• Home
  • »
  • News
  • »
  • lifestyle
  • »
  • Palak Soup: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!

Palak Soup: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಪಾಲಕ್ ಸೊಪ್ಪಿನ ವಿವಿಧ ಖಾದ್ಯಗಳನ್ನು ತಿಂದಿರಬಹುದು. ಆದ್ರೆ ಅದರ ಪ್ರಯೋಜನಗಳ ಬಗ್ಗೆ ಗೊತ್ತಿಲ್ಲದಿರಬಹುದು. ಬಾಯಿಗೆ ರುಚಿಯಾದ ಪಾಲಕ್ ಸೊಪ್ಪು, ಆರೋಗ್ಯಕ್ಕೂ ಒಳ್ಳೆಯದು. ಇದರ ಸೂಪ್‌ನಿಂದಲೂ ಇದೆ ನೂರಾರು ಆರೋಗ್ಯ ಪ್ರಯೋಜನ...

  • Share this:

    ಮನೆಯಲ್ಲಿ (Home) ಮಕ್ಕಳು, ಹಿರಿಯರು, ಕಿರಿಯರು ಹೀಗೆ ಯಾವುದೇ ವಯೋಮಾನದವರಿರಲಿ ಎಲ್ಲರೂ ಸೂಪ್ (Soup) ಕುಡಿಯಲು ಇಷ್ಟ (Like) ಪಡ್ತಾರೆ. ಅದ್ರಲ್ಲೂ ಚಳಿಗಾಲದಲ್ಲಿ (Winter) ಬಿಸಿ ಬಿಸಿ ಆಹಾರ (Food) ಸೇವನೆಗೆ ಮನಸ್ಸಾಗುತ್ತದೆ. ಹೀಗಿದ್ದಾಗ ಬೀದಿ ಬದಿಯ ಜಂಕ್ ಫುಡ್ ಸೇವಿಸುವ ಬದಲು ಮನೆಯಲ್ಲಿ ನೀವೇ ಮಾಡಿಕೊಂಡು ಸೂಪ್ ಸೇವನೆ ಮಾಡಬಹುದು. ಇದು ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಮನೆಯಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಯಿಂದ ಮಾಡಿದ ಸೂಪ್ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಹಸಿರು ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹಾಗಾಗಿ ಹಸಿರು ಸೊಪ್ಪು ಆರೋಗ್ಯ ವೃದ್ಧಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ.  


    ಹಸಿರು ತರಕಾರಿ ಪಾಲಕ್ ಸೊಪ್ಪಿನ ಸೂಪ್


    ಹಸಿರು ತರಕಾರಿಗಳಲ್ಲಿ ಮೊದಲ ಸ್ಥಾನದಲ್ಲಿ ಬರುವುದೇ ಪಾಲಕ್ ಸೊಪ್ಪು. ಅಂದ ಹಾಗೇ ನೀವು ಪಾಲಕ್ ಸೊಪ್ಪಿನ ವಿವಿಧ ಖಾದ್ಯಗಳನ್ನು ತಿಂದಿರಬಹುದು. ಆದ್ರೆ ಅದರ ಪ್ರಯೋಜನಗಳ ಬಗ್ಗೆ ಗೊತ್ತಿಲ್ಲದಿರಬಹುದು. ಪಾಲಕ್ ಸೊಪ್ಪಿನ ವೈಜ್ಞಾನಿಕ ಹೆಸರು ಸ್ಪಿನೇಶಿಯಾ ಒಲೆರೇಸಿಯಾ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.


    ನೀವು ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸಿದರೆ ರಕ್ತದ ಕೊರತೆ, ಮೂಳೆಗಳ ದೌರ್ಬಲ್ಯ ನಿವಾರಣೆ ಆಗುತ್ತದೆ. ಆದ್ದರಿಂದ ನೀವು ಪಾಲಕ್ ಸೊಪ್ಪಿನ ಪ್ರಯೋಜನವನ್ನು ಪಡೆಯಲು ಪಾಲಕ್ ಸೂಪ್ ಪಾಕವಿಧಾನ ಟ್ರೈ ಮಾಡಿ. ಪಾಲಕ್ ಸೂಪ್ ನ್ನು ಹೇಗೆ ತಯಾರಿಸಬೇಕು ಅಂತಾ ಇಲ್ಲಿ ನೋಡೋಣ.


    ಇದನ್ನೂ ಓದಿ: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ಆರೋಗ್ಯಕ್ಕೆ ಪಾಲಕ್ ಸೊಪ್ಪಿನ ಪ್ರಯೋಜನಗಳು


    ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿ


    ರಾಷ್ಟ್ರೀಯ ಕಣ್ಣಿನ ಸಂಸ್ಥೆಯ ಸಂಶೋಧನೆಯ ಪ್ರಕಾರ, ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ರೋಗಗಳ ಅಪಾಯ ಕಡಿಮೆ ಮಾಡಲು ಹಸಿರು ಎಲೆಗಳ ಸೊಪ್ಪು ತಿನ್ನಬೇಕು. ಪಾಲಕವನ್ನು ಸೇವಿಸಬಹುದು. ಉತ್ತಮ ಪ್ರಮಾಣದ ವಿಟಮಿನ್-ಎ ಮತ್ತು ವಿಟಮಿನ್-ಸಿ ಪಾಲಕ್ ಸೊಪ್ಪಿನಲ್ಲಿದೆ. ಕಣ್ಣುಗಳಲ್ಲಿ ಸಂಭವಿಸುವ ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯ ಕಡಿಮೆ ಮಾಡಲು ಇದು ಸಹಕಾರಿ.


    ತೂಕ ನಿಯಂತ್ರಿಸುತ್ತದೆ


    ಹೆಚ್ಚುತ್ತಿರುವ ತೂಕದಿಂದ ನೀವು ತೊಂದರೆ ಪಡ್ತಿದ್ದರೆ ಎಲ್ಲಾ ಪೋಷಕಾಂಶಗಳನ್ನು ನೀಡುವ ಆಹಾರ ಸೇವಿಸಿ. ಅತಿಯಾದ ಆಹಾರ ಸೇವನೆ ತಪ್ಪಿಸಿ. ಪಾಲಕ್ ಕಡಿಮೆ ಕ್ಯಾಲೋರಿ ಹೊಂದಿದೆ. ಇದು ನಿಮ್ಮ ತೂಕವನ್ನು ನಿಯಂತ್ರಿಸುತ್ತದೆ. ಮತ್ತು ನಿಮ್ಮ ಆರೋಗ್ಯಕ್ಕೆ ಸಹ ಪ್ರಯೋಜನಕಾರಿ.


    ರಕ್ತದ ಕೊರತೆ ನಿವಾರಿಸುತ್ತದೆ


    ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಹೆಚ್ಚಿನ ಅಪಾಯವಿದೆ. ಕಬ್ಬಿಣದ ಕೊರತೆಯಿಂದ ಈ ಸಮಸ್ಯೆ ಉಂಟಾಗಬಹುದು. ಪಾಲಕವು ಬಹಳಷ್ಟು ಕಬ್ಬಿಣ ಹೊಂದಿದೆ. ಇದು ರಕ್ತಹೀನತೆ ಅಪಾಯ ಕಡಿಮೆ ಮಾಡುತ್ತದೆ.


    ಆರೋಗ್ಯಕರ ಪಾಲಕ್ ಸೂಪ್ ನಿಮಿಷಗಳಲ್ಲಿ ತಯಾರಿಸಬಹುದು


    ಪಾಲಕ್ ಸೊಪ್ಪಿನಲ್ಲಿ ರುಚಿಯ ಜೊತೆಗೆ ಪೌಷ್ಠಿಕಾಂಶದ ಅಂಶಗಳು ಸಮೃದ್ಧವಾಗಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ಹೆಚ್ಚು ಸಮಯ ಮತ್ತು ಶ್ರಮ ತೆಗೆದುಕೊಳ್ಳುವುದಿಲ್ಲ. ನಿಮಿಷಗಳಲ್ಲಿ ತಯಾರಿಸಬಹುದಾದ ಈ ಸೂಪ್ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಪಾಲಕ್ ಸೂಪ್ ಮಾಡುವ ಸುಲಭ ಪಾಕವಿಧಾನ ಹೀಗಿದೆ.


    ಪಾಲಕ್ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು


    ಪಾಲಕ 250 ಗ್ರಾಂ, ಹಾಲು ಒಂದು ಕಪ್, ಕಾರ್ನ್ ಫ್ಲೋರ್ ಎರಡು ಟೀಸ್ಪೂನ್, ಕರಿಮೆಣಸಿನ ಪುಡಿ ಒಂದು ಪಿಂಚ್, ಸಣ್ಣದಾಗಿ ಕೊಚ್ಚಿದ ಒಂದು ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಮೂರು ಬೆಳ್ಳುಳ್ಳಿ ಎಸಳು, ಸಣ್ಣದಾಗಿ ಕೊಚ್ಚಿದ ಮೂರು ಲವಂಗ, ತುಪ್ಪ ಒಂದು ಟೀ ಸ್ಪೂನ್, ಬೆಣ್ಣೆ ಒಂದು ಟೀಸ್ಪೂನ್,ತಾಜಾ ಕೆನೆ ಒಂದು ಟೀಸ್ಪೂನ್, ಉಪ್ಪು ರುಚಿಗೆ ತಕ್ಕಂತೆ, ಕಪ್ಪು ಉಪ್ಪು ರುಚಿಗೆ ತಕ್ಕಂತೆ, ನೀರು ಅಗತ್ಯವಿರುವಂತೆ ಬೇಕು.


    ಪಾಲಕ್ ಸೂಪ್ ಮಾಡುವ ಸುಲಭ ವಿಧಾನ


    ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ, ಮುಚ್ಚಿಡಿ. ಸುಮಾರು 10 ನಿಮಿಷ ಬೇಯಿಸಿ. ಇನ್ನೊಂದು ಬಾಣಲೆಗೆ ಬೆಣ್ಣೆ ಹಾಕಿ ಅದಕ್ಕೆ ಕಾರ್ನ್ ಫ್ಲೋರ್ ಮತ್ತು ಹಾಲನ್ನು ಹಾಕಿ ಕ್ರೀಮ್ ತಯಾರಿಸಿ.


    ಇದನ್ನೂ ಓದಿ: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!


    ಈಗ ಈ ಕ್ರೀಮ್ನಲ್ಲಿ ಎಲ್ಲಾ ಮಸಾಲೆ ಮತ್ತು ರುಬ್ಬಿದ ಪಾಲಕನ್ನು ಮಿಶ್ರಣ ಮಾಡಿ ಮತ್ತು ಸುಮಾರು ಒಂದು ಗ್ಲಾಸ್ ನೀರನ್ನು ಸೇರಿಸಿ ಮತ್ತು ಹತ್ತು ನಿಮಿಷ ಬೇಯಿಸಲು ಬಿಡಿ. ನಂತರ ಬಡಿಸಿ.

    Published by:renukadariyannavar
    First published: