Rice Water: ಅಕ್ಕಿ ತೊಳೆದ ನೀರಿನ ಪ್ರಯೋಜನಗಳನ್ನು ಕೇಳಿದ್ರೆ ನೀವು ಚೆಲ್ಲೋದೇ ಇಲ್ಲ..!

ನಮ್ಮ ಹಿರಿಯರು ಅನ್ನ ಬಸಿದ ಗಂಜಿಗೆ ಉಪ್ಪು, ಮಜ್ಜಿಗೆ ಹಾಕಿ ಕುಡಿಯಲು ಕೊಡುತ್ತಿದ್ದರು. ದೇಹ ತಂಪಾಗಿರಲಿ ಎಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದರು.

ಅಕ್ಕಿ ತೊಳೆದ ನೀರ

ಅಕ್ಕಿ ತೊಳೆದ ನೀರ

  • Share this:

ಅಕ್ಕಿಯು (Rice) ಪ್ರಪಂಚದಾದ್ಯಂತ ಅತ್ಯಂತ ಪ್ರಮುಖವಾದ ಅಗತ್ಯವಾದ ಆಹಾರವಾಗಿದೆ. ರಕ್ತದಲ್ಲಿನ ಸಕ್ಕರೆ, ಹೃದಯದ ಆರೋಗ್ಯ, ಜೀರ್ಣಕಾರಿ ಗುಣಗಳು ಮತ್ತಿತರ ಪ್ರಯೋಜನಗಳಿಂದಾಗಿ ಜನಪ್ರಿಯತೆ ಪಡೆದಿದೆ. ಅದೇ ರೀತಿಯಾಗಿ ಅಕ್ಕಿ ತೊಳೆದ ನೀರು (Rice washed water) ಕೂಡ ಇತ್ತೀಚೆಗೆ ಪ್ರಾಮುಖ್ಯತೆ ಪಡೆದಿದೆ. ನಮ್ಮ ಹಿರಿಯರು ಅನ್ನ ಬಸಿದ ಗಂಜಿಗೆ ಉಪ್ಪು, ಮಜ್ಜಿಗೆ ಹಾಕಿ ಕುಡಿಯಲು ಕೊಡುತ್ತಿದ್ದರು. ದೇಹ ತಂಪಾಗಿರಲಿ ಎಂಬ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದರು. ಇದೀಗ ಅಕ್ಕಿ ತೊಳೆದ ನೀರು ಮುನ್ನೆಲೆಗೆ ಬಂದಿದೆ. ಅಕ್ಕಿ ನೆನೆಸಿದ ನೀರನ್ನು ಬಳಸಲು ಯೋಗ್ಯವಲ್ಲ  ಎಂದು ಎಸೆಯಲಾಗುತ್ತದೆ. ಏಕೆಂದರೆ ಆ ನೀರು ಒಳ್ಳೆಯದಲ್ಲ ಎಂಬ ತಪ್ಪು ಕಲ್ಪನೆ. ಆದರೆ ಇದು ಪೋಷಕಾಂಶಗಳ ಸಮೃದ್ಧಿಯ ಮಿಶ್ರಣ. ಚರ್ಮ, ಕೂದಲು ಆರೈಕೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಜೊತೆಗೆ ಕರುಳಿನ ಆರೋಗ್ಯಕ್ಕೂ ಇದು ಉತ್ತಮವಾಗಿದೆ.


ಹಾಗಾದರೆ ಅಕ್ಕಿ ನೀರಿನಿಂದ ದೊರೆಯುವ ಲಾಭಗಳು ಯಾವುವು?


1. ಹೊಳೆಯುವ, ಆರೋಗ್ಯಕರ ಕೂದಲು:
ಕ್ಲೀವ್‍ಲ್ಯಾಂಡ್ ಕ್ಲಿನಿಕ್ ಪ್ರಕಾರ, ಅಕ್ಕಿಯ ನೀರು ಇನೊಸಿಟಾಲ್‍ನ ಸಮೃದ್ಧ ಮೂಲವಾಗಿದೆ, ಇದು ಕೂದಲಿನ ಸೌಂದರ್ಯ ಹೆಚ್ಚಿಸುವ ಉತ್ಕರ್ಷಣ ನಿರೋಧಕವಾಗಿದೆ. ಹೆಚ್ಚುವರಿಯಾಗಿ, ಇದು ಮೆಗ್ನೀಸಿಯಮ್, ಸತು, ವಿಟಮಿನ್ ಬಿ ಮತ್ತು ಇ -ಯ ಪೌಷ್ಟಿಕಾಂಶಗಳ ಕಣಜವಾಗಿದೆ. ಇದು ನಿಮ್ಮ ಕೂದಲಿನ ಬುಡಕ್ಕೂ ಪ್ರಯೋಜನಕಾರಿಯಾಗಿದೆ.


2. ಜೀರ್ಣಕ್ರಿಯೆಗೆ ಸಹಾಯಕ
ಅಕ್ಕಿಯ ನೀರಿನಲ್ಲಿ ನಾರಿನ ಅಂಶ ಹೆಚ್ಚಳವಾಗಿದೆ. ಆರೋಗ್ಯಕರ ಕರುಳಿನ ಚಲನೆ ಉತ್ತೇಜಿಸುವ ಒಂದು ಅಂಶವಾದ ಇದು ಮಲಬದ್ಧತೆಯನ್ನು ತಡೆಯುತ್ತದೆ, ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.


ಇದನ್ನು ಓದಿ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ; ಮತ್ತೆ ಶೇ 3ರಷ್ಟು ಡಿಎ ಹೆಚ್ಚಳ

3. ಶಕ್ತಿ ವರ್ಧಕ:
ದೀರ್ಘಕಾಲದ ಆಯಾಸ ಅಥವಾ ಬಳಲಿಕೆಯಿಂದ ಬಳಲುತ್ತಿರುವವರಿಗೆ, ಬೇಯಿಸಿದ ಅನ್ನದಿಂದ ಪಡೆದ ಒಂದು ಲೋಟ ಅಕ್ಕಿ ನೀರು ನೀಡಿದರೆ ಸಾಕು ಅವರು ಆರಾಮಾಗಿ ಬಿಡುತ್ತಾರೆ. ಹೌದು ನಿಮಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ಕೆಲಸದಲ್ಲಿ, ಶಾಲೆಯಲ್ಲಿ ಅಥವಾ ಸ್ನೇಹಿತರೊಂದಿಗೆ ಹೆಚ್ಚು ಚಟುವಟಿಕೆಯಿಂದ ಇರಬೇಕಾದರೆ ಪ್ರತಿದಿನ ಬೆಳಗ್ಗೆ ಒಂದು ಲೋಟ ಅಕ್ಕಿ ನೀರನ್ನು ಕುಡಿಯಿರಿ. ಏಕೆಂದರೆ ಇದರಲ್ಲಿ ಆರೋಗ್ಯಕರ, ಕೆಫೀನ್ ರಹಿತ ಶಕ್ತಿ ವರ್ಧಕ ಇರುವುದರಿಂದ ಹೆಚ್ಚು ಉತ್ಸಾಹದಿಂದ ಇರುವಂತೆ ಮಾಡುತ್ತದೆ.


ಇದನ್ನು ಓದಿ: ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ವಾ? ಹಾಗಾದ್ರೆ ಈ ಚೀನೀ ವಾಸ್ತು ಅನುಸರಿಸಿ ಸಾಕು

4. ವಯಸ್ಸಾಗುವಿಕೆ ತಡೆಯುವ ಗುಣವಿದೆ
ಅಕ್ಕಿಯ ನೀರಿನಲ್ಲಿ ಅಮೈನೋ ಆಮ್ಲಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇವೆ. ಇದು ನಿಮ್ಮ ಚರ್ಮ ಕಳೆಗುಂದದಂತೆ ವಯಸ್ಸಾಗುವಿಕೆ ತಡೆಯುವ ಅಂಶಗಳನ್ನು ಹೊಂದಿವೆ. ಕಾಲಾನಂತರದಲ್ಲಿ, ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಅಕ್ಕಿಯ ನೀರು ಬಳಸುವುದರಿಂದ ಚರ್ಮದ ಕಾಂತಿ ಕಾಪಾಡಿಕೊಳ್ಳಬಹುದು.


5. ಜಲಸಂಚಯನ:
ಅಕ್ಕಿ ನೀರಿನಲ್ಲಿ ಖನಿಜಾಂಶಗಳಿವೆ. ಇದು ದೇಹದಲ್ಲಿ ಎಲೆಕ್ಟ್ರೋಲೈಟ್‍ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹವಾಮಾನ ಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿ ಮತ್ತು ಅಗತ್ಯ ಪೋಷಕಾಂಶಗಳನ್ನು ಕಳೆದುಕೊಳ್ಳದೆ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಅತಿಸಾರದಿಂದ ಬಳಲುತ್ತಿರುವ ರೋಗಿಗಳಿಗೆ ಇದು ಹೆಚ್ಚು ಸಹಾಯಕವಾಗಬಹುದು, ಅವರು ಅಸ್ವಸ್ಥರಾದಾಗ ಅವರ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಅದನ್ನು ಸಮತೋಲಗೊಳಿಸಲು ಆಯಾಸ ನೀಗಿಸಲು ಇದು ಸಹಾಯಕವಾಗಿದೆ.


First published: