Beauty Tips: ತನ್ನ ಸಹಜ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ನಟಿ ಸಾಯಿ ಪಲ್ಲವಿ..!

ಸಹಜವಾದ ಸೌಂದರ್ಯದಿಂದಲೇ ಅಭಿಮಾನಿಗಳ ಮನ ಗೆದ್ದಿರುವ ಸಾಯಿ ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬ್ಯೂಟಿ ಸೀಕ್ರೆಟ್​ ಅನ್ನು ರಿವೀಲ್ ಮಾಡಿದ್ದಾರೆ.

ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ

  • Share this:
ತೆಲುಗು ಚಿತ್ರ ರಂಗದಲ್ಲಿ, ಟಾಪ್ ನಾಯಕಿಯಾಗುವ ಸ್ಫರ್ಧೆಯಲ್ಲಿ ದಾಪುಗಾಲು ಇಡುತ್ತಿರುವ ನಟಿ ಸಾಯಿ ಪಲ್ಲವಿ, ನಟ ನಾಗ ಚೈತನ್ಯ ಜೊತೆಗಿನ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಲವ್ ಸ್ಟೋರಿ’ ಯಲ್ಲಿ ವಿಶೇಷ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಂತ, ಸಾಯಿ ಪಲ್ಲವಿ ಎಂತಹ ಸ್ಟಾರ್ ನಟನ ಜೊತೆಗೆ ನಟಿಸಿದರೂ, ಅಮೋಘ ಅಭಿನಯದ ಮೂಲಕ ಆ ಚಿತ್ರದಲ್ಲಿ ತನ್ನ ಛಾಪನ್ನು ಕೂಡ ಮೂಡಿಸಿ, ವೀಕ್ಷಕರ ಹೃದಯಕ್ಕೆ ಲಗ್ಗೆ ಇಡುತ್ತಿರುವುದು ಇದು ಪ್ರಥಮ ಬಾರಿ ಏನಲ್ಲ. ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ಸಾಯಿ ಪಲ್ಲವಿ, ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ‘ಪ್ರೇಮಂ’ ಚಿತ್ರದ ಮಲಾರ್ ಪಾತ್ರ ಈಗಲೂ ಸಿನಿಮಾ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ತಮಿಳು ನಟ ಧನುಷ್ ಜೊತೆ ‘ರೌಡಿ ಬೇಬಿ’ ಬೇಬಿಯಾಗಿ ಮಿಂಚಿದ ಅವರು, ಲಾಕ್‍ಡೌನ್‍ನಲ್ಲಿ ಬಿಡುಗಡೆ ಆಗಿದ್ದ, ‘ಪಾವ ಕದೈಗಲ್’ ಸಿನಿಮಾ ಅಭಿನಯಕ್ಕಾಗಿ ವಿಶೇಷ ಮೆಚ್ಚುಗೆ ಪಡೆದಿದ್ದರು.

ಸದಾ ನಗುಮುಖದ ಚೆಲುವೆ ಸಾಯಿ ಪಲ್ಲವಿ, ತನ್ನ ಅಭಿನಯಕ್ಕೆ ಮಾತ್ರವಲ್ಲ,  ನಿರ್ದಿಷ್ಟವಾಗಿ ತಮ್ಮ ಹೆಚ್ಚು ಮೇಕಪ್ ಇಲ್ಲದ ಸಹಜ ಸೌಂದರ್ಯದಿಂದಾಗಿ ಕೂಡ ಹೆಸರುವಾಸಿ ಆಗಿದ್ದಾರೆ. ಮೇಕಪ್‍ನಿಂದ ಲಕಲಕ ಹೊಳೆಯುವ ನಟಿಮಣಿಯರ ಮಧ್ಯೆಯೂ, ತನ್ನ ಮುಗ್ಧ ನಗು ಹಾಗೂ ಸಹಜ ಸೌಂದರ್ಯದಿಂದ ಎದ್ದು ಕಾಣುವ ಈ ನಟಿ, ಅದೇ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ.

Sai Palavi will not act in remake movies, love story, Sai Pallavi, Naga Chaithanya, Chirnajeevi, Sai Pallavi movies, Sai Pallavi age, Sai Pallavi  birthdate, Sai Pallavi  husband, Sai Pallavi latest photos, ಸಾಯಿ ಪಲ್ಲವಿ ರಿಮೇಕ್​ ಸಿನಿಮಾಗಳಲ್ಲಿ ನಟಿಸೋಲ್ಲ, ಸಾಯಿ ಪಲ್ಲವಿ ಸಿನಿಮಾಗಳು, ನಾಗಚೈತನ್ಯ ಜೊತೆ ಲವ್ ಸ್ಟೋರಿಯಲ್ಲಿ ಸಾಯಿ ಪಲ್ಲವಿ, Love Story Movie released Sai Pallavi says she will not act in remake movies ae
ಲವ್​ ಸ್ಟೋರಿ ಸಿನಿಮಾದಲ್ಲಿ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ


ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಸೌಂದರ್ಯವನ್ನು ಹೇಗೆ ಅವರು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ರಹಸ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. “ನನ್ನ ಚರ್ಮ ಮತ್ತು ಕೂದಲಿನ ಆರೈಕೆಗಾಗಿ, ಸಿಂಥೆಟಿಕ್ ಕೆಮಿಕಲ್‍ಗಳನ್ನು ಹೊಂದಿರುವ ಶಾಂಪೂ, ಸೋಪ್ ಮತ್ತಿತರ ಉತ್ಪನ್ನಗಳನ್ನು ನಾನು ಯಾವತ್ತೂ ಬಳಸುವುದಿಲ್ಲ. ನನ್ನ ಕೂದಲು ಮತ್ತು ದೇಹಕ್ಕೆ ಸಹಜ ಕ್ಯಾಕ್ಟಸ್‍ನಂತಹ ಉತ್ಪನ್ನಗಳನ್ನು ಬಳಸುತ್ತಾ ಬಂದಿದ್ದೇನೆ. ನಾನು ಸಿನಿಮಾಕ್ಕಾಗಿ ಯಾವತ್ತೂ ಕೂದಲಿಗೆ ಬಣ್ಣ ಹಚ್ಚುವುದಿಲ್ಲ. ನಾನು ಸಹಜ ಕೂದಲಿನ ಜೊತೆ ಅಭಿನಯಿಸುತ್ತಿದ್ದೇನೆ” ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇದನ್ನೂ ಓದಿ: Sai Pallavi: ಲವ್​ ಸ್ಟೋರಿ ಎಂದ ಕೂಡಲೆ ನಾಚಿ ನೀರಾದ ಸಹಜ ಸುಂದರಿ ಸಾಯಿ ಪಲ್ಲವಿ

“ನಾನು ಕೇವಲ ಆರೋಗ್ಯಕರ ಆಹಾರ ಸೇವಿಸುತ್ತೇನೆ. ಅದು ನನ್ನ ಸೌಂದರ್ಯ ಕಾಪಾಡಲು ಸಹಾಯ ಮಾಡುವುದು ಮಾತ್ರವಲ್ಲ, ನನ್ನ ದೇಹಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಕೂಡ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ” ಎನ್ನುತ್ತಾರೆ ರೌಡಿ ಬೇಬಿ ನಟಿ.

ಇದನ್ನೂ ಓದಿ: Sai Pallavi: ಮದುವೆ ಸ್ಕ್ವಾಡ್​ ಜತೆ ಸಹಜ ಸುಂದರಿ ಸಾಯಿ ಪಲ್ಲವಿ..!

ಸಾಯಿ ಪಲ್ಲವಿ ಕೇವಲ ನಟಿ ಮಾತ್ರವಲ್ಲ, ವೈದ್ಯೆಯೂ ಕೂಡ ಎಂಬುವುದು ಎಲ್ಲರಿಗೂ ತಿಳಿದೇ ಇದೆ,.ಹಾಗಾಗಿ ಆಕೆಯಿಂದ ಬಂದ ಸಲಹೆ , ಆಕೆಯ ಲಕ್ಷಾಂತರ ಹಿಂಬಾಲಕರ ಪಾಲಿಗೆ ಅತ್ಯಮೂಲ್ಯ. ಸಾಯಿಪಲ್ಲವಿ ಈಗ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬ್ಯುಸಿಯಾಗಿರುವ ನಟಿಯರಲ್ಲಿ ಒಬ್ಬರು. ಈ ಮುದ್ದು ನಟಿಯ ಕೈಯಲ್ಲಿ, ಪ್ರಸ್ತುತ ತೆಲುಗಿನ ‘ವಿರಾಟ ಪರ್ವಂ’ ಮತ್ತು ‘ಶ್ಯಾಮ್ ಸಿಂಗ ರಾಯ್’ ಸಿನಿಮಾಗಳಿವೆ. ವಿರಾಟ ಪರ್ವಂ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಜತೆ ಹಾಗೂ ಮತ್ತೊಂದರಲ್ಲಿ ನಾನಿ ಜತೆ ಕಾಣಿಸಿಕೊಳ್ಳಲಿದ್ದಾರೆ. ಅಷ್ಟು ಮಾತ್ರವಲ್ಲ, ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದ, ಮಹಿಳಾ ಕೇಂದ್ರೀಕೃತ ವಿಷಯ ವಸ್ತುವುಳ್ಳ ಮಹಿಳಾ ತಮಿಳು ಸಿನಿಮಾ ಒಂದಕ್ಕೆ ಕೂಡ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರೆ.
Published by:Anitha E
First published: