Sarkari Naukri: ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

Ncr recruitment 2019: ಸಿಬಿಟಿ ಆನ್‌ಲೈನ್ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

zahir | news18-kannada
Updated:October 24, 2019, 10:20 AM IST
Sarkari Naukri: ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
JOB
  • Share this:
ಉತ್ತರ ಕೇಂದ್ರ ರೈಲ್ವೆ (ಎನ್‌ಸಿಆರ್) ಗೂಡ್ಸ್ ಗಾರ್ಡ್, ಎಎಲ್‌ಪಿ, ಜೆಇ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಕ್ಟೋಬರ್ 21 ರಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಯಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಮತ್ತಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ಹೆಸರು ಮತ್ತು ಸಂಖ್ಯೆ:
ಸ್ಟೇಷನ್ ಮಾಸ್ಟರ್- 05 ಹುದ್ದೆಗಳು

ಗೂಡ್ಸ್ ಗಾರ್ಡ್- 53 ಹುದ್ದೆಗಳು
ಸಹಾಯಕ ಲೊಕೊ ಪೈಲಟ್ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್)- 50 ಹುದ್ದೆಗಳು
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 51 ಹುದ್ದೆಗಳು
ಹಿರಿಯ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 59 ಹುದ್ದೆಗಳುಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 104 ಹುದ್ದೆಗಳು
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 66 ಹುದ್ದೆಗಳು
ಟ್ರೈನ್ ಕ್ಲರ್ಕ್- 09 ಹುದ್ದೆಗಳು
ಕಿರಿಯ ಅನುವಾದಕ (ಅಧಿಕೃತ ಭಾಷೆ) - 10
ಜೆಇ / ಮೆಕ್ಯಾನಿಕಲ್ ಕಾರ್ಯಾಗಾರ- 05
ಜೆಇ / ಎಲೆಕ್ಟ್ರಿಕಲ್ / ಡಿಸೈನ್ ಡ್ರಾಯಿಂಗ್ - 04 ಹುದ್ದೆಗಳು
ಜೆಇ / ಟ್ರ್ಯಾಕ್ ಮೆಷಿನ್- 44 ಹುದ್ದೆಗಳು
ಟೆಕ್ -3 / ಸಿ & ಡಬ್ಲ್ಯೂ (ಮೆಷಿನ್)- 04 ಹುದ್ದೆಗಳು
ಟೆಕ್ -3 / ಟ್ರ್ಯಾಕ್ ಮೆಷಿನ್- 65 ಹುದ್ದೆಗಳು

ವಯೋಮಿತಿ:
ಈ ಹುದ್ದೆಗಳಿಗೆ 42 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳ ಕನಿಷ್ಠ ಶೈಕ್ಷಣಿಕ ಅರ್ಹತೆ 10ನೇ / 12ನೇ / ಐಟಿಐ / ಪದವಿ / ಸ್ನಾತಕೋತ್ತರ ಪದವಿ. ಇಲ್ಲಿ ಆಯಾ ಹುದ್ದೆಗಳಿಗೆ ಆಯಾ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.   ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ:
ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಅಭ್ಯರ್ಥಿಗಳು ಆಯಾ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​​ನಲ್ಲಿ ಕಾಣಿಸಿಕೊಳ್ಳಲು ರವಿ ಬೆಳಗೆರೆ ಪಡೆದ ಸಂಭಾವನೆ ಇಷ್ಟೇನಾ?

ಆಯ್ಕೆ ಪ್ರಕ್ರಿಯೆ:
ಸಿಬಿಟಿ ಆನ್‌ಲೈನ್ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಅಕ್ಟೋಬರ್ 21, 2019
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ನವೆಂಬರ್ 2019 (ರಾತ್ರಿ 11:59 ರವರೆಗೆ).

ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ವೆಬ್​ಸೈಟ್ ಲಿಂಕ್​:

ಅಧಿಕೃತ ವೆಬ್​​ಸೈಟ್​- https://joinindiancoastguard.gov.in/

ಹುದ್ದೆಗಳ ಮಾಹಿತಿ- https://rojgar.live/wp-content/uploads/north-central-railway-apply-online-for-529-goods-guard-alp-je-other-posts-gdce-advt-details-3f08b3.pdf

ನೋಟಿಫಿಕೇಷನ್- https://www.rrcald.org/

 

First published:October 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading