• Home
  • »
  • News
  • »
  • lifestyle
  • »
  • Reliance Jewels: ವರಲಕ್ಷ್ಮಿ ಕಲೆಕ್ಷನ್ 2022 ಅನಾವರಣಗೊಳಿಸಿದ ರಿಲಯನ್ಸ್‌ ಜ್ಯುವೆಲ್ಸ್‌!

Reliance Jewels: ವರಲಕ್ಷ್ಮಿ ಕಲೆಕ್ಷನ್ 2022 ಅನಾವರಣಗೊಳಿಸಿದ ರಿಲಯನ್ಸ್‌ ಜ್ಯುವೆಲ್ಸ್‌!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಲಕ್ಷ್ಮಿ ದೇವಿಯ ದೈವೀ ಭಾವದಿಂದ ಸ್ಫೂರ್ತಿಗೊಂಡಿರುವ ಈ ಕಲೆಕ್ಷನ್‌ ಮಹಿಳೆಯರು ತಮ್ಮೊಳಗಿನ ದೈವೀ ಭಾವವನ್ನು ಸ್ಫುರಿಸುವುದಕ್ಕೆ ಸ್ಫೂರ್ತಿಯಾಗಲಿದೆ. ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೇಳೈಸಿರುವ ಈ ಆಭರಣವು ಪ್ರಾದೇಶಿಕತೆ, ಸಾಂಸ್ಕೃತಿಕ ಸಂಗತಿಗಳು ಮತ್ತು ಸ್ಟೈಲ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ.

ಮುಂದೆ ಓದಿ ...
  • Share this:

    ಭಾರತದ ಪ್ರಮುಖ ಆಭರಣ ಬ್ರ್ಯಾಂಡ್‌ ರಿಲಯನ್ಸ್‌ ಜ್ಯುವೆಲ್ಸ್‌ (Reliance jewels) ವಿಶೇಷ ವರಲಕ್ಷ್ಮಿ ಕಲೆಕ್ಷನ್‌ 2022 (Varalakshmi Collection 2022) ಅನ್ನು ಅನಾವರಣಗೊಳಿಸಿದೆ. ಇದು ವರಲಕ್ಷ್ಮಿ ವ್ರತದ ಸಂದರ್ಭದಲ್ಲಿ ಅನಾವರಣಗೊಂಡಿರುವುದು ಅತ್ಯಂತ ವಿಶೇಷವಾಗಿದೆ. 'ಗ್ಲೋ ಲೈಕ್ ಎ ಗಾಡೆಸ್‌' ಎಂಬ ಹೆಸರಿನ ಕಲೆಕ್ಷನ್‌ ಒಳಗೊಂಡಿರುವ ಬ್ರ್ಯಾಂಡ್‌ನ ಕ್ಯಾಂಪೇನ್‌ ದೇವತೆಯಂತಹ ಮಹಿಳೆಯರು (Womens) ಈ ಹಬ್ಬವನ್ನು ಸಂಭ್ರಮಾಚರಣೆ ಮಾಡಲು ಅನುವು ಮಾಡುವ ಉದ್ದೇಶವನ್ನು ಹೊಂದಿದೆ. ಲಕ್ಷ್ಮಿ (Laxmi) ದೇವಿಯ ದೈವೀ ಭಾವದಿಂದ ಸ್ಫೂರ್ತಿಗೊಂಡಿರುವ ಈ ಕಲೆಕ್ಷನ್‌ ಮಹಿಳೆಯರು ತಮ್ಮೊಳಗಿನ ದೈವೀ ಭಾವವನ್ನು ಸ್ಫುರಿಸುವುದಕ್ಕೆ ಸ್ಫೂರ್ತಿಯಾಗಲಿದೆ. ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೇಳೈಸಿರುವ ಈ ಆಭರಣವು ಪ್ರಾದೇಶಿಕತೆ, ಸಾಂಸ್ಕೃತಿಕ ಸಂಗತಿಗಳು ಮತ್ತು ಸ್ಟೈಲ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ. ವಿನ್ಯಾಸ ಮತ್ತು ಕ್ಯಾಂಪೇನ್‌ "ಕಲ್ಪವೃಕ್ಷ"ದ ಸ್ಪೂರ್ತಿಯನ್ನು ಹೊಂದಿದೆ. ಇದು ಆಳವಾದ ಅಧ್ಯಾತ್ಮ ಭಾವವನ್ನು ನೀಡುತ್ತದೆ ಎಂದು ಭಾವಿಸಲಾಗಿದ್ದು, ಸಮುದ್ರ ಮಂಥನದ ಪುರಾತನ ಐತಿಹ್ಯಕ್ಕೂ ಇದು ಸಂಬಂಧ ಹೊಂದಿದೆ.


    ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಸಾಂಪ್ರದಾಯಿಕ ಆಭರಣದಲ್ಲಿ ನೆಕ್‌ಲೇಸ್‌ಗಳು, ಕಿವಿಯೋಲೆಗಳು, ಬಳೆಗಳು ಮತ್ತು ರಿಂಗ್‌ಗಳು ಇವೆ. 22 ಕ್ಯಾರೆಟ್‌ ಹಳದಿ ಚಿನ್ನದಲ್ಲಿ ವಿನ್ಯಾಸ ಮಾಡಲಾಗಿದೆ. ಪುರಾತನ ಚಿನ್ನದ ದೇಗುಲ ವಿನ್ಯಾಸಗಳು ಮತ್ತು ವರ್ಣಮಯ ಹವಳಗಳನ್ನು ಒಳಗೊಂಡಿದೆ. ಪ್ರತಿ ಚಿನ್ನದ ಆಭರಣದ ವಿನ್ಯಾಸವೂ ವಿಭಿನ್ನವಾಗಿದ್ದು, ಕಲೆಕ್ಷನ್‌ ಎಲ್ಲ ರೀತಿಯಲ್ಲೂ ವಿಶಿಷ್ಟವಾಗಿದೆ. ಅತ್ಯಾಕರ್ಷಕ ವಜ್ರದ ಕಲೆಕ್ಷನ್‌ನಲ್ಲಿ ಚೋಕರ್‌ಗಳು ಮತ್ತು ಹರಾಮ್‌ ಸೆಟ್‌ಗಳಿವೆ. ಜೊತೆಗೆ ವಜ್ರಗಳು, ವಿವಿಧ ಬಣ್ಣಗಳ ಹವಳಗಳು ಮತ್ತು ಪರ್ಲ್‌ ಡ್ರಾಪ್‌ಗಳೂ ಕೂಡ ಇದರಲ್ಲಿವೆ. ಆಭರಣದ ಪ್ರತಿ ತುಣುಕಿನಲ್ಲೂ ದೇವಿಯ ದೈವಿಭಾವ, ಸಮೃದ್ಧಿಯನ್ನು ಚಿತ್ರಿಸಲಾಗಿದೆ ಮತ್ತು ಹಬ್ಬದ ಸಂದರ್ಭದಲ್ಲಿ ಪ್ರತಿ ಮಹಿಳೆಗೂ ಇದು ಅತ್ಯಂತ ಹೊಂದುವ ಆಭರಣವಾಗಿರಲಿದೆ.


    ಕಲೆಕ್ಷನ್‌ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್‌ "ಈ ಮಂಗಳಕರ ಹಬ್ಬದ ಭಾವವನ್ನು ಮೂಡಿಸುವುದು ನಮ್ಮ ಇಡೀ ಕಲೆಕ್ಷನ್‌ ಧ್ಯೇಯವಾಗಿದೆ. ಈ ವಿಶಿಷ್ಟ ಸ್ಟೈಲ್‌ಗಳನ್ನು ಈ ಪ್ರದೇಶದ ಗ್ರಾಹಕರ ಆಸಕ್ತಿಗೆ ತಕ್ಕಂತೆ ರೂಪಿಸಿದ್ದೇವೆ. ದಕ್ಷಿಣ ಭಾರತದ ನಮ್ಮ ಅತ್ಯಂತ ಕುಶಲ ವಿನ್ಯಾಸ ತಂಡವು ಈ ಕಲೆಕ್ಷನ್‌ ರೂಪಿಸುವಲ್ಲಿ ಅಪಾರ ಶ್ರಮ ವಹಿಸಿದೆ. ಪ್ರತಿ ಸೂಕ್ಷ್ಮ ವಿನ್ಯಾಸವನ್ನೂ ಇದು ಅತ್ಯಂತ ಕಾಳಜಿಯಿಂದ ರೂಪಿಸಿದೆ.


    ಈ ವರ್ಷವು ರಿಲಯನ್ಸ್‌ ಜ್ಯುವೆಲ್ಸ್‌ನ 15ನೇ ವರ್ಷಾಚರಣೆಯಾಗಿದ್ದು, ಹಲವು ಕುಟುಂಬಗಳು, ಹಬ್ಬಗಳು ಮತ್ತು ಸಂದರ್ಭಗಳಲ್ಲಿ ರಿಲಯನ್ಸ್‌ ಜ್ಯುವೆಲ್ಸ್‌ ಮೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಪ್ರತಿ ವರ್ಷವೂ ಪ್ರತಿ ಸನ್ನಿವೇಶ ಮತ್ತು ಕ್ಷಣಗಳಿಗೂ ಸೂಕ್ತವಾದ ಆಭರಣದ ಮೂಲಕ ಭಾವನಾತ್ಮಕ ಸಂಪರ್ಕವನ್ನು ರೂಪಿಸುವುದರ ಮೇಲೆ ಗಮನಹರಿಸಿದೆ. ಈ ವರ್ಷವೂ ಕೂಡ, ವರಲಕ್ಷ್ಮಿ ಕಲೆಕ್ಷನ್‌ನ ರೀತಿಯ ಕಲೆಕ್ಷನ್‌ಗಳ ಮೂಲಕ ರಿಲಯನ್ಸ್‌ ಜ್ಯೂವೆಲ್ಸ್ ತನ್ನ ಗ್ರಾಹಕರಿಗೆ ಮೆಚ್ಚಿನ ತಾಣವಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.


    ಇದನ್ನೂ ಓದಿ: Best Foods For Thyroid: ಥೈರಾಯ್ಡ್ ಸಮಸ್ಯೆ ಇದೆಯಾ? ಹಾಗಾದ್ರೆ ಈ ಆಹಾರಗಳನ್ನು ಮಿಸ್​ ಮಾಡ್ದೇ ತಿನ್ನಿ


    ವರಲಕ್ಷ್ಮಿ ಕಲೆಕ್ಷನ್‌ 2022 ರ ವಿಶಿಷ್ಟ ವಿನ್ಯಾಸಗಳ ಜೊತೆಗೆ, ಚಿನ್ನದ ಆಭರಣದ ಮೇಕಿಂಗ್‌ ಮತ್ತು ವಜ್ರದ ಆಭರಣದ ಮೌಲ್ಯದ ಮೇಲೆ 31 ಆಗಸ್ಟ್‌ ವರೆಗೆ ಎಲ್ಲ ಗ್ರಾಹಕರಿಗರ 25% ವರೆಗೆ ವಿಶೇಷ ರಿಯಾಯಿತಿಯನ್ನೂ ಬ್ರ್ಯಾಂಡ್‌ ಒದಗಿಸುತ್ತಿದೆ.




    ರಿಲಯನ್ಸ್‌ ಜ್ಯೂವೆಲ್ಸ್‌ ಬಗ್ಗೆ:


    ಭಾರತದ ಪ್ರಮುಖ ರಿಟೇಲರ್‌ ರಿಲಯನ್ಸ್‌ ರಿಟೇಲ್‌ ಲಿಮಿಟೆಡ್‌ನ ಭಾಗವೇ ರಿಲಯನ್ಸ್‌ ಜ್ಯೂವೆಲ್ಸ್‌ ಆಗಿದೆ. ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಅದ್ಭುತ ಮತ್ತು ವಿಶಾಲವಾದ ಸಂಗ್ರಹವನ್ನು ಬ್ರ್ಯಾಂಡ್‌ ಹೊಂದಿದೆ. ವಿನ್ಯಾಸ ಮತ್ತು ಕರಕುಶಲತೆಯ ಮೇಲೆ ಗಮನ ಹರಿಸಿರುವ ಬ್ರ್ಯಾಂಡ್‌ ತನ್ನ ಗ್ರಾಹಕರಿಗೆ ವಿಶಿಷ್ಟವಾದ ಮತ್ತು ಎಕ್ಸ್‌ಕ್ಲೂಸಿವ್ ಡಿಸೈನರ್ ಕಲೆಕ್ಷನ್‌ಗಳನ್ನು ಒದಗಿಸುತ್ತದೆ. ಇದಕ್ಕೆ ಕಲೆ, ಕರಕುಶಲತೆ ಮತ್ತು ಭಾರತೀಯ ಸಂಪ್ರದಾಯದ ಹಿನ್ನೆಲೆ ಇರುತ್ತದೆ. ತನ್ನ ಗ್ರಾಹಕರ ಪ್ರತಿ ಕ್ಷಣವನ್ನೂ ರಿಲಾಯನ್ಸ್‌ ಜ್ಯೂವೆಲ್ಸ್‌ ಸಂಭ್ರಮಿಸುತ್ತದೆ.


    ಇದನ್ನೂ ಓದಿ: Reliance Jio: 3 ಸಾವಿರ ರೂಪಾಯಿಯ ಪ್ರಯೋಜನಗಳನ್ನು ಒದಗಿಸಿದ ಜಿಯೋ! ಇದು ಸ್ವಾತಂತ್ರ್ಯ ದಿನಾಚರಣೆ 2022ರ ಕೊಡುಗೆ


    150 ಕ್ಕೂ ಹೆಚ್ಚು ನಗರಗಳಲ್ಲಿ 300 ಕ್ಕೂ ಹೆಚ್ಚು ಫ್ಲಾಗ್‌ಶಿಪ್‌ ಶೋರೂಮ್‌ಗಳು ಮತ್ತು ಶಾಪ್ ಇನ್‌ ಶಾಪ್‌ಗಳನ್ನು ರಿಲಯನ್ಸ್‌ ಜ್ಯೂವೆಲ್ಸ್‌ ಹೊಂದಿದೆ ಮತ್ತು ನಿರ್ವಹಣೆ ಮಾಡುತ್ತದೆ ಹಾಗೂ ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ವಿಶಿಷ್ಟ ಸೇವೆಯನ್ನು ಒದಗಿಸುವುದು ಮತ್ತು ಸಮಗ್ರ ಆಭರಣ ಶಾಪಿಂಗ್‌ ಅನುಭವವನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಬ್ರ್ಯಾಂಡ್‌ ಖುಷಿ ನೀಡುತ್ತದೆ. ರಿಲಯನ್ಸ್‌ ಜ್ಯುವೆಲ್ಸ್‌ನಲ್ಲಿ, ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಫರ್ಧಾತ್ಮಕ ದರದಲ್ಲಿ ಲಭ್ಯವಿರುತ್ತದೆ. ಶೂನ್ಯ ವೇಸ್ಟೇಜ್‌ ಮತ್ತು ಸ್ಫರ್ಧಾತ್ಮಕ ಮೇಕಿಂಗ್ ಚಾರ್ಜ್‌ಗಳು ನಮ್ಮ ಗ್ರಾಹಕರಿಗೆ 100% ಸಂತೃಪ್ತಿಯನ್ನು ನೀಡುತ್ತವೆ. ರಿಲಯನ್ಸ್‌ ಜ್ಯೂವೆಲ್ಸ್‌ 100 ಶೇಕಡಾ ಶುದ್ಧತೆ, ಪಾರದರ್ಶಕ ಬೆಲೆ ನಿಗದಿ ಮತ್ತು ಖಾತರಿ ಗುಣಮಟ್ಟವನ್ನು ಪ್ರತಿ ಪೀಸ್‌ನಲ್ಲೂ ಒದಗಿಸುತ್ತದೆ. 100 ಶೇಕಡಾ ಬಿಐಎಸ್‌ ಹಾಲ್‌ಮಾರ್ಕ್‌ ಇರುವ ಚಿನ್ನವನ್ನು ಮಾತ್ರ ಬ್ರ್ಯಾಂಡ್ ನಿರ್ವಹಿಸುತ್ತದೆ ಮತ್ತು ಪ್ರತಿ ವಜ್ರವನ್ನೂ ಸ್ವತಂತ್ರ ಪ್ರಮಾಣೀಕರಣ ಲ್ಯಾಬೊರೇಟರಿಗಳು ಪ್ರಮಾಣೀಕರಿಸುತ್ತವೆ. ಎಲ್ಲ ರಿಲಯನ್ಸ್‌ ಜ್ಯೂವೆಲ್ಸ್‌ ಶೋರೂಮ್‌ಗಳು ಕ್ಯೂಸಿ ಟೆಕ್‌ ರೂಮ್‌ಗಳಿದ್ದು, ರಿಪೇರಿಗಳನ್ನು ಮಾಡಲಾಗುತ್ತದೆ ಮತ್ತು ಉಚಿತವಾಗಿ ಗ್ರಾಹಕರಿಗೆ ಚಿನ್ನದ ಶುದ್ಧತೆಯನ್ನು ವಿಶ್ಲೇಷಿಸಲು ಕ್ಯಾರಟ್ ಮೀಟರುಗಳಿವೆ. ಇದನ್ನು ಹೊರತುಪಡಿಸಿ ಬ್ರ್ಯಾಂಡ್‌ ಪ್ರತಿ ಖರೀದಿ ಮೇಲೆ ಲಾಯಲ್ಟಿ ಪಾಯಿಂಟ್‌ಗಳನ್ನೂ ಹೊಂದಿದೆ.


    ಪ್ರತಿ ಕಲೆಕ್ಷನ್‌ನಲ್ಲೂ ಅದ್ಭುತ ವಿನ್ಯಾಸಗಳನ್ನು ಹೊಂದಿರುವ ರಿಲಯನ್ಸ್‌ ಜ್ಯೂವೆಲ್ಸ್‌, ಪ್ರತಿ ವ್ಯಕ್ತಿತ್ವಕ್ಕೆ ಮತ್ತು ಪ್ರತಿ ಸಂದರ್ಭಕ್ಕೂ ಆಭರಣವನ್ನು ಹೊಂದಿದೆ.

    Published by:Harshith AS
    First published: