RRC Recruitment 2019: ರೈಲ್ವೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ 20 ಸಾವಿರ ರೂ. ವೇತನದ ಉದ್ಯೋಗಾವಕಾಶ

RRC Recruitment 2019: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಇದರೊಂದಿಗೆ ಐಐಟಿಗೆ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಇನ್ನು ವಿಭಿನ್ನ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

news18-kannada
Updated:October 10, 2019, 2:32 PM IST
RRC Recruitment 2019: ರೈಲ್ವೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ 20 ಸಾವಿರ ರೂ. ವೇತನದ ಉದ್ಯೋಗಾವಕಾಶ
jobs
  • Share this:
RRC Recruitment 2019: ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ - 306
ಸಹಾಯಕ ಲೊಕೊ ಪೈಲಟ್ - 85 ಹುದ್ದೆಗಳು

ತಂತ್ರಜ್ಞ (ಟೆಕ್ನಿಷಿಯನ್) - 221 ಹುದ್ದೆಗಳು

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಇದರೊಂದಿಗೆ ಐಐಟಿಗೆ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಇನ್ನು ವಿಭಿನ್ನ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

ವಯೋಮಿತಿ:ಅರ್ಜಿದಾರರ ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ 42 ವರ್ಷಗಳ ಒಳಗಿರಬೇಕು. ಗರಿಷ್ಠ ವಯಸ್ಸಿನಲ್ಲಿ, ಒಬಿಸಿಗೆ 3, ಎಸ್‌ಸಿ / ಎಸ್‌ಟಿ 5 ವರ್ಷಗಳ ವಿನಾಯಿತಿ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನ 19,900 ರೂ. ನೀಡಲಾಗುತ್ತದೆ. ಇದರೊಂದಿಗೆ ತಿಂಗಳ ಬೋನಸ್ ಕೂಡ ಸಿಗಲಿದೆ.

ಇದನ್ನೂ ಓದಿ: ಕನ್ನಡ ಚಿತ್ರನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಲವ್ವಿ-ಡವ್ವಿ?

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 12, 2019
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 11, 2019

ಹೆಚ್ಚಿನ ಮಾಹಿತಿ:
ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಳನ್ನು Www.rrc-wr.com ಗೆ ಭೇಟಿ ನೀಡುವ ಮೂಲ ಪರಿಶೀಲಿಸಬಹುದು. ಹಾಗೆಯೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ನಾನು ನಟಿಯಾಗಬೇಕೆಂದು ತಿಳಿಸಿದಾಗ ಮನೆಯಿಂದ ಹೊರದಬ್ಬಿದ್ದರು, ಆದರೀಗ..!
First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ