Rope Skipping Benefits: ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಗ್ಗದ ಜಂಪಿಂಗ್ ಪ್ರಯೋಜನಕಾರಿ

ಹಗ್ಗ ನೆಗೆಯುವುದು ದೈಹಿಕ ವ್ಯಾಯಾಮಕ್ಕೆ ಮಾತ್ರವಲ್ಲದೇ ಅದೊಂದು ಮನರಂಜನೆ ನೀಡುವ ಸಂತೋಷದಿಂದ ಆಡುವ ಆಟ. ಇನ್ನು ಹಗ್ಗದಲ್ಲಿ ಜಂಪಿಂಗ್ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಾಲ್ಯದಲ್ಲಿ (Childhood) ನೀವೂ ಸಹ ಹಗ್ಗದಾಟ (Rope Jumping) ಆಡಿರಬಹುದು. ಎರಡು ಕೈಗಳಲ್ಲಿ (Hands) ಹಗ್ಗದ ತುದಿ ಹಿಡಿದು, ಜಿಗಿಯುವುದು, ಎಷ್ಟು ಜಿಗಿತ ಜಿಗಿದೆ ಎಂದು ಎಣಿಕೆ (Count) ಮಾಡುವುದು, ವಿವಿಧ ರೀತಿಯಲ್ಲಿ ಹಗ್ಗವನ್ನು ಬಳಸಿ ಆಟ ಜಂಪಿಂಗ್ ಆಟ ಆಡಿದ್ದು ನಿಮಗೆ ನೆನಪಿರಬೇಕು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಕ್ಕಳು ಹಲವು ತರಹದ ದೈಹಿಕ ವ್ಯಾಯಾಮ ನೀಡುವ ಆಟಗಳನ್ನು ಆಡುತ್ತಾರೆ. ಅದನ್ನು ನೀವು ನೋಡಿರಬಹುದು. ಕೇವಲ ಹಗ್ಗ ನೆಗೆಯುವುದು ದೈಹಿಕ ವ್ಯಾಯಾಮಕ್ಕೆ ಮಾತ್ರವಲ್ಲದೇ ಅದೊಂದು ಮನರಂಜನೆ ನೀಡುವ ಸಂತೋಷದಿಂದ ಆಡುವ ಆಟ. ಇನ್ನು ಹಗ್ಗದಲ್ಲಿ ಜಂಪಿಂಗ್ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡುತ್ತದೆ.

    ಚಿಕ್ಕವರಿರುವಾಗ ಹಗ್ಗದಿಂದ ಜಂಪಿಂಗ್ ಮಾಡಿ ಆಟವಾಡಿದ್ದು ನೆನಪಿದೆಯೇ?

    ಚಿಕ್ಕವರಿರುವಾಗ ಹಗ್ಗದಿಂದ ಜಂಪಿಂಗ್ ಮಾಡಿ ಆಡುವ ಈ ಆಟ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದು ಕೊಡುತ್ತದೆ ಅನ್ನೋದು ಗೊತ್ತಿರಲ್ಲ. ಆದರೆ ದೊಡ್ಡವರಾಗುತ್ತಿದ್ದಂತೆಯೇ ಹಗ್ಗ ಜಿಗಿತವನ್ನು ತೂಕ ಇಳಿಕೆ, ಆರೋಗ್ಯಕರ ಜೀವನಕ್ಕಾಗಿ ವೈದ್ಯರು, ತಜ್ಞರು ಶಿಫಾರಸು ಮಾಡುತ್ತಾರೆ.

    ಆದರೆ ವ್ಯಕ್ತಿ ದೊಡ್ಡವನಾಗುತ್ತಿದ್ದಂತೆ ದೈಹಿಕ ಚಟುವಟಿಕೆಗಳಿಂದ ದೂರವುಳಿಯುತ್ತಾ ಹೋಗುತ್ತಾನೆ. ಹೀಗಾಗಿ ಅನಾರೋಗ್ಯ ವಯಸ್ಸಾಗುತ್ತಿದ್ದಂತೆ ಕಾಡಲು ಶುರು ಮಾಡುತ್ತದೆ. ಹಾಗಾಗಿ ವ್ಯಾಯಾಮ, ಜಂಪಿಂಗ್ ಜಾಕ್ಸ್, ಯೋಗ, ಧ್ಯಾನ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂದು ನಾವು ಹಗ್ಗ ಜಿಗಿತದಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ

    ತೂಕ ಮತ್ತು ಅನಾರೋಗ್ಯಕರ ಜೀವನಶೈಲಿ ತಪ್ಪಿಸಲು ಹಗ್ಗದ ಜಂಪಿಂಗ್

    ನಿಮ್ಮ ಹೆಚ್ಚುತ್ತಿರುವ ತೂಕ ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ನೀವು ಬದಲಾವಣೆ ಮಾಡಿಕೊಳ್ಳಲೇಬೇಕು. ಈಗಂತೂ ಮಕ್ಕಳು ಬಾಲ್ಯದಲ್ಲಿ ಯಾವುದೇ ದೈಹಿಕ ಚಟುವಟಿಕೆಗೆ ಒಗ್ಗಿಕೊಳ್ಳದೇ, ಹೆಚ್ಚು, ಮೊಬೈಲ್ ಗೇಮ್, ಕಂಪ್ಯೂಟರ್, ಸೋಶಿಯಲ್ ಸೈಟ್, ಟಿವಿ ಮುಂದೆ ಹೆಚ್ಚು ಸಮಯ ಕಳೆಯುತ್ತಾರೆ.

    ಹಾಗಾಗಿ ಇತ್ತೀಚಿನ ದಿನಗಳಲ್ಲಿ ಬಾಲ್ಯದಿಂದಲೇ ಮಕ್ಕಳು ದೃಷ್ಟಿ ಸಮಸ್ಯೆ, ಬೊಜ್ಜು, ವಯಸ್ಕರರಲ್ಲಿ ಹಾರ್ಮೋನ್ ಸಮಸ್ಯೆ, ಮಂಡಿ ನೋವು, ಮಧುಮೇಹದಂತ ಕಾಯಿಲೆಗಳು ಬೆನ್ನು ಹತ್ತುತ್ತಿವೆ. ಅದೇನೇ ಇರಲಿ. ಈಗ ಎಲ್ಲೆಲ್ಲೂ ಫಿಟ್ ನೆಸ್, ಜಿಮ್ ಹುಚ್ಚು ಸಾಕಷ್ಟು ಜನರಲ್ಲಿ ಹವ್ಯಾಸವಾಗಿ ಬೆಳೆದಿದೆ.

    ಜಂಪಿಂಗ್ ಹಗ್ಗದ ಪ್ರಯೋಜನಗಳು

    - ಜಂಪಿಂಗ್ ಹಗ್ಗವು ತೂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನೀವು ಅನೇಕ ರೋಗಗಳಿಂದ ದೂರವಿರಬಹುದು.

    - ಇದು ನಿಮ್ಮ ರಕ್ತ ಪರಿಚಲನೆಯನ್ನು ಉತ್ತಮವಾಗಿಡುತ್ತದೆ. ನೀವು ಪ್ರತಿದಿನ 10 ನಿಮಿಷ ಹಗ್ಗದಲ್ಲಿ ಜಂಪಿಂಗ್ ಮಾಡಿದರೆ ಅದು ನಿಮ್ಮನ್ನು ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರಿಸುತ್ತದೆ. ಅದೇ ಸಮಯದಲ್ಲಿ, ಉಸಿರಾಟದ ತೊಂದರೆ ಇರುವವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಮಾಡಬೇಕು.

    - ಹಗ್ಗ ಜಿಗಿಯುವುದರಿಂದ ಎಲುಬುಗಳಲ್ಲಿ ನೋವಿನ ದೂರು ಇರುವುದಿಲ್ಲ. ಹಾಗೆಯೇ ನಿಮ್ಮ ಬಿಪಿ ಸಹ ಸಾಮಾನ್ಯವಾಗಿರುತ್ತದೆ. ತುಂಬಾ ಟೆನ್ಶನ್ ನಲ್ಲಿ ಬದುಕುವ ಇಂಥವರು ಹಗ್ಗದಿಂದ ಜಂಪ್ ಮಾಡಬೇಕು. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ನೀವು ಉತ್ತಮವಾಗುತ್ತೀರಿ.

    ಹಗ್ಗದಲ್ಲಿ ಜಂಪಿಂಗ್ ಮಾಡುವಾಗ ಈ ವಿಷಯಗಳನ್ನು ನೆನಪಿಡಿ

    - ಯಾವುದೇ ವ್ಯಕ್ತಿ ಖಾಲಿ ಹೊಟ್ಟೆಯಲ್ಲಿ ಹಗ್ಗದ ಜಂಪಿಂಗ್ ಮಾಡಬಾರದು. ಹಾಗೆ ಮಾಡುವುದರಿಂದ ಸೆಪ್ಟಮ್ನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ.

    - ಅದೇ ಸಮಯದಲ್ಲಿ, ಆಹಾರವನ್ನು ಸೇವಿಸಿದ ನಂತರವೂ ಹಗ್ಗದಲ್ಲಿ ಜಂಪಿಂಗ್ ಮಾಡವುದನ್ನು ತಪ್ಪಿಸಿ. ಊಟದ ನಂತರ ಕನಿಷ್ಠ ಒಂದು ಗಂಟೆ ಅಂತರವಿರಲಿ.

    ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

    - ಹಗ್ಗವನ್ನು ಜಂಪಿಂಗ್ ಮಾಡುವ ಮೊದಲು ಲಘು ವ್ಯಾಯಾಮ ಮಾಡಿ, ಇದು ಹಗ್ಗವನ್ನು ಜಂಪಿಂಗ್ನಲ್ಲಿ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.
    Published by:renukadariyannavar
    First published: