ಡಯಾಬಿಟೀಸ್‌ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ!

ಜಗತ್ತಿನಾದ್ಯಂತ 20-70 ವಯಸ್ಸಿನವರಲ್ಲಿ ಕುರುಡುತನಕ್ಕೆ ಪ್ರಮುಖ ಕಾರಣ ಡಯಾಬಿಟಿಕ್ ರೆಟಿನೋಪಥಿ ಎಂದರೆ ನಿಮಗೆ ಆಶ್ಚರ್ಯವಾಗಲಿಕ್ಕಿಲ್ಲ1. ವಾಸ್ತವವಾಗಿ, ಭಾರತದಲ್ಲಿ, ಡಯಾಬಿಟೀಸ್‌ ಇರುವ ಎಲ್ಲರಲ್ಲಿ 2025ರ ವೇಳೆಗೆ ಐದನೇ ಒಂದು ಭಾಗದಿಂದ ಮೂರನೇ ಒಂದು ಭಾಗದಷ್ಟು (57 ಮಿಲಿಯನ್‌) ಜನರಿಗೆ ರೆಟಿನೋಪಥಿ ಬಾಧಿಸಲಿದೆ.

ನೇತ್ರಸುರಕ್ಷಾ

ನೇತ್ರಸುರಕ್ಷಾ

 • Share this:
  ಈ ಶೀರ್ಷಿಕೆ ನಿಮಗೆ ಆಶ್ಚರ್ಯ ಉಂಟು ಮಾಡಿತೇ? ಆಶ್ಚರ್ಯಪಡಬೇಕಿಲ್ಲ. ಡಯಾಬಿಟೀಸ್‌, ಶರೀರದ ಹಲವಾರು ಅಂಗಗಳು – ಮುಖ್ಯವಾಗಿ ಹೃದಯರಕ್ತನಾಳದ ವ್ಯವಸ್ಥೆ, ಮೂತ್ರಪಿಂಡಗಳು, ಶರೀರದ ಕೆಳಭಾಗದ ಅಂಗಗಳು ಮತ್ತು ಖಂಡಿತವಾಗಿಯೂ ಕಣ್ಣುಗಳನ್ನು ಗುರಿಯಾಗಿಸುವ ಒಂದು ರೋಗವಾಗಿದೆ1. ಡಯಾಬಿಟಿಕ್‌ ರೆಟಿನೋಪಥಿಯು ಡಯಾಬಿಟೀಸ್‌ಗೆ ಸಂಬಂಧಿಸಿದ ಒಂದು ಸಾಮಾನ್ಯ ತೊಂದರೆಯಾಗಿದ್ದು, ಅದರಿಂದ ಕಣ್ಣಿಗೆ (ವಿಶೇಷವಾಗಿ ರೆಟಿನಾ) ರಕ್ತ ಸರಬರಾಜು ಮಾಡುವ ರಕ್ತನಾಳಗಳು ಬ್ಲಾಕ್‌ ಅಗುತ್ತವೆ ಅಥವಾ ರಕ್ತಸೋರಿಕೆಯುಂಟಾಗುತ್ತದೆ ಅಥವಾ ಒಡೆದು ಹೋಗುತ್ತವೆ3.

  ಜಗತ್ತಿನಾದ್ಯಂತ 20-70 ವಯಸ್ಸಿನವರಲ್ಲಿ ಕುರುಡುತನಕ್ಕೆ ಪ್ರಮುಖ ಕಾರಣ ಡಯಾಬಿಟಿಕ್ ರೆಟಿನೋಪಥಿ ಎಂದರೆ ನಿಮಗೆ ಆಶ್ಚರ್ಯವಾಗಲಿಕ್ಕಿಲ್ಲ1. ವಾಸ್ತವವಾಗಿ, ಭಾರತದಲ್ಲಿ, ಡಯಾಬಿಟೀಸ್‌ ಇರುವ ಎಲ್ಲರಲ್ಲಿ 2025ರ ವೇಳೆಗೆ ಐದನೇ ಒಂದು ಭಾಗದಿಂದ ಮೂರನೇ ಒಂದು ಭಾಗದಷ್ಟು (57 ಮಿಲಿಯನ್‌) ಜನರಿಗೆ ರೆಟಿನೋಪಥಿ ಬಾಧಿಸಲಿದೆ. ಅವರಲ್ಲಿ ಸರಿಸುಮಾರು 5.7  ಮಿಲಿಯನ್‌ನಷ್ಟು ಡಯಾಬಿಟೀಸ್ ರೋಗಿಗಳಿಗೆ ತೀವ್ರತರವಾದ ರೆಟಿನೋಪಥಿ ಬಾಧಿಸಲಿದೆ ಮತ್ತು ಅವರ ದೃಷ್ಟಿಯನ್ನು ಉಳಿಸಲು ಅವರಿಗೆ ಲೇಸರ್‌ ಅಥವಾ ಶಸ್ತ್ರಚಿಕಿತ್ಸೆಯ ಸಹಾಯ ಅಗತ್ಯವಿರುತ್ತದೆ2.

  ರೋಗವೊಂದರ ತೀವ್ರತೆಗೆ ಇದೊಂದು ಬೃಹತ್ ಸಂಖ್ಯೆಯಾದರೂ ಅದನ್ನು 100%ರಷ್ಟು ತಡೆಗಟ್ಟಬಹುದು. ಇದೊಂದು ಶುಭಸುದ್ದಿ. ಕೆಟ್ಟ ವಿಷಯವೇನೆಂದರೆ ಡಯಾಬಿಟಿಕ್‌ ರೆಟಿನೋಪಥಿಯ ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಇದು ಡಯಾಬಿಟೀಸ್‌ ಇರುವವರಿಗೆ ಮಾತ್ರವಲ್ಲದೇ ಪ್ರಿ-ಡಯಾಬಿಟಿಕ್‌ ಹಂತದ ಜನರಲ್ಲೂ ಕಂಡುಬರುತ್ತದೆ. ನಿಜವಾಗಿಯೂ  ಕಳವಳಕಾರಿ ಸಂಗತಿ ಏನೆಂದರೆ ಜನರಲ್ಲಿ ಡಯಾಬಿಟಿಕ್‌ ರೆಟಿನೋಪಥಿಯ ಬಗ್ಗೆ ತೀರಾ ಕಡಿಮೆ ತಿಳಿವಳಿಕೆ ಇದೆ. 2013ರಲ್ಲಿ ತಮಿಳುನಾಡಿನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ 29%ರಷ್ಟು ಜನರಿಗೆ ಮಾತ್ರ ತಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕೆಂಬ ಅರಿವು ಇದೆ2. ಹಾಗಿದ್ದರೂ, ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬಹುದಾಗಿದೆ.  ಈ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು, Novartis ಸಹಯೋಗದೊಂದಿಗೆ, Network18 'Netra Suraksha' - India Against Diabetes ಉಪಕ್ರಮವನ್ನು ಪ್ರಾರಂಭಿಸಿದೆ. ಡಯಾಬಿಟಿಕ್‌ ರೆಟಿನೋಪಥಿಯ ಅಪಾಯವನ್ನು ಹೊಂದಿರುವ ಜನರಿಗೆ ಸಹಾಯ ಮಾಡುವುದಕ್ಕಾಗಿ, ಈ ಉಪಕ್ರಮವು ವೈದ್ಯಕೀಯ ಸಮುದಾಯ, ಥಿಂಕ್‌ ಟ್ಯಾಂಕ್ಸ್ ಮತ್ತು ನೀತಿ ನಿರೂಪಕರು- ಇವರೆಲ್ಲರನ್ನೂ ಒಟ್ಟುಗೂಡಿಸಿ ನೈಜ ಪರಿಹಾರಕ್ಕಾಗಿ ಕಾರ್ಯಪ್ರವೃತ್ತರನ್ನಾಗಿಸಿದೆ. ಈ ಅಭಿಯಾನದ ಅವಧಿಯಲ್ಲಿ, Network18, ಡಯಾಬಿಟಿಕ್‌ ರೆಟಿನೋಪಥಿಯ ಪತ್ತೆಹಚ್ಚುವಿಕೆ, ತಡೆಯುವಿಕೆ ಮತ್ತು ಚಿಕಿತ್ಸೆಗಳನ್ನು ಕೇಂದ್ರೀಕರಿಸಿ ದುಂಡುಮೇಜಿನ ಸಂವಾದಗಳ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಈ ಸಂವಾದಗಳು, ವಿವರಣಾತ್ಮಕ ವೀಡಿಯೊಗಳು ಮತ್ತು ಲೇಖನಗಳ ಮೂಲಕ, ಭೀತಿ ಮೂಡಿಸುವ, ಆದರೂ ಸಂಪೂರ್ಣವಾಗಿ ತಡೆಗಟ್ಟಬಲ್ಲ ಡಯಾಬಿಟಿಕ್ ರೆಟಿನೋಪಥಿ ಸಂಭಾವ್ಯತೆಯನ್ನು ಹೊಂದಿರುವವರಿಗೆ ಸಹಾಯ ಮಾಡುವ ಮತ್ತು ಇದರಿಂದ ಅವರನ್ನು ರಕ್ಷಿಸುವ ಭರವಸೆಯನ್ನು Network18 ಹೊಂದಿದೆ.

  ಹಾಗಿದ್ದರೆ ನಾವು ಏನು ಮಾಡಬೇಕು? ಕನ್ನಡಕಗಳನ್ನು ಬದಲಾಯಿಸಿದರೂ, ಓದುವುದಕ್ಕೆ ಕಷ್ಟವಾಗುತ್ತಿದ್ದರೆ ಅದು ಡಯಾಬಿಟಿಕ್‌ ರೆಟಿನೋಪಥಿಯ ಪ್ರಾರಂಭಿಕ ಲಕ್ಷಣಗಳಲ್ಲಿ ಒಂದು ಎಂದು ರೆಟಿನಾ ಸೊಸೈಟಿ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಡಾ. ಮನೀಷ್‌ ಅಗರ್‌ವಾಲ್ ಅವರು ದುಂಡುಮೇಜಿನ ಸಂವಾದವೊಂದರಲ್ಲಿ ಉಲ್ಲೇಖಿಸಿದ್ದಾರೆ. ದೃಷ್ಟಿಯು ಮಸುಕಾಗಿಯೇ ಉಳಿಯುತ್ತದೆ. ಇದು ಪ್ರಾರಂಭಿಕ ಲಕ್ಷಣಗಳಲ್ಲಿ ಒಂದಾಗಿದ್ದು, ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ನಿರ್ಲಕ್ಷಿಸಿದರೆ, ಈ ಲಕ್ಷಣಗಳು ಹೆಚ್ಚಾದಂತೆ, ದೃಷ್ಟಿ ಹರಿಸಿದ ಸ್ಥಳದಲ್ಲಿ, ಕಪ್ಪು ಅಥವಾ ಕೆಂಪು ಚುಕ್ಕೆಗಳ ಮೋಡಗಳು ಗೋಚರವಾಗಬಹುದು ಅಥವಾ ಕಣ್ಣಿನ ರಕ್ತಸ್ರಾವದಿಂದಾಗಿ ಹಠಾತ್‌ ಕತ್ತಲೆ ಕವಿದಂತಾಗಬಹುದು.

  ಯಾರೇ ಆಗಲೀ, ಡಯಾಬಿಟಿಕ್‌ ಅಥವಾ ಪ್ರಿ-ಡಯಾಬಿಟಿಕ್‌ ಹಂತದಲ್ಲಿದ್ದರೆ, ಅವರು ವರ್ಷಕ್ಕೊಮ್ಮೆ ಕಣ್ಣಿನ (ಪಾಪೆಯ ಹಿಗ್ಗುವಿಕೆಯನ್ನೊಳಗೊಂಡ) ಪರೀಕ್ಷೆ ಮಾಡಿಸಿಕೊಳ್ಳಲು ಮದ್ರಾಸ್‌ ರಿಸರ್ಚ್‌ ಫೌಂಡೇಶನ್‌ ಅಧ್ಯಕ್ಷರಾದ ಡಾ. ವಿ.ಮೋಹನ್ ಅವರು ಶಿಫಾರಸು ಮಾಡಿದ್ದಾರೆ. ಡಯಾಬಿಟಿಕ್‌ ರೆಟಿನೋಪಥಿ ಕಂಡುಬರದೇ ಇದ್ದರೂ ಸಹ, ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯು ಲಕ್ಷಣರಹಿತವಾಗಿ ಇರುತ್ತದೆಯಾದ್ದರಿಂದ ವರ್ಷಕ್ಕೊಮ್ಮೆ ಪರೀಕ್ಷೆಯನ್ನು ಪುನರಾವರ್ತಿಸಬೇಕು. ಡಯಾಬಿಟಿಕ್‌ ಕೇಂದ್ರಗಳಲ್ಲಿ ಕಣ್ಣಿನ ತಜ್ಞರು ಇರುವುದಿಲ್ಲವಾದ್ದರಿಂದ ಡಯಾಬಿಟಿಸ್‌ ಇರುವವರು ತಮ್ಮನ್ನು ತಾವೇ ಪರೀಕ್ಷೆಗೆ ಒಳಪಡಿಸಬೇಕೆಂದು ಅವರು ನಿರ್ದಿಷ್ಟವಾಗಿ ಎಚ್ಚರಿಸಿದ್ದಾರೆ.

  ಡಯಾಬಿಟೀಸ್‌ ಕೇರ್‌ ಮತ್ತು ಹಾರ್ಮೋನ್‌ ಕ್ಲಿನಿಕ್‌ (ಹೈದರಾಬಾದ್‌)ನ ಮುಖ್ಯ ಡಯಾಬಿಟೀಸ್‌ ತಜ್ಞರಾದ ಡಾ. ಬನ್ಷಿ ಸಾಬೂ ಅವರ ಪ್ರಕಾರ, ಭಾರತೀಯರಿಗೆ 30ನೇ ವಯಸ್ಸಿಗೆ ಡಯಾಬಿಟಿಕ್‌ ತೊಂದರೆ ಕಾಣಿಸುತ್ತದೆ. ಆದ್ದರಿಂದ ಕಣ್ಣಿನ ಪರೀಕ್ಷೆಯನ್ನು ಮಾಡಿಸಲು ತಮ್ಮ 30ನೇ ವಯಸ್ಸಿನಿಂದಲೇ ಪ್ರಾರಂಭಿಸಬೇಕು ಎಂದು ಅವರು ಶಿಫಾರಸು ಮಾಡುತ್ತಾರೆ. ಅವರು ಒಂದು ಮುಖ್ಯ ಅಂಶವೊಂದನ್ನು ಹೇಳುತ್ತಾರೆ: ಡಯಾಬಿಟಿಕ್ ರೆಟಿನೋಪಥಿಯನ್ನು ಸರಿಪಡಿಸಲಾಗುವುದಿಲ್ಲ. ಒಂದು ಸಲ ಅದನ್ನು ಪತ್ತೆಹಚ್ಚಿದರೆ, ಹೇಗಾದರೂ ಅದನ್ನು ನಿರ್ವಹಿಸಬಹುದು ಮತ್ತು ಅದು ಹೆಚ್ಚಿನ ಮಟ್ಟದಲ್ಲಿ ಭಾಧಿಸದಂತೆ ತಡೆಯಬಹುದು.

  ಒಟ್ಟಾರೆಯಾಗಿ, ಡಯಾಬಿಟಿಕ್‌ ರೆಟಿನೋಪಥಿ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ. ಇದು ಲಕ್ಷಣರಹಿತವಾದ ರೋಗವಾದ್ದರಿಂದ ಇದನ್ನು ಪತ್ತೆಹಚ್ಚುವ ಏಕೈಕ ದಾರಿ ಎಂದರೆ ನಿಯಮಿತವಾಗಿ ಪರೀಕ್ಷೆ ಮಾಡಿಸುವುದು.

  ಇದರಲ್ಲಿ ನಿಮ್ಮ ಜವಾಬ್ದಾರಿಯೂ ಇದೆ. ನೀವು ಡಯಾಬಿಟೀಸ್‌ ರೋಗಿ ಅಲ್ಲದಿದ್ದರೂ ಸಹ Diabetic Retinopathy ಸ್ವಯಂ ತಪಾಸಣೆ ಮಾಡಿಕೊಳ್ಳಿ. ಆನಂತರ, ನಿಮ್ಮ ಜೊತೆ ಇರುವ ಎಲ್ಲರಿಗೂ ಪರೀಕ್ಷಿಸಿಕೊಳ್ಳಲು ಒತ್ತಾಯಿಸಿ. ಯಾರದಾದರೂ ರಕ್ತಪರೀಕ್ಷೆಯಿಂದ ಡಯಾಬಿಟಿಕ್ ಅಥವಾ ಪ್ರಿ-ಡಯಾಬಿಟಿಸ್‌ ಎಂದು ಕಂಡು ಬಂದಲ್ಲಿ ಅವರಿಗೆ ಒಂದು ಗಂಟೆಯ ಅವಧಿಯಲ್ಲೇ ಮುಗಿದುಹೋಗುವ, ನೋವುರಹಿತ ಹಾಗೂ ಸರಳವಾದ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಕಣ್ಣಿನ ತಜ್ಞರನ್ನು ಭೇಟಿ ಮಾಡಲು ಒತ್ತಾಯಿಸಿ. ಇದನ್ನು ಕೌಟುಂಬಿಕ ವಿಷಯವನ್ನಾಗಿ ಪರಿಗಣಿಸಿ ಮತ್ತು ನೀವು ನೆನಪಿಡಬಹುದಾದ ಒಂದು ದಿನಾಂಕದೊಂದಿಗೆ ಇದನ್ನು ಹೊಂದಿಸಿಕೊಳ್ಳಿ ಮತ್ತು ಹಾಗೆಯೇ ಇದನ್ನು ಪ್ರತಿವರ್ಷ ಪುನರಾವರ್ತಿಸಿ.

  ನಮ್ಮ ಆಹಾರ ಪದ್ಧತಿ, ಪರಿಸರ ಹಾಗೂ ಜೀವನಶೈಲಿಯಲ್ಲಾದ ಹೆಚ್ಚಿನ ಬದಲಾವಣೆಗಳಿಂದಾಗಿ ಡಯಾಬಿಟೀಸ್‌ ಸಹಜವಾಗಿಯೇ ಹೆಚ್ಚಾಗುತ್ತಿದೆ. ಭಾರತದಲ್ಲಿ, ಡಯಾಬಿಟೀಸ್ ಇದ್ದು ಅದರ ಪರೀಕ್ಷೆಗೆ ಒಳಪಡದೆಯೇ ಬಳಲುತ್ತಿರುವ ಸರಾಸರಿ 43.9 ಮಿಲಿಯನ್‌ ರೋಗಿಗಳು ಇದ್ದಾರೆ1. ನಿಮ್ಮ ದೃಷ್ಟಿಯು ಅತ್ಯಮೂಲ್ಯವಾದದ್ದು ಹಾಗೂ ಅದಕ್ಕೆ ನಿಮ್ಮ ಗಮನ ಮತ್ತು ಕಾಳಜಿಯ ಅಗತ್ಯವಿದೆ. ಲಕ್ಷಣಗಳು ಕಂಡುಬರಲಿ ಎಂದು ಕಾಯಬೇಡಿ - ದೃಷ್ಟಿ ತೊಂದರೆಯಿಂದ ಉಂಟಾಗುವ ಅಡಚಣೆಯು ನಿಮ್ಮ ಮತ್ತು ನಿಮ್ಮ ಕುಟುಂಬದ ಆಸರೆಗೆ ತೊಡಕನ್ನು ಉಂಟು ಮಾಡುತ್ತದೆ.

  Netra Suraksha ಉಪಕ್ರಮ ಕುರಿತು ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ News18.com ಅನ್ನು ಅನುಸರಿಸಿ ಮತ್ತು ಭಾರತದಲ್ಲಿ ರೆಟಿನೋಪಥಿ ವಿರುದ್ಧದ ಈ ಹೋರಾಟದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಸಿದ್ಧರಾಗಿರಿ.

  1. IDF Atlas, International Diabetes Federation, 9th edition, 2019

  2. Balasubramaniyan N, Ganesh KS, Ramesh BK, Subitha L. Awareness and practices on eye effects among people with diabetes in rural Tamil Nadu, India. Afri Health Sci. 2016;16(1): 210-217.


  https://www.nei.nih.gov/learn-about-eye-health/eye-conditions-and-diseases/diabetic-retinopathy 10 Dec, 2021
  Published by:Soumya KN
  First published: