Sambar Recipe: ಬ್ಯಾಚುಲರ್ಸ್​ಗೆ ಬೊಂಬಾಟ್ ಸಾಂಬಾರ್; ಸುಲಭವಾಗಿ ಮಾಡುವ ರುಚಿಕರ ಸಾರಿನ ರೆಸಿಪಿ

ಸಾಂಬಾರ್ ಬರಿಯ ಅನ್ನದೊಡನೆ ಮಾತ್ರವಲ್ಲದೆ ಚಪಾತಿ, ಪರೋಟಾ, ನಾನ್‌ನೊಂದಿಗೆ ಕೂಡ ಉತ್ತಮವಾಗಿ ಹೊಂದಿಕೆಯಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಪ್ಪ-ಅಮ್ಮ ಹಾಗೂ ಮನೆ-ಮಡದಿಯನ್ನು ಬಿಟ್ಟು ದೂರದ ಊರುಗಳಲ್ಲಿರೋ  ಬ್ಯಾಚಲರ್ಸ್​ಗಳಿಗೆ ಅಡುಗೆ (Cooking) ಮಾಡೋದೇ ದೊಡ್ಡ ತಲೆನೋವಾಗಿರುತ್ತೆ.  ದಕ್ಷಿಣ ಭಾರತದ ನಿತ್ಯದ ಊಟದ ಅವಿಭಾಜ್ಯ ಅಂಗವಾಗಿರುವ ಸಾಂಬಾರ್ (Sambar) ನನ್ನು ಕನ್ನಡದಲ್ಲಿ ಕೆಲವೆಡೆ ಸಾರು ಎಂದೂ ಕರೆಯುತ್ತಾರೆ. ಅನ್ನದೊಡನೆ ಸಾಂಬಾರ್​ ಹಾಕಿಕೊಂಡು ಊಟ ಮಾಡಿದ್ರೆ,  ಸಿಗೋ ತೃಪ್ತಿಯೇ ಬೇರೆ. ಊಟದ ರುಚಿ ಇರುವುದೇ ಸಾಂಬಾರ್‌ನ ರುಚಿಯಲ್ಲಿ. ಸಾಮಾನ್ಯವಾಗಿ ಸುಲಭವಾಗಿ ಲಭಿಸುವ, ಅಗ್ಗ ಹಾಗೂ ಹೆಚ್ಚು ದಿನ ಹಾಳಾಗದೇ ಇರುವ ತರಕಾರಿಗಳನ್ನೇ ಸಾಂಬಾರಿಗಾಗಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ (Onions and Potatoes) ಪ್ರಮುಖವಾಗಿವೆ. ಈ ಜೋಡಿಯ ಸಾಂಬಾರಿಗೆ ಸರಿಸಾಟಿಯಾದ ತರಕಾರಿ ಇನ್ನೊಂದಿಲ್ಲ.

ಇದು ಸಾಂಬಾರ್ ಬರಿಯ ಅನ್ನದೊಡನೆ ಮಾತ್ರವಲ್ಲದೆ ಚಪಾತಿ, ಪರೋಟಾ, ನಾನ್‌ನೊಂದಿಗೆ ಕೂಡ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಸಾಂಬಾರ್‌ನಲ್ಲಿ ಬೇರೆ ಬೇರೆ ತರಕಾರಿಗಳನ್ನು ಬಳಸಿ ಕೂಡ ಸಿದ್ಧಪಡಿಸುವುದರಿಂದ ಆರೋಗ್ಯಕ್ಕೂ ಇದು ಉತ್ತಮ ಎಂದೆನಿಸಿದೆ. ಹಾಗಿದ್ದರೆ ಇದನ್ನು ಸರಳವಾಗಿ ಸಿದ್ಧಪಡಿಸುವ ಪಾಕ ವಿಧಾನವನ್ನು ನಾವು ತಿಳಿಸಿಕೊಡಲಿದ್ದೇವೆ.

ಸಾಮಾಗ್ರಿಗಳು

*ಆಲೂಗಡ್ಡೆ - 1 ಕಪ್ (ಸಿಪ್ಪೆ ಸುಲಿದು ಚಿಕ್ಕ ತುಂಡುಗಳನ್ನಾಗಿಸಿದ್ದು)

*ಈರುಳ್ಳಿ - 1 ಕಪ್ (ಸಿಪ್ಪೆ ಸುಲಿದು ದೊಡ್ಡದಾಗಿ ಹೆಚ್ಚಿದ್ದು)

*ತೊಗರಿ ಬೇಳೆ - 1 ಕಪ್

*ತುರಿದ ತೆಂಗಿನ ಕಾಯಿ - 1 ಕಪ್

*ಮೆಣಸಿನ ಪುಡಿ - 3 ಚಮಚ (ಸಾಂಬಾರ್‌ನ ರುಚಿಗೆ ಬ್ಯಾಡಗಿ ಮೆಣಸಿನ ಪುಡಿಯೇ ಸೂಕ್ತ)

*ಕೊತ್ತಂಬರಿ ಬೀಜ - 2 ಚಮಚಗಳು

*ಹುಣಸೆ ಹುಳಿ: ಚಿಕ್ಕ ಲಿಂಬೆಯ ಗಾತ್ರದ್ದು

*ಕಡಲೆ ಕಾಳು: ಅರ್ಧ ಚಿಕ್ಕ ಚಮಚ

*ಉದ್ದಿನ ಬೇಳೆ - 1/2 ಚಮಚ

*ಅಕ್ಕಿ ಪುಡಿ: ಅರ್ಧ ಚಿಕ್ಕ ಚಮಚ

*ಬೆಲ್ಲ - 1 ಚಮಚ

*ಹುಳಿ - 5 ಗ್ರಾಂ ಅಥವಾ ಸಣ್ಣ ಲಿಂಬೆ ಗಾತ್ರದ್ದು

*ಕರಿಬೇವು - 1/4 ಚಮಚ

*ಉಪ್ಪು ರುಚಿಗೆ ತಕ್ಕಷ್ಟು

*ಎಣ್ಣೆ- ಒಗ್ಗರಣೆಗೆ ಅಗತ್ಯವಿದ್ದಷ್ಟು

*ಸಾಸಿವೆ: ಒಂದು ಚಿಕ್ಕ ಸಮಚ

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೂ ರುಚಿಕರ ಮೊಳಕೆ ಕಾಳಿನ ಬಾತ್

ಮಾಡುವ ವಿಧಾನ:

1) ಮೊದಲು ಪ್ರೆಶರ್ ಕುಕ್ಕರ್ ನಲ್ಲಿ ತೊಗರಿ ಬೇಳೆ, ಕೊಂಚ ನೀರು ಹಾಕಿ ಸುಮಾರು ಮೂರು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆರೆದು ಈರುಳ್ಳಿ, ಆಲೂಗಡ್ಡೆ ಹಾಕಿ ಮತ್ತೊಂದು ಮೂರು ಸೀಟಿ ಬರುವವರೆಗೆ ಬೇಯಿಸಿ ಇಳಿಸಿ.

2) ಇನ್ನೊಂದು ಚಿಕ್ಕ ಬಾಣಲೆಯನ್ನು ಒಲೆಯ ಮೇಲಿಟ್ಟು ಒಣಗಿದ ಬಳಿಕ ಅಕ್ಕಿ ಹಿಟ್ಟು, ಧನಿಯ, ಉದ್ದಿನಬೇಳೆ, ಕಡ್ಲೆಕಾಳು ಹಾಕಿ ಚಿಕ್ಕ ಉರಿಯಲ್ಲಿ ಕೊಂಚ ಕೆಂಪು ಬಣ್ಣ ಬರುವಷ್ಟು ಹುರಿಯಿರಿ. ಬಳಿಕ ಇದನ್ನು ಅಗಲವಾದ ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ.

3) ಇದು ತಣಿದ ಬಳಿಕ ಮಿಕ್ಸಿಯ ಜಾರ್ ನಲ್ಲಿ ಹಾಕಿ. ಇದಕ್ಕೆ ಹುಣಸೆ ಹುಳಿ (ಬೀಜ, ನಾರು ನಿವಾರಿಸಿದ್ದು), ಕಾಯಿತುರಿ, ಬೆಲ್ಲ, ಮೆಣಸಿನ ಪುಡಿ ಮತ್ತು ಕೊಂಚ ನೀರು ಹಾಕಿ ನಯವಾಗುವಂತೆ ಕಡೆಯಿರಿ

. 4) ಈ ಹೊತ್ತಿಗೆ ಕುಕ್ಕರ್ ತಣ್ಣಗಾಗಿದ್ದು ಒಳಗಿನ ಬೇಳೆ ಮತ್ತು ಇತರ ತರಕಾರಿಗಳು ಬೆಂದಿರುತ್ತದೆ. ಇದನ್ನು ಇನ್ನೊಂದು ಪಾತ್ರೆಯಲ್ಲಿ ಸುರಿಯಿರಿ.

5) ಈ ಪಾತ್ರೆಗೆ ಇನ್ನೂ ಕೊಂಚ ನೀರು ಸೇರಿಸಿ ಬೇಯಲಿಡಿ. ಇದಕ್ಕೆ ಮಿಕ್ಸಿಯಲ್ಲಿ ಕಡೆದ ಮಸಾಲೆ ಸೇರಿಸಿ ಕಲಸಿ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್​ರೂಟ್​ ಬಾತ್ ಮಾಡಿ

6) ಒಗ್ಗರಣೆಯ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವಿನ ಎಲೆಗಳನ್ನು ಹಾಕಿ. ರುಚಿ ಹೆಚ್ಚಲು ಕೊಂಚ ಇಂಗನ್ನೂ ಎಣ್ಣೆಗೆ ಸೇರಿಸಬಹುದು. ಇದನ್ನು ಬಿಸಿಯಿದ್ದಂತೆಯೇ ಸಾಂಬಾರಿನ ಪಾತ್ರೆಯಲ್ಲಿ ಮುಳುಗಿಸಿ.

7) ಸುಮಾರು ಐದರಿಂದ ಹತ್ತು ನಿಮಿಷ ಬೆಂದರೆ ಸಾಕು, ರುಚಿಕರವಾದ ಆಲೂಗಡ್ಡೆ ಈರುಳ್ಳಿ ಸಾಂಬಾರ್ ಸಿದ್ಧವಾಗಿದೆ.
Published by:Pavana HS
First published: