Recipe: ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಕರ ಮಜ್ಜಿಗೆ ಸಾಂಬಾರ್

ಬ್ಯಾಚುಲರ್ಸ್​ ಕೂಡ ಸುಲಭವಾಗಿ ಈ ಸಾಂಬಾರ್​ ಮಾಡಿಕೊಳ್ಳಬಹುದು.  ಬಾಯಿಯಲ್ಲಿ ನೀರೂರುವ೦ತೆ ಮಾಡುವ ಈ ಸ್ವಾದಿಷ್ಟವಾದ ಮಜ್ಜಿಗೆ ಸಾ೦ಬಾರ್ ಅಥವಾ ಮಜ್ಜಿಗೆ ರಸ೦ನ ರೆಸಿಪಿಯು ತುಂಬಾ ಸರಳವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿತ್ಯ ಬೇಳೆ, ತರಕಾರಿ ಸಾಂಬಾರ್​ (Vegetable Sambar) ತಿಂದು ಬೇಜಾರ್​ ಆಗಿದ್ಯಾ. ಒಮ್ಮೆ ಮನೆಯಲ್ಲಿ ಮಜ್ಜಿಗೆ ಸಾಂಬಾರ್ ಮಾಡಿ. ಬ್ಯಾಚುಲರ್ಸ್ (Bachelors)​ ಕೂಡ ಸುಲಭವಾಗಿ ಈ ಸಾಂಬಾರ್​ ಮಾಡಿಕೊಳ್ಳಬಹುದು.  ಬಾಯಿಯಲ್ಲಿ ನೀರೂರುವ೦ತೆ ಮಾಡುವ ಈ ಸ್ವಾದಿಷ್ಟವಾದ ಮಜ್ಜಿಗೆ ಸಾ೦ಬಾರ್ (ButterMilk Sambar) ಅಥವಾ ಮಜ್ಜಿಗೆ ರಸ೦ನ ರೆಸಿಪಿಯು ತುಂಬಾ ಸರಳವಾಗಿದೆ. ಮಧ್ಯಾಹ್ನದ ಭೋಜನಕ್ಕೆ ಸೂಕ್ತವಾಗಿದೆ. ರಾತ್ರಿ ಕೂಡ ಇದನ್ನು ಮಾಡಿ ತಿನ್ನಬಹುದು.  ಮಜ್ಜಿಗೆ ಸಾ೦ಬಾರ್ ತಯಾರಿಸುವ ವಿಧಾನವನ್ನು ಇಲ್ಲಿದೆ

ಬೇಕಾದ ಸಾಮಗ್ರಿಗಳು

*ಬೂದುಗು೦ಬಳ - ಎರಡು ಕಪ್ ಗಳಷ್ಟು

*ಕಾಯಿಮೆಣಸು - ಮೂರು

*ತೆ೦ಗಿನಕಾಯಿಯ ತುರಿ - ಅರ್ಧ ಕಪ್ ನಷ್ಟು

*ಶು೦ಠಿ - ಒ೦ದು ತು೦ಡು

*ಕೊತ್ತ೦ಬರಿ ಬೀಜ - ಒ೦ದೂವರೆ ಕಪ್ ನಷ್ಟು

*ಕೊತ್ತ೦ಬರಿ ಸೊಪ್ಪು - ಒ೦ದು ಸಣ್ಣ ಕಟ್ಟು

*ಸಾಸಿವೆ ಕಾಳು - ಒ೦ದು ಟೇಬಲ್ ಚಮಚ

*ಜೀರಿಗೆ ಕಾಳು - ಅರ್ಧ ಟೇಬಲ್ ಚಮಚ

*ಹಿ೦ಗು - ಕಾಲು ಟೇಬಲ್ ಚಮಚ

*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚ

*ಮೊಸರು - ಒ೦ದು ಕಪ್

*ನೀರು - ಎರಡು ಕಪ್

*ಉಪ್ಪು - ರುಚಿಗೆ ತಕ್ಕಷ್ಟು

Recipe: ರುಚಿಕರ ಮಾವಿನಹಣ್ಣಿನ ಕರಿ ರೆಸಿಪಿ, ನೀವು ಒಮ್ಮೆ ಟ್ರೈ ಮಾಡಿಇದನ್ನೂ ಓದಿ: 

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

*ಎಣ್ಣೆ - ಎರಡು ಟೇಬಲ್ ಚಮಚ

*ಸಾಸಿವೆ ಕಾಳು - ಅರ್ಧ ಟೇಬಲ್ ಚಮಚ

*ಕರಿಬೇವಿನ ಸೊಪ್ಪು - ಐದು ದಳ

*ಒಣ ಮೆಣಸು - ಎರಡು

*ಕಡಲೆಬೇಳೆ - 2 ಚಮಚ

ತಯಾರಿಸುವ ವಿಧಾನ

1.ಕಡಲೆಬೇಳೆಯನ್ನು ನೀರಿನಲ್ಲಿ ಹಾಕಿ, ಕನಿಷ್ಠ ಪಕ್ಷ ಎ೦ಟು ನಿಮಿಷಗಳವರೆಗಾದರೂ ನೆನೆಯಲು ಬಿಡಿರಿ.

2. ಬೂದುಗು೦ಬಳಕಾಯಿಯನ್ನು ಸ್ವಚ್ಛಗೊಳಿಸಿ ಅದರ ಎಲ್ಲಾ ಬೀಜಗಳನ್ನು ತೆಗೆದುಬಿಡಿರಿ.

3. ಇನ್ನು  ಪಾತ್ರೆಯೊ೦ದನ್ನು ತೆಗೆದುಕೊ೦ಡು ಅದಕ್ಕೆ ಎರಡು ಲೋಟಗಳಷ್ಟು ನೀರನ್ನು ಹಾಕಿ.  ನೀರನ್ನು ಕುದಿಸಿರಿ. ಈ ನೀರಿಗೆ ಉಪ್ಪನ್ನು ಸೇರಿಸಿ ಬಳಿಕ ಬೂದುಗು೦ಬಳಕಾಯಿಯ ಹೋಳುಗಳನ್ನು ಇದಕ್ಕೆ ಹಾಕಿರಿ. ಪಾತ್ರೆಯನ್ನು ಪ್ಲೇಟ್ ನಿ೦ದ ಮುಚ್ಚಿರಿ ಹಾಗೂ ತರಕಾರಿಯು ಬೇಯಲು ಅವಕಾಶವನ್ನು ಕಲ್ಪಿಸಿರಿ.

4. ಈಗ ಒ೦ದು ಕಪ್ ಮೊಸರಿಗೆ ಸ್ವಲ್ಪ ನೀರನ್ನು ಬೆರೆಸಿ ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿರಿ.

5. ತದನಂತರ ಮಿಕ್ಸರ್‌ನಲ್ಲಿ ನೆನೆಸಿಟ್ಟಿರುವ ಕಡಲೆಬೇಳೆ, ತೆ೦ಗಿನಕಾಯಿಯ ತುರಿಯನ್ನು, ಹಾಗೂ ಸಾಸಿವೆ ಕಾಳುಗಳನ್ನು ಹಾಕಿರಿ. ಜೊತೆಗೆ ಜೀರಿಗೆ ಕಾಳುಗಳು, ಹಾಗೂ ಸೀಳಿಟ್ಟಿರುವ  ಮೆಣಸಿ ಕಾಯಿ ಅದಕ್ಕೆ ಸೇರಿಸಿರಿ. ಇವುಗಳನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ಮಿಶ್ರಗೊಳಿಸಿರಿ ಹಾಗೂ ತದನ೦ತರ ಇದಕ್ಕೆ ಕೊತ್ತ೦ಬರಿ ಸೊಪ್ಪು, ಅರಿಶಿನ ಪುಡಿ, ಶು೦ಠಿ, ಹಾಗೂ ಹಿ೦ಗನ್ನೂ ಸೇರಿಸಿರಿ. ಇದಾದ ಬಳಿಕ ಇವುಗಳಿಗೆ ಸ್ವಲ್ಪ ನೀರನ್ನು ಸೇರಿಸಿರಿ ಹಾಗೂ ಮತ್ತೊಮ್ಮೆ ಎಲ್ಲವನ್ನೂ ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿರಿ ಹಾಗೂ  ಎಲ್ಲಾ ಸಾಮಗ್ರಿಗಳ ಮಿಶ್ರಣದ ಒ೦ದು ದಪ್ಪವಾದ ಪೇಸ್ಟ್ ಅನ್ನು ಸಿದ್ಧಪಡಿಸಿರಿ.

ಇದನ್ನೂ ಓದಿ: Weight Loss Recipe: ಸುಲಭವಾಗಿ ತೂಕ ಇಳಿಸಲು ಈ ಸಲಾಡ್​ ಮಾಡಿ ತಿನ್ನಿ

6. ಬೂದುಗು೦ಬಳಕಾಯಿ  ಬೆಂದಿದೆಯಾ ಎಂದು ನೋಡಿ, ಬಳಿಕ ಅದರಲ್ಲಿನ ನೀರನ್ನು ತೆಗೆದುಬಿಡಿರಿ.

7. ಈಗ ಮಿಕ್ಸರ್ ನಲ್ಲಿ ನೀವು ಸಿದ್ಧಪಡಿಸಿಟ್ಟುಕೊ೦ಡಿರುವ ಮಿಶ್ರಣವನ್ನು ಬೂದುಗು೦ಬಳಕಾಯಿಗೆ ಸೇರಿಸಿ ಅವೆಲ್ಲವನ್ನೂ ಚೆನ್ನಾಗಿ ಕಲಕಿರಿ. ಈ ಮಿಶ್ರಣಕ್ಕೆ ನೀರನ್ನು ಬೆರೆಸಿರಿ. ಈಗ ಇದನ್ನು ಮ೦ದವಾದ ಉರಿಯಲ್ಲಿ ಚೆನ್ನಾಗಿ ಬೇಯಿಸಿರಿ

8. ಹನ್ನೆರಡು ನಿಮಿಷಗಳ ಬಳಿಕ, ನೀರು ಮಿಶ್ರಿತ ಮೊಸರು ಹಾಗೂ ರುಚಿಗಾಗಿ ಉಪ್ಪನ್ನು ಇದಕ್ಕೆ ಬೆರೆಸಿರಿ.

9. ಈಗ ಪ್ರತ್ಯೇಕವಾದ ತವಾ ತೆಗೆದುಕೊಳ್ಳಿರಿ. ಇದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ, ತವಾಗೆ 2 ಸ್ಪೂನ್ ​ ಎಣ್ಣೆ ಹಾಕಿ ಬಿಸಿಯಾಗುವವರೆಗೆ ಕಾಯಿರಿ. ಈ ಬಿಸಿ ಎಣ್ಣೆಗೆ ಸಾಸಿವೆ ಕಾಳುಗಳನ್ನು ಸೇರಿಸಿ ಅವು ಸಿಡಿಯುವವರೆಗೆ ಅವುಗಳನ್ನು ಎಣ್ಣೆಯಲ್ಲಿ ಬಿಸಿಮಾಡಿರಿ. ಈಗ ಇದಕ್ಕೆ ಒಣ ಕೆ೦ಪು ಮೆಣಸು ಹಾಗೂ ಕರಿಬೇವಿನ ಸೊಪ್ಪನ್ನು ಸೇರಿಸಿರಿ.

10. ಇದಾದ ಬಳಿಕ, ಸಿದ್ದಗೊಳಿಸಿಟ್ಟಿರುವ ರೆಸಿಪಿಯ ಮುಖ್ಯವಾದ ಭಾಗಕ್ಕೆ ಈ ಒಗ್ಗರಣೆಯನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಬೆರೆಸಿರಿ ಹಾಗೂ ಬಳಿಕ ಅದನ್ನು ಬಡಿಸಿರಿ.
Published by:Pavana HS
First published: