• Home
  • »
  • News
  • »
  • lifestyle
  • »
  • Healthy Tips: ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಬೇಕಾದರೆ ಈ ಆಹಾರ ಹೆಚ್ಚಾಗಿ ಸೇವಿಸಿ

Healthy Tips: ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಬೇಕಾದರೆ ಈ ಆಹಾರ ಹೆಚ್ಚಾಗಿ ಸೇವಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೂತ್ರಪಿಂಡಗಳ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ, ಪೊಟ್ಯಾಸಿಯಮ್, ಸೋಡಿಯಂ ಮತ್ತು ರಂಜಕದಿಂದ ಸಮೃದ್ಧವಾಗಿರುವ ಆಹಾರಗಳ ಅತಿಯಾದ ಸೇವನೆಯು ಮೂತ್ರಪಿಂಡದ ಕಾಯಿಲೆಗಳನ್ನು ಸೃಷ್ಟಿಸುತ್ತದೆ ಮತ್ತು ಹದಗೆಡಿಸುತ್ತದೆ. ಹೀಗ

  • Share this:

ನಾವು ತಿನ್ನುವ ಆಹಾರವೇ ನಮ್ಮ ದೇಹದ ಆರೋಗ್ಯವನ್ನು (Health) ಬಹುತೇಕವಾಗಿ ನಿರ್ಧರಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ತಿನ್ನುವ ಆಹಾರದೊಂದಿಗೆ (Food) ನಮ್ಮ ಜೀವನಶೈಲಿಯೂ ಸಹ ತುಂಬಾನೇ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದು ಹೇಳಬಹುದು. ಆರೋಗ್ಯಕರ ಜೀವನಶೈಲಿಯೊಂದಿಗೆ ಆರೋಗ್ಯಕರ ಆಹಾರವು ಹಲವಾರು ಕಾಯಿಲೆಗಳಿಂದ (Disease) ನಮ್ಮನ್ನು ದೂರವಿಡಬಲ್ಲದು ಎಂದು ವಿಶ್ವದಾದ್ಯಂತದ ತಜ್ಞರು ಹೇಳುತ್ತಾರೆ. ಅದರಲ್ಲೂ ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು (Kidney) ತುಂಬಾನೇ ಮುಖ್ಯವಾದ ಅಂಗವಾಗಿದೆ, ಇದು ದೇಹದ ತ್ಯಾಜ್ಯ ಮತ್ತು ವಿಷ ವಸ್ತುಗಳನ್ನು ದೇಹದಿಂದ ಹೊರಕ್ಕೆ ಹಾಕುವಲ್ಲಿ ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.


ಇಷ್ಟೇ ಅಲ್ಲದೆ ಮೂತ್ರಪಿಂಡಗಳು ರಕ್ತಪ್ರವಾಹದಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂತ್ರಪಿಂಡಗಳ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ, ಪೊಟ್ಯಾಸಿಯಮ್, ಸೋಡಿಯಂ ಮತ್ತು ರಂಜಕದಿಂದ ಸಮೃದ್ಧವಾಗಿರುವ ಆಹಾರಗಳ ಅತಿಯಾದ ಸೇವನೆಯು ಮೂತ್ರಪಿಂಡದ ಕಾಯಿಲೆಗಳನ್ನು ಸೃಷ್ಟಿಸುತ್ತದೆ ಮತ್ತು ಹದಗೆಡಿಸುತ್ತದೆ. ಹೀಗಾಗಿ, ಮೂತ್ರಪಿಂಡದ ಕಾಯಿಲೆಗಳನ್ನು ನೈಸರ್ಗಿಕವಾಗಿ ತಡೆಗಟ್ಟಲು ಸಹಾಯ ಮಾಡುವ ಕೆಲವು ತಜ್ಞರು ಸೂಚಿಸಿದ ಆಹಾರಗಳು ಇಲ್ಲಿವೆ ನೋಡಿ.


1. ಅನಾನಸ್
ಅನಾನಸ್ ಹಣ್ಣಿನಲ್ಲಿ ಫ್ರಕ್ಟೋಸ್ ಮತ್ತು ಪೊಟ್ಯಾಸಿಯಮ್ ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತವೆ, ಆದರೆ ಈ ಉಷ್ಣವಲಯದ ಸಿಹಿ ಮತ್ತು ಸಿಟ್ರಸ್ ಹಣ್ಣು ಮೂತ್ರಪಿಂಡದ ರೋಗಿಗಳಿಗೆ ಅಕ್ಷರಶಃ ಒಳ್ಳೆಯದು. ಇದಕ್ಕೆ ಕಾರಣ ಅದರ ಕಡಿಮೆ ಪೊಟ್ಯಾಸಿಯಮ್ ಮಟ್ಟಗಳು, ಇದು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವಾಗ ಸೇವಿಸಲು ಸುರಕ್ಷಿತ ಆಯ್ಕೆಯಾಗಿದೆ. ಆಹಾರದಲ್ಲಿ ಇದನ್ನು ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಉರಿಯೂತವನ್ನು ಕಡಿಮೆ ಮಾಡಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಮತ್ತು ಜೀವಕೋಶದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ.


ಇದನ್ನೂ ಓದಿ:  Bowel Cancer: ಕರುಳಿನ ಕ್ಯಾನ್ಸರ್ ​ಉಂಟಾಗಲು ಕಾರಣ ಮತ್ತು ಲಕ್ಷಣಗಳು ಯಾವವು?


ಅನಾನಸ್ ನೈಸರ್ಗಿಕ ಕಿಣ್ವವನ್ನು ಹೊಂದಿದೆ, ಇದನ್ನು ಬ್ರೋಮೆಲೈನ್ ಎಂದು ಕರೆಯಲಾಗುತ್ತದೆ, ಇದು ದೇಹದಲ್ಲಿ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅನಾನಸ್ ಫೈಬರ್, ಮ್ಯಾಂಗನೀಸ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ, ಇದು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಉತ್ತಮವಾಗಿದೆ.


2. ಬೆಲ್ ಪೆಪ್ಪರ್
ಇತರ ತರಕಾರಿಗಳಿಗೆ ಹೋಲಿಸಿದರೆ ಈ ವರ್ಣರಂಜಿತ ದಪ್ಪ ಮೆಣಸಿನಕಾಯಿಗಳು ಕಡಿಮೆ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ, ಇದು ಮೂತ್ರಪಿಂಡದ ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಇದಲ್ಲದೆ, ಬೆಲ್ ಪೆಪ್ಪರ್ ಗಳು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ, ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಕೊನೆಯದಾಗಿ, ಈ ವರ್ಣರಂಜಿತ ದಪ್ಪ ಮೆಣಸಿನಕಾಯಿಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


3. ಸ್ಟ್ರಾಬೆರಿಗಳು
ಈ ಸಿಹಿಯಾದ ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಫೈಬರ್ ನಿಂದ ಕೂಡಿರುತ್ತವೆ, ಇದು ಒಟ್ಟಾರೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವುದು ಮಾತ್ರವಲ್ಲದೆ, ಮೂತ್ರಪಿಂಡದ ರೋಗಿಗಳಿಗೂ ಉತ್ತಮವಾಗಿದೆ. ಇದರ ಕಡಿಮೆ ಪೊಟ್ಯಾಸಿಯಮ್ ಮಟ್ಟವು ಇದಕ್ಕೆ ಕಾರಣ, ಇದು ನೈಸರ್ಗಿಕವಾಗಿ ಮೂತ್ರಪಿಂಡದ ಕಾಯಿಲೆಗಳನ್ನು ಅದರ ಆಹ್ಲಾದಕರ ರುಚಿಯಿಂದ ತಡೆಗಟ್ಟಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿಗಳಲ್ಲಿನ ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಕೋಶದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತವೆ.


4. ಶೀಟೇಕ್ ಅಣಬೆಗಳು
ಈ ಅಣಬೆಗಳು ಬಿ ಜೀವಸತ್ವಗಳು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂನ ಖನಿಜಗಳಿಂದ ತುಂಬಿರುತ್ತದೆ ಮತ್ತು ಇದು ಮೂತ್ರಪಿಂಡಗಳಿಗೆ ಸೂಪರ್ ಫುಡ್ ಆಗಿ ಕಾರ್ಯ ನಿರ್ವಹಿಸುತ್ತವೆ. ಇದಲ್ಲದೆ, ಈ ಫೈಬರ್ ಮತ್ತು ಪ್ರೋಟೀನ್ ಭರಿತ ಅಣಬೆಗಳು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಮೂತ್ರಪಿಂಡ ರೋಗಿಗಳಿಗೆ ಆರೋಗ್ಯಕರವಾದ ಪರ್ಯಾಯವನ್ನು ನೀಡುತ್ತವೆ. ಪೊಟ್ಯಾಸಿಯಮ್ ಕಡಿಮೆ ಇರುವ ಈ ಅಣಬೆ ಪ್ರಭೇದವು ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Digestive problems: ಯಾವಾಗ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸ್ತೀರಾ? ಹೀಗೆ ಮಾಡಿ ಸಾಕು, ಎಲ್ಲಾ ಕ್ಲಿಯರ್ ಆಗುತ್ತೆ!


5. ಎಲೆಕೋಸು (ಕ್ಯಾಬೇಜ್)
ಫೈಟೊಕೆಮಿಕಲ್ಸ್ ನಿಂದ ತುಂಬಿರುವ ನಮ್ಮ ಎಲೆಕೋಸು ಮೂತ್ರಪಿಂಡಗಳಿಗೆ ಸೂಪರ್ ಫುಡ್ ಗಿಂತ ಕಡಿಮೆಯಿಲ್ಲ. ಆಹಾರದ ನಾರುಗಳು, ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳು ಇದರಲ್ಲಿವೆ. ಇದಲ್ಲದೆ, ಎಲೆಕೋಸಿನಲ್ಲಿ ಪೊಟ್ಯಾಸಿಯಮ್, ರಂಜಕ ಮತ್ತು ಸೋಡಿಯಂ ಕಡಿಮೆ ಇರುತ್ತದೆ ಮತ್ತು ಇದು ಮೂತ್ರಪಿಂಡದ ರೋಗಿಗಳಿಗೆ ಉತ್ತಮ ಆಹಾರವಾಗಿದೆ.

Published by:Ashwini Prabhu
First published: