• Home
  • »
  • News
  • »
  • lifestyle
  • »
  • Mind Research: ಮೆದುಳಿನ ಕುರಿತು ಸಂಶೋಧನೆಯಲ್ಲಿ ತಿಳಿದುಬಂತು ಆಶ್ಚರ್ಯಕರ ಸಂಗತಿ!

Mind Research: ಮೆದುಳಿನ ಕುರಿತು ಸಂಶೋಧನೆಯಲ್ಲಿ ತಿಳಿದುಬಂತು ಆಶ್ಚರ್ಯಕರ ಸಂಗತಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿಯೊಂದೂ ಮೆದುಳಿನ ಅರ್ಧಗೋಳಗಳು ತನ್ನದೇ ಆದ ಗುಣಲಕ್ಷಣಗಳನ್ನು ಮತ್ತು ಮನುಷ್ಯನಿಗೆ ಅಗತ್ಯವಾದ ನಿರ್ದಿಷ್ಟ ಕಾರ್ಯನಿರ್ವಹಣೆಯನ್ನು ಪ್ರಸ್ತುತಪಡಿಸುತ್ತವೆ.

  • Share this:

    ಮೆದುಳು, ತಮ್ಮ ಬುದ್ಧಿಶಕ್ತಿಯ, ಆಲೋಚನ ಶಕ್ತಿಯ (Thinking Power) ಕೇಂದ್ರ ಅಂಗ. ಮೆದುಳು ಎಷ್ಟು ಮುಖ್ಯವೋ ಅದನ್ನು ರೂಪಿಸುವ ರಚನೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು (Importance) ಹೊಂದಿವೆ, ಏಕೆಂದರೆ ಅವು ಮಾನವ ದೇಹದಲ್ಲಿ (Human Body) ಅದರ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಅನುಮತಿಸಲು ಕಾರಣವಾಗಿವೆ. ಮೆದುಳನ್ನು (Mind) ರೂಪಿಸುವ ರಚನೆಗಳನ್ನು ನಾವು ಅರ್ಧಗೋಳಗಳಾಗಿ ವಿಂಗಡಿಸಿದ್ದೇವೆ. ಇವುಗಳನ್ನು ಎಡ ಗೋಳಾರ್ಧ ಮತ್ತು ಬಲ ಗೋಳಾರ್ಧ ಎಂದು ಎರಡು (Two) ಭಾಗಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಪ್ರತಿಯೊಂದೂ ಮೆದುಳಿನ ಅರ್ಧಗೋಳಗಳು ತನ್ನದೇ ಆದ ಗುಣಲಕ್ಷಣಗಳನ್ನು ಮತ್ತು ಮನುಷ್ಯನಿಗೆ (Human) ಅಗತ್ಯವಾದ ನಿರ್ದಿಷ್ಟ ಕಾರ್ಯನಿರ್ವಹಣೆಯನ್ನು ಪ್ರಸ್ತುತಪಡಿಸುತ್ತವೆ.


    ಸಂಶೋಧನೆ ಏನು ಹೇಳಿದೆ?


    ಇತ್ತೀಚಿನ ಮೆದುಳಿನ ಪ್ಲಾಸ್ಟಿಸಿಟಿ ಮತ್ತು ದೃಷ್ಟಿಗೋಚರ ಗ್ರಹಿಕೆ ಸಂಶೋಧನೆಯ ಸಮಯದಲ್ಲಿ, ಬಾಲ್ಯದಲ್ಲಿ ಕೆಲವು ಆರೋಗ್ಯ ಸಮಸ್ಯೆಯಿಂದ ಮಿದುಳಿನ ಅರ್ಧವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ ವ್ಯಕ್ತಿಗಳಲ್ಲೂ ಸಹ ಹೆಚ್ಚಿನ ನೆನಪಿನ ಶಕ್ತಿಯನ್ನು ಹೊಂದಿದ್ದಾರೆ ಎಂದು ಅಧ್ಯಯನ ಕಂಡುಕೊಂಡಿದೆ.


    ಅಂದರೆ, ನಮ್ಮ ಮೆದುಳಿನ ಎರಡೂ ಗೋಳಾರ್ಧದ ಕೆಲವನ್ನು ಸುಮಾರು ಎಂಬತ್ತರಷ್ಟು ಮಟ್ಟಿಗೆ ಒಂದೇ ಗೋಳಾರ್ಧ ನಿರ್ವಹಿಸುತ್ತದೆ. ಪದ ಗುರುತಿಸುವಿಕೆ, ಮುಖಗಳನ್ನು ಗುರುತಿಸುವುದು ಬೇರೆ ಬೇರೆ ಗೋಳಾರ್ಧದ ಕೆಲಸವಾದರೂ ಒಂದೇ ಗೋಳಾರ್ಧವೂ ಸಹ ಇದನ್ನು ಬೆಂಬಲಿಸುತ್ತದೆ ಎಂಬುದನ್ನು ಸಂಶೋಧನೆ ಕಂಡುಕೊಂಡಿದೆ.


    ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನ


    ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರು, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (PNAS) ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಿದ ಸಂಶೋಧನೆಗಳು, ಮಾನವರಲ್ಲಿ ನ್ಯೂರೋಪ್ಲಾಸ್ಟಿಸಿಟಿಯನ್ನು ನಿರೂಪಿಸುವ ಮೊದಲ ಪ್ರಯತ್ನವಾಗಿದೆ ಮತ್ತು ಒಂದೇ ಮೆದುಳಿನ ಅರ್ಧಗೋಳವು ಎರಡು ಬದಿಗಳ ನಡುವೆ ಸಾಮಾನ್ಯವಾಗಿ ವಿಭಜಿಸುವ ಕಾರ್ಯಗಳನ್ನು ನಿರ್ವಹಿಸುತ್ತವೆ ಎಂಬುದನ್ನು ನಿರೂಪಿಸಿವೆ.


    "ಹೆಮಿಸ್ಫೆರೆಕ್ಟಮಿ ರೋಗಿಗಳೊಂದಿಗಿನ ಅಧ್ಯಯನ ಒಂದು ಮೆದುಳಿನ ಅರ್ಧಗೋಳದ ಕ್ರಿಯಾತ್ಮಕ ಸಾಮರ್ಥ್ಯದ ಮೇಲಿನ ಮಿತಿಗಳನ್ನು ಅಧ್ಯಯನ ಮಾಡಲು ನಮಗೆ ಅವಕಾಶ ಮಾಡಿಕೊಟ್ಟಿತು. ಈ ಅಧ್ಯಯನದ ಫಲಿತಾಂಶಗಳೊಂದಿಗೆ, ನಾವು ಈಗ ಮಾನವ ನ್ಯೂರೋಪ್ಲ್ಯಾಸ್ಟಿಸಿಟಿಯ ಬಗ್ಗೆ ಹೆಚ್ಚಿನಮಾಹಿತಿ ಹೊಂದಿದ್ದೇವೆ ಮತ್ತು ಅಂತಿಮವಾಗಿ ಮೆದುಳಿನ ಮರುಸಂಘಟನೆಯ ಸಾಮರ್ಥ್ಯಗಳನ್ನು ಪರೀಕ್ಷಿಸಲು ಪ್ರಾರಂಭಿಸಬಹುದು" ಎಂದು ನೇತ್ರವಿಜ್ಞಾನ ಮತ್ತು ಮನೋವಿಜ್ಞಾನದ ಹಿರಿಯ ಲೇಖಕಿ ಮರ್ಲೀನ್ ಬೆಹ್ರ್ಮನ್ ಹೇಳಿದರು.


    ಎಡ ಮತ್ತು ಬಲ ಗೋಳಾರ್ಧ ಕಾರ್ಯವೇನು?


    ನ್ಯೂರೋಪ್ಲ್ಯಾಸ್ಟಿಸಿಟಿ ಎನ್ನುವುದು ಒಂದು ಪ್ರಕ್ರಿಯೆಯಾಗಿದ್ದು ಅದು ಮೆದುಳಿಗೆ ತನ್ನ ಚಟುವಟಿಕೆಯನ್ನು ಬದಲಾಯಿಸಲು ಮತ್ತು ಪರಿಸರದಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಯಿಸಲು ರಚನಾತ್ಮಕವಾಗಿ ಅಥವಾ ಕ್ರಿಯಾತ್ಮಕವಾಗಿ ಅನುಮತಿಸುತ್ತದೆ. ಮಾನವನ ವಯಸ್ಸಾದಂತೆ, ಅರ್ಧಗೋಳಗಳೆಂದು ಕರೆಯಲ್ಪಡುವ ನಮ್ಮ ಮೆದುಳಿನ ಎರಡು ಭಾಗಗಳು ಹೆಚ್ಚು ಪರಿಣತಿ ಹೊಂದುತ್ತವೆ. ಈ ಎರಡು ಅರ್ಧಗೋಳಗಳು ವಿಭಿನ್ನ ಮುಖ್ಯ ಜವಾಬ್ದಾರಿಗಳನ್ನು ಅಳವಡಿಸಿಕೊಳ್ಳುತ್ತವೆ: ಎಡ ಗೋಳಾರ್ಧವು ಮುದ್ರಿತ ಪದಗಳನ್ನು ಓದುವುದನ್ನು ಬೆಂಬಲಿಸಿದರೆ, ಬಲ ಗೋಳಾರ್ಧವು ಮುಖಗಳ ಗುರುತಿಸುವಿಕೆಯನ್ನು ಬೆಂಬಲಿಸುತ್ತದೆ.


    ಇದನ್ನೂ ಓದಿ: ವೀಗನ್ ಡಯೆಟ್​ ಮಾಡೋದ್ರಿಂದ ತೂಕ ಇಳಿಕೆ ಮಾತ್ರ ಅಲ್ಲ ಈ ಆರೋಗ್ಯ ಪ್ರಯೋಜನಗಳು ಸಿಗುತ್ತೆ


    ಅಧ್ಯಯನದ ಪರೀಕ್ಷೆ ಹೇಗೆ ನಡೆಯಿತು?


    ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ತಂಡವು ಪದ ಗುರುತಿಸುವಿಕೆ ಸಾಮರ್ಥ್ಯವನ್ನು ನಿರ್ಣಯಿಸಲು, ಸಂಶೋಧಕರು ತಮ್ಮ ಭಾಗವಹಿಸುವವರಿಗೆ ಹೆಚ್ಚು ಕಡಿಮೆ ಒಂದೇ ರೀತಿಯ ಜೋಡಿ ಪದಗಳನ್ನು ನೀಡಿದರು. "ಸೋಪ್" ಮತ್ತು "ಸೂಪ್" ಅಥವಾ "ಟ್ಯಾಂಕ್" ಮತ್ತು "ಟ್ಯಾಕ್" ಇಂತಹ ಒಂದೇ ಅಕ್ಷರದಿಂದ ಭಿನ್ನವಾಗಿರುವ ಪದಗಳನ್ನು ಜನರಿಗೆ ನೀಡಿದರು. ಇಲ್ಲಿ ಮಕ್ಕಳು ಕೂಡ ವಿಭಿನ್ನ ಮುಖಗಳನ್ನು ಚೆನ್ನಾಗಿ ಗುರುತಿಸಿದ್ದಾರೆ ಎಂದು ಸಂಶೋಧಕರು ಹೇಳಿದರು.


    ಪರೀಕ್ಷೆಯಲ್ಲಿ ಸಂಶೋಧಕರು ಜನರ ಜೋಡಿ ಫೋಟೋಗಳನ್ನು ತೋರಿಸಿದರು. ಈ ಫೋಟೋಗಳನ್ನು ಮತ್ತು ಪದಗಳನ್ನು ನೀಡಿ ಜೋಡಿ ಪದಗಳು ಅಥವಾ ಜೋಡಿ ಮುಖಗಳು ಒಂದೇ ಅಥವಾ ವಿಭಿನ್ನವಾಗಿದೆಯೇ ಎಂದು ನಿರ್ಧರಿಸಬೇಕಾಗಿ ಕೇಳಿಕೊಂಡರು.


    80%ರಷ್ಟು ಮೆದುಳಿನ ಒಂದು ಗೋಳಾರ್ಧವು ಪದಗಳನ್ನು, ಮುಖ ಗುರುತಿಸುವಿಕೆಗೆ ಬೆಂಬಲ ನೀಡಿದೆ


    ಆಶ್ಚರ್ಯಕರವಾಗಿ ಒಂದೇ ಗೋಳದ ಅರ್ಧಗೋಳವು ಪದ ಮತ್ತು ಮುಖವನ್ನು ಗುರುತಿಸುವ ಆ ಎರಡೂ ಕಾರ್ಯಗಳನ್ನು ನಿರ್ವಹಿಸಿತು ಎಂದು ಸಂಶೋಧಕರು ಪರೀಕ್ಷೆಯಲ್ಲಿ ಕಂಡುಕೊಂಡರು. ನಿಯಂತ್ರಣ ವಿಷಯಗಳು ಮತ್ತು ಅರ್ಧಗೋಳದೊಂದಿಗಿನ ಜನರ ನಡುವಿನ ಪದ ಮತ್ತು ಮುಖ ಗುರುತಿಸುವಿಕೆಯ ಸಾಮರ್ಥ್ಯವು ವಿಭಿನ್ನವಾಗಿದೆ, ಆದರೆ ವ್ಯತ್ಯಾಸಗಳು ತುಂಬಾನೇ ಕಡಿಮೆ ಇದ್ದು, ಒಂದೇ ಮೆದುಳಿನ ಗೋಳಾರ್ಧವು ಪದಗಳನ್ನು, ಮುಖ ಗುರುತಿಸುವಿಕೆಯನ್ನು 80 ಪ್ರತಿಶತದಷ್ಟು ಬೆಂಬಲಿಸಿವೆ ಎಂದು ಅಧ್ಯಯನ ಕಂಡುಕೊಂಡಿದೆ.


    ಇದನ್ನೂ ಓದಿ: ಮಾಸ್ತಿ ಪುಳಿಯೊಗರೆ, ಡಿವಿಜಿ ತಟ್ಟೆ ಇಡ್ಲಿ - ಇದು ಕನ್ನಡದ ಕಂಪು ಸೂಸುವ ಬೆಂಗಳೂರಿನ ತಿಂಡಿ ಕೇಂದ್ರ!


    ಈ ಸಂಶೋಧನೆಯನ್ನು ಉದ್ದೇಶಿಸಿ ಮಿದುಳಿನ ಅರ್ಧವನ್ನು ಕಳೆದುಕೊಳ್ಳುವುದು ಅದರ ಅರ್ಧದಷ್ಟು ಕ್ರಿಯಾತ್ಮಕತೆಯನ್ನು ಕಳೆದುಕೊಳ್ಳುವುದಕ್ಕೆ ಸಮನಾಗಿರುವುದಿಲ್ಲ ಎಂದು ಪಿಟ್ಸ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ವೈದ್ಯಕೀಯ ವಿಜ್ಞಾನಿಗಳ ತರಬೇತಿ ಕಾರ್ಯಕ್ರಮದ ವಿದ್ಯಾರ್ಥಿಯಾದ ಮೊದಲ ಲೇಖಕ ಪಿಎಚ್‌ಡಿ ಸಂಜಾತ ಮೈಕೆಲ್ ಗ್ರಾನೋವೆಟರ್, ಹೇಳಿದರು.

    First published: