Diabetes: ನಮ್ಮ ದೇಹದಲ್ಲಿಯೇ ಇದೆಯಂತೆ ಮಧುಮೇಹವನ್ನು ಹೆಚ್ಚಿಸುವ ಪ್ರೋಟೀನ್: ಸಂಶೋಧನೆಯಲ್ಲಿ ಬಹಿರಂಗ

Research: ಮನುಷ್ಯರು ಸೇರಿದಂತೆ ಸಸ್ತನಿಗಳಲ್ಲಿ ಕಂಡು ಬರುತ್ತದೆ. ಇದು ಪ್ರಮುಖ ಶಾರೀರಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಅಲ್ಲದೇ ಇದು ರಕ್ತದಲ್ಲಿನ ಗ್ಲೂಕೋಸ್ / ಗ್ಲುಕಗನ್‌ಗೆ ಪ್ರತಿಕ್ರಿಯೆಯಾಗಿ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯನ್ನು ತಡೆಯುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧುಮೇಹ (Diabetes) ಒಂದು ದೊಡ್ಡ ಕಾಯಿಲೆಯಾಗಿ ಪರಿವರ್ತನೆಯಾಗುತ್ತಿದೆ. ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಡಯಾಬಿಟಿಸ್ ಆವರಿಸಿಬಿಟ್ಟಿದೆ. ನಿಮಗೆಲ್ಲಾ ತಿಳಿದಿರುವಂತೆ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿ ಸಕ್ಕರೆಯನ್ನು (Sugar) ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಧುಮೇಹವೆನ್ನುತ್ತೇವೆ. ಅಥವಾ ಸ್ಟಿರಾಯ್ಡ್‌ಗಳು, ಕೆಲವು ರೀತಿಯ ವೈರಸ್‌ಗಳು, ಸೋಂಕುಗಳು ಮತ್ತು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ.

ಆದರೆ ನಿಮಗೆ ಗೊತ್ತಾ? ಹೊಸ ಅಧ್ಯಯನ ಹೇಳುವ ಪ್ರಕಾರ ನಮಗೆ ಅನುವಂಶಿಕವಾಗಿ ಮತ್ತು ನಮ್ಮ ದೇಹದಲ್ಲಿರುವ ಕೆಲವು ಪ್ರೋಟೀನ್-ಜೀನ್‌ಗಳು ಸಹ ಮಧುಮೇಹವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ ಎಂದು ಸಂಶೋಧನೆಗಳು ಕಂಡುಕೊಂಡಿವೆ.

ಹೌದು ಸಂಶೋಧನೆಯೊಂದು ಭಾರತೀಯರಲ್ಲಿ ಮಧುಮೇಹವನ್ನು ಹೆಚ್ಚಿಸುವ ಜೀನ್/ಪ್ರೋಟೀನ್ ರೂಪಾಂತರವನ್ನು ಗುರುತಿಸಿದೆ. ಈ ರೂಪಾಂತರವನ್ನು ಹೊಂದಿರುವ ಜನರು ಮಧುಮೇಹದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆಂದು ಹೇಳಿದೆ.

ಇದನ್ನೂ ಓದಿ: ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಹೀಗೆ ಮಾಡಿ ಸಾಕು ಥಟ್​ ಅಂತ ಸಮಾಧಾನವಾಗುತ್ತೆ

ಪ್ರೋಟೀನ್-ಜೀನ್‌ಗಳಿಂದ ಮಧುಮೇಹದ ಅಪಾಯ ಹೆಚ್ಚಳ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ (IIT-M) ನೇತೃತ್ವದ ಅಂತರಾಷ್ಟ್ರೀಯ ಸಂಶೋಧನಾ ತಂಡವುಭಾರತೀಯರು ಮತ್ತು ಇತರ ದಕ್ಷಿಣ ಏಷ್ಯಾದವರಲ್ಲಿ ಮಧುಮೇಹ, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುವ ಜೀನ್/ಪ್ರೋಟೀನ್ ರೂಪಾಂತರವನ್ನು ಗುರುತಿಸಿದೆ.

15 ಪ್ರತಿಶತ ಭಾರತೀಯ ಮತ್ತು ಇತರ ದಕ್ಷಿಣ ಏಷ್ಯಾದ ಜನರಲ್ಲಿ ಈ ರೂಪಾಂತರಿ ಜೀನ್ ಮತ್ತು ಪ್ರೋಟೀನ್ ಕಂಡು ಬಂದಿದೆ. ಸಾಮಾನ್ಯ ಡಯಾಬಿಟಿಕ್ ಸಮಸ್ಯೆ ಹೊಂದಿರುವರಿಗೆ ಹೋಲಿಕೆ ಮಾಡಿದರೆ, ಈ ರೂಪಾಂತರವನ್ನು ಹೊಂದಿರುವ ಜನರು ಅಧಿಕ ರಕ್ತದೊತ್ತಡ, ಟೈಪ್ -2 ಮಧುಮೇಹ ಮತ್ತು ಪರಿಧಮನಿಯ ಅಪಧಮನಿ ಕಾಯಿಲೆಯನ್ನು ಹೊಂದುವ ಸಾಧ್ಯತೆ ಒಂದೂವರೆ ಪಟ್ಟು ಹೆಚ್ಚು ಎಂದು ಸಂಶೋಧನೆಯ ವರದಿಗಳು ಹೇಳಿವೆ.

ಈ ಸಂಯೋಜನೆಯು ಭಾರತೀಯರು ಮತ್ತು ಇತರ ದಕ್ಷಿಣ ಏಷ್ಯಾದವರಲ್ಲಿ ಚಯಾಪಚಯ ರೋಗಗಳ ಹೆಚ್ಚಿನ ಹರಡುವಿಕೆಗೆ ಕಾರಣವಾಗಬಹುದು. ಅದರ ಫಲಿತಾಂಶಗಳನ್ನು ಅಮೆರಿಕನ್ ಡಯಾಬಿಟ್‌ನ ಪ್ರಮುಖ ಜರ್ನಲ್ ಆಗಿರುವಪೀರ್-ರಿವ್ಯೂಡ್ 'ಡಯಾಬಿಟಿಸ್' ನಲ್ಲಿ ಪ್ರಕಟಿಸಲಾಗಿದೆ.

ಈ ಸಂಶೋಧನೆಯ ನೇತೃತ್ವವನ್ನು ಪ್ರೊ. ನಿತೀಶ್ ಆರ್ ಮಹಾಪಾತ್ರ, ಬಯೋಟೆಕ್ನಾಲಜಿ ವಿಭಾಗ, ಭೂಪತ್ ಮತ್ತು ಜ್ಯೋತಿ ಮೆಹ್ತಾ ಸ್ಕೂಲ್ ಆಫ್ ಬಯೋಸೈನ್ಸ್, IIT-M, ಮತ್ತು ಇತರೆ ಹಲವಾರು ಸಂಶೋಧಕರು ಕಂಡುಕೊಂಡಿದ್ದಾರೆ.

ದಕ್ಷಿಣ ಏಷ್ಯಾದವರು ಹೃದಯರಕ್ತನಾಳದ ಮತ್ತು ಚಯಾಪಚಯ ರೋಗಗಳ ಹೆಚ್ಚಿನ ಅಪಾಯದಲ್ಲಿದ್ದಾರೆ. ಪರಿಸರದ ಜೊತೆಗೆ ನಮ್ಮ ಅನುವಂಶಿಕ ಸ್ಥಿತಿ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ನಮ್ಮ ರೋಗದ ಅಪಾಯವನ್ನು ಹೆಚ್ಚಿಸುವ ಪ್ರಮುಖ ಅನುವಂಶಿಕ ರೂಪಾಂತರಗಳನ್ನು ತಿಳಿದುಕೊಳ್ಳುವ ಅಧ್ಯಯನ ನಡೆಯಬೇಕಿದೆ.

ಇನ್ಸುಲಿನ್ ಬಿಡುಗಡೆಯನ್ನು ತಡೆಯುತ್ತದೆ

ನಮ್ಮ ದೇಹದಲ್ಲಿನ ಕಾರ್ಡಿಯೋ-ಮೆಟಬಾಲಿಕ್ ಎಂಬ ಅನುವಂಶಿಕ ಅಂಶ ಅಪಾಯಕಾರಿ ಕಾಯಿಲೆಗಳನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ ಎಂದು ನಮ್ಮ ಸಂಶೋಧನೆ ಕಂಡು ಕೊಂಡಿದೆ ಎನ್ನುತ್ತಾರೆ ಪ್ರೊ.ಮಹಾಪಾತ್ರ

ಪ್ಯಾಂಕ್ರಿಯಾಸ್ಟಾಟಿನ್ (ಪೆಪ್ಟೈಡ್) ಎಂಬುದು ಕ್ರೋಮೋಗ್ರಾನಿನ್ ಎ (CHGA) ಎಂಬ ಪ್ರೋಟೀನ್‌ನ ಒಂದು ಸಣ್ಣ ಭಾಗವಾಗಿದೆ.

ಮನುಷ್ಯರು ಸೇರಿದಂತೆ ಸಸ್ತನಿಗಳಲ್ಲಿ ಕಂಡು ಬರುತ್ತದೆ. ಇದು ಪ್ರಮುಖ ಶಾರೀರಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಅಲ್ಲದೇ ಇದು ರಕ್ತದಲ್ಲಿನ ಗ್ಲೂಕೋಸ್ / ಗ್ಲುಕಗನ್‌ಗೆ ಪ್ರತಿಕ್ರಿಯೆಯಾಗಿ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯನ್ನು ತಡೆಯುತ್ತದೆ.

ಇದನ್ನೂ ಓದಿ: ನಿಮ್ಮ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಈ ಸ್ಪೆಷಲ್​ ಆಹಾರಗಳನ್ನು ಟ್ರೈ ಮಾಡಿ

ಭಾರತೀಯ ಜನಸಂಖ್ಯೆಯಲ್ಲಿ (n≈400) ಹೃದಯರಕ್ತನಾಳದ ಮತ್ತು ಚಯಾಪಚಯ ರೋಗ ಸ್ಥಿತಿಗಳ ಮೇಲೆ ಈ ಅನುವಂಶಿಕ ಬದಲಾವಣೆಯ ಪರಿಣಾಮವನ್ನು ತಂಡವು ಈ ಮೊದಲೇ ವಿಶ್ಲೇಷಿಸಿತ್ತು.

ಇನ್ನು ಈ ಅಧ್ಯಯನಕ್ಕಾಗಿ ದಕ್ಷಿಣ ಮತ್ತು ಉತ್ತರ ಭಾರತದ ಜನರನ್ನು ಒಳಪಡಿಸಲಿದ್ದಾರೆ. ಅನ್ನ ತಿಂದರೆ ಶುಗರ್ ಬರುತ್ತೆ, ಸಕ್ಕರೆ ತಿಂದರೆ ಶುಗರ್ ಬರುತ್ತೆ ಅನ್ನೋ ಭಯದಲ್ಲಿದ್ದ ಜನರಿಗೆ ನಮ್ಮ ದೇಹದಲ್ಲೇ ಕೆಲವು ಜೀನ್‌ಗಳು ಮಧುಮೇಹವನ್ನು ಉಂಟುಮಾಡುತ್ತವೆ ಎಂಬ ವಿಚಾರ ನಿಜಕ್ಕೂ ಶಾಕಿಂಗ್ .
Published by:Sandhya M
First published: