Cancer: ಗರ್ಭಿಣಿಯರಲ್ಲಿ ಹೆಚ್ಚುತ್ತಿದೆಯಾ ಕ್ಯಾನ್ಸರ್? ಇದಕ್ಕೆ ಈ ವಸ್ತುಗಳೇ ಕಾರಣವೇ?

ಸಂಶೋಧನೆಗಳು ಗರ್ಭಿಣಿಯರು ಮತ್ತು ಭ್ರೂಣಗಳ ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತವೆ. ಏಕೆಂದರೆ ಈ ರಾಸಾಯನಿಕಗಳಲ್ಲಿ ಕೆಲವು ಕ್ಯಾನ್ಸರ್ ಜನಕಗಳು ಮತ್ತು ಬೆಳವಣಿಗೆಗೆ ಅಡ್ಡಿಯಾಗುವ ವಿಷಕಾರಿ ಅಂಶಗಳು ಈ ರಾಸಾಯನಿಕಗಳಲ್ಲಿ ಇರುತ್ತವೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಹೆಣ್ಣು ಗರ್ಭವತಿಯಾದಾಗ (pregnant) ಆಕೆಯಮನೆಯವರು ಅವಳನ್ನು ತುಸು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು ಸರ್ವೇಸಾಮಾನ್ಯವಾದ ಸಂಗತಿ ಆಗಿದೆ. ಗರ್ಭಿಣಿ ಎಂದು ಗೊತ್ತಾದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಆಹಾರದ (Food) ಬಗ್ಗೆ ಎಚ್ಚರಿಕೆವಹಿಸಿಬೇಕು. ಹೆಚ್ಚು ಮಾನಸಿಕ ಒತ್ತಡ (Mental stress) ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ಚೆಕಪ್ (Checkup) ಮಾಡಿಸಬೇಕು ಈ ರೀತಿಯೆಲ್ಲಾ ಮಾರ್ಗದರ್ಶನ ನೀಡುತ್ತಾರೆ. ಮನೆಯವರ ಕೆಲವು ಸಲಹೆಗಳು ಕೇವಲ ನಂಬಿಕೆ ಅಥವಾ ಪೂರ್ಣ ಸತ್ಯವಾಗಿರುವುದಿಲ್ಲ. ಇನ್ನು ವೈದ್ಯರ ಸಲಹೆಗಳಲ್ಲಿ (Doctor's advice) ವೈಜ್ಞಾನಿಕ ಸತ್ಯವಿರುತ್ತದೆ.


ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚುತ್ತಿರಲು ಕಾರಣಗಳೇನು?
ಮಹಿಳೆಯರ ದೇಹ ಪ್ರತಿ ಹಂತದಲ್ಲೂ ಬದಲಾಗುತ್ತಿರುತ್ತದೆ. ಮುಟ್ಟಿನ ಸಂದರ್ಭದಲ್ಲಿ, ಗರ್ಭಧಾರಣೆ ವೇಳೆ, ಹೆರಿಗೆ ಹಾಗೂ ಹೆರಿಗೆಯ ನಂತರ ಹೀಗೆ ಅನೇಕ ಬಾರಿ ಹಾರ್ಮೋನ್ ಏರುಪೇರಾಗುತ್ತದೆ. ಆದ್ರೆ ಇದು ಸಾಮಾನ್ಯವೆಂದುಕೊಳ್ಳುವ ಬದಲು ಉತ್ತಮ ಚಿಕಿತ್ಸೆ ಪಡೆದರೆ ಎಂತಹ ರೋಗವನ್ನಾದರೂ ದೂರ ಮಾಡಬಹುದು.


ಆದರೆ ಇಲ್ಲೊಂದು ಸಂಶೋಧಕ ತಂಡವು ಮಹಿಳೆಯರಲ್ಲಿ ಕಾನ್ಸರ್‌ ರೋಗ ಹೆಚ್ಚಾಗುತ್ತಿದ್ದು ಇದಕ್ಕೆ ಕಾರಣ ನಾವು ದಿನನಿತ್ಯ ಬಳಸುವ ಪಾತ್ರೆ ತೊಳೆಯುವ ಸಾಬೂನಿನಲ್ಲಿನ ರಾಸಾಯನಿಕಗಳು, ಕೂದಲಿಗೆ ಹಚ್ಚುವ ಬಣ್ಣದಲ್ಲಿರುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ ವಸ್ತುಗಳಲ್ಲಿ ಇರುವ ರಾಸಾಯನಿಕಗಳಿಂದ ಎಂಬುದಾಗಿ ಉಲ್ಲೇಖಿಸಿದೆ. ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿಯೋಣ.


ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರಾಸಾಯನಿಕಗಳು
ಗರ್ಭಿಣಿಯರಲ್ಲಿ ಕ್ಯಾನ್ಸರ್‌ ಅಪಾಯ ಹೆಚ್ಚಾಗುತ್ತಿರುವ ಹಿನ್ನೆಲೆ ಕುರಿತು ಸಂಶೋಧಕರು “ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗರ್ಭಿಣಿಯರು ಮೆಲಮೈನ್, ಸೈನೂರಿಕ್ ಆಮ್ಲ ಮತ್ತು ಆರೊಮ್ಯಾಟಿಕ್ ಅಮೈನ್‌ಗಳಂತಹ ರಾಸಾಯನಿಕಗಳಿಗೆ ಬಲಿಯಾಗುತ್ತಿದ್ದಾರೆ. ಈ ರಾಸಾಯನಿಕಗಳು ಗರ್ಭಿಣಿಯರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಶಿಶುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ” ಎಂದು ಹೇಳಿದರು.


ಅಧ್ಯಯನ ಹೇಗೆ ನಡೆಯಿತು?
ಈ ಅಧ್ಯಯನದ ಮಾಹಿತಿಯನ್ನು ಜರ್ನಲ್ ಕೆಮೋಸ್ಫಿಯರ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಯುಸಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ಈ ಸಂಶೋಧನೆಯ ಅಧ್ಯಯನವನ್ನು ನಡೆಸಿದ್ದಾರೆ. ಮೆಲಮೈನ್ ಮತ್ತು ಸೈನೂರಿಕ್ ಆಮ್ಲವು ಅಧ್ಯಯನದಲ್ಲಿ ಭಾಗವಹಿಸಿದ ಬಹುತೇಕ ಎಲ್ಲರ ಮಾದರಿಗಳಲ್ಲಿ ಕಂಡುಬಂದಿದೆ. ಆದರೆ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಮಹಿಳೆಯರಲ್ಲಿ ಮತ್ತು ತಂಬಾಕನ್ನು ಹೆಚ್ಚು ಸೇವಿಸುವವರಲ್ಲಿ ಕಂಡುಬಂದಿವೆ.


ಇದನ್ನೂ ಓದಿ:  Dementia Disease: 60 ವರ್ಷ ವಯಸ್ಸಿನವರಲ್ಲಿ ಹೆಚ್ಚುತ್ತಿದೆ ಬುದ್ಧಿಮಾಂದ್ಯ ಕಾಯಿಲೆ, ಹೀಗೆ ತಪ್ಪಿಸಿ

ಸಾಮಾನ್ಯವಾಗಿ ವಿವಿಧ ರೀತಿಯ ವರ್ಣಗಳು ಮತ್ತು ವರ್ಣದ್ರವ್ಯಗಳನ್ನು ಒಳಗೊಂಡಿರುವ ಉತ್ಪನ್ನಗಳಲ್ಲಿ ಬಳಸಲಾಗುವ ನಾಲ್ಕು ಆರೊಮ್ಯಾಟಿಕ್ ಅಮೈನ್‌ ರಾಸಾಯನಿಕಗಳು ಅಧ್ಯಯನದಲ್ಲಿ ಭಾಗವಹಿಸಿದ ಬಹುತೇಕ ಎಲ್ಲಾ ಗರ್ಭಿಣಿಯರಲ್ಲಿ ಕಂಡು ಬಂದಿವೆ.


ಯಾವೆಲ್ಲಾ ರೀತಿಯಲ್ಲಿ ರಾಸಾಯನಿಕಗಳು ದೇಹಕ್ಕೆ ಸೇರಿಕೊಳ್ಳುತ್ತಿವೆ ಗೊತ್ತಾ?
ಜನರು ವಿವಿಧ ರೀತಿಯಲ್ಲಿ ಮೆಲಮೈನ್ ಮತ್ತು ಆರೊಮ್ಯಾಟಿಕ್ ಅಮೈನ್‌ಗಳಿಗೆ ಬಲಿಯಾಗುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ, ಅವರು ಉಸಿರಾಡುವ ಗಾಳಿಯ ಮೂಲಕ, ಕಲುಷಿತ ಆಹಾರವನ್ನು ತಿನ್ನುವ ಮೂಲಕ ಅಥವಾ ಮನೆಯ ಧೂಳನ್ನು ಸೇವಿಸುವ ಮೂಲಕ, ಹಾಗೆಯೇ ಕುಡಿಯುವ ನೀರಿನಿಂದ ಅಥವಾ ಪ್ಲಾಸ್ಟಿಕ್, ಬಣ್ಣಗಳು ಮತ್ತು ವರ್ಣದ್ರವ್ಯಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ಈ ರಾಸಾಯನಿಕಗಳು ದೇಹದ ಒಳ ಸೇರುತ್ತಿವೆ.


"ಈ ರಾಸಾಯನಿಕಗಳು ಕ್ಯಾನ್ಸರ್ ಮತ್ತು ದೇಹದ ಬೆಳವಣಿಗೆಗೆ ಅತ್ಯಂತ ವಿಷಕಾರಿ ಆಗಿದೆ. ಇದಕ್ಕೆ ಸಂಬಂಧಿಸಿರುವ ಕಾರಣದಿಂದ ಈ ರಾಸಾಯನಿಕಗಳ ಬಗ್ಗೆ ನಿಜಕ್ಕೂ ಕಾಳಜಿ ವಹಿಸಬೇಕಾಗಿದೆ. ಆದರೂ ಅವುಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುವುದಿಲ್ಲ" ಎಂದು ಯುಸಿಎಸ್‌ಎಫ್ ಅನ್ನು ನಿರ್ದೇಶಿಸುವ ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ಔಷಧದ ಪ್ರೊಫೆಸರ್ ಟ್ರೇಸಿ ಜೆ. ವುಡ್‌ರಫ್‌ ಅವರು ಹೇಳುತ್ತಾರೆ.


ಈ ಬಗ್ಗೆ ಗೀಹೇ ಚೋಯ್ ಏನಂದ್ರು?
ಮೆಲಮೈನ್ ಎಂಬ ರಾಸಾಯನಿಕವು ಡಿಶ್‌ವೇರ್, ಪ್ಲಾಸ್ಟಿಕ್‌ಗಳು, ನೆಲಹಾಸು, ಅಡಿಗೆ ಕೌಂಟರ್‌ಗಳು ಮತ್ತು ಕೀಟನಾಶಕಗಳಲ್ಲಿ ಕಂಡುಬರುತ್ತದೆ. ಸೈನೂರಿಕ್ ಆಮ್ಲವನ್ನು ಸೋಂಕುನಿವಾರಕವಾಗಿ, ಪ್ಲಾಸ್ಟಿಕ್ ಸ್ಥಿರಕಾರಿಯಾಗಿ ಮತ್ತು ಈಜುಕೊಳಗಳಲ್ಲಿ ಸ್ವಚ್ಛಗೊಳಿಸುವ ದ್ರಾವಕವಾಗಿ ಬಳಸಲಾಗುತ್ತದೆ. ಕೂದಲಿನ ಬಣ್ಣ, ಮಸ್ಕರಾ, ಹಚ್ಚೆ ಶಾಯಿ ಬಣ್ಣ, ತಂಬಾಕು ಹೊಗೆ ಮತ್ತು ಡೀಸೆಲ್‌ನ ಹೊಗೆಯಲ್ಲಿ ಆರೊಮ್ಯಾಟಿಕ್ ಅಮೈನ್‌ ರಾಸಾಯನಿಕಗಳು ಕಂಡುಬರುತ್ತವೆ.


ಇದನ್ನೂ ಓದಿ:  Heart Disease: ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ

"ನಮ್ಮ ಸಂಶೋಧನೆಗಳು ಗರ್ಭಿಣಿಯರು ಮತ್ತು ಭ್ರೂಣಗಳ ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತವೆ. ಏಕೆಂದರೆ ಈ ರಾಸಾಯನಿಕಗಳಲ್ಲಿ ಕೆಲವು ಕ್ಯಾನ್ಸರ್ ಜನಕಗಳು ಮತ್ತು ಬೆಳವಣಿಗೆಗೆ ಅಡ್ಡಿಯಾಗುವ ವಿಷಕಾರಿ ಅಂಶಗಳು ಈ ರಾಸಾಯನಿಕಗಳಲ್ಲಿ ಇರುತ್ತವೆ" ಎಂದು ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪೋಸ್ಟ್‌ ಡಾಕ್ಟರಲ್ ಲೇಖಕ ಗೀಹೇ ಚೋಯ್ ಹೇಳಿದರು.

Published by:Ashwini Prabhu
First published: