• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Lifestyle Tips: ಪಿಸಿಒಎಸ್‌ನೊಂದಿಗೆ ತೂಕ‌ ಹೆಚ್ಚಳದಿಂದ ರೋಸಿ ಹೋಗಿದ್ದ ರೋಶ್ನಿ ಅವರ ಫಿಟ್‌ನೆಸ್‌ ಪ್ರಯಾಣವೇ ರೋಚಕ!

Lifestyle Tips: ಪಿಸಿಒಎಸ್‌ನೊಂದಿಗೆ ತೂಕ‌ ಹೆಚ್ಚಳದಿಂದ ರೋಸಿ ಹೋಗಿದ್ದ ರೋಶ್ನಿ ಅವರ ಫಿಟ್‌ನೆಸ್‌ ಪ್ರಯಾಣವೇ ರೋಚಕ!

ರೋಶನಿ ಐದಾಸಾನಿ

ರೋಶನಿ ಐದಾಸಾನಿ

ತೂಕ ಏರಿಕೆ ಹಾರ್ಮೋನ್‌ ಅಸಮತೋಲನದ ಪ್ರಮುಖ ಸಮಸ್ಯೆಯಾಗಿದೆ. ಆದರೆ ಸರಿಯಾದ ಡಯೆಟ್‌ ಹಾಗೂ ಜೀವನಶೈಲಿಯಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಈ ಬಗ್ಗೆ ಸ್ವತಃ ಅನುಭವಿಸಿದ ರೋಶ್ನಿ ಐದಾಸಾನಿ ಅವರೇ ಹೇಳಿಕೊಂಡಿದ್ದಾರೆ.

  • Share this:

ಇತ್ತೀಚಿಗೆ ಹೆಣ್ಣುಮಕ್ಕಳಲ್ಲಿ ಹಾರ್ಮೋನ್​ (Hormone) ಸಮಸ್ಯೆ ಸಾಮಾನ್ಯವಾಗಿದೆ. ಥೈರಾಯ್ಡ್‌, ಪಿಸಿಒಡಿ, ಪಿಸಿಒಎಸ್‌ ಹೀಗೆ ಯಾರನ್ನೂ ಕೇಳಿದರೂ ಒಂದಲ್ಲ ಒಂದು ಸಮಸ್ಯೆ ಎನ್ನುತ್ತಾರೆ. ಇಂಥ ಹಾರ್ಮೋನುಗಳ ಅಸಮತೋಲನದಿಂದ ದೇಹದಲ್ಲಿ ಸಾಕಷ್ಟು ಸಮಸ್ಯೆಗಳುಂಟಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ತೂಕ ಏರಿಕೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಬಹಳಷ್ಟು ಜನರಲ್ಲಿ ಕಂಡುಬರುತ್ತದೆ. ಇದು ಐದು ಭಾರತೀಯ ಮಹಿಳೆಯರಲ್ಲಿ (Indian Women) ಒಬ್ಬರ ಮೇಲೆ ಪರಿಣಾಮ ಬೀರುತ್ತದೆ.


ತೂಕ ಏರಿಕೆ ಹಾರ್ಮೋನ್‌ ಅಸಮತೋಲನದ ಪ್ರಮುಖ ಸಮಸ್ಯೆಯಾಗಿದೆ. ಆದರೆ ಸರಿಯಾದ ಡಯೆಟ್‌ ಹಾಗೂ ಜೀವನಶೈಲಿಯಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಪುಣೆಯ 29 ವರ್ಷದ ರೋಶ್ನಿ ಐದಾಸಾನಿ ಜುಂಜಾ, ತರಬೇತಿದಾರರು ಹಾಗೂ ಮಾಡೆಲ್‌ ಕೂಡ ಆಗಿದ್ದು, ಅತ್ಯುತ್ತಮ ಲೈಫ್‌ ಕೋಚ್‌ ಆಗುವ ಗುರಿ ಹೊಂದಿದ್ದಾರೆ.


ಇದಕ್ಕಾಗಿ ಟ್ರೈನಿಂಗ್‌ ಕೋರ್ಸ್‌ ಮಾಡುತ್ತಿದ್ದಾರೆ. ಆದರೆ ಪಿಸಿಒಎಸ್‌ ತೂಕ ಸಮಸ್ಯೆಗಳೊಂದಿಗೆ ಅವರ ಹೋರಾಟದ ಪ್ರಯಾಣವು ಸ್ಪೂರ್ತಿದಾಯಕವಾಗಿದೆ.


ಚಿಕ್ಕ ವಯಸ್ಸಿನಿಂದಲೇ ಹತಾಶೆ- ಅವಮಾನ!


“ಪಿರಿಯಡ್‌ನಲ್ಲಿ ರಕ್ತಸ್ರಾವವು 25 ದಿನಗಳವರೆಗೆ ನಿಲ್ಲುತ್ತಿರಲಿಲ್ಲ. ಬಹಳ ನೋವಿನಿಂದ ನನಗೆ ನಡೆಯಲು ಅಥವಾ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ನಾನು 8 ನೇ ಕ್ಲಾಸಿನಲ್ಲಿ 80 ಕೆ.ಜಿ ತೂಕವನ್ನು ಹೊಂದಿದ್ದೆ. ಹಣೆಯ ಮೇಲೆ ಮೊಡವೆಗಳನ್ನು ಹೊಂದಿದ್ದ ನಾನು ಸ್ಕಾರ್ಫ್‌ಗಳಿಂದ ಅದನ್ನು ಮುಚ್ಚಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೆ.


ಇದನ್ನೂ ಓದಿ: ಒಳ್ಳೆಯದು ಅಂತ ಈ ಗಿಡಮೂಲಿಕೆಯನ್ನು ಬಳಸಲೇಬಾರದು, ಇಲ್ಲಿದೆ ನೋಡಿ ಕಾರಣ


ನನ್ನ ಕೂದಲು ತೆಳುವಾಗಿತ್ತು. ನನ್ನ ಕೈಕಾಲುಗಳ ಮೇಲೆ ಹೆಚ್ಚುವರಿ ಕೂದಲು ಇತ್ತು. ಇದರಿಂದ ನನ್ನ ಸ್ನೇಹಿತರು, ಸಂಬಂಧಿಕರ ಜೊತೆಗೆ ಹೋಗಲು ಸಂಕೋಚವಾಗುತ್ತಿತ್ತು. ನಾನು ಸಾಕಷ್ಟು ಅನಾರೋಗ್ಯವನ್ನು ಅನುಭವಿಸಿದೆ. ಆದರೆ 19 ನೇ ವಯಸ್ಸಿನಲ್ಲಿಯೇ ಸರಿಯಾದ ರೋಗನಿರ್ಣಯವನ್ನು ಮಾಡಲಾಯಿತು” ಎಂದು ಹೇಳುತ್ತಾರೆ ರೋಶ್ನಿ.


ಇನ್ನು, ಹೆಚ್ಚಿನ ಸಮಯ ರೋಶ್ನಿ ಹಸಿವಿನಿಂದ ಬಳಲುತ್ತಿದ್ದರು. ಆದರೆ ಅದನ್ನು ಹೇಳಿಕೊಳ್ಳಲು, ಎಲ್ಲರೆದುರು ಏನಾದರೂ ತಿನ್ನಲು ಭಯಪಡುತ್ತಿದ್ದರು. ಆದ್ದರಿಂದ ಹಸಿವಾದಾಗ ತಿನ್ನಲು ಯಾವಾಗಲೂ ಸೇಬನ್ನು ಒಯ್ಯುತ್ತಿದ್ದಳು.


ಆಕೆಯ ಸ್ನೇಹಿತರು ಆಕೆಯನ್ನು ದೂರ ಮಾಡುತ್ತಿದ್ದುದರಿಂದ ಅವರು ಮನೆಯಲ್ಲಿಯೇ ಚೀಸ್ ಪಿಜ್ಜಾಗಳನ್ನು ತಿನ್ನುತ್ತಿದ್ದರು. ಕೆಲವೊಮ್ಮೆ ತನ್ನ ದೈಹಿಕ ಶಿಕ್ಷಣ ತರಗತಿಯ ಭಾಗವಾಗಿ ಸ್ಕಿಪ್ಪಿಂಗ್ ಸವಾಲನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ರೋಶ್ನಿ ಹೆಚ್ಚು ಹತಾಶೆ ಮತ್ತು ಮುಜುಗರಕ್ಕೊಳಗಾಗುತ್ತಿದ್ದರು.


ರೋಶನಿ ಐದಾಸಾನಿ


ಆ ವಯಸ್ಸಿನಲ್ಲಿ ಹುಡುಗಿಯರು ಹೆಚ್ಚು ಫ್ಯಾಶನ್‌ ಪ್ರಜ್ಞೆಯನ್ನು ಹೊಂದಿರುತ್ತಾರೆ. ಆದರೆ ರೋಶ್ನಿ ಕೇವಲ ಕಪ್ಪು ಜೀನ್ಸ್ ಮತ್ತು 3XL ಉದ್ದದ ಟಾಪ್ ಧರಿಸುತ್ತಿದ್ದರು. ಜೊತೆಗೆ ಕಾಲೇಜಿಗೆ ಹೋಗಲು ಹೆದರುತ್ತಿದ್ದೆ ಎಂಬುದಾಗಿ ರೋಶ್ನಿ ನೆನಪಿಸಿಕೊಳ್ಳುತ್ತಾರೆ.


ಪಿಸಿಒಎಸ್‌ನಿಂದ ದೇಹದಲ್ಲಿ ಏನಾಗುತ್ತದೆ?


ಸಾಮಾನ್ಯವಾಗಿ ಸಕ್ಕರೆ ಮತ್ತು ಪಿಷ್ಟಗಳನ್ನು ಆಹಾರದಿಂದ ಶಕ್ತಿಯನ್ನಾಗಿ ಪರಿವರ್ತಿಸಲು ಹಾರ್ಮೋನ್‌ ಇನ್ಸುಲಿನ್‌ ಸಹಾಯ ಮಾಡುತ್ತದೆ. ಆದರೆ ಪಿಸಿಒಎಸ್‌ನಿಂದ ದೇಹಕ್ಕೆ ಹಾರ್ಮೋನ್‌ ಇನ್ಸುಲಿನ್‌ ಅನ್ನು ಬಳಸಲು ಕಷ್ಟವಾಗುತ್ತದೆ.


ಇನ್ಸುಲಿನ್ ಪ್ರತಿರೋಧವು ರಕ್ತದಲ್ಲಿ ಇನ್ಸುಲಿನ್ ಮತ್ತು ಸಕ್ಕರೆಯನ್ನು ನಿರ್ಮಿಸಲು ಕಾರಣವಾಗಬಹುದು. ಹೆಚ್ಚಿನ ಇನ್ಸುಲಿನ್ ಮಟ್ಟವು ಪುರುಷ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಹೆಚ್ಚಿನ ಕೂದಲು, ಮೊಡವೆ, ಅನಿಯಮಿತ ಋತುಚಕ್ರ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತವೆ.


ರೋಶ್ನಿಗೆ ಆಗಿದ್ದೂ ಇದೆ! ಆಕೆಯ ದೇಹದಲ್ಲಿ ಇಂಥದ್ದೇ ಬದಲಾವಣೆಯುಂಟಾಗಿ ಆಕೆ ಸಂಬಂಧಿಕರಿಂದ ನಕಾರಾತ್ಮಕ ಕಾಮೆಂಟ್‌ಗಳು ಅಥವಾ ಸ್ನೇಹಿತರ ಕೀಟಲೆಗಳನ್ನು ಅನುಭವಿಸುವಂತಾಯ್ತು. ಆದರೆ ಮುಂದೊಂದು ದಿನ ಅದೇ ನೆಗೆಟಿವ್‌ ಕಾಮೆಂಟ್‌ ಆಕೆಯನ್ನು ತೂಕ ಇಳಿಕೆ ಮಾಡಿಕೊಳ್ಳಲು ಪ್ರೇರೇಪಿಸಿತು.


ರೋಶನಿ ಐದಾಸಾನಿ


ವಿವಿಧ ವೈದ್ಯರನ್ನು ಸಂಪರ್ಕಿಸಿದ ನಂತರ, ಸ್ಥಳೀಯ ಸ್ತ್ರೀರೋಗತಜ್ಞರು ಯಾವುದೇ ರಕ್ತ ಪರೀಕ್ಷೆ ಅಥವಾ ಹಾರ್ಮೋನ್ ಪರೀಕ್ಷೆಯಿಲ್ಲದೆ ಗರ್ಭನಿರೋಧಕಗಳನ್ನು ಸೂಚಿಸಿದಾಗ ರೋಶ್ನಿ ಗಾಬರಿಗೊಂಡರು.ನಾನು ಪ್ರತಿ 10 ದಿನಗಳಿಗೊಮ್ಮೆ ವ್ಯಾಕ್ಸ್ ಮಾಡಬೇಕಾಗುತ್ತಿತ್ತು ಎನ್ನುವ ರೋಶ್ನಿ, ದೇಹದ ಅನಗತ್ಯ ಕೂದಲನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ. ಈ ಎಲ್ಲ ಒತ್ತಡಗಳಿಂದ ಮನೆಯಲ್ಲಿ ಅನಗತ್ಯ ವಾದ ವಿವಾದಗಳಾಗುತ್ತಿತ್ತು.


"ನಾನು ಆಹಾರ, ನೃತ್ಯ ತರಗತಿಗಳು, ಯೋಗ ಮತ್ತು ಈಜು ಮುಂತಾದ ಕಟ್ಟುನಿಟ್ಟಾದ ಅಭ್ಯಾಸಗಳೊಂದಿಗೆ ಜೀವನಶೈಲಿ ನಿರ್ವಹಣೆಯನ್ನು ಪ್ರಯತ್ನಿಸಿದೆ. ಪ್ರತಿ ವ್ಯಾಯಾಮದ ನಂತರ ನಾನು ನನ್ನ ತೂಕವನ್ನು ಪರಿಶೀಲಿಸುತ್ತಿದ್ದೆ” ಎಂಬುದಾಗಿ ರೋಶ್ನಿ ಹೇಳುತ್ತಾರೆ.


ಆದರೆ ಆಕೆಯ ರೂಪಾಂತರವಾಗುವಂಥ ಸಮಯ ಬಂದಿದ್ದು ಆಕೆಯ 19 ನೇ ವಯಸ್ಸಿನಲ್ಲಿ. ಅವಳು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ತನ್ನ ಕಂಪ್ಯೂಟರ್ ಸೈನ್ಸ್ ಕೋರ್ಸ್‌ನ ಎರಡನೇ ವರ್ಷದಲ್ಲಿದ್ದಾಗ.


ರೋಶ್ನಿಗೆ ಸಿಕ್ಕಿತು ಅತ್ಯುತ್ತಮ ವೈದ್ಯರ ಮಾರ್ಗದರ್ಶನ


ಜಹಾಂಗೀರ್ ಆಸ್ಪತ್ರೆಯ ಹಿರಿಯ ಸಲಹಾ ಸ್ತ್ರೀರೋಗತಜ್ಞರಾದ ಡಾ. ನೀನಾ ಮನ್ಸುಖಾನಿ ಅವರನ್ನು ರೋಶ್ನಿ ಭೇಟಿಯಾದರು. ಅವರು ರೋಶ್ನಿ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಿದರು. ಮಾತ್ರವಲ್ಲದೆ ಚೇತರಿಕೆಯ ಪ್ರತಿಯೊಂದು ಹಂತದಲ್ಲೂ ತಾಳ್ಮೆಯಿಂದ ಕೈಹಿಡಿದರು. “ಅವರು ನನ್ನ ಎರಡನೇ ತಾಯಿಯಂತೆ” ಎನ್ನುತ್ತಾರೆ ರೋಶ್ನಿ.


ಪಾಲಿಸಿಸ್ಟಿಕ್ ಅಂಡಾಶಯಗಳು ಅವುಗಳಲ್ಲಿ ಮೊಟ್ಟೆಗಳೊಂದಿಗೆ ಕಿರುಚೀಲಗಳನ್ನು ಹೊಂದಿರುತ್ತವೆ. ಇದರಿಂದ ಆ ಕಿರುಚೀಲಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.


ಆದ್ದರಿಂದ ಅಂಡೋತ್ಪತ್ತಿ ಅಥವಾ ಮೊಟ್ಟೆಗಳ ಬಿಡುಗಡೆ ಆಗುವುದಿಲ್ಲ. ಅನೇಕ ಹೆಣ್ಣುಮಕ್ಕಳಿಗೆ ಇದು ಸಂಭವಿಸುತ್ತದೆ ಎಂಬುದಾಗಿ ವೈದ್ಯರು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ ರೋಶ್ನಿ. 2014 ರಲ್ಲಿ ಅನಿಯಮಿತ ಪಿರಿಯೆಡ್ಸ್‌ ಮತ್ತು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿದ್ದ ರೋಶ್ನಿಯನ್ನು ಭೇಟಿಯಾದದ್ದನ್ನು ಡಾ ಮನ್ಸುಖಾನಿ ನೆನಪಿಸಿಕೊಳ್ಳುತ್ತಾರೆ.


ಹೆಚ್ಚಿನ ಕಾರ್ಬ್ಸ್‌ ಸೇವನೆ ಹಾಗೂ ಜೀವನಶೈಲಿ ಇದಕ್ಕೆ ಕಾರಣ


“ಭಾರತೀಯರು ಹೆಚ್ಚಿನ ಕಾರ್ಬ್ ತಿನ್ನುವವರು ಮಧುಮೇಹಕ್ಕೆ ಒಳಗಾಗುತ್ತಾರೆ. ಜೀವನಶೈಲಿಯ ಬಗ್ಗೆ ಅಸಡ್ಡೆ ವರ್ತನೆಯು ನಿಮ್ಮನ್ನು ಮಧುಮೇಹ ಹಾಗೂ ಪಿಸಿಒಎಸ್‌ ಗೆ ಒಳಗಾಗುವಂತೆ ಮಾಡಬಹುದು. ಆದ್ದರಿಂದ ತನ್ನ ದೇಹದ ಚಯಾಪಚಯ ಅಥವಾ ಇನ್ಸುಲಿನ್ ಪ್ರತಿರೋಧ ಏಕೆ ವಿಭಿನ್ನವಾಗಿದೆ. ಏಕೆ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ರೋಗಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.


ಅದನ್ನು ಸರಿಯಾಗಿ ವಿವರಿಸಿದ ನಂತರ, ರೋಗಿಯು ಪ್ರಿಸ್ಕ್ರಿಪ್ಷನ್‌ನಲ್ಲಿ ತೂಕ ನಷ್ಟ ಸಲಹೆಯ ಅರ್ಥವೇನು ಎಂದು ಆಶ್ಚರ್ಯಪಡುವ ಬದಲು ಸಮಸ್ಯೆಯನ್ನು ನಿಭಾಯಿಸಲು ಸಿದ್ಧರಾಗುತ್ತಾರೆ ಎಂದು ಡಾ. ಮನ್ಸುಖಾನಿ ವಿವರಿಸುತ್ತಾರೆ.


ಸಮಸ್ಯೆಯ ಮೂಲ ಹುಡುಕಿ ಚಿಕಿತ್ಸೆ ನೀಡುವುದು ಮುಖ್ಯ


"ರೋಗಿಯ ಶರೀರಶಾಸ್ತ್ರ ಮತ್ತು ಚಯಾಪಚಯ ಕ್ರಿಯೆಯ ಬಗ್ಗೆ ಮಾತನಾಡುವುದು ಮುಖ್ಯವಲ್ಲ. ಆದರೆ ಅವರು ತೂಕ ನಷ್ಟ, ಪಿಗ್ಮೆಂಟೇಶನ್, ಹೆಚ್ಚುವರಿ ದೇಹದ ಕೂದಲು ಅಥವಾ ಗರ್ಭಧಾರಣೆ ಇಂಥ ಯಾವ ಸಮಸ್ಯೆಯಿಂದ ಪಾರಾಗಲು ಬಯಸುತ್ತಾರೆ ಎಂದು ನಿರ್ಧರಿಸುವುದು ಮುಖ್ಯ ಎಂದು ಡಾ. ಮನ್ಸುಖಾನಿ ಹೇಳುತ್ತಾರೆ.


ಡಾ. ಮನ್ಸುಖಾನಿ ಹೇಳುವಂತೆ, “ರೋಗಿಗಳಲ್ಲಿ 90 ಪ್ರತಿಶತದಷ್ಟು ಜನರು ತಮ್ಮ ಪರಿಯಡ್ಸ್‌ ಪ್ರಕ್ರಿಯೆಯನ್ನು ಮರಳಿ ಟ್ರ್ಯಾಕ್‌ಗೆ ತರುತ್ತಾರೆ. 10 ಪ್ರತಿಶತದಷ್ಟು ಜನರು ಸಮಸ್ಯೆಯನ್ನು ಹೊಂದಿರಬಹುದು.


ಇನ್ನು, ಫಲವತ್ತತೆಗೆ ವಿಭಿನ್ನ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ರೋಗಿಯ ಸಮಸ್ಯೆಯ ಮೂಲ ಹುಡುಕಬೇಕು. ಅವರ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಬೇಕು. ನಂತರ ದೊಡ್ಡ ತಡೆಗೋಡೆ ಏನೆಂದು ಪರಿಶೀಲಿಸಬೇಕು”.


ರೋಗಿಗಳು ಸಾಮಾನ್ಯವಾಗಿ ಒತ್ತಡಕ್ಕೊಳಗಾಗುವುದರಿಂದ ಡಾ. ಮನ್ಸುಖಾನಿ ಜುಂಬಾದಂತಹ ಆಹ್ಲಾದಿಸಬಹುದಾದ ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ. ಇದು ರೋಗಿಯೊಂದಿಗೆ ಬಾಂಧವ್ಯವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.


ಭಯಪಡುವ ಬದಲು ಜೀವನಶೈಲಿ ಬದಲಾಯಿಸಿಕೊಳ್ಳಿ!


“ಇಂಟರ್‌ನೆಟ್‌ನಲ್ಲಿ ಸಾಕಷ್ಟು ತಪ್ಪು ಮಾಹಿತಿ ಇರುವುದರಿಂದ ಭಯವನ್ನು ಹೋಗಲಾಡಿಸುವುದು ಬಹಳ ಮುಖ್ಯ. ಪಿಸಿಓಎಸ್‌ನ ದೀರ್ಘಾವಧಿಯ ಪರಿಣಾಮಗಳಾದ ಬಂಜೆತನ, ಸ್ತನ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್ ಮತ್ತು ಮಧುಮೇಹದ ಬಗ್ಗೆ ಹೆಣ್ಣುಮಕ್ಕಳು ಭಯಭೀತರಾಗುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳು ಕಾರ್ಯಸಾಧ್ಯ ಮತ್ತು ಜೀವನಶೈಲಿ ಮೇಲೆ ಅವಲಂಬಿತವಾಗಿವೆ ”ಎಂದು ಡಾ ಮನ್ಸುಖಾನಿ ವಿವರಿಸುತ್ತಾರೆ.


ರೋಶ್ನಿಯ ಚಿಕಿತ್ಸೆಯ ಪ್ರೋಟೋಕಾಲ್ ತನ್ನ ಆರಂಭಿಕ ತೂಕ ನಷ್ಟ ಗುರಿಯನ್ನು ಸಾಧಿಸಲು ಇನ್ಸುಲಿನ್ ಸೆನ್ಸಿಟೈಸರ್‌ಗಳೊಂದಿಗೆ ಪ್ರಾರಂಭವಾಯಿತು. ಆಕೆ ತನ್ನ ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸರಿಯಾದ ಔಷಧಗಳನ್ನು ಅನುಸರಿಸಿದರು.


“ಕಟ್ಟುನಿಟ್ಟಿನ ಡಯೆಟ್‌ನೊಂದಿಗೆ ಜುಂಬಾ ಆರಂಭಿಸಿದೆ”


"ವೈದ್ಯರು ನನಗೆ ಔಷಧಿ ನೀಡಿದರು ಮತ್ತು ನಾನು ನನ್ನ ವ್ಯಾಯಾಮವನ್ನು ಪ್ರಾರಂಭಿಸಿದೆ. ಮತ್ತು ನಾನು ಒಂದು ಕೆಜಿ ಕಳೆದುಕೊಂಡ ದಿನ, ನಾನು ಜಗತ್ತನ್ನೇ ಗೆದ್ದಿದ್ದೇನೆ ಎಂಬಷ್ಟು ಸಂತೋಷವಾಯಿತು " ಎಂದು ರೋಶ್ನಿ ಹೇಳುತ್ತಾರೆ. ನಂತರ ರೋಶ್ನಿ ತಪ್ಪದೇ ಜುಂಬಾ ತರಗತಿಗೆ ಹಾಜರಾದರು. ಅವರು ತಮ್ಮ ಸಕ್ಕರೆಯನ್ನು ತ್ಯಜಿಸಿದರು. ಕಟ್ಟುನಿಟ್ಟಾದ ಮನೆ ಊಟವನ್ನೇ ಮಾಡಿದರು. ಜಿಮ್‌ನಲ್ಲಿ ಮೂರು ಗಂಟೆಗಳ ಕಾಲ ತಪ್ಪದೇ ವ್ಯಾಯಾಮ ಮಾಡುತ್ತಿದ್ದರು.
ರೋಶ್ನಿ 2015 ರ ವೇಳೆಗೆ 17 ಕೆಜಿಗಿಂತ ಹೆಚ್ಚು ತೂಕ ಕಳೆದುಕೊಂಡು 63 ಕೆಜಿ ತೂಕವನ್ನು ಹೊಂದಿದ್ದರು. ಡೇಟಾ ವಿಶ್ಲೇಷಕಳಾಗಿ ಕೆಲಸ ಪಡೆದರೂ ಅಲ್ಲಿ ಕುಳಿತು ಕೆಲಸ ಮಾಡಬೇಕಾದ ಕಾರಣ ಅದನ್ನು ತ್ಯಜಿಸಿದರು.

First published: