Diet Tips: ನಿಮ್ಮ ಬಜೆಟ್ ನಲ್ಲಿ ಹೇಗೆ ಡಯಟ್‌ ಪ್ಯ್ಲಾನ್‌ ಮಾಡೋದು ಗೊತ್ತೇ.? ಇಲ್ಲಿದೆ ಟಿಪ್ಸ್..!

ಆರೋಗ್ಯ ತುಂಬಾ ದುಬಾರಿಯಾದದ್ದು ಒಮ್ಮೆ ಹದಗೆಟ್ಟರೆ ಮತ್ತೆ ಸರಿಪಡಿಸುವುದು ಕಷ್ಟ. ಹಾಗೆ ಆರೋಗ್ಯದಂತೆ ನಾವು ಸೇವಿಸುವ ಆಹಾರ ದುಬಾರಿಯಾಗದಂತೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪದಾರ್ಥಗಳನ್ನು ಕೊಳ್ಳಬೇಕು. ಹಾಗಾದರೆ ಬಡ್ಜೆಟ್ ಸ್ನೇಹಿ ಡಯೆಟ್ ಹೇಗೆ ಮಾಡಬಹುದು

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
Diet Plan: ಡಯಟ್ (Diet) ಮಾಡಬೇಕು.. ಆದರೆ ಡಯಟ್ ಮಾಡೋಕೆ ಒಳ್ಳೊಳ್ಳೆ ಆರೋಗ್ಯಕರವಾದ (Healthy Foods) ಆಹಾರಗಳನ್ನು ತಿನ್ನುವುದು ಮೊದಲು ಮುಖ್ಯವಾಗುತ್ತದೆ. ಕೆಲವು ಆಹಾರ ಪದಾರ್ಥಗಳು (Food Items) ಸ್ವಲ್ಪ ಮಟ್ಟಿಗೆ ಅಗ್ಗವಾಗಿರುತ್ತದೆ.(Cheaper) ಹೀಗೆ ನಮ್ಮ ಪಾಕೆಟಿನ ಹಣ ಎಲ್ಲಾ ಖಚು ಮಾಡಿ ಡಯಟ್ ಫಾಲೋ ಮಾಡೋ ಬದಲು ಬಡ್ಜೆಟ್ (Budget) ಸ್ನೇಹಿ ಮತ್ತು ಆರೋಗ್ಯಕರವಾದ ಡಯಟ್ ಪಾಲನೆ ಒಳ್ಳೆಯದು. ನೀವು ಆರೋಗ್ಯಕರವಾಗಿ ತಿನ್ನಲು ಬಯಸುತ್ತೀರಾ ಆದರೆ ಹಣದ ಬಗ್ಗೆಯೂ ಯೋಚಿಸ್ತಾ ಇರುತ್ತೀರಾ. ಕೇವಲ 200 ರೂ ಇದ್ರೆ ಸಾಕು ಸಲೀಸಾಗಿ ಫಾಸ್ಟ್ ಫುಡ್ ತಿಂದು ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳತ್ತೇವೆ. ಅದರ ಬದಲಿಗೆ ಪೌಷ್ಠಿಕ ಆಹಾರದ ಮೊರೆ ಹೋಗುವುದು ಉತ್ತಮ.

ಆರೋಗ್ಯ ತುಂಬಾ ದುಬಾರಿಯಾದದ್ದು ಒಮ್ಮೆ ಹದಗೆಟ್ಟರೆ ಮತ್ತೆ ಸರಿಪಡಿಸುವುದು ಕಷ್ಟ. ಹಾಗೆ ಆರೋಗ್ಯದಂತೆ ನಾವು ಸೇವಿಸುವ ಆಹಾರ ದುಬಾರಿಯಾಗದಂತೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪದಾರ್ಥಗಳನ್ನು ಕೊಳ್ಳಬೇಕು. ಹಾಗಾದರೆ ಬಡ್ಜೆಟ್ ಸ್ನೇಹಿ ಡಯೆಟ್ ಹೇಗೆ ಮಾಡಬಹುದು ಎಂಬುದುರ ಬಗ್ಗೆ ಇಲ್ಲಿದೆ ಮಾಹಿತಿ.

ವುಮೆನ್ಸ್ ಹೆಲ್ತ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಡಯಟಿಷಿಯನ್ ತೈ ಇಬಿಟೋಯೆ ಅವರು ಬಜೆಟ್ ಸ್ನೇಹಿ ಡಯಟ್ ಕುರಿತು ಟಿಪ್ಸ್ ನೀಡಿದ್ದಾರೆ.
1) ಟಿನ್ ಮಾಡಿದ ಮೀನುಗಳು
2) ಫ್ರೋಜನ್ ಹಣ್ಣು ಮತ್ತು ತರಕಾರಿಗಳು

ಇದನ್ನೂ ಓದಿ: Weight Loss Tips: ನೀವು ದಪ್ಪ ಇದ್ರೆ ಚಿಂತೆ ಬೇಡ ಖಾಲಿ ಹೊಟ್ಟೆಲಿ ಇವುಗಳನ್ನ ಕುಡಿಯಿರಿ

ತೈ ಇಬಿಟೋಯೆ ಪ್ರಕಾರ ಮೀನುಗಳಲ್ಲಿ "ಸಾರ್ಡೀನ್‌ಗಳು, ಮ್ಯಾಕೆರೆಲ್‌ಗಳು, ಪಿಲ್ಚರ್ಡ್ಸ್ ಮತ್ತು ಟ್ಯೂನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು ಆರೋಗ್ಯಕ್ಕೆ ಉತ್ತಮ. ಕೈಗೆಟಕುವ ಬೆಲೆಯಲ್ಲಿ ಸಿಗುವುದರಿಂದ ಇವುಗಳನ್ನು ಸೇವಿಸಬಹುದು.

ಅಲ್ಲದೇ ಫ್ರೋಜನ್ ಹಣ್ಣುಗಳು ಮತ್ತು ತರಕಾರಿಗಳು ಮೀನುಗಳಿಗಿಂತ ಅಗ್ಗವಾಗಿದ್ದು, ಫ್ರೋಜನ್ ಸಮಯದಲ್ಲಿ ಒಂದೇ ರೀತಿಯ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿರುತ್ತವೆ. ಇವುಗಳು ಕಬ್ಬಿಣ, ಬಿ ಜೀವಸತ್ವಗಳು, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ ಎಂದು ತೈ ಇಬಿಟೋಯೆ ಹೇಳಿದ್ದಾರೆ.

ಬಜೆಟ್‌ ಸ್ನೇಹಿ ಪೌಷ್ಠಿಕ ಆಹಾರದ ಕ್ರಮಗಳು

ಬಜೆಟ್‌ ಪ್ಲಾನ್ ಮಾಡುತ್ತಾ ಡಯಟ್ ಮಾಡಲು ಇಲ್ಲಿವೆ ಕೆಲವು ವಿಧಾನಗಳು.

1) ಮನೆಯಲ್ಲಿಯೇ ಆಹಾರ ತಯಾರಿಸಿ
ಹೊರಗೆ ಅಲ್ಲಿ ಇಲ್ಲಿ ತಿನ್ನುವ ಬದಲು ಸಾಧ್ಯವಾದಷ್ಟು ಮನೆಯಲ್ಲಿಯೇ ತಿನ್ನುವುದರಿಂದ ಹೆಚ್ಚು ಹಣ ಉಳಿಸಬಹುದು. ಏಕೆಂದರೆ ಮನೆ ಆಹಾರ ಅಗ್ಗ ಮತ್ತು ಆರೋಗ್ಯಕರವಾಗಿರುತ್ತವೆ. ಕೆಲವು ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಕೊಂಡು ನಂತರ ಯಾವಾಗ ಬೇಕಾದರು ಅವುಗಳನ್ನು ಬಳಸಬಹುದು.

2) ಆಹಾರದ ಬಗ್ಗೆ ಪ್ಲಾನ್
ತಿಂಗಳ ಬಜೆಟ್ ಜತೆ ಆಹಾರವನ್ನು ಮೊದಲೇ ಪ್ಲಾನ್ ಮಾಡಿಕೊಳ್ಳಿ. ಯಾವೆಲ್ಲಾ ಆರೋಗ್ಯಕರವಾದ ಆಹಾರವನ್ನು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ಇರಲಿ. ಅಗತ್ಯ ವಸ್ತುಗಳನ್ನು ಕೊಳ್ಳವಾಗ ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಕೆಲವು ಆಫರ್‌ಗಳು ಸಿಗಬಹುದು.

3) ಬ್ರ್ಯಾಂಡ್ ಮೊರೆ ಹೋಗಬೇಡಿ
ಪ್ಯಾಕ್‌ನಲ್ಲಿ ಆಹಾರ ಇದ್ದ ಮಾತ್ರಕ್ಕೆ ಅದು ಒಳ್ಳೆಯದು ಎಂಬ ಕಲ್ಪನೆಯನ್ನು ಮೊದಲು ಬಿಟ್ಟುಬಿಡಿ. ಬ್ರ್ಯಾಂಡ್ ಮೊರೆ ಹೋಗಬೇಡಿ. ಬ್ರ್ಯಾಂಡೆಡ್ ಪ್ಯಾಕೆಟ್‌ಗಳಿಗೆ ಮೊರೆ ಹೋಗದೆ ನಿಮ್ಮಲ್ಲಿರುವ ಹಣದಲ್ಲಿ ಚಿಕ್ಕ ಅಂಗಡಿಗಳಲ್ಲೂ ಸಹ ಕೊಳ್ಳಬಹುದು.

ಇದನ್ನೂ ಓದಿ: Weight Loss Tips: ಈ ಆಹಾರಗಳು ರುಚಿಕರ ಮಾತ್ರವಲ್ಲ ತೂಕ ಇಳಿಸಲು ಸಹಕಾರಿ

4) ಕಾಲಕ್ಕೆ ಅನುಗುಣವಾಗಿ ಖರೀದಿ
ದಿನಸಿ ಶಾಪಿಂಗ್ ಮಾಡುವಾಗ ಹಣ ಉಳಿಸಲು ಕಾಲಕ್ಕೆ ಅನುಗುಣವಾಗಿ ಖರೀದಿ ಮಾಡಿ. ಆಯಾ ಕಾಲಕ್ಕೆ ಸಿಗುವ ಹಣ್ಣು, ತರಕಾರಿಗಳನ್ನು ಕೊಳ್ಳುವುದು ಮತ್ತು ಸೇವನೆ ನಮ್ಮ ಆರೋಗ್ಯಕ್ಕೂ ಉತ್ತಮ. ಆಯಾ ಕಾಲದಲ್ಲಿ ಸಿಗುವ ಹಣ್ಣು, ತರಕಾರಿಗಳು ಕೊಂಚ ಕಡಿಮೆ ಬೆಲೆಯಲ್ಲಿ ಲಭಿಸುತ್ತವೆ.

5) ಹೆಚ್ಚು ಹೆಚ್ಚು ಸಸ್ಯ ಆಧಾರಿತ ಆಹಾರ ಸೇವಿಸಿ
ಆರೋಗ್ಯಕರ ಆಹಾರವು ನಿಮ್ಮ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಬೀಜಗಳು, ಬೇಳೆಗಳು, ಸೋಯಾಬೀನ್ ಬೀಜಗಳು, ಹಸಿರು ಸೊಪ್ಪು ಇತ್ಯಾದಿಗಳಂತಹ ಸಸ್ಯ-ಆಧಾರಿತ ಮೂಲಗಳನ್ನು ಆರಿಸಿಕೊಳ್ಳುವುದು ಅಗ್ಗದ ಮತ್ತು ಅಷ್ಟೇ ಆರೋಗ್ಯಕರ ಆಯ್ಕೆಯಾಗಿರುತ್ತದೆ.
Published by:vanithasanjevani vanithasanjevani
First published: