Food: ದೋಸೆಯನ್ನು ಹೀಗೆ ತಿಂದ್ರೆ ರುಚಿ ಹೆಚ್ಚು ಅಂತೆ; ಫುಡ್ ಬ್ಲಾಗರ್ ತೋರಿಸಿರುವ ವಿಧಾನಕ್ಕೆ ಮೆಚ್ಚುಗೆ

ನಾವು ಹೊರಗೆ ಹೋಟೆಲ್‌ನಲ್ಲಿ ದೋಸೆಯನ್ನು ತಿನ್ನುವಾಗ ಕೆಲವು ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ. ವಿಶೇಷವಾಗಿ ಅದು ಔಪಚಾರಿಕ ಕೂಟವಾಗಿದ್ದರೆ ತುಂಬಾನೇ ಶಿಸ್ತನ್ನು ಪಾಲಿಸಬೇಕಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೋಸೆ (Dosa) ಮತ್ತು ಇಡ್ಲಿ (Idly) ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಅದರಲ್ಲೂ ದಕ್ಷಿಣ ಭಾರತದ (South Indins) ಮಂದಿಗೆ ಬೆಳಗ್ಗೆ ಉಪಾಹಾರಕ್ಕೆ ಅಲ್ಲದೆ ದಿನದ ಯಾವುದೇ ಸಮಯದಲ್ಲಿ ಇವೆರಡನ್ನು ನೀಡಿದರೂ ತುಂಬಾ ಅನುಭವಿಸಿ ತಿನ್ನುತ್ತಾರೆ ಎಂದು ಹೇಳಬಹುದು. ಅಲ್ಲದೆ ಭಾರತೀಯ ಪಾಕಪದ್ಧತಿಯಲ್ಲಿ ಅತ್ಯಂತ ಬೇಡಿಕೆಯ ಭಕ್ಷ್ಯಗಳು ಎಂದು ಇವೆರಡನ್ನು ಹೇಳಬಹುದು. ನಾವು ಈ ದಕ್ಷಿಣ ಭಾರತದ ಉಪಾಹಾರಗಳನ್ನು ಬಹುತೇಕವಾಗಿ ಪ್ರತಿಯೊಂದು ಭಾರತೀಯ ರೆಸ್ಟೋರೆಂಟ್‌ನಲ್ಲಿ (Restaurant) ಕಾಣುತ್ತೇವೆ ಮತ್ತು ಈ ದೋಸೆಯನ್ನು ನಾವು ಸೇವಿಸುವಾಗ ನಮಗೆ ಗೊತ್ತಿಲ್ಲದಂತೆ ನಮ್ಮ ಎರಡು ಕೈಗಳನ್ನು ಬಳಸುತ್ತೇವೆ.

ಹೀಗೆ ತಿನ್ನಿ ದೋಸೆಯನ್ನು

ಈ ಗರಿಗರಿಯಾದ ದೋಸೆಯೊಂದಿಗೆ ಸುವಾಸನೆ ಭರಿತ ಆಲೂಗೆಡ್ಡೆ ಪಲ್ಯವನ್ನು ಸ್ವಲ್ಪ ಸ್ಕೂಪ್ ಮಾಡುವುದು. ಅಂತಿಮವಾಗಿ ಅದನ್ನು ಬಿಸಿ ಮತ್ತು ಖಾರದ ಸಾಂಬಾರ್‌ನಲ್ಲಿ ಅದ್ದುಕೊಂಡು ಬಾಯಿಯೊಳಗೆ ಇರಿಸಿಕೊಳ್ಳುವುದು ದೋಸೆಯನ್ನು ಪರಿಪೂರ್ಣವಾಗಿ ಆನಂದಿಸುವ ಪರಿ ಎಂದು ಹೇಳಬಹುದು.

ಫುಡ್​ ಬ್ಲಾಗರ್​ ವಿಡಿಯೋಗೆ ಮೆಚ್ಚುಗೆ

ನಿಮ್ಮ ಮನೆಯಲ್ಲಿ ದೋಸೆಯನ್ನು ಆನಂದಿಸಲು ಇದು ಅತ್ಯುತ್ತಮ ಮಾರ್ಗವಾಗಿದ್ದರೂ, ನಾವು ಹೊರಗೆ ಹೋಟೆಲ್‌ನಲ್ಲಿ ದೋಸೆಯನ್ನು ತಿನ್ನುವಾಗ ಕೆಲವು ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ. ವಿಶೇಷವಾಗಿ ಅದು ಔಪಚಾರಿಕ ಕೂಟವಾಗಿದ್ದರೆ ತುಂಬಾನೇ ಶಿಸ್ತನ್ನು ಪಾಲಿಸಬೇಕಾಗುತ್ತದೆ. ಇಲ್ನೋಡಿ ಫುಡ್ ಬ್ಲಾಗರ್ ಒಬ್ಬರು ಇತ್ತೀಚೆಗೆ 'ಮಸಾಲಾ ದೋಸೆ ತಿನ್ನಲು ಸರಿಯಾದ ವಿಧಾನ' ತೋರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ ಮತ್ತು ಇದೀಗ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಕೆಲವು ಬೇರೆ ರೀತಿಯ ಅಭಿಪ್ರಾಯಗಳನ್ನು ಗಳಿಸಿದೆ.




ನೆಟ್ಟಿಗರ ಮನಗೆದ್ದ ವಿಡಿಯೋ

ಆಹಾರ ಸ್ಟೈಲಿಸ್ಟ್ ಮತ್ತು ಬ್ಲಾಗರ್, ಮಾನಸಿ ಶಿವ ರಾಠಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪ್ರೊಫೈಲ್‌ನಲ್ಲಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ದೋಸೆಯನ್ನು ಹೇಗೆ ತಿನ್ನಬೇಕು ಎಂದು ಅದರಲ್ಲಿ ಅವರು ವಿವರಿಸಿದ್ದರು .ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮದೇ ಆದ ವಿಭಿನ್ನವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇದನ್ನು ಓದಿ: ಮೊದಲ ಮಗುವಿಗೆ ಖರೀದಿಸಿದ ಈ ವಸ್ತುಗಳನ್ನು ಎರಡನೇ ಮಗುವಿಗೆ ನೀಡುವುದು ಹಾನಿಕರ

ಸಿಕ್ಕಾಪಟ್ಟೆ ವೈರಲ್​ ಆಯ್ತು ವಿಡಿಯೋ

ಕೆಲವರು ಈ ವಿಚಾರವು ತುಂಬಾನೇ ಸಹಾಯಕಾರಿ ಎಂದು ಭಾವಿಸಿದರು ಮತ್ತು ಅವರು ಹಂಚಿಕೊಂಡ ವಿಡಿಯೋವನ್ನು ತುಂಬಾನೇ ಶ್ಲಾಘಿಸಿದರೆ, ಅನೇಕರು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿದರು. ಕಳೆದ ಕೆಲವು ದಿನಗಳಲ್ಲಿ ಈ ವಿಡಿಯೋವನ್ನು 32,600 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ತಮ್ಮ ಕಾಮೆಂಟ್‌ಗಳನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಒಂದು ಚರ್ಚೆಯ ವಿಷಯವಾಗಿ ಹೊರಹೊಮ್ಮಿದ ವಿಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದಾರೆ. ಫೋರ್ಕ್ ಬಳಸಿ ದೋಸೆಯ ಮಧ್ಯದಲ್ಲಿ ಒಂದು ದೊಡ್ಡ ರಂಧ್ರವನ್ನು ಮಾಡುವ ಮೂಲಕ ದೋಸೆಯನ್ನು ಹೇಗೆ ತಿನ್ನಬೇಕು ಎಂಬುದನ್ನು ಸರಳ ವಿಡಿಯೋ ತೋರಿಸುತ್ತದೆ. ಅನೇಕ ನೆಟ್ಟಿಗರು ಇದನ್ನು ಮೆಚ್ಚಿಕೊಂಡು "ಇದೊಂದು ಅದ್ಭುತ ತಂತ್ರ", "ಪಾಪ.. ಇಷ್ಟು ದಿನ ನೀವು ಎಲ್ಲಿದ್ದಿರಿ", "ಧನ್ಯವಾದಗಳು, ಇದು ನನ್ನನ್ನು ಮುಜುಗರದಿಂದ ರಕ್ಷಿಸುತ್ತದೆ” ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಅತ್ಯಂತ ಅಪಾಯಕಾರಿ ವ್ಯಾಯಾಮಗಳು ಇವು? ತಜ್ಞರ ಸಲಹೆಯಿಲ್ಲದೆ ಮಾಡಬೇಡಿ!

ಇನ್ನೂ ಅನೇಕರು, ಈ ವಿಡಿಯೋವನ್ನು ಅಷ್ಟಾಗಿ ಇಷ್ಟ ಪಟ್ಟಿಲ್ಲ, ಅವರು "ಮಸಾಲಾ ದೋಸೆ ಶಿಷ್ಟಾಚಾರ ಹಂತ 1 ಚಮಚ ಮತ್ತು ಫೋರ್ಕ್ ಬಳಸದೆ ಇರುವುದು", "ಏನು? ದೋಸೆ ತಿನ್ನುವಾಗ ನೀವು ಚಮಚ ಅಥವಾ ಫೋರ್ಕ್ ಅನ್ನು ಬಳಸುವುದಿಲ್ಲ. ಇದು ಮುಜುಗರದ ಸಂಗತಿಯಾಗಿದೆ, ಇದು ನನ್ನ ಇಡೀ ದಿನದ ಮೂಡ್ ಹಾಳು ಮಾಡಿದೆ", "ತಪ್ಪು, ನೀವು ನಿಮ್ಮ ಕೈಗಳನ್ನು ಬಿಟ್ಟು ಬೇರೆ ಏನನ್ನೂ ಬಳಸುವುದಿಲ್ಲ", "ಒಂದು ದೋಸೆಯನ್ನು ನಿಮ್ಮ ಕೈಯಿಂದ ತಿನ್ನಲಾಗುತ್ತದೆ, ಫೋರ್ಕ್ ಮತ್ತು ಚಮಚವನ್ನು ಪ್ರತಿಯೊಬ್ಬರೂ ಬಳಸುವುದಿಲ್ಲ" ಎಂದು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

"ದೋಸೆ ತಿನ್ನಲು ಇದು ಖಂಡಿತವಾಗಿಯೂ ಸರಿಯಾದ ಮಾರ್ಗವಲ್ಲ, ಒಬ್ಬ ದಕ್ಷಿಣ ಭಾರತೀಯನಾಗಿ ನಾನು ಇದನ್ನು ಒಪ್ಪುವುದಿಲ್ಲ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ನೀವು ಫೋರ್ಕ್ ಅನ್ನು ಬಳಸುತ್ತಿದ್ದರೆ, ಅಲ್ಲಿಗೆ ಇದು ಸರಿಯಾದ ಮಾರ್ಗವಲ್ಲ" ಎಂದು ಹೇಳಿದರು.
Published by:Seema R
First published: