Littering Facts: ಎಲ್ಲೆಂದರಲ್ಲಿ ಕಸ ಬಿಸಾಡೋ ಮುನ್ನ ಈ 10 ವಿಷಯ ನಿಮಗೆ ನೆನಪಿರಲಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮನುಷ್ಯನಿಗೆ (Humans) ವಸ್ತುಗಳನ್ನು ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಆದರೆ ಅದನ್ನು ಬಳಸಿ ಉಳಿದ ತ್ಯಾಜ್ಯವನ್ನು ನಿರ್ವಹಣೆ ಮಾಡುವುದು ಹೇಗೆ ಎನ್ನುವ ಜ್ಞಾನ ಕಡಿಮೆಯಾಗಿದೆ. ಆದ್ದರಿಂದ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಾರೆ. ಆದ್ರೆ ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಈ ವಿಷಯಗಳನ್ನು ನೀವು ತಿಳಿದಿರಲೇಬೇಕು.

ಮುಂದೆ ಓದಿ ...
  • Share this:

ಮನುಷ್ಯನಿಗೆ (Humans) ವಸ್ತುಗಳನ್ನು ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಆದರೆ ಅದನ್ನು ಬಳಸಿ ಉಳಿದ ತ್ಯಾಜ್ಯವನ್ನು ನಿರ್ವಹಣೆ ಮಾಡುವುದು ಹೇಗೆ ಎನ್ನುವ ಜ್ಞಾನ ಕಡಿಮೆಯಾಗಿದೆ. ಇದರ ಪರಿಣಾಮ ಇಂದು ನಗರಗಳ ವ್ಯಾಪ್ತಿಯೊಳಗೆ ಸಂಗ್ರಹಿಸಿದ ಮತ್ತು ಸಂಸ್ಕರಿಸಿದ ಎಲ್ಲಾ ತ್ಯಾಜ್ಯ (Waste) ಸೇರಿ 2 ಶತಕೋಟಿ ಟನ್​​ನಷ್ಟು ಕಸ ಸಂಗ್ರಹಣೆಯಾಗಿದೆ. ವಿಶ್ವ ಬ್ಯಾಂಕ್ ಹೇಳುವ ಪ್ರಕಾರ 820,000 ಒಲಂಪಿಕ್ ಈಜುಕೊಳವನ್ನು (Olympic swimming pool) ಈ ಕಸದಿಂದ ಭರ್ತಿ ಮಾಡಬಹುದಂತೆ. ಇದು ಹೀಗೆ ಮುಂದುವರೆದರೆ ಎಷ್ಟು ಹಾನಿಯಾಗಬಹುದು ಎಂದು ನೀವೇ ಊಹಿಸಿ. ಆದ್ದರಿಂದ ಅಂತಾರಾಷ್ಟ್ರೀಯ ಶೂನ್ಯ ತ್ಯಾಜ್ಯ ದಿನ (International Zero Waste Day) ಮಾರ್ಚ್ 30ರ ಸಂದರ್ಭದಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಅದನ್ನು ಮರು ಬಳಕೆ ಮಾಡುವ ಬಗ್ಗೆ ಹೇಳಿದ್ದು, ಇಲ್ಲಿ ತಿಳಿದುಕೊಳ್ಳಲೇಬೇಕಾದ 10 ಅಂಶಗಳು ಇಲ್ಲಿವೆ ನೋಡಿ.


ಕಸದ ಉತ್ಪಾದನೆಗೆ ಕಡಿವಾಣ ಹಾಕಬೇಕು


ನಿಮಗೆ ಗೊತ್ತೇ ಕಸವನ್ನು ಹೆಚ್ಚು ಮಾಡುತ್ತಲೇ ಹೋದಂತೆ 2050 ಕ್ಕೆ ಜಾಗತಿಕವಾಗಿ ತ್ಯಾಜ್ಯವು 3.4 ಶತಕೋಟಿ ಟನ್​ನಷ್ಟು ಹೆಚ್ಚಾಗಬಹುದು. ಅಂದ್ರೆ ಶೇಕಡಾ 70 ರಷ್ಟು ಹೆಚ್ಚಳವಾಗುತ್ತದೆ. ಈ ಕಸ ಮನುಷ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ ವಿಷವಾಗಿ ಪರಿಣಮಿಸಬಹುದು. ಪೂರ್ವ ಏಷ್ಯಾ ಮತ್ತು ಫೆಸಿಫಿಕ್(23%) ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚು ಮತ್ತು ಮಧ್ಯಪ್ರಾಚ್ಯ(6%) ಹಾಗೂ ಉತ್ತರ ಅಮೆರಿಕಾ ಕಡಿಮೆ ತ್ಯಾಜ್ಯದ ಮೂಲವಾಗಿದೆ ಎನ್ನುತ್ತದೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ.


ಒಂದು ದಿನಕ್ಕೆ ಒಬ್ಬ ವ್ಯಕ್ತಿ 0.74 ಕೆ.ಜಿ ತ್ಯಾಜ್ಯ ಉತ್ಪಾದಿಸುತ್ತಾನೆ


ವಿಶ್ವ ಬ್ಯಾಂಕ್​ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 0.74 ಕೆ.ಜಿ ಕಸ ಉತ್ಪಾದನೆಗೆ ಕಾರಣನಾಗುತ್ತಾನೆ. ಜೀವನಶೈಲಿಯ ಆಧಾರದ ಮೇಲೆ ಈ ಪ್ರಮಾಣದಲ್ಲಿ ಬದಲಾವಣೆಯಾಗುತ್ತದೆ. 0.11 ಕೆಜಿಯಿಂದ 4.54 ಕೆಜಿಯವರೆಗೆ ವ್ಯತ್ಯಾಸವಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹೇಳುತ್ತದೆ.


ಇದನ್ನೂ ಓದಿ: ಮಹಾರಾಷ್ಟ್ರದ ಫೇಮಸ್ ಭಾಕರವಾಡಿ ರುಚಿ ನೋಡಿದ್ದೀರಾ? ಇಲ್ಲಿದೆ ನೋಡಿ ಸೂಪರ್ ರೆಸಿಪಿ


ಜಾಗತಿಕ ತಾಪಮಾನ ಏರಿಕೆ


ಯುನೈಟೆಡ್​ ನೇಷನ್ ಪ್ರಕಾರ ಸಾರಿಗೆಯಷ್ಟೇ ಅಲ್ಲದೇ ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಶೇಕಡಾ 5 ರಷ್ಟು ಘನ ತ್ಯಾಜ್ಯದ ಕೊಳೆಯುವಿಕೆಯೇ ಕಾರಣವಾಗಿದೆ. ಆದ್ದರಿಂದ ತ್ಯಾಜ್ಯ ಮರುಬಳಕೆ ಅಥವಾ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳವುದು ಉತ್ತಮ ಪರಿಹಾರ.


ಪ್ಲಾಸ್ಟಿಕ್ ಪಿಡುಗು


ಪ್ಲಾನೆಟೋ ಸ್ಕೋಪ್ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ 89 ಶತಕೋಟಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮಾರಾಟವಾಗುತ್ತವೆ. ಈ ಬಾಟಲಿಗಳು 450 ವರ್ಷಗಳ ಕಾಲ ಕರಗುವುದಿಲ್ಲ. ಅಲ್ಲದೇ ಪ್ಲ್ಯಾಸ್ಟಿಕ್ ಬ್ಯಾಗ್, ಇತರ ಪ್ಲ್ಯಾಸ್ಟಿಕ್ ವಸ್ತುಗಳು ಸೇರಿ 1950 ರಿಂದ ಇಲ್ಲಿ ತನಕ ನಾವೆಲ್ಲರೂ 8.3 ಶತಕೋಟಿ ಟನ್​ನಷ್ಟು ಪ್ಲ್ಯಾಸ್ಟಿಕ್ ಉತ್ಪಾದಿಸಿದ್ದೇವೆ ಎನ್ನುತ್ತದೆ ಸೈನ್ಸ್​ ಅಡ್ವಾನ್ಸಸ್​ ಜರ್ನಲ್.


ತ್ಯಾಜ್ಯದ ಕೊಡುಗೆಯಲ್ಲಿ ರೆಕಾರ್ಡ್​


ಸಾಗರಗಳ ಮೇಲ್ಮೈಯಲ್ಲಿ 170 ಟ್ರಿಲಿಯನ್​ನಷ್ಟು ಪ್ಲ್ಯಾಸ್ಟಿಕ್ ಕಂಡು ಬಂದಿದೆ ಎಂದು ಅಮೇರಿಕನ್ ಜರ್ನಲ್ PLOS One ಬಹಿರಂಗಪಡಿಸಿದೆ. ಅಂದಾಜು ಶೇಕಡಾ 2.3 ರಷ್ಟು ಕಸ ಸಾಗರ ಜೀವಿಗಳಿಗೆ ಮತ್ತು ವನ್ಯ ಜೀವಿಗಳಿಗೂ ಅಪಾಯಕಾರಿ.


ಮರುಬಳಕೆ ಪರಿಹಾರವಾಗಬಲ್ಲದೇ?


ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಕಾರ 20 ವರ್ಷಗಳಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ ದುಪ್ಪಟ್ಟಾಗಿದೆ. ಶೇಕಡಾ 9 ರಷ್ಟು ಮರುಬಳಕೆಯಾಗಿದೆ. ಇನ್ನುಳಿದಂತೆ ಸುಡಲಾಗಿದೆ, ಭೂಗರ್ಭ ಸೇರಿದೆ.


ಸಾಂಕೇತಿಕ ಚಿತ್ರ


ಇ-ತ್ಯಾಜ್ಯ ನಿರ್ವಹಣೆಯ ಕೊರತೆ


ಈಗಂತೂ ಇ- ವೇಸ್ಟ್​ಗಳಾದ ಕಂಪ್ಯೂಟರ್, ಸೆಲ್​ಫೋನ್​ನಂತಹ ಎಲೆಕ್ಟ್ರಾನಿಕ್ ಸಾಧನಗಳು ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಸವಾಲಾಗಿದೆ. 2019 ರಲ್ಲಿ ವಿಶ್ವದಾದ್ಯಂತ 53.6 ಮಿಲಿಯನ್ ಟನ್ ನಷ್ಟಿದ್ದ ತ್ಯಾಜ್ಯ 2030 ರಲ್ಲಿ 74 ಮಿಲಿಯನ್ ಟನ್ ತಲುಪಬಹುದು ಎಂದು ಗ್ಲೋಬಲ್ ಇ-ವೇಸ್ಟ್​​ ಮಾನಿಟರ್​ 2020ರ ವರದಿಯಲ್ಲಿ ತಿಳಿಸಿದೆ. ಕೇವಲ 17 % ಮಾತ್ರ ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ.


ಶತಕೋಟಿ ಡಾಲರ್​ ಮೌಲ್ಯದ ಲೋಹ ವ್ಯರ್ಥ


ಈ ವೇಸ್ಟ್​ನಲ್ಲಿ ಚಿನ್ನ, ತಾಮ್ರ, ಬೆಳ್ಳಿ ಮತ್ತು ಪ್ಲಾಟಿನಂ ಸೇರಿದಂತೆ ಅಮೂಲ್ಯ ಲೋಹಗಳಿವೆ. ಗ್ಲೋಬಲ್ ಇ- ವೇಸ್ಟ್ ಮಾನಿಟರ್ 2020 ರ ಪ್ರಕಾರ ಈ ಅಮೂಲ್ಯ ಲೋಹವನ್ನು ಮರುಪಡೆಯಲು ಸಾಧ್ಯವಾಗದಿದ್ದರೆ 57 ಬಿಲಿಯನ್ ಡಾಲರ್​​ನಷ್ಟು ನಷ್ಟವಾದಂತೆ. ಆದ್ದರಿಂದ ಇದನ್ನು ಸಮರ್ಥವಾಗಿ ಮರುಬಳಕೆ ಮಾಡಬೇಕು.


ವಸ್ತ್ರಗಳ ತ್ಯಾಜ್ಯ


ಫ್ರಾನ್ಸ್​​ನ ಪರಿಸರ ಪರಿವರ್ತನೆ ಸಂಸ್ಥೆ ಅಡೆಮ್ ಪ್ರಕಟಿಸಿದ ಮಾಹಿತಿ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 100 ಶತಕೋಟಿಯಷ್ಟು ಬಟ್ಟೆ ಮಾರಾಟವಾಗುತ್ತಿದೆ. ಸೆಕೆಂಡ್​ ಸೇಲ್​ಗೆ ಇದನ್ನು ಕಳುಹಿಸುವ ಮುನ್ನ 10 ಬಾರಿ ಧರಿಸಿರುತ್ತಾರೆ. ಇನ್ನೂ ಪ್ರತಿವರ್ಷ ಸಾಗರಗಳಿಗೆ ಬಿಡುವ 240,000 ಟನ್​ಗಳಷ್ಟು ಪ್ಲ್ಯಾಸ್ಟಿಕ್ ಮೈಕ್ರೊಪಾರ್ಟಿಕಲ್​​ಗಳು ವಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಫ್ಯಾಷನ್​ ಕೈಗಾರಿಕೆಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನವಹಿಸಬೇಕು.




R R R ಈ 3R ಗಳನ್ನು ನೆನಪಿಡಿ


REDUCE(ಕಡಿಮೆ ಮಾಡಿ), REUSE (ಮರುಬಳಕೆ ಮಾಡಿ), RECYLE(ಪುನರ್ಬಳಕೆ ಮಾಡಿ) ಯಾವ ವಸ್ತುವೇ ಆಗಲಿ ತೆಗೆದುಕೊಳ್ಳುವ ಮುನ್ನ ಅದು ನಿಮಗೆ ನಿಜವಾಗಿಯೂ ಮುಖ್ಯವೇ? ಎಂದು ಯೋಚಿಸಿ, ಅದನ್ನು ಬಿಸಾಡುವ ಮುನ್ನ ಯಾರಿಗಾದರೂ ಅಗತ್ಯವಿದ್ದರೆ ಕೊಟ್ಟು ಬಿಡಿ. ಆದರೆ ಅದನ್ನು ಹಾನಿಕಾರಕ ತ್ಯಾಜ್ಯವಾಗದಂತೆ ನೋಡಿಕೊಳ್ಳಿ.

First published: