ಯೋಗದತ್ತ ಆಕರ್ಷಿತರಾಗುತ್ತಿರುವ ಸೌದಿ ಅರೇಬಿಯಾ ಮಹಿಳೆಯರು

news18
Updated:October 1, 2018, 12:11 PM IST
ಯೋಗದತ್ತ ಆಕರ್ಷಿತರಾಗುತ್ತಿರುವ ಸೌದಿ ಅರೇಬಿಯಾ ಮಹಿಳೆಯರು
  • Advertorial
  • Last Updated: October 1, 2018, 12:11 PM IST
  • Share this:
-ನ್ಯೂಸ್ 18 ಕನ್ನಡ

ಅಂತರಾಷ್ಟ್ರೀಯ ಮಟ್ಟದಲ್ಲಿ 'ವಿಶ್ವ ಯೋಗ ದಿನ' ಮಹತ್ವ ಪಡೆದುಕೊಂಡ ಬಳಿಕ ಹಲವು ದೇಶಗಳ ಜನರು ಯೋಗ ಚಟುವಟಿಕೆಗಳ ಬಗ್ಗೆ  ಆಕರ್ಷಿತರಾಗುತ್ತಿದ್ದಾರೆ. ಈ ಹಿಂದೆ ಹಲವು ಇಸ್ಲಾಮಿಕ್ ದೇಶಗಳಲ್ಲಿ ಯೋಗ ಮಾಡುವುದು ನಿಷೇಧ ಮತ್ತು ಕಾನೂನು ಬಾಹಿರ ಎನ್ನಲಾಗಿತ್ತು. ಆದರೆ 14 ನವೆಂಬರ್ 2017ರಂದು ಸೌದಿ ಅರೇಬಿಯಾದಲ್ಲಿ ಯೋಗವನ್ನು ಯಾರೂ ಬೇಕಾದರೂ ಅಭ್ಯಾಸ ಮಾಡಬಹುದು ಮತ್ತು ತರಬೇತಿಯನ್ನೂ ನೀಡಬಹುದು ಎಂದು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆದೇಶ ಹೊರಡಿಸಿ ಹೊಸ ಬೆಳವಣಿಗೆ ನಾಂದಿಯಾಡಿದ್ದರು. ಈ ನಿಟ್ಟಿನಲ್ಲಿ  ಸೌದಿ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಯೋಗ ತರಬೇತಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಸೌದಿ ಮಹಿಳೆ ನೌಫ್ ಮರ್ವಾಯ್ ಹಲವಾರು ವರ್ಷಗಳಿಂದ ಯೋಗದ ಮಾನ್ಯತೆಗಾಗಿ ಹೋರಾಟ ನಡೆಸಿದ್ದರು. ಇಸ್ಲಾಂಗೂ ಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಯೋಗ ಎಂಬುದು ಕ್ರೀಡಾ ಚಟುವಟಿಕೆಯಾಗಿದ್ದು ಎಂಬುದು ನೌಫ್ ಅವರ ವಾದವಾಗಿತ್ತು. ಈ ಹೋರಾಟದ ಫಲವಾಗಿ ಸೌದಿ ಸರ್ಕಾರ ತನ್ನ ಕಾನೂನನ್ನು ಸಡಿಲಗೊಳಿಸಿ ಸಾರ್ವಜನಿಕ ಯೋಗ ತರಬೇತಿಗಳನ್ನು ನೀಡಲು ಅವಕಾಶ ಕಲ್ಪಿಸಿತು.

ಸೌದಿಯಲ್ಲಿ ಯೋಗವನ್ನು ಕಾನೂನಾತ್ಮಕಗೊಳಿಸಲು ಹೋರಾಟ ನಡೆಸಿದ ನೌಫ್​ ಅವರಿಗೆ ಕೆಲ ಸಂಘಟನೆಗಳು ಜೀವ ಬೆದರಿಕೆಯನ್ನು ಹಾಕಿದ್ದರು. ಪ್ರತಿನಿತ್ಯ ಬಹಳಷ್ಟು ದ್ವೇಷಕಾರುವ ಸಂದೇಶಗಳನ್ನು ಕಳುಹಿಸಿ ಬೆದರಿಸಲಾಗುತ್ತಿತ್ತು. ಆದರೆ ಇಂದು ಇವೆಲ್ಲವನ್ನು ಧೈರ್ಯದಿಂದ ಎದುರಿಸಿದ ಫಲವಾಗಿ ಯೋಗ ಚಟುವಟಿಕೆ ಇಂದು ನಮ್ಮ ದೇಶದಲ್ಲಿ ಅಧಿಕೃತಗೊಂಡಿದೆ ಎಂದು 38ರ ನೌಫ್ ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಯೋಗ ಕಲಿಸುವುದು ಅಸಾಧ್ಯ ಎನ್ನುವ ಸ್ಥಿತಿಯಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಯುವಕ-ಯುವತಿಯರು ಯೋಗಾಭ್ಯಾಸ ಮಾಡಲು ಆಸಕ್ತಿವಹಿಸುತ್ತಿದ್ದಾರೆ. ಸದ್ಯ ಅರಬ್ ಯೋಗಾ ಫೌಂಡೇಷನ್ ಸ್ಥಾಪಿಸುವ ಮೂಲಕ ನೌಫ್ ಮರ್ವಾಯ್ ಮರುಳುಗಾಡಿನ ದೇಶದಲ್ಲಿ ಯೋಗ ಮಹತ್ವವನ್ನು ಸಾರುತ್ತಿದ್ದಾರೆ.

 
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ