HOME » NEWS » Lifestyle » RETIREMENT SOME MEDICAL ALLOWANCE TO WHO RETIRE AT THE AGE OF 60 VB

60ರ ನಿವೃತ್ತಿ ವಯಸ್ಸಿನ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ಹೇಗೆ?

ಹಿರಿಯ ನಾಗರಿಕರ ಆರೋಗ್ಯ ಯೋಜನೆಗಳು ಕೂಡ ಹೆಚ್ಚಿನ ಪ್ರೀಮಿಯಂ ಮೊತ್ತ, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ, ಸಹ-ಪಾವತಿಗಳು ಮತ್ತು ಕಾಯುವ ಅವಧಿಗಳಂತಹ ತಮ್ಮದೇ ಆದ ಮಿತಿಗಳೊಂದಿಗೆ ಬರುತ್ತವೆ.

news18-kannada
Updated:December 29, 2020, 1:04 PM IST
60ರ ನಿವೃತ್ತಿ ವಯಸ್ಸಿನ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
  • Share this:
ಒಬ್ಬ ಹಿರಿಯ ನಾಗರಿಕರಾಗಿ, ನಿಮ್ಮ ಆರೋಗ್ಯ ವೆಚ್ಚಗಳು ಸಮಯ ಕಳೆದಂತೆ ಹೆಚ್ಚಾಗುತ್ತಾ ಹೋಗುತ್ತವೆ. ಆ ಖರ್ಚುಗಳನ್ನು ಹೇಗೆ ಯೋಜಿಸುವುದು ಮತ್ತು ತೆರಿಗೆ ವಿನಾಯಿತಿಗಳನ್ನು ಹೇಗೆ ಪಡೆಯುವುದು ಎಂಬುದನ್ನು ಇಲ್ಲಿ ನೋಡಿ.

ನಿವೃತ್ತಿ ಎಂಬುದು ಸುವರ್ಣ ವರ್ಷಗಳು! ಇದು ನೀವು ನಿಮ್ಮ ಜೀವನದ ಒಂದು ಅಧ್ಯಾಯವನ್ನು ಮುಗಿಸಿ ಮುಂದಿನದರತ್ತ ಹೆಜ್ಜೆ ಇಡುವ ಸಮಯವಾಗಿದೆ. ಹೆಚ್ಚು ಕಡಿಮೆ ಕಾಲೇಜಿನ ಮೊದಲ ದಿನದಂತೆ ಉತ್ಸಾಹವು ಹೆಚ್ಚಾಗಿ ನಿಮ್ಮ ಅನಿಶ್ಚಿತತೆ ಮತ್ತು ಒತ್ತಡವು ಸ್ವಲ್ಪ ತಣ್ಣಗಾಗಿರುತ್ತದೆ. ನಿಮ್ಮ ಆರೋಗ್ಯ ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಾಡುವ ವೆಚ್ಚವು 60 ವರ್ಷಗಳ ನಂತರ ನೀವು ವ್ಯಯಿಸಬೇಕಾದ ಕೆಲವು ಪ್ರಮುಖ ಖರ್ಚುಗಳಾಗಿವೆ. ಆದರೆ ಬಹಳಷ್ಟು ಜನರು 80 ವರ್ಷಗಳಿಗೂ ಹೆಚ್ಚು ಕಾಲ ಜೀವನ ನಡೆಸಬೇಕಾದಾಗ, ನಿಮ್ಮ ಹಣವು ಹೆಚ್ಚು ಕಾಲದವರೆಗೆ ಬರುವಂತೆ ಮಾಡಬೇಕಾಗುತ್ತದೆ.

ಜಗತ್ತಿನ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಭಿನ್ನವಾಗಿ, ಸಾರ್ವಜನಿಕರಿಗಾಗಿ ಮಾಡಲ್ಪಟ್ಟಿರುವಂತಹ ಯಾವುದೇ ಸಾಮಾಜಿಕ ಭದ್ರತೆ ಅಥವಾ ದೀರ್ಘಕಾಲೀನ ಆರೋಗ್ಯ ರಕ್ಷಣೆ ಆಯ್ಕೆಗಳು ನಮ್ಮ ಬಳಿಯಿಲ್ಲ. ನೀವು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರಾಗಿಲ್ಲದೇ ಇದ್ದರೆ, ನೀವು ನಿವೃತ್ತಿಯಾದ ಕೂಡಲೇ ನಿಮ್ಮ ಉದ್ಯೋಗಿ ವಿಮೆ ಕೂಡ ನಿಮಗೆ ವಿಮಾರಕ್ಷಣೆಯನ್ನು ನಿಲ್ಲಿಸುತ್ತದೆ.

ಹಿರಿಯ ನಾಗರಿಕರ ಆರೋಗ್ಯ ಯೋಜನೆಗಳು ಕೂಡ ಹೆಚ್ಚಿನ ಪ್ರೀಮಿಯಂ ಮೊತ್ತ, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ, ಸಹ-ಪಾವತಿಗಳು ಮತ್ತು ಕಾಯುವ ಅವಧಿಗಳಂತಹ ತಮ್ಮದೇ ಆದ ಮಿತಿಗಳೊಂದಿಗೆ ಬರುತ್ತವೆ. ಹಾಗಾದರೆ ಹಣದುಬ್ಬರ ದರ, ಹಿರಿಯರ ಕಡಿಮೆ ಹಣಕಾಸು ಆದಾಯ ಮತ್ತು ದಂತ ಆರೈಕೆ, ಕಣ್ಣಿನ ಆರೈಕೆ ಮತ್ತು ನಿಯಮಿತ ತಪಾಸಣೆ ಮತ್ತು ಅನಿರೀಕ್ಷಿತ ತುರ್ತುಸ್ಥಿತಿಗಳಂತಹ ಖರ್ಚುಗಳ ಹೆಚ್ಚಳವನ್ನು ಎದುರಿಸಲು ನೀವು ವಾಸ್ತವಿಕವಾಗಿ ಏನು ಮಾಡಬಹುದು?

ಚಿಕ್ಕಮಗಳೂರು ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ; ನಗರದೆಲ್ಲೆಡೆ ಕೇಸರಿ ಕಲರವ

ನಿಮ್ಮ ನಿವೃತ್ತಿಯ ಸಮಯದಲ್ಲಿ ಈ ಖರ್ಚುಗಳಿಗಾಗಿ ನೀವು ಹೇಗೆ ತಯಾರಿರಬಹುದು ಎಂಬುದರ ಕುರಿತು ನಮ್ಮ ಬಳಿ ಕೆಲವು ವಿಚಾರಗಳಿವೆ. ಈ ಸರಳ ಹಂತಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಬೆಳೆಯುತ್ತಿರುವ ಆರೋಗ್ಯ ಅಗತ್ಯಗಳಿಗಾಗಿ ನೀವು ಪಾವತಿಸುವ ಹೆಚ್ಚುವರಿ ಹಣದ ಭಾರವನ್ನು ಕಡಿಮೆ ಮಾಡುತ್ತದೆ.

ನಿಮ್ಮ ಆರೋಗ್ಯದ ಅಗತ್ಯಗಳಿಗೆ ಪಾವತಿಸಲು ನಿಮ್ಮ ಉಳಿತಾಯವನ್ನು ಮಾತ್ರ ನಂಬಿಕೊಳ್ಳಬೇಡಿ. ಸಾಧ್ಯವಾದಷ್ಟು ಬೇಗ ಸಮಗ್ರ ಆರೋಗ್ಯ ಪಾಲಿಸಿಯನ್ನು ಪಡೆಯುವುದಕ್ಕಾಗಿ ಮಂದಡಿಯಿಡಲು ಇದು ಸರಿಯಾದ ಸ್ಥಳವಾಗಿದೆ. ಮೊದಲೇ ಆರಿಸಿಕೊಳ್ಳುವುದರಿಂದ ಆಯ್ಕೆ ಮಾಡಲು ಹೆಚ್ಚು ದೃಢವಾದ ಆಯ್ಕೆಗಳು, ಕಡಿಮೆ ಪ್ರೀಮಿಯಂಗಳು, ಹೆಚ್ಚಿನ ವಿಮಾ ಮೊತ್ತ ಮತ್ತು ಸಹ-ಪಾವತಿಗೆ ಕಡಿಮೆ ಬೇಡಿಕೆಯಂತಹ ಪ್ರಯೋಜನಗಳನ್ನು ಪಡೆಯಬಹುದು.ಆದರೆ ನೀವು ನಿಮ್ಮ 30 ರ ವಯಸ್ಸಿನ ಆಸುಪಾಸಿನಲ್ಲೂ ಕೂಡ ಇದರ ಬಗ್ಗೆ ಯೋಚಿಸದಿದ್ದರೆ, ನೀವು ಪಡೆಯುವ ರಕ್ಷಣೆಯಿಂದ ನಿಮಗೆ ಸಿಗುವ ಮನಸ್ಸಿನ ಶಾಂತಿಯನ್ನು ಪರಿಗಣಿಸಿ ಹೆಚ್ಚಿನ ಪ್ರೀಮಿಯಂ ಮೊತ್ತ ಇನ್ನೂ ಒಳ್ಳೆಯದೇ ಆಗಿದೆ. ನೀವು ನಿವೃತ್ತಿಯಾಗಲು ಇನ್ನು ಸುಮಾರು ಆರರಿಂದ ಎಂಟು ವರ್ಷಗಳು ಉಳಿದಿದ್ದರೂ ಸಹ, ನಿಮ್ಮ ಉದ್ಯೋಗದಾತರು ಒದಗಿಸಿದ ಆರೋಗ್ಯ ರಕ್ಷಣೆಯು ನಿವೃತ್ತಿಯಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಮರೆಯಬೇಡಿ.

ನಿಮ್ಮ ಆರೋಗ್ಯ ವಿಮೆಯನ್ನು ದೀರ್ಘಾವಧಿಯವರೆಗೆ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇರಿಸುವಂತಹ ನಿರ್ದಿಷ್ಟವಾದ ಅನಾರೋಗ್ಯದ ಕವರ್‌ಗಳು ಮತ್ತು ಟಾಪ್-ಅಪ್‌ಗಳನ್ನು ನೀವು ನೋಡಬಹುದು.
Published by: Latha CG
First published: December 29, 2020, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories