HOME » NEWS » Lifestyle » RRB RRC RECRUITMENT 2019 FOR JUNIOR SENIOR CLERK POSTS CHECK DETAILS HERE ZP

RRB Recruitment: ರೈಲ್ವೆ ನೇಮಕಾತಿ: 251 ಹುದ್ದೆಗಳಿಗೆ ಯಾವುದೇ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ

RRB Recruitment: ಜೂನಿಯರ್ ಗುಮಾಸ್ತ - 12ನೇ ತರಗತಿ ಪಾಸಾದವರು ಈ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಇಂಗ್ಲಿಷ್ ಟೈಪಿಂಗ್ ವೇಗ ನಿಮಿಷಕ್ಕೆ 30 ಪದಗಳಾಗಿರಬೇಕು ಮತ್ತು ಹಿಂದಿ ಟೈಪಿಂಗ್ ವೇಗವು ನಿಮಿಷಕ್ಕೆ 25 ಪದಗಳಾಗಿರಬೇಕು.

zahir | news18-kannada
Updated:December 20, 2019, 11:24 AM IST
RRB Recruitment: ರೈಲ್ವೆ ನೇಮಕಾತಿ: 251 ಹುದ್ದೆಗಳಿಗೆ ಯಾವುದೇ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ
JOB
  • Share this:
ಭಾರತೀಯ ರೈಲ್ವೆ ಇಲಾಖೆಯು ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲ್ಲಿ ಒಟ್ಟು 251 ಕ್ಲರ್ಕ್​ ಹುದ್ದೆಗಳಿಗೆ ನಡೆಯಲಿದ್ದು, ಜೂನಿಯರ್ ಕ್ಲರ್ಕ್‌ನ 171 ಮತ್ತು ಸೀನಿಯರ್ ಕ್ಲರ್ಕ್‌ಗೆ 80 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 20 ಡಿಸೆಂಬರ್ 2019 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2019 ಜನವರಿ 19 ಆಗಿದೆ.

ಹುದ್ದೆಗಳ ವಿವರ:

ಜೂನಿಯರ್ ಕ್ಲರ್ಕ್ - 171 ಹುದ್ದೆಗಳು
ಹಿರಿಯ ಗುಮಾಸ್ತ - 80 ಹುದ್ದೆಗಳು

ವಿದ್ಯಾರ್ಹತೆ:
ಜೂನಿಯರ್ ಗುಮಾಸ್ತ - 12ನೇ ತರಗತಿ ಪಾಸಾದವರು ಈ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಇಂಗ್ಲಿಷ್ ಟೈಪಿಂಗ್ ವೇಗ ನಿಮಿಷಕ್ಕೆ 30 ಪದಗಳಾಗಿರಬೇಕು ಮತ್ತು ಹಿಂದಿ ಟೈಪಿಂಗ್ ವೇಗವು ನಿಮಿಷಕ್ಕೆ 25 ಪದಗಳಾಗಿರಬೇಕು.

ಹಿರಿಯ ಗುಮಾಸ್ತ- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.ವಯೋಮಿತಿ:
ಅಭ್ಯರ್ಥಿಯ ಗರಿಷ್ಠ ವಯಸ್ಸು 42 ವರ್ಷಕ್ಕಿಂತ ಹೆಚ್ಚಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಟೈಪಿಂಗ್ ಪರೀಕ್ಷೆ ನಡೆಸಲಾಗುವುದು. ಅದರ ನಂತರ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇರಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್‌ಸೈಟ್ www.rrccr.com ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)


Published by: zahir
First published: December 20, 2019, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories