Pregnancy: ಔಷಧ, ಮಾತ್ರೆ ಬಳಸದೇ ಗರ್ಭಾವಸ್ಥೆ ತಡೆಯಲು ರಿದಮ್ ಮೆಥಡ್! ಏನಿದು?

ರಿದಮ್ ಮೆಥಡ್ ನ್ನು ಕ್ಯಾಲೆಂಡರ್ ವಿಧಾನ ಎಂದೂ ಕರೆಯುತ್ತಾರೆ. ಗರ್ಭಾವಸ್ಥೆ ತಡೆಯುವ ಏಕೈಕ ಮಾರ್ಗವೆಂದರೆ ಅದು ರಿದಮ್ ಮೆಥಡ್. ಇದರಲ್ಲಿ ಮಹಿಳೆ ತನ್ನ ಋತುಚಕ್ರ ಮತ್ತು ಫಲವತ್ತತೆಯ ಸಮಯವನ್ನು ಟ್ರ್ಯಾಕ್ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಾಯಿಯಾಗುವುದು (Mother) ಪ್ರತಿಯೊಬ್ಬ (Every) ಮಹಿಳೆಯ (Women) ಕನಸು (Dream). ಆದರೂ ಸಹ ಕೆಲವೊಮ್ಮೆ ಕೆಲವು ಕಾರಣಗಳಿಂದ (Causes) ಮಹಿಳೆಯರು ಗರ್ಭಿಣಿಯಾಗಲು ಇಚ್ಛಿಸುವುದಿಲ್ಲ. ಮಹಿಳೆಯರು ಗರ್ಭಿಣಿಯಾಗಲು ಬಯಸದಿದ್ದಾಗ ಹೆಚ್ಚಾಗಿ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡುತ್ತಾರೆ. ಜನನ ನಿಯಂತ್ರಣಕ್ಕಾಗಿ ನೀವು ಮಾತ್ರೆ ಸೇವಿಸುವ ಅಗತ್ಯತೆ ಇಲ್ಲ. ಗರ್ಭಧಾರಣೆ ತಡೆಯಲು ನೀವು ನೈಸರ್ಗಿಕ ವಿಧಾನ ಸಹ ಬಳಸಬಹುದು. ಹಾಗಾಗಿ ನೀವೂ ಸಹ ಬೇಗನೆ ಅಥವಾ ತಾಯಿಯಾಗಲು ಬಯಸದಿದ್ದರೆ ಇದಕ್ಕಾಗಿ ಇಲ್ಲಿವೆ ಕೆಲವು ನೈಸರ್ಗಿಕ ಮಾರ್ಗಗಳು. ನೈಸರ್ಗಿಕವಾಗಿ ಗರ್ಭಧಾರಣೆ ತಡೆಯುವ ಈ ವಿಧಾನವನ್ನು ‘ರಿದಮ್ ಮೆಥಡ್’ ಎಂದು ಕರೆಯುತ್ತಾರೆ. ಹಾಗಿದ್ದರೆ ರಿದಮ್ ಮೆಥಡ್ ಬಗ್ಗೆ ನಾವು ಇಲ್ಲಿ ತಿಳಿಯೋಣ.

    ರಿದಮ್ ಮೆಥಡ್ ಎಂದರೇನು?

    ರಿದಮ್ ಮೆಥಡ್ ನ್ನು ಕ್ಯಾಲೆಂಡರ್ ವಿಧಾನ ಎಂದೂ ಕರೆಯುತ್ತಾರೆ. ಗರ್ಭಾವಸ್ಥೆ ತಡೆಯುವ ಏಕೈಕ ಮಾರ್ಗವೆಂದರೆ ಅದು ರಿದಮ್ ಮೆಥಡ್. ಇದರಲ್ಲಿ ಮಹಿಳೆ ತನ್ನ ಋತುಚಕ್ರ ಮತ್ತು ಫಲವತ್ತತೆಯ ಸಮಯವನ್ನು ಟ್ರ್ಯಾಕ್ ಮಾಡಬೇಕು.

    ತಿಂಗಳ ಕೆಲವು ದಿನಗಳಲ್ಲಿ ಮಹಿಳೆಯರು ಹೆಚ್ಚು ಫಲವತ್ತಾಗುತ್ತಾರೆ. ಅಂದರೆ ಆ ಸಮಯದಲ್ಲಿ ಗರ್ಭಧಾರಣೆಯ ಸಾಧ್ಯತೆ ತುಂಬಾ ಹೆಚ್ಚು.

    ನೀವು ಗರ್ಭಿಣಿಯಾಗಲು ಇಚ್ಛಿಸದಿದ್ದರೆ ಫಲವತ್ತಾದ ಸಮಯದಲ್ಲಿ ಲೈಂಗಿಕತೆ ತಪ್ಪಿಸಬೇಕು. ತಮ್ಮ ಫಲವತ್ತತೆಯ ಅವಧಿಯಲ್ಲಿ ಲೈಂಗಿಕತೆ ಹೊಂದುವ ಅನೇಕ ಮಹಿಳೆಯರು ಗರ್ಭಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡುತ್ತಾರೆ.

    ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಈ ರೀತಿ ಮಾಡಿ ನೋಡಿ

    ರಿದಮ್ ವಿಧಾನದಲ್ಲಿ ಮಹಿಳೆ ತನ್ನ ಅಂಡೋತ್ಪತ್ತಿ ಯಾವಾಗ ಸಂಭವಿಸುತ್ತದೆ ಎಂದು ಮೊದಲು ತಿಳಿಯಬೇಕು. ಋತುಚಕ್ರದಲ್ಲಿ ಅಂಡೋತ್ಪತ್ತಿ ಎಂದರೆ ನಿಮ್ಮ ಅಂಡಾಶಯದಿಂದ ಮೊಟ್ಟೆಗಳು ಬಿಡುಗಡೆಯಾಗುವ ಸಮಯ. ಈ ಸಮಯದಲ್ಲಿ ಲೈಂಗಿಕತೆ ಹೊಂದುವುದು ವೀರ್ಯ ಮೊಟ್ಟೆಯನ್ನು ಫಲವತ್ತಾಗಿಸಬಹುದು. ಇದು ನೀವು ಗರ್ಭಿಣಿಯಾಗು ಚಾನ್ಸ್ ಹೆಚ್ಚಿಸುತ್ತದೆ.

    ರಿದಮ್ ಮೆಥಡ್ ಹೇಗೆ ಕೆಲಸ ಮಾಡುತ್ತದೆ

    ಪ್ರತಿ ತಿಂಗಳೂ ಕೆಲವು ದಿನಗಳು ಮಹಿಳೆಯರು ಫಲವತ್ತಾಗುತ್ತಾರೆ. ರಿದಮ್ ವಿಧಾನವನ್ನು ಬಳಸುವ ಮಹಿಳೆಯರು ತಿಂಗಳ ಯಾವ ದಿನಗಳಲ್ಲಿ ಫಲವತ್ತಾಗುತ್ತಾರೆ ಎಂದು ಕಂಡುಹಿಡಿಯಲು ತಮ್ಮ ಕೊನೆಯ ಅವಧಿಯ ಆಗಮನದ ಸಮಯ ನೋಡಬೇಕು.

    ಫಲವತ್ತತೆ ದಿನಗಳು ತಿಳಿದ ನಂತರ ಈ ಸಮಯದಲ್ಲಿ ಲೈಂಗಿಕತೆ ಹೊಂದಬೇಕೆ ಅಥವಾ ಬೇಡವೇ ಎಂದು ಮಹಿಳೆಯರು ನಿರ್ಧರಿಸಬಹುದು. ಗರ್ಭಿಣಿಯಾಗಲು ಇಷ್ಟವಿಲ್ಲದವರು ಈ ಸಮಯದಲ್ಲಿ ಕಾಂಡೋಮ್  ಬಳಸಬಹುದು.

    ನಿಮ್ಮ ಅವಧಿಗಳು ಪ್ರಾರಂಭವಾಗುವ ದಿನಕ್ಕೆ 14 ದಿನಗಳ ಮೊದಲು ಎಣಿಸಿ. ಇದರೊಂದಿಗೆ ನಿಮ್ಮ ಅಂಡೋತ್ಪತ್ತಿ ಪ್ರತಿ ತಿಂಗಳು ಯಾವಾಗ ಸಂಭವಿಸುತ್ತದೆ ಎಂದು ತಿಳಿಯಬಹುದು.

     ವೀರ್ಯವು ಮಹಿಳೆಯರ ದೇಹದಲ್ಲಿ ಕೆಲವು ದಿನಗಳವರೆಗೆ ಇರುತ್ತದೆ

    ಅಂಡಾಶಯದಿಂದ ಬಿಡುಗಡೆಯಾದ ನಂತರ 12 ಗಂಟೆಗಳ ಕಾಲ ಮಾತ್ರ ಫಲೀಕರಣಕ್ಕೆ ಮೊಟ್ಟೆಗಳು ಲಭ್ಯವಿವೆ. ವೀರ್ಯವು ಮಹಿಳೆಯರ ದೇಹದಲ್ಲಿ ಕೆಲವು ದಿನಗಳವರೆಗೆ ಇರುತ್ತದೆ. ಅಂತಹ ಸ್ಥಿತಿಯಲ್ಲಿ, ರಿದಮ್ ವಿಧಾನ ಬಳಸುವ ಮಹಿಳೆಯರು ಅಂಡೋತ್ಪತ್ತಿಗೆ ಮೂರು ದಿನಗಳ ಮೊದಲು ಮತ್ತು ಮೂರು ದಿನಗಳ ನಂತರ ಲೈಂಗಿಕ ಸಂಭೋಗ ಮಾಡಬಾರದು.

    ಪ್ರತಿ ತಿಂಗಳು ನಿಯಮಿತ ಅವಧಿ ಹೊಂದಿರುವ ಮಹಿಳೆಯರಿಗೆ ರಿದಮ್ ವಿಧಾನವು ತುಂಬಾ ಪರಿಣಾಮಕಾರಿ. ಇದು ಯಾವಾಗ ಅಂಡೋತ್ಪತ್ತಿಯಾಗುತ್ತದೆ ಮತ್ತು ಯಾವಾಗ ಫಲವತ್ತತೆ ವಿಂಡೋ ತೆರೆಯುತ್ತದೆ ಎಂದು ತಿಳಿಯುವುದು ಸುಲಭ.

    ರಿದಮ್ ವಿಧಾನದ ಪ್ರಯೋಜನಗಳು

    ಇದರ ಒಂದು ಪ್ರಯೋಜನವೆಂದರೆ ಇದು ಸಂಪೂರ್ಣವಾಗಿ ಉಚಿತ. ನೀವು ವೈದ್ಯರನ್ನು ಭೇಟಿ ಮಾಡುವ ಅಥವಾ ಯಾವುದೇ ರೀತಿಯ ಔಷಧ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಲ್ಲದೆ ಮುಂದೆ ಗರ್ಭ ಧರಿಸುವ ಯೋಚನೆ ಮಾಡಿದರೂ ಯಾವುದೇ ತೊಂದರೆ ಆಗುವುದಿಲ್ಲ. ಇತರ ಜನನ ನಿಯಂತ್ರಣ ವಿಧಾನಗಳಿಗೆ ಹೋಲಿಸಿದರೆ ಇದು ಯಾವುದೇ ಅಡ್ಡ ಪರಿಣಾಮ ಹೊಂದಿಲ್ಲ.

    ಇತರೆ ಜನನ ನಿಯಂತ್ರಣ ವಿಧಾನಗಳ ಅಡ್ಡ ಪರಿಣಾಮಗಳು

    -ಮೂಡ್ ಸ್ವಿಂಗ್ಸ್

    - ಆಯಾಸ

    - ವಾಂತಿ

    - ತಲೆನೋವು

    - ಮೂಳೆ ನೋವು

    - ಅಂಡಾಶಯದ ಚೀಲ

    - ಹೆಚ್ಚಿದ ರಕ್ತದೊತ್ತಡ

    - ಯೋನಿ ಡಿಸ್ಚಾರ್ಜ್ ಮತ್ತು ತುರಿಕೆ

    - ಅಲರ್ಜಿಯ ಪ್ರತಿಕ್ರಿಯೆ

    - ಭವಿಷ್ಯದಲ್ಲಿ ಗರ್ಭಿಣಿಯಾಗಲು ತೊಂದರೆ

    ರಿದಮ್ ವಿಧಾನದ ಅನಾನುಕೂಲತೆಗಳು

    ರಿದಮ್ ವಿಧಾನದ ದೊಡ್ಡ ಅನಾನುಕೂಲತೆ ಇದು ಇತರ ಜನನ ನಿಯಂತ್ರಣ ವಿಧಾನಗಳಿಗಿಂತ ಕಡಿಮೆ ಪರಿಣಾಮಕಾರಿ. ರಿದಮ್ ವಿಧಾನದ ವೈಫಲ್ಯದ ಪ್ರಮಾಣವು ತುಂಬಾ ಹೆಚ್ಚಾಗಿದೆ.

    ಇದನ್ನೂ ಓದಿ: ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೂಲಕ ತೂಕ ಇಳಿಸಿಕೊಂಡಿರುವ ಮಹಿಳೆಯ ಜರ್ನಿ ಹೀಗಿದೆ…   

    ಯಾವ ಮಹಿಳೆಯರಿಗೆ ರಿದಮ್ ವಿಧಾನವು ಪ್ರಯೋಜನಕಾರಿ?

    ನಿಯಮಿತ ಋತುಚಕ್ರ ಹೊಂದಿರುವ ಮಹಿಳೆಯರು ಇದರಿಂದ ಪ್ರಯೋಜನ ಪಡೆಯಬಹುದು. ತಮ್ಮ ಋತುಚಕ್ರ, ಅಂಡೋತ್ಪತ್ತಿ ಮತ್ತು ಫಲವತ್ತತೆ ದಿನಗಳನ್ನು ಚೆನ್ನಾಗಿ ಟ್ರ್ಯಾಕ್ ಮಾಡುವ ಮಹಿಳೆಯರಿಗೆ ಈ ವಿಧಾನ ಪ್ರಯೋಜನಕಾರಿ.
    Published by:renukadariyannavar
    First published: