• Home
  • »
  • News
  • »
  • lifestyle
  • »
  • Karnataka Travel Places: ಸಾವಿರಾರು ಜನ ಸೇರುವ ಕರ್ನಾಟಕದ ಧಾರ್ಮಿಕ ಸ್ಥಳಗಳಿವು, ಈ ರಜೆಯಲ್ಲಿ ಕುಟುಂಬದ ಜೊತೆ ಹೋಗಿ ಬನ್ನಿ

Karnataka Travel Places: ಸಾವಿರಾರು ಜನ ಸೇರುವ ಕರ್ನಾಟಕದ ಧಾರ್ಮಿಕ ಸ್ಥಳಗಳಿವು, ಈ ರಜೆಯಲ್ಲಿ ಕುಟುಂಬದ ಜೊತೆ ಹೋಗಿ ಬನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Pilgrimage Sites Of Karnataka: ನಿಮ್ಮ ರಜೆಯಲ್ಲಿ ಆಧ್ಯಾತ್ಮಿಕ ಅನುಭವ ಬೇಕು ಎಂದರೆ ಕರ್ನಾಟಕದ ಈ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಬೇಕು.  

  • Share this:

ಶತಮಾನಗಳಿಂದ, ಭಾರತದ (India) ಅನೇಕ ವಿಭಿನ್ನ ಸಂಸ್ಕೃತಿಗಳು (Traditional) ಮತ್ತು ಸಂಪ್ರದಾಯಗಳನ್ನು ಜನರು ಪಾಲಿಸಿಕೊಂಡು ಬರುತ್ತಿದ್ದಾರೆ. ಹಬ್ಬಗಳ (Festival)  ರೂಪದಲ್ಲಿ ಅಥವಾ ದೇವಾಲಯಗಳು ಮತ್ತು ಇತರ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳನ್ನು ನಿರ್ಮಿಸುವ ಮೂಲಕ ಆಚರಿಸುತ್ತಾರೆ. ಭಾರತದವು ಅನೇಕ ದೇವಾಲಯಗಳಿಗೆ (Temple) ಹೆಸರುವಾಸಿಯಾಗಿದೆ. ಹಾಗೆಯೇ ನಮ್ಮ ಕರ್ನಾಟಕವೂ (Karnataka) ಕೂಡ. ಕರ್ನಾಟಕವು ಮೌರ್ಯರು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಮತ್ತು ಇನ್ನೂ ಅನೇಕ ಪ್ರಬಲ ರಾಜವಂಶಗಳ ಆಳ್ವಿಕೆಗೆ ಸಾಕ್ಷಿಯಾಗಿದೆ. ಈ ರಾಜರು ಸುಂದರವಾದ ವಾಸ್ತುಶಿಲ್ಪಗಳ ದೇವಾಯಲಗಳನ್ನು ನಿರ್ಮಿಸಿದ್ದಾರೆ, ಅವುಗಳಲ್ಲಿ ಕೆಲವು ಈಗ ಪ್ರಮುಖ ಯಾತ್ರಾ ಸ್ಥಳಗಳಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ, ಸಾವಿರಾರು ಯಾತ್ರಿಕರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನಿಮ್ಮ ರಜೆಯಲ್ಲಿ ಆಧ್ಯಾತ್ಮಿಕ ಅನುಭವ ಬೇಕು ಎಂದರೆ ಕರ್ನಾಟಕದ ಈ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಬೇಕು.  


ಧರ್ಮಸ್ಥಳ


ಧರ್ಮಸ್ಥಳವು ನೇತ್ರಾವತಿ ನದಿಯ ದಡದಲ್ಲಿ ನೆಲೆಸಿರುವ ಜನಪ್ರಿಯ ಸ್ಥಳವಾಗಿದ್ದು. ಇದು ಬೆಂಗಳೂರಿನಿಂದ ಸುಮಾರು 300 ಕಿಮೀ ದೂರದಲ್ಲಿದೆ. ಈ ಸ್ಥಳದ ಬಗ್ಗೆ ಹೆಚ್ಚಾಗಿ ವರ್ಣಿಸುವ ಅವಶ್ಯಕತೆ ಇಲ್ಲ ಎಂದರೆ ತಪ್ಪಿಲ್ಲ.  ಈ ದೇವಾಲಯವು ಶಿವ, ಚಂದ್ರನಾಥ, ಮಂಜುನಾಥ, ಇತ್ಯಾದಿಗಳಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿಗೆ ನೆಲೆಯಾಗಿದ್ದು, ದಿನಕ್ಕೆ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.


ಧರ್ಮಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಲಕ್ಷ ದೀಪೋತ್ಸವ ಎಂಬ ವಾರ್ಷಿಕ ಹಬ್ಬದ ಸಮಯದಲ್ಲಿ. ನವೆಂಬರ್ ನಿಂದ ಡಿಸೆಂಬರ್ ನಡುವೆ ಈ ಕಾರ್ಯಕ್ರಮ ಆಗುತ್ತದೆ. ಈ ಸಮಯದಲ್ಲಿ ಸುಮಾರು 10,000 ಭಕ್ತಾಧಿಗಳು ದೇವಸ್ಥಾನದಲ್ಲಿ ಸೇರುತ್ತಾರೆ ಎಂದು ಅಂದಾಜಿಸಲಾಗಿದೆ.


ಪಟ್ಟದಕಲ್ಲು


ಪಟ್ಟದಕಲ್ಲು ಉತ್ತರ ಕರ್ನಾಟಕ ಭಾಗದಲ್ಲಿರುವ ಪ್ರಸಿದ್ಧ ಸ್ಥಳವಾಗಿದೆ. ಇದು ಮಲಪ್ರಭಾ ನದಿಯ ದಂಡೆಯ ಮೇಲಿರುವ ದೇವಾಲಯವಾಗಿದ್ದು, ಸಾವಿರಾರು ಜನರು ಇಲ್ಲಿಗೆ ಪ್ರವಾಸಕ್ಕೆ ಬರುತ್ತಾರೆ. ವಾಸ್ತವವಾಗಿ, ಇದು ವಾಸ್ತುಶಿಲ್ಪದ ಕಾರಣದಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ದ್ರಾವಿಡ ಮತ್ತು ನಾಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯಗಳನ್ನು ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ.


ಒಟ್ಟು 10 ದೇವಾಲಯಗಳಿವೆ, ಇವೆಲ್ಲವೂ ಶಿವನಿಗೆ ಸಮರ್ಪಿತವಾಗಿವೆ. ಗಳಗನಾಥ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಮುಂತಾದ ದೇವಾಲಯಗಳಿಗೆ ಭೇಟಿ ನೀಡಬಹುದು.


ಗೋಕರ್ಣ


ಬಹುತೇಕ ಕರ್ನಾಟಕದ ಗಡಿಯ ಭಾಗದಲ್ಲಿರುವ ಈ ಗೋಕರ್ಣವು ಕರ್ನಾಟಕದ ಜನಪ್ರಿಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಇದು ತನ್ನ ಕಡಲತೀರಗಳಿಗೆ ಹೆಚ್ಚಿನ ಗಮನವನ್ನು ಸೆಳೆದಿದೆ ಎನ್ನಬಹುದು. ಶಿವನಿಗೆ ಸಮರ್ಪಿತವಾಗಿರುವ ಮಹಾಬಲೇಶ್ವರ ದೇವಾಲಯವು ಇಲ್ಲಿನ ಮುಖ್ಯ ದೇವಾಲಯ.


ಇದನ್ನೂ ಓದಿ: ಈ 2 ವಸ್ತುಗಳಿದ್ರೆ ಸಾಕು ಪಾರ್ಲರ್​ಗೆ ಹೋಗೋದೇ ಬೇಡ, ಮನೆಯಲ್ಲಿಯೇ ಮುಖದ ಅಂದ ಹೆಚ್ಚಿಸಿಕೊಳ್ಳಬಹುದು


ಗೋಕರ್ಣದಲ್ಲಿ ನೀವು ಭೇಟಿ ನೀಡಲೇಬೇಕಾದ ಇತರ ಕೆಲವು ದೇವಾಲಯಗಳೆಂದರೆ ಭದ್ರಕಾಳಿ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಮಹಾ ಗಣಪತಿ ದೇವಸ್ಥಾನ, ಇತ್ಯಾದಿಗಳು. ನೀವು ಗೋಕರ್ಣದಲ್ಲಿ ಓಂ ಬೀಚ್, ಕುಡ್ಲೆ ಬೀಚ್ ಮುಂತಾದ ಸ್ಥಳಗಳಿಗೆ ಹೋಗಿ ಸುಂದರ ಸಂಜೆಯನ್ನು ಅನುಭವಿಸಬಹುದು.
ಉಡುಪಿ


ಪರ್ಯಾಯ ಕಾರ್ಯಕ್ರಮವೂ ಜನವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವವಾಗಿದ್ದು, ಸಾವಿರಾರು ಭಕ್ತರು ಈ ಊರಿನಲ್ಲಿ ಕಿಕ್ಕಿರಿದು ಸೇರುತ್ತಾರೆ. ಉಡುಪಿಯ ರುಚಿಕರವಾದ ಪಾಕಪದ್ಧತಿಯನ್ನು ನಿಜಕ್ಕೂ ಪ್ರಯತ್ನಿಸಲೇಬೇಕು. ಕೌಪ್ ಬೀಚ್, ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದನ್ನ ಮಿಸ್​ ಮಾಡಲೇಬಾರದು.


ಶ್ರವಣಬೆಳಗೊಳ


ಶ್ರವಣಬೆಳಗೊಳವು ಜೈನ ಯಾತ್ರಾಸ್ಥಳವಾಗಿದೆ ಏಕೆಂದರೆ ಇದು ಗೊಮ್ಮಟೇಶ್ವರನ ಪ್ರತಿಮೆಯ ಕಾರಣದಿಂದ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಬೃಹತ್ ಏಕಶಿಲೆಯ ಪ್ರತಿಮೆಯು ವಿಂಧ್ಯಗಿರಿ ಬೆಟ್ಟದ ಮೇಲೆ ಸ್ಥಾಪಿಸಲಾದ 57 ಅಡಿಗಳ ಎತ್ತರವನ್ನು ಹೊಂದಿದ್ದು, ಇಲ್ಲಿಗೆ ವರ್ಷಪೂರ್ತಿ ಜನ ಭೇಟಿ ನೀಡುತ್ತಾರೆ.


ಇದನ್ನೂ ಓದಿ: ಎಲೆಕೋಸಿನ ಎಲೆ ಉಳಿದರೆ ಹೊರಗೆಸೆಯಬೇಡಿ, ಈ ರೀತಿಯೂ ಬಳಕೆ ಮಾಡ್ಬಹುದು


ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಮಹಾಮಸ್ತಕಾಭಿಷೇಕ, ಇದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ದೊಡ್ಡ ಉತ್ಸವವಾಗಿದೆ. ಈ ಸಮಯದಲ್ಲಿ ಗೊಮ್ಮಟೇಶ್ವರನ ಮೂರ್ತಿಗೆ ಕುಂಕುಮ, ತುಪ್ಪ, ಹಾಲು ಮುಂತಾದವುಗಳಿಂದ ಸ್ನಾನ ಮಾಡಿಸಲಾಗುತ್ತದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳುವುದು ಪುಣ್ಯ ಎಂದು ನಂಬುತ್ತಾರೆ.

Published by:Sandhya M
First published: