• Home
  • »
  • News
  • »
  • lifestyle
  • »
  • RSV In Children: ಮಕ್ಕಳನ್ನು ಕಾಡುವ ಆರ್‌ಎಸ್‌ವಿ ಸೋಂಕು ತಡೆಗಟ್ಟಲು ಈ ಟಿಪ್ಸ್ ನೆನಪಿರಲಿ

RSV In Children: ಮಕ್ಕಳನ್ನು ಕಾಡುವ ಆರ್‌ಎಸ್‌ವಿ ಸೋಂಕು ತಡೆಗಟ್ಟಲು ಈ ಟಿಪ್ಸ್ ನೆನಪಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

RSV Cases Rise in Children: RSVಗೆ ಚಿಕಿತ್ಸೆ ನೀಡಲು ಇನ್ನೂ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮತ್ತು ಸ್ಟೀರಾಯ್ಡ್‌ಗಳು ಮತ್ತು ಪ್ರತಿಜೀವಕಗಳಂತಹ ಔಷಧಿಗಳು ನಿಷ್ಪರಿಣಾಮಕಾರಿಯಾಗಿದ್ದರೂ, ಹೆಚ್ಚಿನ ಮಕ್ಕಳು ಒಂದು ವಾರ ಅಥವಾ ಎರಡು ವಾರಗಳಲ್ಲಿ ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ.

ಮುಂದೆ ಓದಿ ...
  • Share this:

ಮಕ್ಕಳಲ್ಲಿ (Children) ಸಾಮಾನ್ಯವಾಗಿ ಕಂಡು ಬರುವ ಈ ಅನಾರೋಗ್ಯ (Health Problem)  ಸ್ಥಿತಿ ಈಗ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಮಕ್ಕಳನ್ನು ಬಾಧಿಸುತ್ತಿರುವ ಉಸಿರಾಟದ ಸಿನ್ಸಿಟಿಯಲ್ ವೈರಸ್ (Respiratory Syncytial Virus) ಸೋಂಕು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಉಲ್ಬಣವಾಗಿದ್ದು, ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆರ್‌ಎಸ್‌ವಿ (RSV)  ಶ್ವಾಸಕೋಶಗಳು, ಮೂಗು ಮತ್ತು ಗಂಟಲುಗಳಲ್ಲಿ ಸೋಂಕನ್ನು ಉಂಟುಮಾಡುವ ಅತ್ಯಂತ ಸಾಮಾನ್ಯವಾದ ಉಸಿರಾಟದ ಕಾಯಿಲೆಯಾಗಿದೆ, ಹೆಚ್ಚಿನ ಸಂದರ್ಭಗಳಲ್ಲಿ ಸೌಮ್ಯವಾದ, ಶೀತ-ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ಇದು ತೀವ್ರವಾಗಿರುತ್ತದೆ ಮತ್ತು ಸೂಕ್ತ ಚಿಕಿತ್ಸೆಯ (Treatment) ಅಗತ್ಯತೆ ಇರುತ್ತದೆ.


ಇನ್ನೂ ಮಕ್ಕಳಲ್ಲಿ ಹೆಚ್ಚುತ್ತಿರುವ ಆರ್‌ಎಸ್‌ವಿ ಸೋಂಕಿನ ಉಲ್ಬಣ ಮತ್ತು ಸಮಸ್ಯೆಗೆ ಕಾರಣವೇನು ಎಂಬುದರ ಕುರಿತು ಬೇಸ್ಟೇಟ್ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಮುಖ್ಯ ಶಿಶುವೈದ್ಯರಾದ ಡಾ. ಶಾರ್ಲೆಟ್ ಬೋನಿ ವಿವರಿಸಿದ್ದಾರೆ.


ದೇಶದಾದ್ಯಂತ ಆರ್‌ಎಸ್‌ವಿ ಸೋಂಕುಗಳು ಏಕೆ ಹೆಚ್ಚಾಗಿದೆ?


ಆರ್‌ಎಸ್‌ವಿ ಮತ್ತು ಇತರ ಉಸಿರಾಟದ ಕಾಯಿಲೆಗಳು ಸಾಮಾನ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ಉಲ್ಬಣಗೊಳ್ಳುತ್ತವೆ ಮತ್ತು ಜನವರಿಯಲ್ಲಿ ಹೆಚ್ಚಾಗುತ್ತವೆ. ಆದರೆ ಕೋವಿಡ್-19 ಸಾಂಕ್ರಾಮಿಕದಿಂದ,‌ ಇದೆಲ್ಲಾ ಕಾಲೋಚಿತ ಬದಲಾವಣೆಯು ಈಗ ಉಲ್ಟಾ ಆಗಿದೆ.


ಕಳೆದ ಚಳಿಗಾಲದಲ್ಲಿ ಓಮಿಕ್ರಾನ್ ಮಕ್ಕಳನ್ನು ಹೆಚ್ಚಾಗಿ ಬಾಧಿಸಿತ್ತು, ಇದೇ ಸಂದರ್ಭದಲ್ಲಿ ಆರ್‌ಎಸ್‌ವಿ ಮತ್ತು ಇತರ ವೈರಸ್‌ಗಳ ಸಂಖ್ಯೆ ಕೂಡ ಹೆಚ್ಚಾಯಿತು. ರೈನೋವೈರಸ್ ಮತ್ತು ಎಂಟಿರೊವೈರಸ್‌ನಂತಹ ಇತರ ವೈರಸ್‌ಗಳು ಕಳೆದ ಆರರಿಂದ ಎಂಟು ವಾರಗಳಲ್ಲಿ ತೀವ್ರವಾಗಿ ಏರಿಕೆ ಕಾಣುತ್ತಿದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಟ್ಯಾನಿಂಗ್ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಹ್ಯಾಕ್ಸ್


ಬಹಳಷ್ಟು ಮಕ್ಕಳು ಈ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಚಳಿಗಾಲ ಆರಂಭವಾಗುತ್ತಿದ್ದಂತೆ ಆರ್‌ಎಸ್‌ವಿ ಪ್ರಕರಣಗಳು ಕೂಡ ಹೆಚ್ಚಾಗಿವೆ ಎಂದು ವೈದ್ಯರು ತಿಳಿಸಿದರು. ಮತ್ತು ವರ್ಷದ ಈ ಸಮಯದಲ್ಲಿ ಆರ್‌ಎಸ್‌ವಿ ಸೋಂಕು ಸಹಜವಾಗಿ ಕಾಡುವಂತದ್ದು, ಹೀಗಾಗಿ ಮುಂಜಾಗ್ರತೆ, ಆರೈಕೆ ಮುಖ್ಯ ಎಂದು ಸಲಹೆ ನೀಡಿದ್ದಾರೆ ಶಾರ್ಲೆಟ್ ಬೋನಿ.
ಆರ್‌ಎಸ್‌ವಿ ಅನ್ನು ತಡೆಯಬಹುದೇ?


ಆರ್‌ಎಸ್‌ವಿ ಸೋಂಕು ಹೆಚ್ಚಾಗಿ ಸಣ್ಣದಾದ ಶೀತವನ್ನು ಉಂಟುಮಾಡುತ್ತದೆ. ಆರ್‌ಎಸ್‌ವಿ ಸೋಂಕಿನಿಂದ ಸಂಭವಿಸುವ ಈ ಸಾಮಾನ್ಯ ಶೀತ ನವಜಾತ ಶಿಶುಗಳಲ್ಲಿ ಮತ್ತು ಚಿಕ್ಕ ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು.


ಇದು ನ್ಯುಮೋನಿಯಾವನ್ನು ಸಹ ಉಂಟುಮಾಡಬಹುದು. ಚಳಿಗಾಲದಲ್ಲಿ ಆರ್‌ಎಸ್‌ವಿ ಸೋಂಕು ಸಂಭವಿಸಿದ ಮಕ್ಕಳಲ್ಲಿ ನ್ಯುಮೋನಿಯಾ ಹೆಚ್ಚಾಗಿ ಕಂಡು ಬರುತ್ತಿದೆ. ವರ್ಷಕ್ಕೆ ಸುಮಾರು 50,000 ಮಕ್ಕಳು ಹೆಚ್ಚಾಗಿ RSV ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ಚಳಿಗಾಲಕ್ಕೆ ಸೀಮಿತವಾಗದೇ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಈ ವೈರಸ್‌ಗಳು ಸರ್ವಋತುವಿನಲ್ಲೂ ಹೆಚ್ಚಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.


ಆರ್‌ಎಸ್‌ವಿ ಸೋಂಕಿಗೆ ಚಿಕಿತ್ಸೆ ಏನು?


ಈ ಸೋಂಕು ಉಂಟಾದ ಸಂದರ್ಭದಲ್ಲಿ ಉಸಿರಾಟದ ತೊಂದರೆ ಹೆಚ್ಚಾದರೆ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು. RSVಗೆ ಚಿಕಿತ್ಸೆ ನೀಡಲು ಇನ್ನೂ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮತ್ತು ಸ್ಟೀರಾಯ್ಡ್‌ಗಳು ಮತ್ತು ಪ್ರತಿಜೀವಕಗಳಂತಹ ಔಷಧಿಗಳು ನಿಷ್ಪರಿಣಾಮಕಾರಿಯಾಗಿದ್ದರೂ, ಹೆಚ್ಚಿನ ಮಕ್ಕಳು ಒಂದು ವಾರ ಅಥವಾ ಎರಡು ವಾರಗಳಲ್ಲಿ ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ. RSV ಒಂದು ವೈರಸ್, ಆದ್ದರಿಂದ ಪ್ರತಿಜೀವಕಗಳು ಸೋಂಕನ್ನು ಗುಣಪಡಿಸಲು ಸಹಾಯ ಮಾಡುವುದಿಲ್ಲ.


ತಡೆಗಟ್ಟುವ ಕ್ರಮಗಳು ಯಾವುವು?
ದೇಶಾದ್ಯಂತ ಆರ್‌ಎಸ್‌ವಿ ಪ್ರಕರಣಗಳು ಹೆಚ್ಚಾಗಿದ್ದು, ಮಕ್ಕಳ ಸಂಖ್ಯೆ ಆಸ್ಪತ್ರೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ಪೋಷಕರು ಮತ್ತು ಮಕ್ಕಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಶಿಶುವೈದ್ಯೆ ಬೋನಿ. ಇವರು ಸೂಚಿಸಿರುವ ಕೆಲ ಕ್ರಮಗಳು ಹೀಗಿವೆ.


ಇದನ್ನೂ ಓದಿ: ವಿಟಮಿನ್‌ ಡಿ ಕಡಿಮೆ ಆದ್ರೆ ಅಕಾಲಿಕ ಸಾವು ಬರುತ್ತಂತೆ, ಅಧ್ಯಯನದಲ್ಲಿ ಬಹಿರಂಗ


* ಆಗಾಗ್ಗೆ ಕೈಗಳನ್ನು ತೊಳೆಯುತ್ತಿರಿ
* ಉಸಿರಾಟದ ಲಕ್ಷಣಗಳನ್ನು ಹೊಂದಿದ್ದರೆ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ
* ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ಬಿಡಿ
* ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ನೀರು ಕೊಡಿ
* ಜ್ವರವಿದ್ದರೆ ಮಕ್ಕಳಿಗೆ ನೀಡುವ ಔಷಧಿಗಳನ್ನು ಹಾಕಿ
* ಉಸಿರಾಟವನ್ನು ಸುಲಭಗೊಳಿಸಲು ಮತ್ತು ಕೆಮ್ಮು ಕಡಿಮೆ ಮಾಡಲು ತಂಪಾದ ಮಂಜಿನ ಆವಿಕಾರಕ ಅಥವಾ ಆರ್ದ್ರಕವನ್ನು ಬಳಸಿ

Published by:Sandhya M
First published: