• Home
  • »
  • News
  • »
  • lifestyle
  • »
  • Sabarimala Temple: ಶಬರಿಮಲೆ ಮಂಡಲ ಪೂಜೆ ಇಂದಿನಿಂದ ಓಪನ್, ಬುಕ್ಕಿಂಗ್ ಮಾಡೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್

Sabarimala Temple: ಶಬರಿಮಲೆ ಮಂಡಲ ಪೂಜೆ ಇಂದಿನಿಂದ ಓಪನ್, ಬುಕ್ಕಿಂಗ್ ಮಾಡೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sabarimala temple opens for Mandala pooja: ಇಂದು ಕೆಲವು ಮುಖ್ಯವಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ದೇವಸ್ಥಾನದ ಆಡಳಿತ ತಿಳಿಸಿದೆ. ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯು ನವೆಂಬರ್ 17 ರಂದು ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದೆ.  

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಶಬರಿಮಲೆ (Sabarimala) ಶ್ರೀ ಧರ್ಮ ಶಾಸ್ತಾ ದೇವಾಲಯವು (Temple) ಮಂಡಲ ಪೂಜೆಗೆ  (Mandal Pooja) ಬುಧವಾರ (Wednesday) ಸಂಜೆ 5 ಗಂಟೆಗೆ ದೇವಾಲಯವನ್ನು ತೆರೆಯಲಿದೆ ಎಂದು ಮಾಹಿತಿ ನೀಡಿದ್ದು, ತಂತ್ರಿ ಕಂಡರಾರು ರಾಜೀವರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ಎನ್ ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆಯಲಿದ್ದು, ಈ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿದೆ.  ಇಂದು ಕೆಲವು ಮುಖ್ಯವಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ದೇವಸ್ಥಾನದ ಆಡಳಿತ ತಿಳಿಸಿದೆ. ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯು ನವೆಂಬರ್ 17 ರಂದು ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದೆ.  


ಪಶ್ಚಿಮ ಘಟ್ಟಗಳ ಭಾಗ ಹಾಗೂ ಸೊಂಪಾದ ಕಾಡುಗಳು ಮತ್ತು 18 ಬೆಟ್ಟಗಳಿಂದ ಆವೃತವಾಗಿರುವ ದೇವಾಲಯದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯು ನವೆಂಬರ್ 17 ಅಥವಾ ಮಲಯಾಳಂ ಯುಗದ ವೃಶ್ಚಿಕಂ 1 ರಂದು ಪ್ರಾರಂಭವಾಗುತ್ತದೆ. 41 ದಿನಗಳ ಮಂಡಲ ಪೂಜೆ ಮಹೋತ್ಸವ ಡಿಸೆಂಬರ್ 27 ರಂದು ಮುಕ್ತಾಯಗೊಳ್ಳಲಿದೆ ಎಂದು ದೇವಾಲಯ ಮಾಹಿತಿ ನೀಡಿದೆ.  ಜನವರಿ 14, 2023 ರಂದು ಮಕರವಿಳಕ್ಕು ತೀರ್ಥಯಾತ್ರೆಗಾಗಿ ಮೂರು ದಿನಗಳ ವಿರಾಮ ಇದ್ದು, ನಂತರ ದೇವಾಲಯವನ್ನು ಡಿಸೆಂಬರ್ 30 ರಂದು ತೆರೆಯಲಾಗುತ್ತದೆ.


ಕೇರಳದ ಪಥನಂತಿಟ್ಟ ಜಿಲ್ಲೆಯ ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ನಾಲ್ಕು ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಹಾಗೂ ಕಷ್ಟಕರವಾದ ಟ್ರೆಕ್ಕಿಂಗ್ ಮೂಲಕ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಇನ್ನು ಕಾಡಿನ ಮೂಲಕ, ಪಂಬಾ ನದಿಯನ್ನು ದಾಟಿ ಈ ದೇವಾಲಯಕ್ಕೆ ಹೋಗಬೇಕು. ಈ ಬಾರಿ ಜನವರಿ 20 ರ ತನಕ ಯಾತ್ರಿಗಳಿಗೆ ಅವಕಾಶ ನೀಡಲಾಗಿದೆ.  ಜನವರಿ 20ರಂದು ದೇವಾಲಯ ಕ್ಲೋಸ್​ ಮಾಡಲಾಗುತ್ತದೆ.


ಪಂಬಾಗೆ ಬಸ್ ಸಂಪರ್ಕವಿರುವ ಹತ್ತಿರದ ರೈಲು ನಿಲ್ದಾಣಗಳು


ಚೆಂಗನ್ನೂರ್ 85 ಕಿಮೀ


ತಿರುವಲ್ಲಾ 90 ಕಿ.ಮೀ


ಕೊಟ್ಟಾಯಂ. 93 ಕಿಮೀ


ಚಂಗನಾಶ್ಸೆರಿ 97 ಕಿ.ಮೀ


ಚೆಂಗನ್ನೂರ್ ಮತ್ತು ಕೊಟ್ಟಾಯಂಗೆ ಹೆಚ್ಚಿನ ರೈಲು ವ್ಯವಸ್ಥೆಗಳಿದೆ.


ದರ್ಶನಕ್ಕೆ ಕಾಯ್ದಿರಿಸಲು ಯಾವುದೇ ಶುಲ್ಕವಿಲ್ಲ. ಹಾಗೆಯೇ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬುಕಿಂಗ್ ಅಗತ್ಯವಿಲ್ಲ. ದರ್ಶನಕ್ಕಾಗಿ ಒಂದು ಖಾತೆಯಿಂದ 10 ಯಾತ್ರಿಕರು ಅರ್ಜಿ ಸಲ್ಲಿಸಬಹುದು. ಆದರೆ, ಮೊಬೈಲ್ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರಗಳು ನಿಖರವಾಗಿ ನೀಡಿರಬೇಕು. ಖಾತೆಯ ಮೂಲಕ ಹೆಚ್ಚಿನ ಭಕ್ತರನ್ನು ಲಿಸ್ಟ್​ಗೆ ಸೇರಿಸಲು 'ಯಾತ್ರಿಕರನ್ನು ಸೇರಿಸಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ದರ್ಶನಕ್ಕೆ ಮೊದಲೇ ಬುಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.


ಭಕ್ತಾಧಿಗಳು ತಮ್ಮ  ವಿವರಗಳನ್ನು sabarimalaonline.org ವೆಬ್​ ಸೈಟ್​ನಲ್ಲಿ ಅಪ್‌ಲೋಡ್ ಮಾಡಬೇಕು. ವೆಬ್‌ಸೈಟ್‌ನಲ್ಲಿ ಸ್ಲಾಟ್‌ಗಳನ್ನು ಬುಕ್ ಮಾಡಲು ಭಕ್ತರ ಹೆಸರು, ಜನ್ಮ ದಿನಾಂಕ, ಪಿನ್ ಕೋಡ್‌ನೊಂದಿಗೆ ವಿಳಾಸ, ಗುರುತಿನ ಚೀಟಿಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು. ಇ-ಮೇಲ್ ಐಡಿಯನ್ನು ಅಪ್‌ಲೋಡ್ ಮಾಡುವುದರಿಂದ ಪ್ರತಿ ಭಕ್ತರಿಗೆ ಪಾಸ್‌ವರ್ಡ್ ಅನ್ನು ನೀಡಲಾಗುತ್ತದೆ.


ಇದನ್ನೂ ಓದಿ: ಈ ರಾಶಿಯವರು ಹಳದಿ ಸೋಫಾದ ಮೇಲೆ ಕುಳಿತರೆ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿ ಆಗ್ತಾರೆ!


ನಂತರ, ಅರ್ಜಿದಾರರು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಖಚಿತಪಡಿಸಲು ಬಾಕ್ಸ್‌ನಲ್ಲಿ ಟಿಕ್ ಮಾರ್ಕ್ ಅನ್ನು ಕ್ಲಿಕ್ ಮಾಡಬೇಕು. ಈಗ ನೋಂದಣಿಯನ್ನು ಪೂರ್ಣಗೊಳಿಸಲು, ನಿಮ್ಮ ಮೊಬೈಲ್​ಗೆ  OTP ಅನ್ನು ಸೈಟ್‌ನಲ್ಲಿ ಹಾಕಬೇಕು. ಇದು ಕಡ್ಡಾಯವಾಗಿದೆ.


ನೋಂದಣಿಯ ನಂತರ ಸ್ಲಾಟ್‌ ಬುಕಿಂಗ್ ಮಾಡುವುದು ಹೇಗೆ? 


ವೆಬ್‌ಸೈಟ್‌ನಲ್ಲಿ ಲಾಗಿನ್ ಬಟನ್ ಕ್ಲಿಕ್ ಮಾಡಿ ಮತ್ತು ನೋಂದಣಿ ಸಮಯದಲ್ಲಿ ರಚಿಸಲಾದ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಾಕಿ. ವರ್ಚುವಲ್ ಕ್ಯೂ ಆಯ್ಕೆಯನ್ನು ಕ್ಲಿಕ್ ಮಾಡಿ. ಭಕ್ತರು ತಮಗೆ ಬೇಕಿರುವ ದರ್ಶನದ ದಿನಾಂಕ ಮತ್ತು ಸಮಯವನ್ನು ಅಲ್ಲಿ ಹಾಕಬೇಕು. ಅರ್ಜಿದಾರರ ಮೊಬೈಲ್ ಫೋನ್‌ಗಳಿಗೆ ತಮ್ಮ ನೋಂದಣಿ ಪೂರ್ಣಗೊಂಡಿದೆ ಎಂಬ ಮೆಸೇಜ್ ಬರುತ್ತದೆ.


ಈ ಕೂಪನ್‌ನ ಮುದ್ರಿತ ಪ್ರತಿ ಅಥವಾ ಅದರ ಡಿಜಿಟಲ್ ರೂಪವನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ತೋರಿಸಬೇಕು. ಆನ್‌ಲೈನ್ ಮೋಡ್ ಮೂಲಕ ತಮ್ಮ ದರ್ಶನ ಸ್ಲಾಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗದ ಯಾತ್ರಾರ್ಥಿಗಳಿಗೆ ಲೈವ್ ಬುಕಿಂಗ್ ಸೌಲಭ್ಯಗಳನ್ನು ಸಹ ನೀಡಲಾಗಿದೆ.


ಇದಕ್ಕಾಗಿ ನಿಲಕ್ಕಲ್‌ನಲ್ಲಿ ಕನಿಷ್ಠ 10 ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಬೆಟ್ಟದ ದೇಗುಲಕ್ಕೆ ಟ್ರೆಕ್ಕಿಂಗ್ ಪ್ರಾರಂಭಿಸುವ ಮೊದಲು ಪಂಬಾದಲ್ಲಿರುವ ಆಂಜನೇಯ ಸಭಾಂಗಣದ ಬಳಿ ಕೂಪನ್‌ನ ಮುದ್ರಿತ ಪ್ರತಿ ಅಥವಾ ಮೊಬೈಲ್ ಫೋನ್‌ಗಳ ಟಿಕೆಟ್‌ಗಳಲ್ಲಿನ ಡಿಜಿಟಲ್ ರೂಪವನ್ನು ಪೊಲೀಸರು ಚೆಕ್ ಮಾಡುತ್ತಾರೆ.


ಇದನ್ನೂ ಓದಿ: 5 ದಿನಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ; ಇಲ್ಲಿದೆ ಪ್ರತಿದಿನದ ಕಾರ್ಯಕ್ರಮ ವಿವರ


ಕೆಳಗೆ ನೀಡಲಾದ ಈ 12 ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಲಭ್ಯವಿರುತ್ತದೆ


ತಿರುವನಂತಪುರಂ ಶ್ರೀಕಂಠೇಶ್ವರಂ


ತಿರುವನಂತಪುರಂ ಮಣಿಕಂಠೇಶ್ವ


ರಂಪಂಥಾಲಂ ವಲಿಯಕೋಯಿಕ್ಕಲ್ ದೇವಸ್ಥಾ


ನಚೆಂಗನ್ನೂರು ರೈಲು ನಿಲ್ದಾಣ


ಎರುಮೇಲಿ


ಎಟ್ಟುಮನೂರು


ವೈಕೋಮ್ಪೆರುಂಬ


ವೂರ್ಕೀಜಿಲ್ಲಂ


ನಿಲಕ್ಕಲ್ವಂಡಿ


ಪೆರಿಯಾರ್ ಸತ್ರಂ


ಚೆರಿಯಾನವಟ್ಟಂ

Published by:Sandhya M
First published: