RRB, Sarkari Naukri: ದಕ್ಷಿಣ ಮಧ್ಯ ರೈಲ್ವೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

zahir | news18-kannada
Updated:November 18, 2019, 2:54 PM IST
RRB, Sarkari Naukri: ದಕ್ಷಿಣ ಮಧ್ಯ ರೈಲ್ವೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
ಸಾಂದರ್ಭಿಕ ಚಿತ್ರ
  • Share this:
RRB, Sarkari Naukri: ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 4103 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 8 ರೊಳಗೆ ಅರ್ಜಿ ಸಲ್ಲಿಸಬಹುದು. ರೈಲ್ವೆ ಇಲಾಖೆಯ ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ಹೆಸರು:
ಅಪ್ರೆಂಟಿಸ್

ಒಟ್ಟು ಹುದ್ದೆಗಳ ಸಂಖ್ಯೆ:
4103 ಹುದ್ದೆಗಳು

ಅರ್ಹತೆ:
10ನೇ ತರಗತಿ ಪಾಸಾಗಿ ಮತ್ತು ಐಟಿಐ ಪ್ರಮಾಣ ಪತ್ರ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ವಯೋಮಿತಿ:
ಅಭ್ಯರ್ಥಿಯ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು 8.12.2019 ರಂತೆ ಅಭ್ಯರ್ಥಿಯು 24 ವರ್ಷ ವಯಸ್ಸಿನ ಒಳಗಿರಬೇಕು. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ / ಎಸ್‌ಟಿ ಜನರಿಗೆ 5 ವರ್ಷ ಮತ್ತು ಒಬಿಸಿಗೆ 3 ವರ್ಷ ವಿನಾಯಿತಿ ನೀಡಲಾಗುವುದು.

ಇದನ್ನು ಓದಿ: ಕನ್ನಡದ ಖ್ಯಾತ ಚಿತ್ರನಟಿ ಕ್ರೈಸ್ತ ಸನ್ಯಾಸಿನಿ ಆಗಿದ್ದಾರಾ? ಇಲ್ಲಿದೆ ಉತ್ತರ..!

ಆಯ್ಕೆ ಪ್ರಕ್ರಿಯೆ:
10ನೇ ತರಗತಿಯ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
100 ರೂಪಾಯಿ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 8, 2019

ಅರ್ಜಿ ಸಲ್ಲಿಸುವುದು ಹೇಗೆ?
ಭಾರತೀಯ ರೈಲ್ವೆ ಇಲಾಖೆಯ ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಅಧಿಕೃತ ವೆಬ್​ಸೈಟ್ Application ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ