• Home
  • »
  • News
  • »
  • lifestyle
  • »
  • Valentine's Day Dinner: ಪ್ರೇಮಿಗಳ ದಿನ ರೊಮ್ಯಾಂಟಿಕ್ ಡಿನ್ನರ್ ಗೆ ಬೆಂಗಳೂರಿನ ಬೆಸ್ಟ್ ರೆಸ್ಟೊರೆಂಟ್ ಪಟ್ಟಿ ಇಲ್ಲಿದೆ, ಈಗ್ಲೇ ಪ್ಲಾನ್ ಮಾಡಿ

Valentine's Day Dinner: ಪ್ರೇಮಿಗಳ ದಿನ ರೊಮ್ಯಾಂಟಿಕ್ ಡಿನ್ನರ್ ಗೆ ಬೆಂಗಳೂರಿನ ಬೆಸ್ಟ್ ರೆಸ್ಟೊರೆಂಟ್ ಪಟ್ಟಿ ಇಲ್ಲಿದೆ, ಈಗ್ಲೇ ಪ್ಲಾನ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Romantic Restaurants In Bengaluru: ನಿಮ್ಮ ಸಂಗಾತಿಗೆ ವಿಶೇಷ ಡಿನ್ನರ್​​ (Dinner)  ಸರ್ಪ್ರೈಸ್ ನೀಡುವುದರಿಂದ ಹಿಡಿದು ಸಣ್ಣ ಹ್ಯಾಂಗ್​ ಔಟ್​ (Hangout) ಮಾಡುವುದು ಸಹ ವಿಶೇಷವಾಗಿರಬೇಕು. ಹಾಗಾದ್ರೆ ಈ ಬಾರಿ ಪ್ರೇಮಿಗಳ ದಿನ ಆಚರಿಸಲು ಬೆಸ್ಟ್ ರೊಮ್ಯಾಂಟಿಕ್ ರೆಸ್ಟೋರೆಂಟ್​ಗಳನ್ನು ಹುಡುಕುತ್ತಿದ್ರೆ ಇಲ್ಲಿದೆ ನೋಡಿ. 

ಮುಂದೆ ಓದಿ ...
  • Share this:

ನಿಮ್ಮ ಸಂಗಾತಿಯನ್ನು (Partner) ರೊಮ್ಯಾಂಟಿಕ್​​ ಡೇಟ್​ಗೆ (Romantic Date) ಎಲ್ಲಿಗೆ ಕರೆದುಕೊಂಡು ಹೊಗಬೇಕು ಎನ್ನುವ ಯೋಚನೆ ಬರುವುದು ಸಹಜ. ಈ ಬೆಂಗಳೂರಿನ (Bengaluru) ಗಾಳಿ ಮತ್ತು ಹಸಿರು ತುಂಬಿದ ಕೆಲ ಸ್ಥಳಗಳು ತಮ್ಮದೇ ಆದ ಸುಂದರ ಆಕರ್ಷಣೆಯನ್ನು ಹೊಂದಿದ್ದರೂ, ಪ್ರೇಮಿಗಳ ದಿನವನ್ನು (Valentines Day)  ವಿಭಿನ್ನವಾಗಿ ಆಚರಿಸುವುದು ಬಹಳ ಮುಖ್ಯ. ಇದು ಅದೆಷ್ಟೋ ಪ್ರೇಮಿಗಳ ಬದುಕಿನಲ್ಲಿ ಬದಲಾವಣೆ ತರುತ್ತದೆ. ನಿಮ್ಮ ಸಂಗಾತಿಗೆ ವಿಶೇಷ ಡಿನ್ನರ್​​ (Dinner)  ಸರ್ಪ್ರೈಸ್ ನೀಡುವುದರಿಂದ ಹಿಡಿದು ಸಣ್ಣ ಹ್ಯಾಂಗ್​ ಔಟ್​ (Hangout) ಮಾಡುವುದು ಸಹ ವಿಶೇಷವಾಗಿರಬೇಕು. ಹಾಗಾದ್ರೆ ಈ ಬಾರಿ ಪ್ರೇಮಿಗಳ ದಿನ ಆಚರಿಸಲು ಬೆಸ್ಟ್ ರೊಮ್ಯಾಂಟಿಕ್ ರೆಸ್ಟೋರೆಂಟ್​ಗಳನ್ನು ಹುಡುಕುತ್ತಿದ್ರೆ ಇಲ್ಲಿದೆ ನೋಡಿ. 


ಟೋಸ್ಟ್ ಮತ್ತು ಟಾನಿಕ್, ಅಶೋಕ್ ನಗರ್


ನಗರದ ಅತ್ಯುತ್ತಮ G&T ಬಾರ್‌ಗಳ ಒಂದಾದ NYC ಈಸ್ಟ್ ವಿಲೇಜ್ ನಲ್ಲಿರುವ ಈ ರೆಸ್ಟೋರೆಂಟ್​ನಲ್ಲಿ ನೀವು ಕಳೆದುಹೋಗುವುದು ಸತ್ಯ.  ಸ್ಲೀಪರ್ ವುಡ್ ರೂಫ್ ಅಡಿಯಲ್ಲಿ, ಟೋಸ್ಟ್ ಮತ್ತು ಟಾನಿಕ್  ನಿಮಗೆ ವಿಭಿನ್ನ ಅನುಭವ ನೀಡುತ್ತದೆ. ಪೀಚಿ ಕೀನ್, ಸೇಜ್ ಟಾನಿಕ್ ಮತ್ತು ಕೊತ್ತಂಬರಿ ಐಸ್‌ನೊಂದಿಗೆ ಮಸಾಲೆಯುಕ್ತ ಮತ್ತು ಮೇರಿ ಜೇನ್ ಬ್ಲೂಬೆರ್ರಿ ಮತ್ತು ರೋಸ್ಮರಿ ಟಾನಿಕ್ ವಾಟರ್‌ನಂತಹ ಕೆಲವು ಕಾಕ್‌ಟೈಲ್‌ಗಳನ್ನು  ನೀವಿಲ್ಲಿ ಟ್ರೈ ಮಾಡಲೇಬೇಕು. ಅಲ್ಲದೇ ನಿಮ್ಮ ರುಚಿಗೆ ತಕ್ಕಂತೆ ಮಾಂಸಾಹಾರವನ್ನು ಸಹ ಈ ರೆಸ್ಟೋರೆಂಟ್​ ಒದಗಿಸುತ್ತದೆ.


ಸ್ಥಳ: 14/1, ವುಡ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು.


ಬಿಜಿಸ್ ಪೂಲ್‌ಸೈಡ್ ಬಾರ್ ಮತ್ತು ಗ್ರಿಲ್, ಬೆಳ್ಳಂದೂರು


ಇದನ್ನೂ ಓದಿ: ಪ್ರೇಮಿಗಳ ದಿನಕ್ಕೂ ಮುಂಚೆ ಈ ದಿನಗಳನ್ನು ಮಿಸ್​ ಮಾಡ್ದೇ ಆಚರಿಸಿ


ನೀವು ಉತ್ತಮ ಆಹಾರ ಮತ್ತು ಪಾನೀಯಗಳೊಂದಿಗೆ ಸಿಂಪ್ ಸಂಜೆಯನ್ನು ಎಂಜಾಯ್ ಮಾಡಬೇಕು ಎಂದರೆ, ಕೋರ್ಟ್‌ಯಾರ್ಡ್‌ನಲ್ಲಿರುವ ಪೂಲ್‌ಸೈಡ್‌ ನಿಮಗೆ ಉತ್ತಮ ಆಯ್ಕೆ. BG ಯ ಪೂಲ್‌ಸೈಡ್ ಬಾರ್ ಮತ್ತು ಗ್ರಿಲ್ ಅಮೆರಿಕನ್ ಮತ್ತು ಭಾರತೀಯ ಶೈಲಿಯ ಆಹಾರಗಳನ್ನು ಒದಗಿಸುತ್ತಿದ್ದು, ನ್ಯಾಚೋಸ್ ಮತ್ತು ಚಿಕನ್ ಪಾಪ್‌ಕಾರ್ನ್‌ ಅನ್ನು ನೀವಿಲ್ಲಿ ಟ್ರೈ ಮಾಡಲೇಬೇಕು.


ಸ್ಥಳ: ಮಾರತಹಳ್ಳಿ - ಸರ್ಜಾಪುರ ಹೊರ ವರ್ತುಲ ರಸ್ತೆ, ಬೆಳ್ಳಂದೂರು, ಬೆಂಗಳೂರು.


 Tiamo ಸೋಮೇಶ್ವರಪುರ


ಟಿಯಾಮೊ ನೀಡುವ ಅನುಭವವನ್ನು ವರ್ಣಿಸುವುದು ಸುಲಭವಲ್ಲ. ಆಲ್ಫ್ರೆಸ್ಕೊ ಕ್ಯಾಂಡಲ್‌ಲೈಟ್ ಟೇಬಲ್‌ಗಳಿಂದ ಹಿಡಿದು ಹೊಳೆಯುವ ಬೆಲ್ಲಿನಿಸ್‌ನವರೆಗೆ ನಿಮ್ಮನ್ನ ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಪ್ರೇಮಿಗಳ ದಿನವನ್ನು ಹೇಗೆ ಆಚರಿಸುವುದು ಎಂಬ ಚಿಂತೆಯನ್ನು ಇದು ದೂರ ಮಾಡುತ್ತದೆ.


ಸ್ಥಳ: 25/3, ಕೆನ್ಸಿಂಗ್ಟನ್ ರಸ್ತೆ, ಸೋಮೇಶ್ವರಪುರ, ಹಲಸೂರು.


Grasshopper, ಬನ್ನೇರುಘಟ್ಟ ರಸ್ತೆ


ಬಿದಿರಿನ ಪೊದೆಗಳು ಮತ್ತು ತಾಜಾ ಹೂವುಗಳು ಇಲ್ಲಿ ನಿಮ್ಮನ್ನ ಸ್ವಾಗತಿಸುತ್ತದೆ. ಇಲ್ಲಿನ ವಾತಾವರಣ ನಿಮ್ಮ ಡೇಟಿಂಗ್​ಗೆ ಉತ್ತಮವಾದ ಸ್ಥಳ ಎನ್ನಬಹುದು. ನೀವು ಇಲ್ಲಿ ಮೊದಲೇ ಯಾವ ಆಹಾರಗಳು ಬೇಕು ಎಂದು ಬುಕ್ ಮಾಡಿದ್ದರೆ, ಯಾವುದು ಆರ್ಡರ್ ಮಾಡಬೇಕು ಎಂಬ ಚಿಂತೆಯಿಲ್ಲದೇ ನೀವು ಸಂಗಾತಿಯೊಂದಿಗೆ ಖುಷಿಯ ಸ್ಥಳವನ್ನು ಕಳೆಯಬಹುದು. ಇಲ್ಲಿ ಕ್ಯಾಂಡಲ್​ ಲೈಟ್​ ಡಿನ್ನರ್​ ಪ್ಲ್ಯಾನ್​ ಮಾಡಿದರೆ ನಿಜಕ್ಕೂ ಮರೆಯಲಾಗದ ದಿನವಾಗುತ್ತದೆ.


ಸ್ಥಳ: 45, ಬನ್ನೇರುಘಟ್ಟ ಮುಖ್ಯ ರಸ್ತೆ, ಮೀನಾಕ್ಷಿ ದೇವಸ್ಥಾನದ ಹತ್ತಿರ, ಕಾಳೇನ ಅಗ್ರಹಾರ, ಬೆಂಗಳೂರು.


ಗ್ರೀನ್ ಥಿಯರಿ, ಕಾನ್ವೆಂಟ್ ರಸ್ತೆ


ಗ್ರೀನ್ ಥಿಯರಿಯ ಸುಂದರ ಪರಿಸರದಲ್ಲಿ ನೀವು ನಿಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಮೃದುವಾದ ಬೆಳಕು ಅಥವಾ ಮರದ ಕ್ಯಾನೋಪಿಗಳ ಅಡಿಯಲ್ಲಿ ನಿಮ್ಮ ದಿನ ಹೆಚ್ಚು ಸುಂದರವಾಗಿರುತ್ತದೆ. ಇಲ್ಲಿನ ಮೆನುವಿನಲ್ಲಿ ಸಹ ನಿಮಗೆ ಬಹಳಷ್ಟು ರುಚಿಕರ ಆಹಾರಗಳಿದೆ.


ಇದನ್ನೂ ಓದಿ: ಮೊದಲ ಬಾರಿಗೆ Valentines Day ಆಚರಿಸುತ್ತಿದ್ರೆ ಈ ಟಿಪ್ಸ್ ನಿಮಗಾಗಿ


ಸ್ಥಳ: ಗ್ರೀನ್ ಥಿಯರಿ, 15, ಕಾನ್ವೆಂಟ್ ರಸ್ತೆ, ಶಾಂತಲಾ ನಗರ, ರಿಚ್ಮಂಡ್ ಟೌನ್, ಬೆಂಗಳೂರು.

Published by:Sandhya M
First published: