ಅತಿಯಾಗಿ ಹಾಲು ಕುಡಿದರೂ ಅನಾರೋಗ್ಯಕ್ಕೆ ತುತ್ತಾಗುವಿರಿ !

news18
Updated:May 23, 2018, 1:11 PM IST
ಅತಿಯಾಗಿ ಹಾಲು ಕುಡಿದರೂ ಅನಾರೋಗ್ಯಕ್ಕೆ ತುತ್ತಾಗುವಿರಿ !
news18
Updated: May 23, 2018, 1:11 PM IST
ನ್ಯೂಸ್ 18 ಕನ್ನಡ

ಪ್ರತಿನಿತ್ಯ ಹಾಲು ಕುಡಿಯುವುದರಿಂದ ಆರೋಗ್ಯ ವೃದ್ದಿಸುತ್ತದೆ ಎಂಬುದು ಎಲ್ಲರ ನಂಬಿಕೆ. ಆರೋಗ್ಯಕ್ಕೆ ಬೇಕಾದ ಅನೇಕ ಅಂಶಗಳು ಹಾಲಲ್ಲಿ ಕಂಡು ಬರುತ್ತದೆ. ಆದರೆ ಹಾಲು ಸೇವಿಸುವುದು ಎಷ್ಟು ಮುಖ್ಯವೋ, ಯಾವಾಗ ಸೇವಿಸುತ್ತೇವೆ ಎನ್ನುವುದೂ ಕೂಡ ಅಷ್ಟೇ ಮುಖ್ಯ. ವಿಪರೀತ ಹಾಲಿನ ಬಳಕೆಯಿಂದಲೂ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುವ ಸಾಧ್ಯತೆ ಇದೆ. ಇಂತಹ ಕೆಲವೊಂದು ಅಡ್ಡಪರಿಣಾಮಗಳ ಕುರಿತು ಇಲ್ಲಿ ತಿಳಿಸಲಾಗಿದೆ.

ರಾತ್ರಿಯಲ್ಲಿ ಹಾಲು ಕುಡಿಯುವ ಅಭ್ಯಾಸವಿದ್ದರೆ, ತಕ್ಷಣ ಮಲಗುವ ಅಭ್ಯಾಸ ಬದಲಿಸಿ. ಹಾಲು ಕುಡಿದ ಕೂಡಲೇ ಮಲಗುವುದರಿಂದ ಅನೇಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹಾಲನ್ನು ಸೇವಿಸಿದ ಬಳಿಕ ಮಲಗಲು ಕನಿಷ್ಠ ಎರಡು, ಮೂರು ಗಂಟೆಗಳ ಅಂತರವಿರಲಿ.

ಮನುಷ್ಯನ ದೇಹದಲ್ಲಿ ಆಮ್ಲಗಳ ಮತ್ತು ಕ್ಷಾರಗಳ ನಿಯಂತ್ರಣ ಅತ್ಯಗತ್ಯ. ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಆಮ್ಲೀಯ ಪ್ರಮಾಣ ಹೆಚ್ಚಾಗುತ್ತದೆ. ಇದರ ಪ್ರಮಾಣ ಹೆಚ್ಚಾದಂತೆ ದೇಹದಲ್ಲಿ ಆ್ಯಸಿಡ್ ಅಂಶ ಅಧಿಕವಾಗುವುದಲ್ಲದೆ, ಶರೀರದ ಮೇಲೆ ಪರಿಣಾಮ ಬೀರುತ್ತದೆ.

ಅನೇಕರಿಗೆ ಹಾಲು ಕುಡಿದರೆ ಅಲರ್ಜಿ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹಾಲಿನಲ್ಲಿ ಕಂಡು ಬರುವ ಪ್ರೊಟೀನ್​ಗಳು ಪ್ರತಿ ರಕ್ಷಣಾ ವ್ಯವಸ್ಥೆಯ ಮೇಲೆ ಬೀರುವ ಪ್ರತಿಕೂಲ ಪರಿಣಾಮವಾಗಿದೆ. ಹಾಲಿನಲ್ಲಿ ಸಾಧಾರಣವಾಗಿ ಅಧಿಕ ಪ್ರಮಾಣದ ಪ್ರೊಟೀನ್ ಕಂಡುಬರುತ್ತದೆ. ಇದು ದೇಹದ ಪ್ರತಿರಕ್ಷಾ ವ್ಯವಸ್ಥೆಯ ಮೇಲೆ ಅಡ್ಡಪರಿಣಾಮ ಬೀರುತ್ತದೆ.

ಹಾಲು ಸೇವನೆಯಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಹಾಗೆಯೇ ಇದು ಕೆಲವು ರೋಗಗಳನ್ನು ಸೃಷ್ಟಿಸುತ್ತದೆ. ಅನೇಕರಿಗೆ ಹಾಲು ಕುಡಿಯುದರಿಂದ ಆ್ಯಸಿಡಿಟಿ ಸಮಸ್ಯೆ ಕಾಣಿಸುತ್ತದೆ. ಇದು ಮುಂದೆ ವಿವಿಧ ರೀತಿಯ ತೊಂದರೆಗಳಿಗೆ ಎಡೆ ಮಾಡಿಕೊಡುತ್ತದೆ.

ಹಾಲಿನಲ್ಲಿ ಸಕ್ಕರೆ ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ಆಕ್ಸಿಡೆಟೀವ್ (Oxidative) ಒತ್ತಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.ಇದರಿಂದ ದೇಹದಲ್ಲಿರುವ ಜೀವಕೋಶಗಳು ನಿರ್ಜೀವವಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಹಾಲಿನಲ್ಲಿ ಸಕ್ಕರೆ ಬೆರೆಸಿ ಕುಡಿಯುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ.
First published:May 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...