Dementia: ಹೆಚ್ಚು ಹೊತ್ತು ಒಂದೇ ಕಡೆ ಕುಳಿತುಕೊಳ್ಳುವುದು ಬುದ್ಧಿಮಾಂದ್ಯತೆಗೆ ಕಾರಣವಾಗಬಹುದಂತೆ! ಸಂಶೋಧನೆ ಏನು ಹೇಳಿದೆ?

ದಿನವೀಡಿ ಒಂದೇ ಕಡೆ ಕುಳಿತು ಕೆಲಸ ಮಾಡುವ ವ್ಯಕ್ತಿಗಳಲ್ಲಿ ದೇಹವು ಒಂದು ರೀತಿ ಜಡಗಟ್ಟಿದಂತೆ ರೂಪುಗೊಳ್ಳುತ್ತದೆ. ಈ ಅಭ್ಯಾಸ ಸ್ನಾಯು ಸಮಸ್ಯೆ, ಬೊಜ್ಜು ಇಂತಹ ಹಲವಾರು ಅನಾರೋಗ್ಯ ಸ್ಥಿತಿಗಳಿಗೂ ಕಾರಣವಾಗುತ್ತದೆ. ಅದಕ್ಕೆ ದೇಹವನ್ನು ಸಕ್ರೀಯವಾಗಿಡಲು ಕೆಲಸದ ಮಧ್ಯೆ ಆಗಾಗ್ಗೆ ನಾಲ್ಕು ಹೆಜ್ಜೆ ಓಡಾಡಬೇಕು ಎನ್ನುತ್ತಾರೆ ತಜ್ಞರು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದಿನವೀಡಿ ಒಂದೇ ಕಡೆ ಕುಳಿತು ಕೆಲಸ (Work) ಮಾಡುವ ವ್ಯಕ್ತಿಗಳಲ್ಲಿ ದೇಹವು ಒಂದು ರೀತಿ ಜಡಗಟ್ಟಿದಂತೆ ರೂಪುಗೊಳ್ಳುತ್ತದೆ. ಈ ಅಭ್ಯಾಸ ಸ್ನಾಯು ಸಮಸ್ಯೆ, ಬೊಜ್ಜು (Fat) ಇಂತಹ ಹಲವಾರು ಅನಾರೋಗ್ಯ ಸ್ಥಿತಿಗಳಿಗೂ ಕಾರಣವಾಗುತ್ತದೆ. ಅದಕ್ಕೆ ದೇಹವನ್ನು ಸಕ್ರಿಯವಾಗಿಡಲು (Active) ಕೆಲಸದ ಮಧ್ಯೆ ಆಗಾಗ್ಗೆ ನಾಲ್ಕು ಹೆಜ್ಜೆ ಓಡಾಡಬೇಕು ಎನ್ನುತ್ತಾರೆ ತಜ್ಞರು. ಹೀಗೆ ಕುಳಿತಲ್ಲೇ ಕುಳಿತು ಟಿವಿ (TV) ನೋಡುವಂತಹ ಅಥವಾ ಬೇರೆ ಯಾವುದೇ ಕೆಲಸವನ್ನು ಒಂದೇ ಜಾಗದಲ್ಲಿ ಮಾಡುವ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಇದು ಬೇರೆ ರೀತಿ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವ ಹಿರಿಯ ವ್ಯಕ್ತಿಗಳಿಗೆ ಬುದ್ಧಿಮಾಂದ್ಯತೆಯ ಅಪಾಯ
ಹೌದು, ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವ ಹಿರಿಯ ವ್ಯಕ್ತಿಗಳಿಗೆ ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಅಪಾಯ ಉಂಟಾಗಬಹುದು ಎಂದು ಸಂಶೋಧನೆಗಳು ತಿಳಿಸಿವೆ. ದೈಹಿಕವಾಗಿ ಸಕ್ರಿಯವಾಗಿರುವರಲ್ಲಿಯೂ ಸಹ ಕುಳಿತುಕೊಳ್ಳುವ ನಡವಳಿಕೆ ಬುದ್ಧಿಮಾಂದ್ಯತೆಯ ಅಪಾಯವನ್ನು ಸೃಷ್ಟಿಸಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ.

"ವಯಸ್ಸಾದವರಲ್ಲಿ ಈಗ ಇದು ಕುಳಿತುಕೊಳ್ಳುವ ಸಮಯವೇ ಆದರೂ, ಜಡ ಚಟುವಟಿಕೆಯ ಪ್ರಕಾರವು ಬುದ್ಧಿಮಾಂದ್ಯತೆಯ ಅಪಾಯದ ಮೇಲೆ ಪರಿಣಾಮ ಬೀರುತ್ತದೆ." ಎಂದು USC ಡಾರ್ನ್‌ಸೈಫ್ ಕಾಲೇಜ್ ಆಫ್ ಲೆಟರ್ಸ್, ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಜೈವಿಕ ವಿಜ್ಞಾನ ಮತ್ತು ಮಾನವಶಾಸ್ತ್ರದ ಪ್ರಾಧ್ಯಾಪಕರಾದ ಅಧ್ಯಯನ ಲೇಖಕ ಡೇವಿಡ್ ರೈಚ್ಲೆನ್ ಹೇಳಿದರು.

ಕಂಪ್ಯೂಟರ್ ಅಥವಾ ಓದುವಿಕೆಗೆ ಹೋಲಿಸಿದರೆ ಟಿವಿ ನೋಡುವುದು ಕಡಿಮೆ ಮಟ್ಟದ ಸ್ನಾಯು ಚಟುವಟಿಕೆ ಮತ್ತು ಶಕ್ತಿಯ ಬಳಕೆಯನ್ನು ಒಳಗೊಂಡಿರುತ್ತದೆ. ಮತ್ತು ದೀರ್ಘಕಾಲದವರೆಗೆ ಅಡೆತಡೆಯಿಲ್ಲದ ಕುಳಿತುಕೊಳ್ಳುವಿಕೆಯು ಮೆದುಳಿನಲ್ಲಿ ಕಡಿಮೆ ರಕ್ತದ ಹರಿವಿನೊಂದಿಗೆ ಸಂಬಂಧಿಸಿದೆ ಎಂದು ಸಂಶೋಧನೆಯು ತೋರಿಸಿ ಕೊಟ್ಟಿದೆ.

12 ವರ್ಷಗಳ ನಂತರ 3,507 ಸಕಾರಾತ್ಮಕ ಪ್ರಕರಣಗಳು ಬೆಳಕಿಗೆ
ಯುಕೆಯ ಬಯೋಬ್ಯಾಂಕ್‌ ವರದಿ ಮಾಡಿದ ಡೇಟಾವನ್ನು, ಯುನೈಟೆಡ್ ಕಿಂಗ್‌ಡಮ್‌ನಾದ್ಯಂತ 500,000ಕ್ಕಿಂತ ಹೆಚ್ಚು ಜನರಲ್ಲಿ ವಯಸ್ಸಾದ ವಯಸ್ಕರಲ್ಲಿ ಕುಳಿತುಕೊಳ್ಳುವ ವಿರಾಮ ಚಟುವಟಿಕೆ ಮತ್ತು ಬುದ್ಧಿಮಾಂದ್ಯತೆಯ ನಡುವಿನ ಸಂಭವನೀಯ ಸಂಬಂಧಗಳನ್ನು ತನಿಖೆ ಮಾಡಲು ಬಳಸಲಾಯಿತು.

ಇದನ್ನೂ ಓದಿ: Lancet Study: ತಂಬಾಕು, ಧೂಮಪಾನ, ಮದ್ಯಪಾನ ಪ್ರಿಯರಿಗೆ ಶಾಕ್​ ಕೊಟ್ಟ ವರದಿ!

ಸಂಶೋಧನೆಯಲ್ಲಿ ಪಾಲ್ಗೊಂಡವರಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 145,000 ಜನರು ಪ್ರಾರಂಭದಲ್ಲಿ ಬುದ್ಧಿಮಾಂದ್ಯತೆಯ ರೋಗನಿರ್ಣಯವನ್ನು ಹೊಂದಿರಲಿಲ್ಲ, 2006-2010 ಬೇಸ್‌ಲೈನ್ ಪರೀಕ್ಷೆಯ ಅವಧಿಯಲ್ಲಿ ಜಡ ವರ್ತನೆಯ ಮಟ್ಟವನ್ನು ಸ್ವಯಂ-ವರದಿ ಮಾಡಲು ಟಚ್‌ಸ್ಕ್ರೀನ್ ಪ್ರಶ್ನಾವಳಿಗಳನ್ನು ಅವರಿಗೆ ನೀಡಲಾಯಿತು. ಸುಮಾರು 12 ವರ್ಷಗಳ ಅನುಸರಣೆಯ ನಂತರ, ಸಂಶೋಧಕರು ಬುದ್ಧಿಮಾಂದ್ಯತೆಯ ರೋಗನಿರ್ಣಯವನ್ನು ನಿರ್ಧರಿಸಲು ಆಸ್ಪತ್ರೆಯ ಒಳರೋಗಿಗಳ ದಾಖಲೆಗಳನ್ನು ಬಳಸಿದರು. ಮತ್ತು ಅಲ್ಲಿ ಸುಮಾರು ಅವರು 3,507 ಸಕಾರಾತ್ಮಕ ಪ್ರಕರಣಗಳು ಕಂಡು ಬಂದವು ಎಂದು ಸಂಶೋಧನೆ ತಿಳಿಸಿದೆ.

ಸಂಶೋಧನೆ ಹೇಗೆ ನಡೆಸಲಾಯಿತು 
ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಜನಸಂಖ್ಯಾಶಾಸ್ತ್ರಗಳಿಗೆ, ಉದಾಹರಣೆಗೆ ವಯಸ್ಸು, ಲಿಂಗ, ಜನಾಂಗ/ಜನಾಂಗೀಯತೆ, ಉದ್ಯೋಗದ ಪ್ರಕಾರ ಮತ್ತು ಜೀವನಶೈಲಿಯ ಗುಣಲಕ್ಷಣಗಳಿಗೆ ಅಂದರೆ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನ, ನಿದ್ರೆ ಮತ್ತು ಸಾಮಾಜಿಕ ಸಂಪರ್ಕದಲ್ಲಿ ತೊಡಗಿರುವ ಸಮಯ ಇವುಗಳ ಆಧಾರದ ಮೇಲೆ ತಂಡವು ಪ್ರಶ್ನೆಗಳನ್ನು ಕೇಳಿತ್ತು.

ವಿಜ್ಞಾನಿಗಳು ದೈಹಿಕ ಚಟುವಟಿಕೆಯ ಮಟ್ಟವನ್ನು ಪರಿಗಣಿಸಿದ ನಂತರವೂ ಫಲಿತಾಂಶಗಳು ಒಂದೇ ಆಗಿವೆ. ಹೆಚ್ಚು ದೈಹಿಕವಾಗಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳಲ್ಲಿಯೂ ಸಹ, ಟಿವಿ ನೋಡುವ ಸಮಯವು ಬುದ್ಧಿಮಾಂದ್ಯತೆಯ ಅಪಾಯದೊಂದಿಗೆ ಸಂಬಂಧಿಸಿದೆ ಮತ್ತು ಕಂಪ್ಯೂಟರ್ ಅನ್ನು ಬಳಸುವ ವಿರಾಮ ಸಮಯವು ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನ ತಂಡ ತಿಳಿಸಿದೆ.

ಇದನ್ನೂ ಓದಿ:  Hunger Pangs: ಪದೇ ಪದೇ ಹಸಿವು ಎಂದು ಊಟ ಮಾಡ್ತೀರಾ; ಹಾಗಾದ್ರೆ ಈ ಸುದ್ದಿ ಓದಿ

ಬುದ್ಧಿಮಾಂದ್ಯತೆಯು ಟಿವಿ ನೋಡುವಂತಹ ಹೆಚ್ಚು ನಿಷ್ಕ್ರಿಯ ಜಡ ನಡವಳಿಕೆಗಳಿಗೆ ಸಂಬಂಧಿಸಿದೆ. "ಜಡ ಚಟುವಟಿಕೆಗಳು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಕೆಲವು ಸುಧಾರಣೆಗಳಿಗೆ ಕಾರಣವಾಗಬಹುದು."ಎಂದು ಸಂಶೋಧನ ತಂಡದಲ್ಲಿ ಒಬ್ಬರಾದ ರೈಚ್ಲೆನ್ ಹೇಳಿದ್ದಾರೆ.
Published by:Ashwini Prabhu
First published: