New Research: ನೀವು ಈ ಪಾತ್ರೆಗಳನ್ನು ನಿರಂತರವಾಗಿ ಬಳಸುತ್ತಿದ್ದೀರಾ? ಲಿವರ್ ಕ್ಯಾನ್ಸರ್ ಬರಬಹುದು ಎಚ್ಚರ

ಸಾಮಾನ್ಯವಾಗಿ ನಾವು ನಮ್ಮ ಅಡುಗೆ ಮನೆಯಲ್ಲಿ ಬಳಸುವ ಹಲವು ವಸ್ತುಗಳು ಅಥವಾ ಪಾತ್ರೆ-ಪಗಡೆಗಳಲ್ಲಿ ಸಿಂಥೆಟಿಕ್ ರಾಸಾಯನಿಕಗಳಿರುತ್ತವೆ (synthetic chemical). ದೀರ್ಘಕಾಲದವರೆಗೆ ಅಂತಹ ರಾಸಾಯನಿಕಗಳಿರುವ ವಸ್ತುಗಳನ್ನು ನಿರಂತರವಾಗಿ ಬಳಸುತ್ತಿದ್ದರೆ ಲಿವರ್ ಕ್ಯಾನ್ಸರ್ (Liver Cancer) ಉಂಟಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿರುವುದಾಗಿ ಹೇಳಿದ್ದಾರೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅಮೆರಿಕದ ಲಾಸ್ ಎಂಜಲೀಸ್ ನಲ್ಲಿರುವ ಯುನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾದ ಸಂಶೋಧಕರು (Researchers) ಹೊಸ ಶೋಧನೆಯೊಂದನ್ನು ಮಾಡಿದ್ದಾರೆಂದು ವರದಿಯಾಗಿದೆ. ಸಾಮಾನ್ಯವಾಗಿ ನಾವು ನಮ್ಮ ಅಡುಗೆ ಮನೆಯಲ್ಲಿ ಬಳಸುವ ಹಲವು ವಸ್ತುಗಳು ಅಥವಾ ಪಾತ್ರೆ-ಪಗಡೆಗಳಲ್ಲಿ ಸಿಂಥೆಟಿಕ್ ರಾಸಾಯನಿಕಗಳಿರುತ್ತವೆ (synthetic chemical). ದೀರ್ಘಕಾಲದವರೆಗೆ ಅಂತಹ ರಾಸಾಯನಿಕಗಳಿರುವ ವಸ್ತುಗಳನ್ನು ನಿರಂತರವಾಗಿ ಬಳಸುತ್ತಿದ್ದರೆ ಲಿವರ್ ಕ್ಯಾನ್ಸರ್ (Liver Cancer) ಉಂಟಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿರುವುದಾಗಿ ಹೇಳಿದ್ದಾರೆ. ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ, ಕೆಲವು ಸಿಂಥೆಟಿಕ್ ರಾಸಾಯನಿಕಗಳು ಪ್ರಸ್ತುತ ಸಮಯದಲ್ಲಿ ನಿತ್ಯ ಜೀವನಶೈಲಿಯ ಅವಿಭಾಜ್ಯಗ ಅಂಗಗಳಂತಾಗಿವೆ, ಈ ಶಾಶ್ವತವಾಗಿರುವ ರಾಸಾಯನಿಕಗಳು (Forever Chemicals) ನಾನ್ ಸ್ಟಿಕ್ ತವಾದಿಂದ ಹಿಡಿದು, ವಾಟರ್ ಪ್ರೂಫ್ ಬಟ್ಟೆಗಳು, ಸ್ವಚ್ಛತೆಯ ಪರಿಕರಗಳು, ಹಾಗೂ ಶಾಂಪೂಗಳಲ್ಲೂ ಸಹ ಕಂಡುಬರುತ್ತವೆ ಎನ್ನಲಾಗಿದೆ.

ಇಂತಹ ವಸ್ತುಗಳನ್ನು ಮನುಷ್ಯರು ನಿತ್ಯ ಬಳಸುವುದು ಸಾಮಾನ್ಯ. ಆದರೆ, ಸಂಶೋಧನೆಯು ಈ ರಾಸಾಯನಿಕದೊಂದಿಗೆ ದೀರ್ಘಕಾಲದವರೆಗೆ ಒಡ್ಡುವಿಕೆಯಾದಾಗ ಅದರಿಂದ ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದನ್ನು ಕಂಡುಕೊಂಡಿದ್ದು ಇದು ನಿಜಕ್ಕೂ ಒಂದು ರೀತಿಯ ಆಘಾತಕಾರಿ ಸುದ್ದಿ ಎಂದೇ ಹೇಳಬಹುದು.

ಸಿಂಥೆಟಿಕ್ ರಾಸಾಯನಿಕಗಳೆಂದರೇನು ?
ಡೈಲಿ ಮೇಲ್ ವರದಿ ಮಾಡಿರುವಂತೆ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಕಂಡುಕೊಂಡ ವಿಷಯವೆಂದರೆ ಈ ರೀತಿಯ ರಾಸಾಯನಿಕಗಳನ್ನು ಹೊಂದಿರುವ ವಸ್ತುಗಳೊಂದಿಗೆ ಗರಿಷ್ಠ ಮಟ್ಟದ ಸಂಪರ್ಕ ಹೊಂದಿರುವಿಕೆಯನ್ನು ದಾಖಲಿಸಿದವರು ಕಾಮನ್ ಲಿವರ್ ಕ್ಯಾನ್ಸರ್ ಆಗಿರುವ ನಾನ್ ವೈರಲ್ ಹೆಪಾಟೋಸೆಲ್ಯೂಲರ್ ಕಾರ್ಸಿನೊಮಾವನ್ನು ತಗುಲಿಸಿಕೊಳ್ಳುವ ಸಾಧ್ಯತೆ 4.5 ಪಟ್ಟು ಹೆಚ್ಚಾಗಿ ಹೊಂದಿರುತ್ತಾರೆ ಎಂಬ ಸಂಗತಿ.

ಇದನ್ನೂ ಓದಿ: Edema Problem: ಎಡಿಮಾ ಕಾಯಿಲೆ ಉಂಟಾಗಲು ಕಾರಣಗಳೇನು ಮತ್ತು ಯಾವ ಪದಾರ್ಥಗಳ ಸೇವನೆ ತೊಂದರೆಯುಂಟು ಮಾಡುತ್ತದೆ?

ಸಾಮಾನ್ಯವಾಗಿ ಈ ಸಿಂಥೆಟಿಕ್ ರಾಸಾಯನಿಕಗಳೆಂದರೆ ಅವು ಪಾಲಿ ಫ್ಲ್ಯೂರೊಅಲ್ಕಿಲ್ ಸಬ್ಸ್ಟನ್ಸ್ (PFAS) ಹಾಗೂ ಪರ್ ಫ್ಲೂವೊ ಆಕ್ಟೇನ್ ಸಲ್ಫೇಟ್ (PFOS). ಸದ್ಯ ನಡೆಸಲಾಗಿರುವ ಈ ಅಧ್ಯಯನ ತಂಡದ ಡಾ. ಜೆಸ್ಸೆ ಗುಡ್ರಿಚ್ ಅವರು ಈ ಹೇಳುತ್ತಾರೆ, "ಲಿವರ್ ಕಾಯಿಲೆಗಳ ಅತಿ ಅಂತಿಮ ಹಾಗೂ ಗಂಭೀರವಾದ ಸಮಸ್ಯೆಯಾಗಿದೆ ಲಿವರ್ ಕ್ಯಾನ್ಸರ್. ನಾವು ಮಾಡಿದ ಈ ಅಧ್ಯಯನ ಮೊದಲನೇಯ ಅಂತಹ ಅಧ್ಯಯನವಾಗಿದೆ ಎಂದರೆ ಅದರಲ್ಲಿ PFAS ಗಳು ಮನುಷ್ಯನೊಂದಿಗೆ ಸಂಪರ್ಕಕ್ಕೆ ಬಂದು ಈ ಕಾಯಿಲೆ ಉಂಟಾಗುವುದಕ್ಕೆ ಪೂರಕವಾಗಿರುವುದನ್ನು ತೋರಿಸುತ್ತದೆ". PFAS ಮತ್ತು PFOS ಗಳನ್ನು ಸಾಮಾನ್ಯವಾಗಿ "ಫಾರೆವರ್ ಕೆಮಿಕಲ್ಸ್" ಎಂದು ಕರೆಯುತ್ತಾರೆ, ಏಕೆಂದರೆ ಇದು ಮನುಷ್ಯನ ದೇಹದಲ್ಲಾಗಲಿ ಅಥವಾ ಪರಿಸರದಲ್ಲಾಗಲಿ ಡಿಗ್ರೇಡ್ ಆಗಲು ವರ್ಷಾನುಗಟ್ಟಲೇ ಸಮಯವನ್ನು ತೆಗೆದುಕೊಳ್ಳುತ್ತದೆ.

ಅಧ್ಯಯನದ ಕುರಿತು ತಜ್ಞರು ಏನು ಹೇಳಿದ್ದಾರೆ? 
ಇನ್ನು ಪರಿಣಿತರು ಹಾಗೂ ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಈಗಾಗಲೇ ಇದನ್ನು ಬಳಸುತ್ತಲೇ ಇರುವುದರಿಂದ ಆಗಬೇಕಾದ ಹಾನಿ ಅದಾಗಲೇ ಆಗಿ ಹೋಗಿದೆ, ಈ ಮುಂಚೆ ಈ ರಾಸಾಯನಿಕಗಳು ಅಷ್ಟೊಂದು ಅಪಾಯಕಾರಿಯಲ್ಲ ಎಂದೇ ನಂಬಲಾಗಿತ್ತು, ಆದರೆ ಈಗ ಅದರ ಅಪಾಯದ ಸ್ಪಷ್ಟ ಮುಖ ಹೊರಬಂದಂತಾಗಿದೆ ಎಂಬ ನಿಲುವನ್ನು ಹೊರಹಾಕಿದ್ದಾರೆಂತಲೇ ಅನ್ನಬಹುದು.

ಈ ಅಧ್ಯಯನ ಹೇಗೆ ಮಾಡಲಾಯಿತು 
ಈ ಅಧ್ಯಯನದಲ್ಲಿ ಪ್ರಮುಖವಾಗಿ ಸಂಶೋಧಕರು 50 ಜನ ಲಿವರ್ ಕ್ಯಾನ್ಸರ್ ಹೊಂದಿರುವ ಹಾಗೂ 50 ಜನ ಲಿವರ್ ಕ್ಯಾನ್ಸರ್ ಇಲ್ಲದಿರುವವರ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಎರಡೂ ವರ್ಗಗಳ ಜನರ ರಕ್ತದ ಮಾದರಿಗಳನ್ನು ಪಡೆದು ಅದನ್ನು ವಿವರವಾಗಿ ಅಭ್ಯಸಿಸಲಾಗಿದೆ. ಕ್ಯಾನ್ಸರ್ ತಗುಲಿಸಿಕೊಂಡ ಜನರ ರಕ್ತದ ಮಾದರಿಗಳಲ್ಲಿ ಹಲವು ಬಗೆಯ ರಾಸಾಯನಿಕಗಳಿರುವುದನ್ನು ಗಮನಿಸಲಾಗಿದೆ. ರಾಸಾಯನಿಕಗಳ ಹೆಚ್ಚಿನ ಮಟ್ಟವು ಕ್ಯಾನ್ಸರ್ ಕಾಣಿಸಿಕೊಳ್ಳಬಹುವ ಸಾಧ್ಯತೆಯನ್ನೂ ಸೂಚಿಸುತ್ತದೆ ಎಂಬುದನ್ನು ಈ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಇದನ್ನೂ ಓದಿ:  Health And Food: ಉತ್ತಮವೆಂದು ಪರಿಗಣಿಸುವ ಪದಾರ್ಥಗಳು ಆರೋಗ್ಯಕ್ಕೆ ಹೇಗೆ ಹಾನಿಕಾರಕ ಗೊತ್ತಾ?

ಸಂಶೋಧಕರು ಈ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಣೆ ನಡೆಸಿದ್ದು ಅವರು ಹೇಳುವ ಪ್ರಕಾರ, PFOS ರಾಸಾಯನಿಕಗಳು ಒಂದೊಮ್ಮೆ ಲಿವರ್ ನಲ್ಲಿ ಪ್ರವೇಶಿಸಿದ ಮೇಲೆ ಅವು ಅಲ್ಲಿರುವ ಚಯಾಪಚಯ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ ಹಾಗೂ ಇದು ಮುಂದೆ ಉಬ್ಬಿದ ಲಿವರ್ ಕಾಯಿಲೆ ಸ್ಥಿತಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಸ್ಥಿತಿಯಿಂದ ಬಳಲುವ ರೋಗಿಗಳಲ್ಲಿ ಲಿವರ್ ಕ್ಯಾನ್ಸರ್ ಉಂಟಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ.
Published by:Ashwini Prabhu
First published: