Hair Care: ಬಾಲಿವುಡ್ ತಾರೆಯರ ಕೂದಲ ಸೌಂದರ್ಯದ ರಹಸ್ಯ ಏನು ಗೊತ್ತಾ? ಇಲ್ಲಿದೆ ಯಾರಿಗೂ ಗೊತ್ತಿಲ್ಲದ ಗುಟ್ಟು

ಸಲೂನ್‌ನಲ್ಲೇ ಕಾಲ ಕಳೆಯುವ ನಟಿಯರು ನೈಸರ್ಗಿಕವಾಗಿ ಇವನ್ನೆಲ್ಲಾ ಮಾಡ್ತಾರಾ ಅಂತಾ ನಿಮಗೆ ಆಶ್ಚರ್ಯ ಆಗಬಹುದು, ಆದರೆ ಇದು ಸತ್ಯ. ಅವರ ಕೂದಲ ಆರೈಕೆಯಲ್ಲಿ ಸಲೂನ್, ಪಾರ್ಲರ್, ಮಸಾಜ್ , ಹೇರ್ ಸ್ಪಾ ಹೊರತಾಗಿ ಕೆಲವು ಹೋಮ್ ಮೇಡ್ ಹೇರ್ ಪ್ಯಾಕ್ ಸಹ ಟ್ರೈ ಮಾಡುತ್ತಾರಂತೆ.

ನಟಿ ಜಾಹ್ನವಿ ಕಪೂರ್

ನಟಿ ಜಾಹ್ನವಿ ಕಪೂರ್

 • Share this:
  ಮಹಿಳೆಯರು (Women) ಸೌಂದರ್ಯ (Beauty) ಆರೈಕೆಯಲ್ಲಿ ಮೊದಲು ಕೂದಲು (Hair) ಮತ್ತು ಚರ್ಮಕ್ಕೆ (Skin) ವಿಶೇಷ ಗಮನ ನೀಡುತ್ತಾರೆ. ಅದರಲ್ಲೂ ಕೆಲವು DIY ರೊಟಿನ್‌ಗಳು ನಿಜಕ್ಕೂ ನಿಮ್ಮ ಆರೋಗ್ಯಕರ (Healthy) ಕೂದಲು ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ. ಕೂದಲನ್ನು ಸರಿಯಾದ ರೀತಿಯಲ್ಲಿ ತೊಳೆಯುವುದು (Wash), ಎಣ್ಣೆ (Oil) ಹಚ್ಚುವುದು ಉತ್ತಮವಾದ ಮನೆ ಮದ್ದುಗಳನ್ನು ಬಳಸುವುದರ ಮೂಲಕ ಕೂದಲಿನ ಸಮಸ್ಯೆಯನ್ನು ನೈಸರ್ಗಿಕವಾಗಿ (Natural) ಗುಣಪಡಿಸಬಹುದು. ನಾವು ನೀವು ಮಾತ್ರವಲ್ಲ ಬಾಲಿವುಡ್‌ ಬೆಡಗಿಯರು ಕೂಡ ಈ ವಿಧಾನಗಳನ್ನು ಅನುಸರಿಸುತ್ತಾರಂತೆ. ಸಲೂನ್‌ನಲ್ಲೇ (Saloon) ಕಾಲ ಕಳೆಯುವ ಅವರು ನೈಸರ್ಗಿಕವಾಗಿ ಇವನ್ನೆಲ್ಲಾ ಮಾಡ್ತಾರಾ ಅಂತಾ ನಿಮಗೆ ಆಶ್ಚರ್ಯ ಆಗಬಹುದು, ಆದರೆ ಇದು ಸತ್ಯ. ಅವರ ಕೂದಲ ಆರೈಕೆಯಲ್ಲಿ ಸಲೂನ್, ಪಾರ್ಲರ್, ಮಸಾಜ್ , ಹೇರ್ ಸ್ಪಾ ಹೊರತಾಗಿ ಕೆಲವು ಹೋಮ್ ಮೇಡ್ ಹೇರ್ ಪ್ಯಾಕ್ ಸಹ ಟ್ರೈ ಮಾಡುತ್ತಾರಂತೆ.

  ಸ್ವತ: ಈ ಬಗ್ಗೆ ಬಾಲಿವುಡ್ ನಟಿಮಣಿಯರೇ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಜಾನ್ವಿ ಕಪೂರ್, ಸಾರಾ ಅಲಿ ಖಾನ್ ಸೇರಿ ಯಾರೆಲ್ಲಾ ಯಾವ DIY ಕೂದಲಿನ ಆರೈಕೆಯ ಆಚರಣೆಗಳು ಮಾಡುತ್ತಾರೆ ಮತ್ತು ಯಾವ ಪದಾರ್ಥಗಳನ್ನು ಬಳಸಿಕೊಂಡು ಹೇರ್ ಕೇರ್ ಮಾಡುತ್ತಾರೆ ತಿಳಿಯೋಣ.

  ಸಾರಾ ಅಲಿ ಖಾನ್ ಕೂದಲಿನ ರಹಸ್ಯದ ಹಿಂದೆ ಈರುಳ್ಳಿ
  ಶುಚಿಗೊಳಿಸಿದ ನೆತ್ತಿ ಮತ್ತು ಪುನರುಜ್ಜೀವನಗೊಂಡ ಕೂದಲಿನ ಅನ್ವೇಷಣೆಯಲ್ಲಿ ಸಾರಾ ಅಲಿ ಖಾನ್ ಒಂದು ಅದ್ಭುತ ಪದಾರ್ಥವನ್ನು ಕಂಡುಕೊಂಡಿದ್ದಾಳೆ. ಸಾರಾ ಈರುಳ್ಳಿ ರಸವನ್ನು ತನ್ನ ಕೂದಲಿಗೆ ಅನ್ವಯಿಸುತ್ತಾಳಂತೆ.

  ಸಂದರ್ಶನದಲ್ಲಿ ಹೇಳಿದ ಸಾರಾ

  ಈರುಳ್ಳಿ ರಸ ಕೂದಲ ಬೆಳವಣಿಗೆಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸಾರಾ ಒಪ್ಪಿಕೊಂಡಿದ್ದಾರೆ.

  ಇದನ್ನೂ ಓದಿ: Health Care: ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಕೊತ್ತಂಬರಿ ಕಾಳು ಮತ್ತು ಸೊಪ್ಪು ರಾಮಬಾಣವಾಗಬಹುದು!

  ತಾಯಿಯಿಂದ ಹೆಡ್ ಮಸಾಜ್ ಕಲಿತ ಜಾನ್ವಿ ಕಪೂರ್

  ಭಾರತೀಯ ಮನೆಯಲ್ಲಿ ಕೂದಲ ಬೆಳವಣಿಗೆಯಲ್ಲಿ ಕೂದಲ ಮತ್ತು ತಲೆಯ ಮಸಾಜ್ ಪ್ರಮುಖವಾಗಿದೆ. ಜಾನ್ವಿ ಕಪೂರ್ ಅವರು ಸಹ ತಮ್ಮ ಕೂದಲ ಆರೈಕೆಯಲ್ಲಿ ಮಸಾಜನ್ನು ನಂಬುತ್ತಾರೆ.

  ಬಾಲ್ಯದಲ್ಲಿ ಹೇಳಿ ಕೊಟ್ಟಿದ್ದ ಶ್ರೀದೇವಿ

  ಬಾಲ್ಯದಲ್ಲಿ ಅಮ್ಮ ನಮ್ಮ ಕೂದಲಿನ ಎಣ್ಣೆಯನ್ನು ಒಣಗಿದ ಹೂವುಗಳು ಮತ್ತು ಆಮ್ಲಾದೊಂದಿಗೆ ಮನೆಯಲ್ಲಿ ತಯಾರಿಸುತ್ತಿದ್ದರು ಮತ್ತು ಅವರು ನನಗೆ ಮತ್ತು ತಂಗಿ ಖುಷಿಗೆ ಪ್ರತಿ ಮೂರು ದಿನಗಳಿಗೊಮ್ಮೆ ಎಣ್ಣೆ ಮಸಾಜ್ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹೀಗೆ ಅಮ್ಮನಿಂದ ಕಲಿತ ಹೆಡ್ ಮಸಾಜ್ ಜಾನ್ವಿ ಕೂದಲ ಆರೈಕೆ ಮಾಡುತ್ತಿದೆ.

  ಜಾಕ್ವೆಲಿನ್ ಹೇರ್ ಕೇರ್ ಮಾಡುವವರು ಇವೇ

  ಮನೆಯಲ್ಲಿಯೇ ಸೌಂದರ್ಯ ಪರಿಹಾರಗಳ ಬಗ್ಗೆ ಒತ್ತು ನೀಡುವ ಜಾಕ್ವೆಲಿನ್ ಫರ್ನಾಂಡೀಸ್ ಅವರು DIY ಫೇಸ್ ಮಾಸ್ಕ್‌ಗಳಿಗೆ ಮೊಸರು ಮತ್ತು ನೈಸರ್ಗಿಕ ಲಿಪ್ ಬಾಮ್‌ನಂತೆ ಜೇನುತುಪ್ಪವನ್ನು ಬಳಸುತ್ತಾರಂತೆ. ಮತ್ತು ಹೊಳೆಯುವ, ಬೌನ್ಸಿ ಕೂದಲಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೊಟ್ಟೆಯನ್ನು ಬಳಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

  ಹೇರ್ ಮಸಾಜ್ ಕೂಡ ಮುಖ್ಯವಂತೆ

  ಮೊಟ್ಟೆಯ ಬಿಳಿ ಭಾಗವನ್ನು ಕೂದಲ ಹೊಳಪಿಗೆ ಹೇರ್ ಪ್ಯಾಕ್ ಆಗಿ ಬಳಸುತ್ತೇನೆ ಎಂದಿದ್ದಾರೆ. ಅಲ್ಲದೆ ಹೇರ್ ಮಸಾಜ್ ಮಾಡುವುದು ಸಹ ಬಹಳ ಮುಖ್ಯ. ಏಕೆಂದರೆ ನಿಮ್ಮ ಕೂದಲನ್ನು ಸ್ಟೈಲಿಂಗ್ ಮಾಡುವ ಮೊದಲು ಕೂದಲು ಉತ್ತಮ ಸ್ಥಿತಿಯಲ್ಲಿರಬೇಕು ಎಂದು ಅವರು ವೋಗ್‌ಗೆ ತಿಳಿಸಿದರು.

  ಇದನ್ನೂ ಓದಿ: Summer Beauty Tips: ಎಣ್ಣೆ ಚರ್ಮದವ್ರು ಬೇಸಿಗೆಯಲ್ಲಿ ಈ ಫೌಂಡೇಶನ್ ಬಳಸಿ, ಮೇಕಪ್ ಸ್ವಲ್ಪವೂ ಹಾಳಾಗಲ್ಲ!

  ಬೇವಿನ ಎಲೆಗಳೊಂದಿಗೆ ಟ್ವಿಂಕಲ್ ಖನ್ನಾ ಮತ್ತು ಮಗಳ ಕೂದಲ ಆರೈಕೆ

  ಲೇಖಕಿ, ಪತ್ರಿಕೆ ಅಂಕಣಗಾರ್ತಿ, ಚಲನಚಿತ್ರ ನಿರ್ಮಾಪಕಿ, ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರ ಕೂದಲ ಚಿಕಿತ್ಸೆಗಾಗಿ ಮನೆಯಲ್ಲಿಯೇ ಬೇವಿನ ಎಲೆಗಳನ್ನು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೇ ಮಗಳಿಗೂ ಸಹ ಬೇವಿನ ಎಲೆಯ ಮನೆ ಮದ್ದುಗಳನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.
  Published by:Annappa Achari
  First published: