Reliance Jewels: ಅಕ್ಷಯ ತೃತೀಯದಂದು “ರನ್‌ಕರ್” ಕಲೆಕ್ಷನ್‌ ಬಿಡುಗಡೆ ಮಾಡಿದ ರಿಲಯನ್ಸ್‌ ಜ್ಯುವೆಲ್ಸ್‌

Reliance Jewels Rannkaar: ಅಕ್ಷಯ ತೃತೀಯದ ಮಂಗಳಕರ ಸನ್ನಿವೇಶಕ್ಕಾಗಿ “ರನ್‌ಕರ್‌” ಆಭರಣ ಕಲೆಕ್ಷನ್‌ ಅನ್ನು ರಿಲಾಯನ್ಸ್‌ ಜ್ಯೂವೆಲ್ಸ್‌ ಬಿಡುಗಡೆ ಮಾಡಿದೆ. ಕಛ್‌ನ ರನ್‌ ಹಾಗೂ ಅದರ ವೈವಿಧ್ಯಮಯ ಸಂಪ್ರದಾಯದಿಂದ ಈ ಕಲೆಕ್ಷನ್‌ ಪ್ರೇರಿತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತದ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ರಿಲಯನ್ಸ್‌ ಜ್ಯುವೆಲ್ಸ್‌ (Reliance Jewels), ಕಲೆ ಮತ್ತು ಸಂಸ್ಕೃತಿ (Art And Culture), ಸಾಂಪ್ರದಾಯಿಕ ಮತ್ತು ನಂಬಿಕೆಗಳಿಂದ ಪ್ರೇರಿತ ಹಲವು ಸಂಗ್ರಹಗಳಿಗೆ ಹೆಸರಾಗಿದೆ. ಒಡಿಶಾದ ಉತ್ಕಲ, ಬನಾರಸ್‌ನ ಕಾಸ್ಯಮ್‌ನಿಂದ (Cosam Benares) ಪ್ರೇರಿತ ಆಭರಣಗಳೂ ಸೇರಿದಂತೆ, ಭಾರತದ (India) ಶ್ರೀಮಂತ ಸಂಸ್ಕೃತಿಯನ್ನು ರಿಲಾಯನ್ಸ್‌ ಜ್ಯುವೆಲ್ಸ್‌ ಒಳಗೊಂಡಿದೆ.

  ಅಕ್ಷಯ ತೃತೀಯದ ಮಂಗಳಕರ ಸನ್ನಿವೇಶಕ್ಕಾಗಿ “ರನ್‌ಕರ್‌” https://youtu.be/rLIbZm-ey8g ಆಭರಣ ಕಲೆಕ್ಷನ್‌ ಅನ್ನು ರಿಲಯನ್ಸ್‌ ಜ್ಯುವೆಲ್ಸ್‌ ಬಿಡುಗಡೆ ಮಾಡಿದೆ. ಕಛ್‌ನ ರನ್‌ ಹಾಗೂ ಅದರ ವೈವಿಧ್ಯಮಯ ಸಂಪ್ರದಾಯದಿಂದ ಈ ಕಲೆಕ್ಷನ್‌ ಪ್ರೇರಿತವಾಗಿದೆ. ಬಿಳಿ ರನ್‌ ಮತ್ತು ವೈವಿಧ್ಯಮಯ ಬಣ್ಣಗಳನ್ನು ಹೊಂದಿರುವ ಕಲೈಡೋಸ್ಕೋಪ್‌ಗೆ ಕಛ್‌ ತವರಾಗಿದೆ. ಸೂಕ್ಷ್ಮವಾಗಿ ವಿನ್ಯಾಸ ಮಾಡಿದ ಮತ್ತು ಕಲಾತ್ಮಕವಾಗಿ ರೂಪಿಸಿದ ಆಭರಣದ ಸಂಗ್ರಹದಿಂದ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಿಂದಿನ ಕಾಲದ ಬ್ಲಾಕ್ ಪ್ರಿಂಟಿಂಗ್ ತಂತ್ರಜ್ಞಾನ ಅಜ್ರಖ್‌, ಶ್ರೀಮಂತ ನೈಸರ್ಗಿಕ ಬಣ್ಣಗಳನ್ನು ಬಳಸಿ ಸುಂದರವಾಗಿ ಪೇಂಟಿಂಗ್ ಮಾಡುವ ರೋಗನ್, ಗೋಡೆಗಳಿಗೆ ಕನ್ನಡಿಗಳನ್ನು ಅಳವಡಿಸುವ ಅದ್ಭುತ ಕರಕುಶಲತೆ ಲಿಪ್ಪನ್, ಸುಂದರ ಕಛ್‌ ಎಂಬ್ರಾಯ್ಡರಿ, ಜನಪ್ರಿಯ ಟೈ ಮತ್ತು ಡೈ ತಂತ್ರ ಬಂಧನಿ ಸೇರಿದಂತೆ ಹಲವು ರೀತಿಯ ಆಭರಣಗಳ ಸಂಗ್ರಹ ಇದರಲ್ಲಿದೆ.

  ಭಾರತದ ಶ್ರೀಮಂತ ಸಂಸ್ಕೃತಿಯನ್ನು ಸಂಭ್ರಮಿಸಲು ಮತ್ತು ಗೌರವಿಸಲು ಮತ್ತು ಅಕ್ಷಯ ತೃತೀಯದ ಹಬ್ಬವನ್ನು ಇನ್ನಷ್ಟು ವಿಶೇಷವನ್ನಾಗಿಸಲು ಈ ಸುಂದರ ಕಲೆಕ್ಷನ್ ಅನ್ನು ರಿಲಾಯನ್ಸ್‌ ಜ್ಯುವೆಲ್ಸ್‌ ಬಿಡುಗಡೆ ಮಾಡಿದೆ. ಇದರಲ್ಲಿ ಚಿನ್ನ ಮತ್ತು ವಜ್ರದ ಸುಂದರ ನೆಕ್‌ಲೇಸ್‌ ಸೆಟ್‌ಗಳು, ಪೆಂಡೆಂಟ್ ಸೆಟ್‌ಗಳು, ಇಯರ್‌ರಿಂಗ್‌, ರಿಂಗ್‌ಗಳು ಮತ್ತು ಬಳೆಗಳಿವೆ.

  ಗ್ರಾಹಕರಿಗೆ ಕಲೆಕ್ಷನ್‌ನಲ್ಲಿ ವ್ಯಾಪಕ ಆಯ್ಕೆಗಳಿವೆ. ಅದ್ಭುತವಾಗಿ ಕಾಣುವ ಆಭರಣಗಳಿಂದ ಐಶ್ವರ್ಯಯುತವಾಗಿ ಕಾಣುವ ಚೋಕರ್ ಸೆಟ್‌ಗಳು, ಉದ್ದನೆಯ, ಸೂಕ್ಷ್ಮ ಮತ್ತು ಸುಂದರ ನೆಕ್‌ಲೇಸ್‌ ಸೆಟ್‌ಗಳು ಇವೆ ಮತ್ತು 22 ಕ್ಯಾರೆಟ್ ಚಿನ್ನದಲ್ಲಿ ಸುಂದರ ವಿನ್ಯಾಸದ ಬಳೆಗಳು ಮತ್ತು ರಿಂಗ್‌ಗಳಿವೆ. ರಣ್‌ ಅನ್ನು ಪ್ರತಿನಿಧಿಸುವ ಸುಂದರ ಹವಳಗಳು ಮತ್ತು ನೀಲಿ ಮತ್ತು ಕೆಂಪು ಬಣ್ಣದ ವರ್ಕ್‌ ಮಾಡಿರುವುದು ಅಜ್ರಖ್ ಮತ್ತು ಬಂಧನಿ ಸ್ಫೂರ್ತಿಯಾಗಿದೆ. ಕಛ್‌ ವುಡ್ ವರ್ಕ್‌ನ ಕೆತ್ತನೆಗಳನ್ನು ಚಿನ್ನದ ಚೋಕರ್‌ಗಳ ಕೆತ್ತನೆಯಲ್ಲಿ ಸುಂದರವಾಗಿ ತೋರಿಸಲಾಗಿದೆ. ವಿವಿಧ ಸನ್ನಿವೇಶಗಳು ಮತ್ತು ಬಜೆಟ್‌ಗಳಿಗೆ ಹೊಂದುವ ವಿಶಾಲ ಶ್ರೇಣಿಯ ಆಭರಣಗಳಿವೆ. ಚಿನ್ನದ ಕಲೆಕ್ಷನ್‌ನಲ್ಲಿನ ವಿನ್ಯಾಸವು ಸುಂದರ ಫಿಲಿಗ್ರೀ ವರ್ಕ್‌ ಮತ್ತು ದೇವಸ್ಥಾನದ ಶೈಲಿಯ ಆಭರಣ ಹಾಗೂ ಮೀನಕರಿ ಮತ್ತು ಕುಂದನ್ ಆಭರಣವೂ ಇದೆ.

  ಇದನ್ನೂ ಓದಿ: Gold Price Today: ಏರುತ್ತಲೇ ಇದೆ ಹಳದಿ ಲೋಹದ ಬೆಲೆ – ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಹೀಗಿದೆ

  ರಣ್‌ಕರ್‌ ಕಲೆಕ್ಷನ್‌ನ ವಜ್ರದ ವಿನ್ಯಾಸಗಳು ಕಛ್‌ನಷ್ಟೇ ವೈವಿಧ್ಯಮಯವಾಗಿವೆ. ಆಕರ್ಷಕ ವಜ್ರದ ನೆಕ್‌ಲೇಸ್‌ ಸಟ್‌ಗಳು, ಪೆಂಡೆಂಟ್‌ ಸೆಟ್‌ಗಳು ಮತ್ತು ರಿಂಗ್‌ಗಳು ಹಲವು ವಿವಿಧ ರೀತಿಯಲ್ಲಿ ಕಛ್‌ನ ಕೌಶಲ್ಯವನ್ನು ಒಳಗೊಂಡಿವೆ. ಆಕರ್ಷಕ ವಜ್ರಗಳೊಂದಿಗೆ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಅಜ್ರಖ್ ಮತ್ತು ಬಂಧನಿ ಕಸೂತಿಯ ಸೂಕ್ಷ್ಮ ಅಂಶಗಳನ್ನು ನೆಕ್‌ಲೇಸ್‌ ಸೆಟ್‌ ಒಳಗೊಂಡಿದೆ. ರಣ್‌ಕರ್‌ ಕಲೆಕ್ಷನ್‌ನಲ್ಲಿ ವಜ್ರದ ಸೆಟ್ಟಿಂಗ್‌ ಕೂಡ ವಿಶಿಷ್ಟವಾಗಿದ್ದು, ಕಲಾ ರೂಪವನ್ನು ಸುಂದರವಾಗಿ ಪ್ರತಿಬಿಂಬಿಸಿದೆ. ಸುಂದರ ಕಛ್‌ ಎಂಬ್ರಾಯ್ಡರಿಯು ವಜ್ರದ ಆಭರಣದ ಹಲವು ವಿನ್ಯಾಸಗಳನ್ನು ಒಳಗೊಂಡಿದೆ ಮತ್ತು ಹಬ್ಬದ ಸಂದರ್ಭಗಳಿಗೆ, ವಧುವಿಗೆ ಮತ್ತು ಸಾಂಪ್ರದಾಯಿಕ ಲುಕ್‌ಗಳಿಗೆ ಅತ್ಯಂತ ಸೂಕ್ತವಾಗಿದೆ.

  ಹೊಸ ಕಲೆಕ್ಷನ್‌ ಬಗ್ಗೆ ಮಾತನಾಡಿದ ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್‌ “ಭಾರತವು ವಿಶಾಲವಾದ ಮತ್ತು ಅಮೂಲ್ಯವಾದ ಸಂಪ್ರದಾಯವನ್ನು ಹೊಂದಿದ್ದು, ಇದು ನಮ್ಮ ದೇಶದ ಸಂಸ್ಕೃತಿಯೊಂದಿಗೆ ಅಡಕವಾಗಿದೆ. ಈ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯುತ್ತೇವೆ ಮತ್ತು ನಮ್ಮ ಸಂಸ್ಕೃತಿ ಮತ್ತು ಕಲಾ ರೂಪಗಳ ಅತ್ಯಂತ ಆಳವಾದ ಬೇರುಗಳಿಂದ ಅತ್ಯುತ್ತಮ ಆಭರಣ ವಿನ್ಯಾಸಗಳನ್ನು ತರುತ್ತಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂದು ಭಾವಿಸಿರುವ ಈ ಅಕ್ಷಯ ತೃತೀಯದ ಸನ್ನಿವೇಶದಲ್ಲಿ, ರಣ್‌ಕಾರ್‌ ಎಂಬ ಕಛ್‌ನ ರಣ್‌ನಿಂದ ಸ್ಫೂರ್ತಿ ಪಡೆದ ವಿನ್ಯಾಸಗಳ ಕಲೆಕ್ಷನ್ ಅನ್ನು ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತಿದೆ. ಈ ಕಲೆಕ್ಷನ್‌ನಲ್ಲಿನ ಪ್ರತಿ ಚಿನ್ನ ಮತ್ತು ವಜ್ರದ ನೆಕ್‌ಲೇಸ್‌, ಕಿವಿಯೋಲೆಗಳು, ರಿಂಗ್‌ಗಳು ಮತ್ತು ಬಳೆಗಳು ವಿಶಿಷ್ಟವಾಗಿವೆ ಮತ್ತು ವಿಭಿನ್ನ ಕಲೆ, ಸಂಪ್ರದಾಯ ಮತ್ತು ಕಛ್‌ ಇತಿಹಾಸವನ್ನು ಪ್ರತಿನಿಧಿಸುತ್ತವೆ.

  ಹೊಸ ಆಭರಣಗಳ ಕೊಡುಗೆ ಜೊತೆಗೆ, ಚಿನ್ನದ ಆಭರಣ ಮತ್ತು ವಜ್ರದ ಆಭರಣದ ಮೌಲ್ಯದ ಮೇಕಿಂಗ್ ಚಾರ್ಜ್‌ಗಳ ಮೇಲೆ 25% ವರೆಗೆ ರಿಯಾಯಿತಿಯನ್ನೂ ಗ್ರಾಹಕರು ಪಡೆಯಬಹುದು. ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಸುಂದರ ಕಲೆಕ್ಷನ್‌ ದೇಶದ ಎಲ್ಲ ರಿಲಯನ್ಸ್‌ ಜ್ಯುವೆಲ್ಸ್‌ ಫ್ಲ್ಯಾಗ್‌ಶಿಪ್‌ ಶೋರೂಮ್‌ಗಳಲ್ಲಿ ಲಭ್ಯವಿದೆ ಮತ್ತು ಆಯ್ದ ಶ್ರೇಣಿಯು ರಿಲಯನ್ಸ್‌ ಜ್ಯುವೆಲ್ಸ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ನೀವು ಇಲ್ಲಿ ಕಲೆಕ್ಷನ್‌ ನೋಡಬಹುದು ಮತ್ತು ಟ್ರೈ ಮಾಡಬಹುದು https://bit.ly/RJAT_PR


  ರಿಲಯನ್ಸ್‌ ಜ್ಯುವೆಲ್ಸ್‌ ಬಗ್ಗೆ

  ರಿಲಯನ್ಸ್‌ ಜ್ಯುವೆಲ್ಸ್‌ ಎಂಬುದು ಭಾರತದ ಅತಿದೊಡ್ಡ ರಿಟೇಲರ್ ರಿಲಾಯನ್ಸ್‌ ರಿಟೇಲ್‌ ಲಿಮಿಟೆಡ್‌ನ ಭಾಗವಾಗಿದೆ. ಆಕರ್ಷಕವಾದ ಮತ್ತು ವಿಶಾಲ ಶ್ರೇಣಿಯ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣ ಕಲೆಕ್ಷನ್‌ಗಳನ್ನು ಬ್ರ್ಯಾಂಡ್ ಒದಗಿಸುತ್ತದೆ. ವಿನ್ಯಾಸ ಮತ್ತು ಕರಕುಶಲತೆಯ ಮೇಲೆ ಗಮನ ಕೇಂದ್ರೀಕರಿಸಿರುವ ಬ್ರ್ಯಾಂಡ್‌, ನಮ್ಮ ಗ್ರಾಹಕರಿಗೆ, ಕಲೆ, ಕರಕುಶಲತೆ ಮತ್ತು ಭಾರತದ ಶ್ರೀಮಂತ ಪರಂಪರೆಯಿಂದ ಪ್ರೇರಿತ ಎಕ್ಸ್‌ಕ್ಲೂಸಿವ್ ಮತ್ತು ವಿಶಿಷ್ಟ ಡಿಸೈನರ್ ಕಲೆಕ್ಷನ್‌ಗಳನ್ನು ಒದಗಿಸುತ್ತದೆ. ತನ್ನ ಗ್ರಾಹಕರ ಜೀವನದ ಪ್ರತಿ ಕ್ಷಣವನ್ನೂ ವಿಶೇಷವನ್ನಾಗಿಸುವುದರಲ್ಲಿ ರಿಲಾಯನ್ಸ್‌ ಜ್ಯೂವೆಲ್ಸ್‌ ನಂಬಿಕೆ ಹೊಂದಿದೆ.

  ಇದನ್ನೂ ಓದಿ: Astrology: ಏಪ್ರಿಲ್​​ 30ರಂದು ಸೂರ್ಯಗ್ರಹಣ: ಈ 5 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ

  ರಿಲಯನ್ಸ್‌ ಜ್ಯುವೆಲ್ಸ್‌ 250 ಕ್ಕೂ ಹೆಚ್ಚು ಫ್ಲ್ಯಾಗ್‌ಶಿಪ್‌ ಶೋರೂಮ್‌ಗಳು, ಶಾಪ್‌ ಇನ್ ಶಾಪ್‌ಗಳನ್ನು 125 ಕ್ಕೂ ಹೆಚ್ಚು ನಗರಗಳಲ್ಲಿ ಹೊಂದಿದೆ ಮತ್ತು ನಿರಂತರವಾಗಿ ಈ ಸಂಖ್ಯೆ ಬೆಳೆಯುತ್ತಲೇ ಇದೆ. ಗ್ರಾಹಕರಿಗೆ ವಿಶೇಷ ಸೇವೆ ಮತ್ತು ಸಮಗ್ರ ಆಭರಣ ಶಾಪಿಂಗ್ ಅನುಭವವನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಬ್ರ್ಯಾಂಡ್ ಎಂದಿಗೂ ಖುಷಿ ನೀಡುತ್ತದೆ. ರಿಲಯನ್ಸ್‌ ಜ್ಯುವೆಲ್ಸ್‌ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಫರ್ಧಾತ್ಮಕ ದರದಲ್ಲಿ ಲಭ್ಯವಿವೆ. ಶೂನ್ಯ ವೇಸ್ಟೇಜ್ ಮತ್ತು ಸ್ಫರ್ಧಾತ್ಮಕ ಮೇಕಿಂಗ್‌ ಚಾರ್ಜ್‌ಗಳು ಗ್ರಾಹಕರಿಗೆ 100% ಸಂತೃಪ್ತಿಯನ್ನು ನೀಡುತ್ತವೆ. ರಿಲಯನ್ಸ್‌ ಜ್ಯುವೆಲ್ಸ್‌ 100 ಶೇಕಡಾ ಶುದ್ಧತೆ, ಪಾರದರ್ಶಕ ಬೆಲೆ ಮತ್ತು ಗ್ಯಾರಂಟಿ ಗುಣಮಟ್ಟವನ್ನು ಪ್ರತಿ ಆಭರಣದಲ್ಲೂ ಒದಗಿಸುತ್ತದೆ. ಬ್ರ್ಯಾಂಡ್ ಕೇವಲ 100 ಶೇಕಡಾ ಬಿಐಎಸ್‌ ಹಾಲ್‌ಮಾರ್ಕ್ ಚಿನ್ನವನ್ನೇ ಮಾರಾಟ ಮಾಡುತ್ತದೆ ಮತ್ತು ಬಳಸಿದ ಪ್ರತಿ ವಜ್ರವನ್ನೂ ಪ್ರಮಾಣಿತ ಲ್ಯಾಬ್‌ಗಳಿಂದ ಪ್ರಮಾಣೀಕರಿಸಲಾಗಿರುತ್ತದೆ. ರಿಲಯನ್ಸ್‌ ಜ್ಯುವೆಲ್ಸ್‌ ಶೋರೂಮ್‌ಗಳು ಕ್ಯೂಸಿ ಟೆಕ್‌ ರೂಮ್‌ಗಳನ್ನು ರಿಪೇರಿಗಳಿಗಾಗಿ, ಗ್ರಾಹಕರ ಚಿನ್ನವನ್ನು ಉಚಿತವಾಗಿ ವಿಶ್ಲೇಷಿಸುವುದಕ್ಕಾಗಿ ಕ್ಯಾರಟ್ ಮೀಟರುಗಳನ್ನು ಹೊಂದಿವೆ. ಇದರ ಹೊರತಾಗಿ, ಪ್ರತಿ ಖರೀದಿಯ ಮೇಲೆ ಲಾಯಲ್ಟಿ ಪಾಯಿಂಟ್‌ಗಳನ್ನೂ ಬ್ರ್ಯಾಂಡ್ ಒದಗಿಸುತ್ತದೆ.

  ಪ್ರತಿ ಕಲೆಕ್ಷನ್‌ನಲ್ಲೂ ಆಕರ್ಷಕವಾದ ವಿನ್ಯಾಸಗಳಿದ್ದು, ಪ್ರತಿ ವ್ಯಕ್ತಿತ್ವ ಮತ್ತು ಪ್ರತಿ ಸನ್ನಿವೇಶಕ್ಕೂ ಆಭರಣವನ್ನು ರಿಲಯನ್ಸ್‌ ಜ್ಯುವೆಲ್ಸ್‌ ಹೊಂದಿದೆ.

  ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ http://www.reliancejewels.com
  Published by:Harshith AS
  First published: