ಪ್ರಾಜೆಕ್ಟ್ ಈವ್: ಮಹಿಳೆಯರಿಗಾಗಿ ಜಯನಗರದಲ್ಲಿ ಡೀಕೂಪೇಜ್ ಕ್ರಾಫ್ಟ್ ಕಾರ್ಯಾಗಾರ


Updated:June 8, 2018, 1:40 PM IST
ಪ್ರಾಜೆಕ್ಟ್ ಈವ್: ಮಹಿಳೆಯರಿಗಾಗಿ ಜಯನಗರದಲ್ಲಿ ಡೀಕೂಪೇಜ್ ಕ್ರಾಫ್ಟ್ ಕಾರ್ಯಾಗಾರ

Updated: June 8, 2018, 1:40 PM IST
- ನ್ಯೂಸ್18 ಕನ್ನಡ

ಬೆಂಗಳೂರು (ಜೂನ್ 08): ಬಣ್ಣಬಣ್ಣದ ಕಾಗದಗಳನ್ನು ಬಳಸಿ ಥರಹೇವಾರಿ ಆಕೃತಿಗಳನ್ನು ರಚಿಸುವ ಕಲೆಯನ್ನು ನೀವು ಟಿವಿ, ಇಂಟರ್ನೆಟ್​ಗಳಲ್ಲಿ ನೋಡಿರಬಹುದು. ಅಂಥ ಕಲೆಯನ್ನು ಕಲಿಯಲು ನಿಮಗೆ ಆಸಕ್ತಿ ಇರಬಹುದು. ರಿಲಾಯನ್ಸ್ ರೀಟೇಲ್ ಸಂಸ್ಥೆಯ ಅಂಗವಾದ ಪ್ರಾಜೆಕ್ಟ್ ಈವ್ (Project Eve) ನಿಮಗಾಗಿ ವರ್ಕ್​ಶಾಪ್ ಮಾಡಲು ಮುಂದಾಗಿದೆ. ಜಯನಗರದಲ್ಲಿ ಡೀಕೂಪೇಜ್ (Decoupage) ಕ್ರಾಫ್ಟ್ ಕಾರ್ಯಾಗಾರವನ್ನು ನಡೆಸಲು ನಿಶ್ಚಯಿಸಲಾಗಿದೆ. ಡೀಕೂಪೇಜ್ ತಜ್ಞೆ ನರ್ಗೀಸ್ ಖಾನ್ ಅವರು ಈ ಕಲೆಯನ್ನು ಕಲಿಸಿಕೊಡಲಿದ್ದಾರೆ.

ಶನಿವಾರ ಬೆಳಗ್ಗೆ 11ಗಂಟೆಗೆ ಜಯನಗರ 4ನೇ ಬ್ಲಾಕ್​ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯ ಆವರಣದಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ವಿವರಕ್ಕಾಗಿ ನೀವು ಉದಯ್ ಕಾಮತ್ ಅವರ 9900040911 ನಂಬರ್ ಸಂಪರ್ಕಿಸಬಹುದು.

ಏನಿದು ಪ್ರಾಜೆಕ್ಟ್ ಈವ್?

ರಿಲಾಯನ್ಸ್ ರೀಟೇಲ್ ಸಂಸ್ಥೆಯ ಅಂಗವಾದ ಪ್ರಾಜೆಕ್ಟ್ ಈವ್ ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೈದಾಳಿದ ಮಳಿಗೆಯಾಗಿದೆ. ಇದೊಂದು ಅಪ್ಪಟ ಮಹಿಳಾ ವಿಶೇಷ ಮಳಿಗೆಯಾಗಿದೆ. ಆಧುನಿಕ ಮಹಿಳೆಯ ಅಭಿರುಚಿ ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ. ದೇಶೀಯ ಮತ್ತು ವಿದೇಶೀಯ ವಿಶ್ವಾಸರ್ಹ ಬ್ರ್ಯಾಂಡ್​ಗಳ ಉಡುಪುಗಳು ಈ ಮಳಿಗೆಯಲ್ಲಿ ಲಭ್ಯವಿದೆ ಎಂದು ಹೇಳಿಕೊಳ್ಳುತ್ತದೆ ಈ ಸಂಸ್ಥೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ