ಜೀವನದಲ್ಲಿ ಸೋತು ಸುಣ್ಣವಾಗಿದ್ದೀರಾ? ಹಾಗಿದ್ರೆ ಸತೀಶ್ ನೀನಾಸಂ ಒಂದ್ ಕಥೆ ಹೇಳಿದ್ದಾರೆ ಕೇಳಿ

Sathish Ninasam: ಕೊರೋನಾ ಬಂದಿರುವಂತಹ ಕಾಲದಲ್ಲಿ ಜನರಿಗೆ ಸ್ಪೂರ್ತಿಯಾಗಲಿ ಮತ್ತು ಖಿನ್ನತೆ ದೂರವಾಗಲಿ ಎಂಬ ಕಾರಣದಿಂದ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದೇನೆ.

zahir | news18-kannada
Updated:June 30, 2020, 9:38 PM IST
ಜೀವನದಲ್ಲಿ ಸೋತು ಸುಣ್ಣವಾಗಿದ್ದೀರಾ? ಹಾಗಿದ್ರೆ ಸತೀಶ್ ನೀನಾಸಂ ಒಂದ್ ಕಥೆ ಹೇಳಿದ್ದಾರೆ ಕೇಳಿ
Sathish Ninasam
  • Share this:
ಜೀವನದಲ್ಲಿ ಎದುರಾಗುವ ನೂರಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸಿನ ಗುರಿ ತಲುಪಿದವರ ಜೀವನ ಸಾಧನೆಯೇ ಎಲ್ಲರಿಗೂ ಪ್ರೇರಣೆ. ಆದರೆ ಇಂತಹ ಸ್ಪೂರ್ತಿ ಪಡೆಯಲು ಏನು ಮಾಡಬೇಕು ಎಂದು ಕೇಳಿದ್ರೆ, ಕೆಲವರಲ್ಲಿ ಯಾವುದೇ ಉತ್ತರವಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಹೈ-ಫೈ ಮೊಟಿವೇಷನ್ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅದು ಸಾಮಾನ್ಯನಿಗೆ ಇನ್ನೂ ಕೂಡ ದೂರದ ಬೆಟ್ಟ.

ಹಾಗೆಯೇ ಜೀವನದಲ್ಲಿ ಸ್ಪೂರ್ತಿ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಕೆಲವರು ತಮ್ಮ ಹಿರಿಯರು ಅಥವಾ ಗುರುವಿನಿಂದ ಸ್ಪೂರ್ತಿ ಪಡೆದರೆ, ಮತ್ತೆ ಕೆಲವರನ್ನು ಜೀವನದಲ್ಲಿ ಹುರಿದುಂಬಿಸಲು ಯಾರೂ ಇರುವುದಿಲ್ಲ. ಅದರಲ್ಲೂ ಇದೀಗ ಲಾಕ್​ಡೌನ್, ಕೊರೋನಾ ಭೀತಿ ನಡುವೆ ಖಿನ್ನತೆ ಎಂಬುದು ಎಲ್ಲರನ್ನೂ ಕಾಡುತ್ತಿದೆ.

ಇಂತಹ ಸಮಯದಲ್ಲಿ ಬದುಕಿಗೆ ಸ್ಪೂರ್ತಿಯಾಗುವಂತಹ ಒಂದಷ್ಟು ಕಥೆಗಳು ಕಿವಿಗೆ ಬಿದ್ದರೇನೇ ಹೊಸ ಉತ್ಸಾಹ. ಅಂತಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ ಸ್ಯಾಂಡಲ್​ವುಡ್​ ನಟ ಸತೀಶ್ ನೀನಾಸಂ. ಹೇಳಿ ಕೇಳಿ ಅಭಿನಯ ಚತುರ ಚಿತ್ರದಿಂದ ಚಿತ್ರಕ್ಕೆ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಹೀಗಾಗಿಯೇ ಒಂದು ಬಾರಿ ಪಕ್ಕಾ ಮಂಡ್ಯ ಹೈದನಾಗಿ ಕಾಣಿಸಿಕೊಂಡ್ರೆ, ಮತ್ತೊಮ್ಮೆ ಐಎಎಸ್ ಅಧಿಕಾರಿಯಾಗಿ ತೆರೆ ಮೇಲೆ ಪ್ರತ್ಯಕ್ಷರಾಗುತ್ತಾರೆ. ಮಗದೊಮ್ಮೆ ವಿದ್ಯಾರ್ಥಿ ನಾಯಕನಾದ್ರೆ, ಇನ್ನೊಮ್ಮೆ ರೊಮ್ಯಾಂಟಿಕ್ ಹೀರೋ ಅವತಾರದಲ್ಲಿ ರಂಜಿಸುತ್ತಾರೆ.

ಹೀಗೆ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಸತೀಶ್ ಅವರು, ವಿಭಿನ್ನವಾಗಿಯೇ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಕಾಯಕಕ್ಕೆ ಕೈ ಹಾಕಿದ್ದಾರೆ. ಅದು ಅಂತಿಂಥ ಕಥೆಗಳಲ್ಲ ಕೇಳಿದ್ರೆ... ಬದುಕಬೇಕು, ನಾನು ಗೆಲ್ಲಲೇಬೇಕು ಎಂದು ಬಡಿದೆಬ್ಬಿಸುವ ರಿಯಲ್ ಸ್ಟೋರಿಗಳು. ಇದಕ್ಕಾಗಿ ಸತೀಶ್ ಆಡಿಯೋ ಹೌಸ್ ಯೂಟ್ಯೂಬ್​ ಚಾನೆಲ್​ನಲ್ಲಿ ಒಂದು ಕಥೆ ಹೇಳ್ತಿನಿ ಕೇಳ್ತೀರಾ? ಎಂಬ ಎಪಿಸೋಡ್ ಪ್ರಾರಂಭಿಸಿದ್ದಾರೆ.

ಇದರ ಮೊದಲ ಹೆಜ್ಜೆ ಎಂಬಂತೆ ಸಿಹಿ ತಿಂಡಿ ಮಾರಿದ ಅಜ್ಜಿಯೊಬ್ಬರ ನೈಜ ಕಥೆಯನ್ನು ಮುಂದಿಟ್ಟಿದ್ದಾರೆ. ಸಾಮಾನ್ಯವಾಗಿ ವೇದಿಕೆಯಲ್ಲಿ ನಿಂತು ಮೊಟಿವೇಷನಲ್ ಸ್ಟೋರಿಗಳನ್ನು ಹೇಳುವುದನ್ನು ಕೇಳಿರುತ್ತೀರಿ. ಆದರೆ ಅಭಿನಯ ಚತುರ ಮಾತ್ರ ಸಿಂಪಲ್ ಆಗಿ ಕಥೆ ಹೇಳುವ ಮೂಲಕ ನಮ್ಮ ಕಣ್ಮುಂದೆ ನಡೆದಿರುವ ಘಟನೆಯಂತೆ ಇಡೀ ಕಥೆಯನ್ನು ಕಟ್ಟಿಕೊಟ್ಟಿರುವುದು ವಿಶೇಷ.

ಕೊರೋನಾ ಬಂದಿರುವಂತಹ ಕಾಲದಲ್ಲಿ ಜನರಿಗೆ ಸ್ಪೂರ್ತಿಯಾಗಲಿ ಮತ್ತು ಖಿನ್ನತೆ ದೂರವಾಗಲಿ ಎಂಬ ಕಾರಣದಿಂದ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕಿದ್ದೇನೆ. ಸಮಾಜಕ್ಕೆ ಮತ್ತು ಜನರಿಗೆ ಉಪಯುಕ್ತವಾಗುವಂತಹ ಇಂಟ್ರೆಸ್ಟಿಂಗ್ ಸ್ಟೋರಿಗಳು, ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಮೂಲಕ ಅವರ ನೋವನ್ನು ಮರೆಯುವ ಪ್ರಯತ್ನ ಮಾಡಿದ್ದೇನೆ. ಸಾಧ್ಯವಾದ್ರೆ ವಾರಕ್ಕೆ ಒಂದು ಕಥೆ ಹೇಳಲು ಟ್ರೈ ಮಾಡುತ್ತೇನೆ.-ಸತೀಶ್ ನೀನಾಸಂ
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading