Beauty Tips: ರೋಸ್ ವಾಟರ್ ಹಚ್ಚಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ, ಕೇಶ ಸೌಂದರ್ಯಕ್ಕೂ ಇದೇ ಬೆಸ್ಟ್

ರೋಸ್ ವಾಟರ್ ನಿಮ್ಮ ಸ್ಕಿನ್ ಗೆ ಬ್ಯೂಟಿ ಫ್ರೆಂಡ್ ಅಂತಾನೆ ಹೇಳಬಹುದು. ನೈಸರ್ಗಿಕವಾಗಿರೋ ಈ ರೋಸ್ ವಾಟರ್ ಬಳಸೋದ್ರಿಂದ ನಿಮ್ಮ ಚರ್ಮ ಸಮಸ್ಯೆಗಳಿಗೆ Bye Bye ಹೇಳಿ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು

ರೋಸ್ ವಾಟರ್

ರೋಸ್ ವಾಟರ್

  • Share this:
ಗುಲಾಬಿ(Rose) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ನೋಡು ನೋಡ್ತಿದ್ದಂತೆ ಗುಲಾಬಿಗೆ ಮನಸೋತು ಬಿಡ್ತಾರೆ. ಹಾಗೇ ರೋಸ್ ವಾಟರ್ (Rose Water) ಕೂಡ ಹೆಂಗಳೆಯರ ಮನಗೆದ್ದಿದೆ. ಹಲವು ಮಹಿಳೆಯರ ಸೌಂದರ್ಯದ ರಹಸ್ಯ (Beauty secret)ವಾಗಿದೆ. ಎಲ್ಲರ ಮನೆಯಲ್ಲೂ ರೋಸ್ ವಾಟರ್ ಇರಲೇಬೇಕು. ಆಯಿಲಿ ಸ್ಕಿನ್ (Oil skin), ಡ್ರೈ ಸ್ಕಿನ್ (Dry Skin), ಸೆನ್ಸಿಟಿವ್ ಸ್ಕಿನ್ (Sensitive skin) ಯಾವ ರೀತಿಯ ಚರ್ಮಕ್ಕಾದ್ರೂ ನಾವು ರೋಸ್ ವಾಟರ್ ಬಳಸಬಹುದು. ಮುಖ ಹಾಗೂ ಕೂದಲ ಸಮಸ್ಯೆಗಳಿಗೆ ರೋಸ್ ವಾಟರ್ ಉತ್ತಮ ಪರಿಹಾರವಾಗಿದೆ. ರೋಸ್ ವಾಟರ್ ಬಳಕೆ ಇಂದು, ನಿನ್ನೆಯದ್ದಲ್ಲ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ. ಹಾಗಾದ್ರೆ ಇದರ ಉಪಯೋಗಗಳು ಏನು ಅಂತ ನೋಡೋಣ ಬನ್ನಿ.

ಮೊಡವೆಗಳಿಗೆ ರಾಮಬಾಣ ರೋಸ್ ವಾಟರ್

ಮೊಡವೆಗಳು ಮುಖದ ಅಂದ ಹಾಳು ಮಾಡುತ್ತೆ. ಮುಖದ ಮೇಲೆ ಒಂದು ಗುಳ್ಳೆ ಕಂಡ್ರು ಬೇಸರ ತರಿಸುತ್ತೆ. ನಿತ್ಯ ತಣ್ಣೀರಿಗೆ ರೋಸ್ ವಾಟರ್ ಹಾಕಿ ಮುಖ ತೊಳೆದ್ರೆ ಮೊಡವೆಗಳು ಮಾಯವಾಗುತ್ತೆ. ದಿನಕ್ಕೆ ಎರಡು ಮೂರು ಬಾರಿ ಹೀಗೆ ಮಾಡೋದು ಉತ್ತಮ. 1 ಚಮಚ ರೋಸ್ ವಾಟರ್ ಗೆ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧಗಂಟೆ ಬಳಿಕ ಮುಖ ತೊಳೆದರೆ ಮೊಡವೆ ಕಡಿಮೆಯಾಗುತ್ತೆ ಜೊತೆಗೆ ಕಲೆಗಳು ಮಾಯವಾಗುತ್ತೆ.

ಇದನ್ನೂ ಓದಿ: Cholesterol Controlling Fruits: ಕೊಲೆಸ್ಟ್ರಾಲ್ ನಿಯಂತ್ರಿಸಲು ನಿಮ್ಮ ಆಹಾರದಲ್ಲಿರಲಿ ಈ 5 ಹಣ್ಣುಗಳು

ಹೊಳೆಯುವ ಮುಖ ನಿಮ್ಮದಾಗಲಿ

ಚರ್ಮದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಸಹಕಾರಿಯಾಗಿದೆ. ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ವಾಶ್ ಮಾಡಿದ್ರೆ ಮುಖದ ಕಾಂತಿ ಹೆಚ್ಚುತ್ತೆ. ರೋಸ್ ವಾಟರ್ ಗೆ ಜೇನುತುಪ್ಪ ಬೆರಸಿ ಹಚ್ಚಿದ್ರೆ ಮುಖದ ಕಾಂತಿ ಹೆಚ್ಚುತ್ತದೆ.

ರೋಸ್ ವಾಟರ್ ನ್ಯಾಚುರಲ್ ಟೋನರ್

ಯಾರು ಚರ್ಮದ ಉರಿಯೂತದಿಂದ ಬಳಲುತ್ತಿರುತ್ತಾರೋ ಅಂತವರಿಗೆ ರೋಸ್ ವಾಟರ್ ಮೈಲ್ಡ್ ಟೋನರ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮವು ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತೆ. ತುರಿಕೆ, ಮೊಡವೆಗೆ ರೋಸ್ ವಾಟರ್ ರಾಮಬಾಣವಾಗಿದೆ.

ರಿಲ್ಯಾಕ್ಸ್ ಗಾಗಿ ರೋಸ್ ವಾಟರ್ ಬಾತ್

ಬಿಸಿ ನೀರಿಗೆ ರೋಸ್ ವಾಟರ್ ಹಾಕಿ ಕಾಯಿಸಿ ಅದರಿಂದ ಬರೋ ಪರಿಮಳ ಮನಸ್ಸನ್ನು ಶಾಂತಗೊಳಿಸುತ್ತೆ. ಅದೇ ನೀರಿನಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ರಿಲ್ಯಾಕ್ಸ್ ಆಗುತ್ತೆ. ಒಮ್ಮೆ ಟ್ರೈ ಮಾಡಿ.

ಕೂದಲು ಹಾಗೂ ತುಟಿಯ ಆರೈಕೆ

ರೋಸ್ ವಾಟರ್ ಕೂದಲ ರಕ್ಷಣೆಗೂ ಸಹಕಾರಿಯಾಗಿದೆ. ರೋಸ್ ವಾಟರ್ ಬಳಸಿ ಸ್ನಾನ ಮಾಡಿದ್ರೆ ಕೂದಲು ಉದುರುವಿಕೆ ಕಡಿಮೆಯಾಗುತ್ತೆ. ರೋಸ್ ವಾಟರ್ ನನ್ನು ಕೂದಲ ಬುಡಕ್ಕೆ ಹಚ್ಚಿದ್ರೆ ಕಂಡೀಷನರ್ ನಂತೆ ಕೆಲಸ ಮಾಡುತ್ತೆ. ಇನ್ನು ರೋಸ್ ವಾಟರ್ ನನ್ನುತುಟಿಗೆ ಹಚ್ಚಿದ್ರೆ ತುಟ್ಟಿ ಮೃದುವಾಗುತ್ತೆ.

ಇದನ್ನೂ ಓದಿ: Hair Tips: ತಲೆ ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..

ರೋಸ್ ವಾಟರ್ ತಯಾರಿಸೋದು ಹೇಗೆ?

ಮೊದಲು ನೀರನ್ನು ಬಿಸಿ ಮಾಡಿ ಅದಕ್ಕೆ ತಾಜಾ ಗುಲಾಬಿ ದಳಗಳನ್ನು ಹಾಕಬೇಕು. ನಂತರ ಪಾತ್ರೆ ಮುಚ್ಚಳ ಮುಚ್ಚಿ ತಣ್ಣಗಾಗಲು ಬಿಡಬೇಕು. ಅದು ತಣ್ಣಗಾದ ಮೇಲೆ ಗುಲಾಬಿ ದಳ ಹಾಕಿರುವ ನೀರನ್ನು ಪ್ರಿಡ್ಜ್ ನಲ್ಲಿ ಇಡಬೇಕು. ಒಂದು ದಿನ ಹಾಗಯೇ ಇರಲಿ. ಅದನ್ನು ಸೋಸಿಕೊಳ್ಳಿ ಬಳಿಕ ನೀರನ್ನು ಬಾಟಲಿಯಲ್ಲಿ ಹಾಕಿದ್ರೆ ರೋಸ್ ವಾಟರ್ ರೆಡಿ.
Published by:Latha CG
First published: