Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ ; ಹೆಣ್ಣು ಮಗುವಿನ ಭವಿಷ್ಯಕ್ಕೆ ಉತ್ತಮ ಉಳಿತಾಯದ ಹೂಡಿಕೆ

ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದ್ದಲ್ಲಿ ಅದಕ್ಕೆ ಸುಕುನ್ಯಾ ಸಮೃದ್ಧಿ ಯೋಜನೆ ಉತ್ತಮ ಆಯ್ಕೆ

children

children

  • Share this:
ಕೇಂದ್ರ ಸರ್ಕಾರ ಹೆಣ್ಣು ಮಗುವಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವ ಯೋಜನೆ ಇದ್ದಲ್ಲಿ ಅದಕ್ಕೆ ಸುಕುನ್ಯಾ ಸಮೃದ್ಧಿ ಯೋಜನೆ ಉತ್ತಮ ಆಯ್ಕೆ. ಮಗು ಹುಟ್ಟಿದಾಗಿನಿಂದಲೇ ಸ್ವಲ್ಪ ಸ್ವಲ್ಪ ಉಳಿತಾಯ ಮಾಡುವ ಮೂಲಕ ಅಧಿಕ ಲಾಭಾ ಗಳಿಸುವ ಯೋಜನೆ ಇದಾಗಿದೆ. ಮಗುವಿನ ಉನ್ನತ ಶಿಕ್ಷಣ, ಮದುವೆ ಸಂದರ್ಭದಲ್ಲಿ ಈ ಯೋಜನೆ ಮೂಲಕ ದುಪ್ಪಟ್ಟು ಉಳಿತಾಯ ಪಡೆಯಬಹುದು. ಉತ್ತಮ ಗಳಿಕೆಯಾ ಈ ಯೋಜನೆ ಬಗ್ಗೆ ಪೋಷಕರು ಅರಿಯುವುದು ಅವಶ್ಯ. ಅಂದಹಾಗೇ ಈ ಯೋಜನೆ ಆರಂಭಿಸುವುದು ಕೂಡ ಸುಲಭ. ಹೆಣ್ಣು ಮಗುವಿನ ಆರ್ಥಿಕ ವಿಷಯದಲ್ಲಿ ಪೋಷಕರು ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಪ್ರತಿತಿಂಗಳು ಹಣ ಉಳಿತಾಯ ಮಾಡುತ್ತಾ ಹೋದರೆ, ಆಕೆ ಪ್ರಾಪ್ತ ವಯಸ್ಸಿಗೆ ಬರುವಾಗ ಈ ಹಣ ದ್ವಿಗುಣಗೊಳುತ್ತದೆ.

ಖಾತೆ ತೆರೆಯುವುದು: ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಆಕೆಯ ಪೋಷಕರು ಈ ಯೋಜನೆ ಆಧಾರದ ಮೇಲೆ ಖಾತೆ ತೆರೆಯಬೇಕು. ಮಗುವಿನ ಜನ್ಮ ದಾಖಲೆ ಇದಕ್ಕೆ ಕಡ್ಡಾಯ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆ ಲಾಭ ಪಡೆಯಬಹುದು. ಒಂದು ವೇಳೆ ತ್ರಿವಳಿ ಹೆಣ್ಣುಮಕ್ಕಳು ಹುಟ್ಟಿದರೆ, ಅವರು ಕೂಡ ಈ ಲಾಭ ಪಡೆಯಬಹುದು.

ಠೇವಣಿ: ಕನಿಷ್ಠ 250 ರೂ ಠೇವಣಿಯೊಂದಿಗೆ ಈ ಯೋಜನೆ ಆರಂಭಿಸಬಹುದು. ವರ್ಷಕ್ಕೆ ಗರಿಷ್ಠ 1.5 ಲಕ್ಷ ಹಣವನ್ನು ಕೂಡ ಠೇವಣಿ ಹೂಡಬಹುದು. 15 ವರ್ಷಗಳವರೆಗೆ ಪ್ರತಿ ತಿಂಗಳ ಹಣವನ್ನು ಹೂಡಿಕೆ ಮಾಡಬೇಕು. ಒಂದು ವೇಳೆ ಕನಿಷ್ಠ ಹಣವನ್ನು ವರ್ಷಕ್ಕೆ ಠೇವಣಿ ಇಡದಿದ್ದರೆ, ಖಾತೆ ನಿಷ್ಕ್ರಿಯ ಗೊಳ್ಳಲಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಖಾತೆ ತೆರೆದ 15 ವರ್ಷದ ಒಳಗೆ 50ರೂ ದಂಡದ ಹಣ ಕಟ್ಟಿ ಪುನಃ ಖಾತೆ ಸಕ್ರಿಯಗೊಳಿಸಬಹುದು.

ಠೇವಣಿಗೆ ಬಡ್ಡಿ: ಪ್ರಸ್ತುತ ಈ ವಾರ್ಷಿಕ ಠೇವಣಿಗೆ 8.4ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ವಾರ್ಷಿಕವಾಗಿ ಗರಿಷ್ಠ ಠೇವಣಿ 45 ಲಕ್ಷವನ್ನು ಹೂಡಿದ್ದರೆ, ಖಾತೆ ಮೆಚ್ಯೂರ್​ ಆಗುವ ಸಂದರ್ಭದಲ್ಲಿ 73 ಲಕ್ಷವನ್ನು ಪಡೆಯಬಹುದು. ಅಂದರೆ. 15 ವರ್ಷ 45 ಲಕ್ಷ ಹೂಡಿಕೆ ಮಾಡಿದ್ದರೆ, 21ನೇ ವರ್ಷಕ್ಕೆ 73 ಲಕ್ಷ ಪಡೆಯಬಹುದು.

ಖಾತೆ ನಿರ್ವಹಣೆ ಹೇಗೆ: ಈ ಖಾತೆಯನ್ನು ತಂದೆ ಅಥವಾ ಪೋಷಕರು ಮಾತ್ರ ತೆರೆಯಬಹುದು.

ಒಂದು ವೇಳೆ ಈ ಖಾತೆದಾರರು ಸಾವನ್ನಪ್ಪಿದರೆ, ಸಾವಿನ ಪ್ರಮಾಣ ಸಲ್ಲಿಕೆ ಮಾಡಿ ಖಾತೆ ಮುಚ್ಚಬೇಕು. ಈ ವೇಳೆ ಬಡ್ಡಿ ಸಮೇತ ಠೇವಣಿ ಹಣ ಹೆಣ್ಣುಮಗುವಿನ ತಂದೆ ಅಥವಾ ಪೋಷಕರಿಗೆ ಸೇರಲಿದೆ. ಒಂದು ವೇಳೆ ತಂದೆ ಅಥವಾ ಪೋಷಕರು ಸಾವನ್ನಪ್ಪಿದರೆ ಉಳಿತಾಯಕ್ಕೆ ತಕ್ಕ ಬಡ್ಡಿ ಪಡೆಯಬಹುದು.
Published by:Seema R
First published: