Makar Sankranti: ಕರ್ಫ್ಯೂ ಮಧ್ಯೆ ಎಳ್ಳು ಬೆಲ್ಲ ಹಂಚೋಕೆ ಹೊಸಾ ವಿಧಾನ, ಬೆಂಗಳೂರಲ್ಲಿ ಸಂಕ್ರಾಂತಿ ಕೂಡಾ ಮನೆಬಾಗಿಲಿಗೆ!

Makar Sankranthi 2022: ಉದಾಹರಣೆಗೆ ಬೆಂಗಳೂರಿನ ವಿದ್ಯಾರಣ್ಯಪುರಂನಲ್ಲಿರುವ ಕಲ್ಪವೃಕ್ಷ ಆರ್ಗ್ಯಾನಿಕ್ ಎಂಬ ಅಂಗಡಿಯವರು ನಿಮ್ಮ ಪ್ರೀತಿ ಪಾತ್ರರ ಮನೆಗೆ ಎಳ್ಳು ಬೆಲ್ಲವನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಕ್ರಾಂತಿ ಹಬ್ಬಕ್ಕೆ (Sankranti festival) ಕ್ಷಣಘಣನೆ ಆರಂಭವಾಗಿದೆ. ಸಂಕ್ರಾಂತಿ ವಿಶೇಷ ಹಬ್ಬ. ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು  ಬದಲಾಯಿಸುತ್ತಾನೆ. ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಯತ್ತ ಸೂರ್ಯನ ಪಥ ಬದಲಾಗುತ್ತದೆ. ಹಬ್ಬದ ತಯಾರಿ (Preparation) ಈಗಾಗಲೇ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಕೊರೊನಾ ಇದ್ದರೂ ಸಹ ಹಬ್ಬದ ಸಂಭ್ರಮ ಕಡಿಮೆಯಾಗಿಲ್ಲ. ಕಬ್ಬು, ಸಂಕ್ರಾಂತಿ ಕಾಳುಗಳ ಖರೀದಿ ಭರದಿಂದ ಸಾಗಿದೆ. ಆದರು ಸಹ ಕಳೆದ ವರ್ಷದಿಂದ ಸಂಕ್ರಾಂತಿ ಹಬ್ಬಕ್ಕೆ ಮೊದಲಿನ ಕಳೆ ಇಲ್ಲ ಎನ್ನಬಹುದು.  

ಇದು ವರ್ಷದ ಮೊದಲ ಹಬ್ಬ, ಇದಕ್ಕೂ ಸಹ ಕೊರೊನಾ ಕರಿನೆರಳು ಬಿದ್ದಿದೆ. ವೀಕೆಂಡ್​​ ಕರ್ಫ್ಯೂ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ನೆನಪಾಗುವುದು ಎಳ್ಳು ಬೆಲ್ಲ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ ಎಂದು ಈ ದಿನ ಹಾರೈಸಲಾಗುತ್ತದೆ.  ಹಬ್ಬದ ದಿನ ಸಂಜೆ ಮಕ್ಕಳು ತಮ್ಮ ಸುತ್ತ ಮುತ್ತಲಿನ ಮನೆಗಳಿಗೆ ಸಿಂಗಾರ ಮಾಡಿಕೊಂಡು ಹೋಗಿ ಎಳ್ಳು ಬೀರುವ ಸಂಪ್ರಾದಯವಿದೆ. ಇದರ ಹಿಂದೆ ಒಳ್ಳೆಯ ಉದ್ದೇಶ ಕೂಡ ಇದೆ.

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬದ ಆಚರಣೆಗಳಿಗೆ, ಭೌಗೋಳಿಕ ಹಾಗೂ ವೈಜ್ಞಾನಿಕ ಕಾರಣಗಳು ಹವಾಮಾನಕ್ಕೂ ಹೊಂದಿಕೊಂಡು ಇರುತ್ತದೆ. ಅಂತೆಯೇ ಸಂಕ್ರಾಂತಿ ಹಬ್ಬದ ದಿನ ಈ ಎಳ್ಳು-ಬೆಲ್ಲ ಬೀರುವುದು. ಆತ್ಮೀಯರ, ಸ್ನೇಹಿತರ ಮನೆಗಳಿಗೆ ಹೋಗಿ ಹಂಚುವುದು ವಿಶೇಷ. ಎಲ್ಲರೂ ಹಬ್ಬದ ನೆಪದಲ್ಲಿ ಎಳ್ಳು ಬೆಲ್ಲ ಹಂಚಿಕೊಂಡು ಸ್ವೀಕರಿಸುವರು. ಎಂತಹಾ ಜಗಳ ವೈಷಮ್ಯವಿದ್ದರೂ ಮನೆ ಬಾಗಿಲಿಗೆ ಮಕ್ಕಳೋ ಅಥವಾ ಇನ್ಯಾರಾದರೂ ಹಬ್ಬದ ದಿನ ಬಂದರೆ ಖಂಡಿತಾ ಅದನ್ನು ಮರೆತು ಮತ್ತೆ ಒಂದಾಗುವ ಅವಕಾಶಗಳಿರುತ್ತವೆ. ಆದರೆ ಕೊರೊನಾ  ಎಲ್ಲಾ ಸಂದರ್ಭವನ್ನು ಬದಲಾಯಿಸಿದೆ.

ಇದನ್ನೂ ಓದಿ: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

ಮನೆ ಮನೆಗೆ ಹೋಗಿ ಈಗ ಎಳ್ಳು ಬೀರಲು ಸಾಧ್ಯವಿಲ್ಲ. ಆರೋಗ್ಯದ ದೃಷ್ಟಿಯಿಂದ ಜನರು ಬೇರೆಯವರ ಮನೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಅಲ್ಲದೇ ಹೋಗಲು ಮನಸಿದ್ದರೂ ಸಹ ಅಪಾರ್ಟ್​ಮೆಂಟ್​ಗಳಲ್ಲಿ ವಾಸವಿದ್ದರೆ ಬೇರೆಯವರಿಗೆ ಬರಲು ಅಥವಾ ಹೋಗಲು ಅವಕಾಶವಿರುವುದಿಲ್ಲ.  ಕಠಿಣ ಕ್ರಮಗಳನ್ನು ಸರ್ಕಾರ ಜಾರಿ ಮಾಡಿರುವುದರಿಂದ ಅನಿವಾರ್ಯವಾಗಿ ಮನೆಯಲ್ಲಿಯೇ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ.

ಕಳೆದ ವರ್ಷ ಸಹ ಕೊರೊನಾ ಕಾರಣದಿಂದ ಹಬ್ಬವನ್ನು ಹೀಗೆ ಆಚರಣೆ ಮಾಡಲಾಗಿತ್ತು.  ಆದರೆ ಇದೇ ಈಗ ಹೊಸ ಯೋಜನೆ ಹುಟ್ಟಲು ಕಾರಣವಾಗಿದೆ.  ಬೆಂಗಳೂರಿನಲ್ಲಿ ವಿನೂತನ ಯೋಜನೆಯೊಂದು ಆರಂಭವಾಗಿದ್ದು, ನಿಮ್ಮ ಬದಲಿಗೆ ನಿಮ್ಮ ಮನೆಯವರಿಗೆ ಎಳ್ಳು ಬೆಲ್ಲವನ್ನು ಅವರು ತಲುಪಿಸುತ್ತಾರೆ.

ಉದಾಹರಣೆಗೆ ಬೆಂಗಳೂರಿನ ವಿದ್ಯಾರಣ್ಯಪುರಂನಲ್ಲಿರುವ ಕಲ್ಪವೃಕ್ಷ ಆರ್ಗ್ಯಾನಿಕ್ ಎಂಬ ಅಂಗಡಿಯು ನಿಮ್ಮ ಪ್ರೀತಿ ಪಾತ್ರರ ಮನೆಗೆ ಎಳ್ಳು ಬೆಲ್ಲವನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.  ಇವರು ಯಾವುದೇ ರಾಸಾಯನಿಕಗಳನ್ನು ಬಳಸದೆ ಸ್ವಷ್ಕ್ಷವಾಗಿ ಮನೆಯಲ್ಲಿಯೇ ಎಳ್ಳು ಬೆಲ್ಲವನ್ನು ತಯಾರಿಸಿ, ಜೊತೆಗೆ ಸಕ್ಕರೆ ಅಚ್ಚನ್ನು  ಕೊರಿಯರ್ ಮೂಲಕ ತಲುಪಿಸುತ್ತಾರೆ.

ನಾವು ಮನೆಗೆ ಎಳ್ಳು ಬೆಲ್ಲವನ್ನು ಆನ್​ಲೈನ್​ ಮೂಲಕ ಆರ್ಡರ್ ಮಾಡಬಹುದು, ಆದರೆ ನಮ್ಮವರಿಗೆ ಕಳುಹಿಸುವ ಪದಾರ್ಥದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಅವುಗಳ ಶುದ್ದತೆಯ ಬಗ್ಗೆ ತಿಳಿದಿರಬೇಕು. ಹಾಗಾಗಿ ಎಳ್ಳು ಬೆಲ್ಲ ಬೀರುವ ಆಸೆ ಇದ್ದರೆ, ಇವರನ್ನು ಸಂಪರ್ಕಿಸಿದರೆ ಸಾಕು. ನಿಮಗೆ ಎಷ್ಟು ಅಳತೆ ಅವಶ್ಯಕತೆ ಇರುತ್ತದೆ ಅಷ್ಟನ್ನು ಅವರು ಕಳುಹಿಸುತ್ತಾರೆ,

ತೂಕಕ್ಕೆ ತಕ್ಕಂತೆ ಬೆಲೆಗಳನ್ನು ಸಹ ನಿಗದಿ ಪಡಿಸಲಾಗಿದೆ. ಇನ್ನು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಿಗೆ ಸಹ ಇವರು ಪಾರ್ಸಲ್​ ಕಳುಹಿಸುತ್ತಾರೆ.ಪದಾರ್ಥಬೆಲೆ
ಸಕ್ಕರೆ ಅಚ್ಚು140 ರೂ ಅರ್ಧ ಕೆಜಿ
ಸಕ್ಕರೆ ಅಚ್ಚು280 ರೂ ಒಂದು ಕೆಜಿ
ಎಳ್ಳು ಬೆಲ್ಲ ಮಿಶ್ರಣ 150 ರೂ  ಅರ್ಧ ಕೆಜಿ
ಎಳ್ಳು ಬೆಲ್ಲ ಮಿಶ್ರಣ300 ಒಂದು ಕೆಜಿ
ಎಳ್ಳು ಬೆಲ್ಲ ಮಿಶ್ರಣ30 ರೂ ನೂರು ಗ್ರಾಂ
ಎಳ್ಳು ಬೆಲ್ಲ ಮಿಶ್ರಣ75 ರೂ ಕಾಲು ಕೆಜಿ

ಇದನ್ನೂ ಓದಿ: ಇಸ್ಕಾನ್​ನಲ್ಲಿ ಅದ್ಧೂರಿಯಾಗಿ ವೈಕುಂಠ ಏಕಾದಶಿ ಆಚರಣೆ, ನೀವೂ ನೋಡಿ ಕಣ್ತುಂಬಿಕೊಳ್ಳಿ

ನೀವು ಹಬ್ಬದ ಕೆಲ ದಿನಗಳ ಮೊದಲು ಹೇಳಿದರೆ, ಹಬ್ಬದ ದಿನ ಸರಿಯಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.  ನಿಜಕ್ಕೂ ಇದೊಂದು ಅದ್ಭುತ ವ್ಯವಸ್ಥೆಯಾಗಿದ್ದು, ವಿಭಿನ್ನ ರೀತಿಯಲ್ಲಾದರೂ ಸರಿ ಸಂಬಂಧವನ್ನು ಗಟ್ಟಿಗೊಳಿಸಲು ಇದು ಸಹಾಯ ಮಾಡುವುದಲ್ಲದೇ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
Published by:Sandhya M
First published: