RCF Recruitment: ರೈಲ್ವೆ ಉದ್ಯೋಗಾವಕಾಶ:10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

RRB, RCF Recruitment: 10 ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ಮೆರಿಟ್ ಪಟ್ಟಿಯನ್ನು ಮಾಡಿ ಆಯ್ಕೆ ಮಾಡಲಾಗುತ್ತದೆ.

zahir | news18-kannada
Updated:January 14, 2020, 3:07 PM IST
RCF Recruitment: ರೈಲ್ವೆ ಉದ್ಯೋಗಾವಕಾಶ:10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
ಸಾಂದರ್ಭಿಕ ಚಿತ್ರ
  • Share this:
RRB, RCF Recruitment 2020: ರೈಲ್ವೆ ಇಲಾಖೆಯು ರೈಲು ಕೋಚ್ ಕಾರ್ಖಾನೆಯಲ್ಲಿನ ಉದ್ಯೋಗಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಈ ವಿಭಾಗದಲ್ಲಿ ಒಟ್ಟು 400 ಹುದ್ದೆಗಳು ಖಾಲಿಯಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಫೆಬ್ರವರಿ 2020.

ಈ ನೇಮಕಾತಿಯ ಅಡಿಯಲ್ಲಿ ಫಿಟ್ಟರ್, ವೆಲ್ಡರ್, ಮೆಷಿನಿಸ್ಟ್, ಪೇಂಟರ್, ಕಾರ್ಪೆಂಟರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಮತ್ತು ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ಹೆಸರು:

ಫಿಟ್ಟರ್, ವೆಲ್ಡರ್, ಮೆಷಿನಿಸ್ಟ್, ಪೇಂಟರ್, ಕಾರ್ಪೆಂಟರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಮತ್ತು ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್

ಒಟ್ಟು ಹುದ್ದೆಗಳ ಸಂಖ್ಯೆ
400 ಪೋಸ್ಟ್‌ಗಳು

ವಿದ್ಯಾರ್ಹತೆಈ ಹುದ್ದೆಗಳಿಗೆ 10 ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿದಾರ ಐಟಿಐ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ:
ಅಭ್ಯರ್ಥಿಯ ಕನಿಷ್ಠ ವಯಸ್ಸು 15 ವರ್ಷಗಳು. 08.01.2020 ರ ಪ್ರಕಾರ ಗರಿಷ್ಠ ವಯೋಮಿತಿ 24 ವರ್ಷ ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ
100 ರೂಪಾಯಿ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
10 ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ಮೆರಿಟ್ ಪಟ್ಟಿಯನ್ನು ಮಾಡಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 6 ಫೆಬ್ರವರಿ 2020

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು rcf.indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಕೆಳಗೆ ನೀಡಲಾದ ನೇರ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕವೂ ಅರ್ಜಿ ಸಲ್ಲಿಸಬಹುದು.

ಲಿಂಕ್: https://rcf.indianrailways.gov.in/recLogin.jsp?lang=0&id=0,296,490

 

(ವಿ.ಸೂ: ಕೆಲವೊಂದು ಆ್ಯಪ್​ಗಳಲ್ಲಿ ಲಿಂಕ್ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ News18 Kannada App ಡೌನ್​ಲೋಡ್​ ಮಾಡುವ ಮೂಲಕ ನಿಮ್ಮ ಲಿಂಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು)

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ