Health Tips| ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಎರಡು ವ್ಯಾಯಾಮಗಳಲ್ಲಿ ಯಾವುದು ಸೂಕ್ತ ನೋಡಿ..

ಹೆಚ್ಚುವರಿ ಇಂಗಾಲದ ಡೈ ಆಕ್ಸೈಡ್ ತೆಗೆದುಹಾಕುವ ಮೂಲಕ ನಿಮ್ಮ ಶ್ವಾಸಕೋಶಗಳನ್ನು ಶುದ್ಧೀಕರಿಸಲು ಈ ಓಡುವ ವ್ಯಾಯಾಮ ಸಹಾಯ ಮಾಡುತ್ತದೆ. ನಿಮ್ಮ ಶ್ವಾಸಕೋಶದಲ್ಲಿ ಜಮೆಯಾಗಿರುವ ಕಫವನ್ನು ಸಹ ಕಡಿಮೆ ಮಾಡುತ್ತದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನೀವು ನಿಮ್ಮ ದೇಹದಲ್ಲಿರುವ ಅತಿಯಾದ ತೂಕವನ್ನು ಬಹು ಬೇಗನೆ ಕಡಿಮೆ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ ನಿಮಗೆ ಅನೇಕ ಮಾರ್ಗಗಳಿವೆ. ಫಿಟ್ನೆಸ್ ತಜ್ಞರು ಹೇಳುವಂತೆ ನೀವು ಮಧ್ಯಮ ತೀವ್ರತೆಯ ವ್ಯಾಯಾಮಗಳನ್ನು (Exersice) ಆಯ್ಕೆ ಮಾಡಿಕೊಳ್ಳುವಾಗ ಓಡುವುದು ಮತ್ತು ಹಗ್ಗದಾಟ ಆಡುವುದು ಸಹಾಯಕ ವಾಗುತ್ತವೆ. ಈ ಎರಡೂ ವ್ಯಾಯಾಮಗಳು ಹೃದಯದ ಸ್ನಾಯುಗಳನ್ನು ಬಲಪಡಿಸಲು, ಆರೋಗ್ಯಕರ ತೂಕ ಮತ್ತು ಮೂಳೆ  ಸಾಂದ್ರತೆ ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ದೇಹದ ಫಿಟ್ನೆಸ್ (Fitness) ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಈ ಎರಡು ವ್ಯಾಯಾಮಗಳು ತನ್ನದೇ ಆದಂತಹ ಲಾಭಗಳನ್ನು ಹೊಂದಿವೆ ಎಂದರೆ ತಪ್ಪಾಗಲಾರದು. ಬನ್ನಿ ಹಾಗಾದರೆ ನೋಡೋಣ.. ದೇಹಕ್ಕೆ ಆಗುವ  ಲಾಭಗಳೇನು ಅಂತ.

ಹಗ್ಗದಾಟದಿಂದ ಆಗುವ ಪ್ರಯೋಜನಗಳು

#ಬಹುಬೇಗನೆ ತೂಕ ಕಡಿಮೆ ಆಗುತ್ತದೆ;

ನೀವು ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಲು ಇಚ್ಛಿಸಿದರೆ ಈ ಹಗ್ಗದಾಟ ವ್ಯಾಯಾಮ ಓಡುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ. ಒಂದು ನಿಮಿಷದ ಹಗ್ಗದಾಟವು 10-16 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು, ಅಂದರೆ 30 ನಿಮಿಷಗಳ ಕಾಲ ಹಗ್ಗದಾಟ ಆಡಿದರೆ ಸುಮಾರು 480 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಹತ್ತು ನಿಮಿಷಗಳ ಹಗ್ಗದಾಟವು ಎಂಟು ನಿಮಿಷಗಳ ಓಡುವುದಕ್ಕೆ ಸಮಾನವಾಗಿದೆ. ಇದು ವೇಗವಾಗಿ ನಿಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆ ಮಾಡುತ್ತದೆ. ಯಾವ ವ್ಯಕ್ತಿಯು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ ಇದನ್ನು ಪ್ರಯತ್ನಿಸಬೇಡಿ.

#ದೇಹದ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಚುರುಕಾಗಿರಲು ಸಹಾಯ ಮಾಡುತ್ತದೆ;

ಹಗ್ಗದಾಟ ಆಡುವುದರಿಂದ ನಿಮ್ಮ ಕೆಳಗಿನ ದೇಹದ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಪಾದದ ಸ್ಥಿರತೆ ಸುಧಾರಿಸುತ್ತವೆ ಮತ್ತು ಹೀಗಾಗಿ, ಹಗ್ಗದಾಟದ ವ್ಯಾಯಾಮವು ಗಾಯಗೊಂಡು ಓಡಲು ಆಗದೆ ಇರುವವರಿಗೆ ಇದು ಉತ್ತಮ ವ್ಯಾಯಾಮವಾಗಿದೆ.
ಹಗ್ಗದಾಟದಲ್ಲಿ ನಿರಂತರ ಜಿಗಿತದಿಂದ ತ್ವರಿತ ಫುಟ್ ವರ್ಕ್ ಮತ್ತು ದೇಹದ ಸಮತೋಲನವನ್ನು ಹೆಚ್ಚಿಸಲು ಇದು ಉತ್ತಮ ವ್ಯಾಯಾಮ ಎಂದು ಪರಿಗಣಿಸಲಾಗಿದೆ. ಇದರಿಂದ ಚುರುಕಾಗಿರಲು ಸಹ ತುಂಬಾನೇ ಸಹಾಯವಾಗುತ್ತದೆ.

ಓಡುವುದರಿಂದಾಗುವ ಪ್ರಯೋಜನಗಳು

#ಹೃದಯ ರಕ್ತನಾಳದ ಸಹಿಷ್ಣುತೆ ಸುಧಾರಿಸುತ್ತದೆ;

ನಿಮ್ಮ ಹೃದಯ ರಕ್ತನಾಳದ ವ್ಯವಸ್ಥೆ ಮತ್ತು ಹೃದಯದ ಕಾರ್ಯ ಬಲಪಡಿಸಲು ಮತ್ತು ಅದರ ಒಟ್ಟಾರೆ ದಕ್ಷತೆ ಹೆಚ್ಚಿಸಲು ಓಡುವುದು ಅತ್ಯುತ್ತಮ ವ್ಯಾಯಾಮವಾಗಿದೆ. ಇದು ದೇಹದಲ್ಲಿ ರಕ್ತ ಹರಿವನ್ನು ಸುಧಾರಿಸಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಪ್ರತಿದಿನ ಓಡುವ ಜನರು ಅಧಿಕ ರಕ್ತದೊತ್ತಡ ಅಥವಾ ಇತರ ಹೃದಯ ರಕ್ತನಾಳದ ಸಮಸ್ಯೆಗಳ ಅಪಾಯವನ್ನು ಶೇಕಡಾ 35 - 55ರಷ್ಟು ಕಡಿಮೆ ಹೊಂದಿರುತ್ತಾರೆ.

ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ;

ಮಧ್ಯಮ ಅಥವಾ ತೀವ್ರವಾದ ಮಟ್ಟದಲ್ಲಿ ಓಡುವುದು ನಿಮ್ಮ ದೇಹವು ಎಂಡಾರ್ಫಿನ್ ಮತ್ತು ಸೆರೊಟೋನಿನ್‌ನಂತಹ ನಿಮ್ಮ ಮೆದುಳಿನಲ್ಲಿ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಇದು ಒತ್ತಡದ ಮಟ್ಟ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಬಯಲಿನಲ್ಲಿ ಓಡುವುದರಿಂದ ಖಿನ್ನತೆ, ಒಂಟಿತನ ಮತ್ತು ಪ್ರತ್ಯೇಕತೆಯ ಭಾವನೆಗಳನ್ನೂ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Navaratri Special: ವಿಜಯ ದಶಮಿ ಹಬ್ಬಕ್ಕೆ ಈ ಡ್ರೆಸ್​ಗಳನ್ನು ಟ್ರೈ ಮಾಡಿ

ಶ್ವಾಸಕೋಶಗಳಿಗೆ ತುಂಬಾ ಸಹಾಯಕ;

ಹೆಚ್ಚುವರಿ ಇಂಗಾಲದ ಡೈ ಆಕ್ಸೈಡ್ ತೆಗೆದುಹಾಕುವ ಮೂಲಕ ನಿಮ್ಮ ಶ್ವಾಸಕೋಶಗಳನ್ನು ಶುದ್ಧೀಕರಿಸಲು ಈ ಓಡುವ ವ್ಯಾಯಾಮ ಸಹಾಯ ಮಾಡುತ್ತದೆ. ನಿಮ್ಮ ಶ್ವಾಸಕೋಶದಲ್ಲಿ ಜಮೆಯಾಗಿರುವ ಕಫವನ್ನು ಸಹ ಕಡಿಮೆ ಮಾಡುತ್ತದೆ. ಇದಲ್ಲದೆ, ಓಡುವುದು ನಿಮ್ಮ ಉಸಿರಾಟದ ಸ್ನಾಯುಗಳ ಸಹಿಷ್ಣುತೆ ಸಾಮರ್ಥ್ಯ ಹೆಚ್ಚಿಸಿ ಪೂರ್ಣ ಮತ್ತು ಪರಿಣಾಮಕಾರಿ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ.
Published by:MAshok Kumar
First published: