ್ರರಾಗಬಹುದು.

ನಾಲ್ಕನೇ ಸೋಮವಾರ: ಶ್ರಾವಣದಲ್ಲಿ ಸಿಗುವ ಅಂತಿಮ ಸೋಮವಾರದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ಆರ್ಥಿಕ ಕಷ್ಟ ನೋವುಗಳನ್ನು ದೂರ ಮಾಡಬಹುದು. ಈ ಸೋಮವಾರ ಆಗಸ್ಟ್ 20ರಂದು ಬರಲಿದ್ದು, ಅಂದು ವಿಶೇಷವಾಗಿ ಪೂಜೆ ಮಾಡುವುದರಿಂದ ಶತ್ರುಗಳ ವಿರುದ್ದ ವಿಜಯ ಪ್ರಾಪ್ತಿಯಾಗುತ್ತದೆ. ಅಲ್ಲದೆ ಮುಂದೆ ಬರಲಿರುವ ಆಪತ್ತುಗಳಿಂದ ಪಾರಾಗಲು ಪರಮೇಶ್ವರನ ಕೃಪೆ ದೊರೆಯುತ್ತದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...