Reliance Jewels ಕಡೆಯಿಂದ‌ ಸಂಕ್ರಾಂತಿ ಹಬ್ಬದ ಉಡುಗೊರೆ.. ಕಿವಿಯೋಲೆ, ರಿಂಗ್​ ಖರೀದಿಸಲು ಇದೇ ಸರಿಯಾದ ಸಮಯ

ಪ್ರತಿ ದಿನವೂ ಸೂರ್ಯ ಹೊಸ ಆಶಯದೊಂದಿಗೆ ಬರುತ್ತಾನೆ. ಈ ಹಬ್ಬದ ಸಮಯದಲ್ಲಿ ರಿಲಾಯನ್ಸ್‌ ಜ್ಯುವೆಲ್ಸ್‌ ‌ ಆ ಭರವಸೆ ಮತ್ತು ಶುಭಾಶಯಗಳ ಸ್ಫೂರ್ತಿಯನ್ನು ಒಳಗೊಂಡ ವಿನ್ಯಾಸಗಳನ್ನು ಗ್ರಾಹಕರಿಗಾಗಿ ತಂದಿದೆ. ಈ ವಜ್ರದ ಕಲೆಕ್ಷನ್‌ನಲ್ಲಿನ ಪ್ರತಿ ಆಭರಣವನ್ನೂ ಅತ್ಯಂತ ಕಾಳಜಿಯಿಂದ ವಿನ್ಯಾಸ ಮಾಡಲಾಗಿದ್ದು, ಹೊಸ ಆರಂಭದ ಖುಷಿ ಮತ್ತು ಭರವಸೆಯಲ್ಲಿ ಸೂರ್ಯನ ಕಿರಣಗಳನ್ನು ಇದು ನೆನಪಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಜನವರಿ 15, 2022: ಭಾರತದ ಅತ್ಯಂತ ವಿಶ್ವಾಸಾರ್ಹ ಜ್ಯುವೆಲ್ಲರಿ ಬ್ರ್ಯಾಂಡ್‌ ರಿಲಾಯನ್ಸ್‌ ಜ್ಯುವೆಲ್ಸ್‌ ಸಂಕ್ರಾಂತಿ ಹಬ್ಬದ ಆರಂಭದಲ್ಲಿ ಸುಂದರವಾದ ವಿನ್ಯಾಸಗಳ ಶ್ರೇಣಿಯನ್ನು ಪರಿಚಯಿಸಿದೆ. ಸೂರ್ಯನ ಕಿರಣಗಳಿಂದ ಪ್ರೇರಿತವಾಗಿ UtsavSunherePalonKa ಎಂಬ ಥೀಮ್‌ ಅಡಿಯಲ್ಲಿ ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳನ್ನು ಪರಿಚಯಿಸಲಾಗಿದೆ.

    ಪ್ರತಿ ದಿನವೂ ಸೂರ್ಯ ಹೊಸ ಆಶಯದೊಂದಿಗೆ ಬರುತ್ತಾನೆ. ಈ ಹಬ್ಬದ ಸಮಯದಲ್ಲಿ ರಿಲಾಯನ್ಸ್‌ ಜ್ಯುವೆಲ್ಸ್‌ ‌ ಆ ಭರವಸೆ ಮತ್ತು ಶುಭಾಶಯಗಳ ಸ್ಫೂರ್ತಿಯನ್ನು ಒಳಗೊಂಡ ವಿನ್ಯಾಸಗಳನ್ನು ಗ್ರಾಹಕರಿಗಾಗಿ ತಂದಿದೆ. ಈ ವಜ್ರದ ಕಲೆಕ್ಷನ್‌ನಲ್ಲಿನ ಪ್ರತಿ ಆಭರಣವನ್ನೂ ಅತ್ಯಂತ ಕಾಳಜಿಯಿಂದ ವಿನ್ಯಾಸ ಮಾಡಲಾಗಿದ್ದು, ಹೊಸ ಆರಂಭದ ಖುಷಿ ಮತ್ತು ಭರವಸೆಯಲ್ಲಿ ಸೂರ್ಯನ ಕಿರಣಗಳನ್ನು ಇದು ನೆನಪಿಸುತ್ತದೆ.

    ವಿಶಿಷ್ಟ ವಿನ್ಯಾಸಗಳನ್ನು ಹೊಂದಿರುವ ಕಲೆಕ್ಷನ್‌ ವೈಯಕ್ತಿಕ ಆಭರಣ ಸಂಗ್ರಹಕ್ಕೆ ಒಂದು ಸೇರ್ಪಡೆಯಾಗುತ್ತದೆ ಅಥವಾ ಮಂಗಳಕರ ದಿನಗಳಂದು ಪ್ರೀತಿಪಾತ್ರರಿಗೆ ಉಡುಗೊರೆಯಾಗಿಯೂ ಹೊಂದುತ್ತದೆ.

    ವಜ್ರದ ಕಿವಿಯೋಲೆಗಳು ಮತ್ತು ರಿಂಗ್‌ಗಳ ಹೊಸ ಸಂಗ್ರಹವನ್ನು ಪರಿಚಯಿಸುವುದರ ಜೊತೆಗೆ, ಫೆಬ್ರವರಿ 14 ರ ವರೆಗೆ ನಡೆಯಲಿರುವ ‘ಡ್ರೀಮ್ ಡೈಮಂಡ್ ಸೇಲ್‌’ ಎಂಬ ವಿಶೇಷ ಕೊಡುಗೆಯನ್ನು ರಿಲಾಯನ್ಸ್‌ ಜ್ಯುವೆಲ್ಸ್‌ ಘೋಷಿಸಿದೆ. ಇದರ ಅಡಿಯಲ್ಲಿ ರಿಲಾಯನ್ಸ್‌ ಜ್ಯುವೆಲ್ಸ್‌ ‌ ನಲ್ಲಿ ವಜ್ರದ ಉತ್ಪನ್ನಗಳ ಇನ್ವಾಯ್ಸ್‌ ಮೌಲ್ಯದ ಮೇಲೆ 25% ರಿಯಾಯಿತಿ ನೀಡಲಾಗುತ್ತದೆ. ಗ್ರಾಹಕರು ಚಿನ್ನದ ಆಭರಣದ ಮೇಲೆ 25% ವರೆಗೆ ಮೇಕಿಂಗ್‌ ಚಾರ್ಜ್‌ನಲ್ಲೂ ರಿಯಾಯಿತಿ ಪಡೆಯಬಹುದು.

    ಆಕರ್ಷಕ ಕಲೆಕ್ಷನ್‌ ದೇಶಾದ್ಯಂತ ಇರುವ ರಿಲಾಯನ್ಸ್‌ ಜ್ಯುವೆಲ್ಸ್‌ ‌ ‌ನ ಫ್ಲ್ಯಾಗ್‌ಶಿಪ್‌ ಶೋರೂಮ್‌ಗಳಲ್ಲಿ ವಿಶೇಷವಾಗಿ ಆಯ್ದ ಶ್ರೇಣಿಯು ರಿಲಾಯನ್ಸ್‌ ಜ್ಯುವೆಲ್ಸ್‌ ‌ ‌ನ ವೆಬ್‌ಸೈಟ್‌ www.reliancejewels.com ನಲ್ಲಿ ಲಭ್ಯವಿರಲಿದೆ.



    ಇದನ್ನು ಓದಿ: Sankranti Special: ಸಂಕ್ರಾಂತಿಗೆ ಸಿಹಿ ಹಾಗೂ ಖಾರ ಪೊಂಗಲ್ ಮಾಡಿ ಸವಿಯಿರಿ, ಮಾಡುವ ವಿಧಾನ ಇಲ್ಲಿದೆ

    ಹೊಸ ಕಲೆಕ್ಷನ್‌ ಬಗ್ಗೆ ಮಾತನಾಡಿದ, ರಿಲಾಯನ್ಸ್ ಜ್ಯುವೆಲ್ಸ್‌ ‌ ‌ನ ಸಿಇಒ ಸುನೀಲ್ ನಾಯಕ್‌ “ಈ ವರ್ಷದ ಆರಂಭದಲ್ಲಿ, ನಮ್ಮ ಗ್ರಾಹಕರಿಗೆ ಪ್ರಕಾಶಮಾನವಾದ, ಹೊಳಪಿನ ಭರವಸೆಯೊಂದನ್ನು ಹೊಸ ಕಲೆಕ್ಷನ್‌ ಮೂಲಕ ಒದಗಿಸಲು ನಾವು ಬಯಸಿದ್ದೆವು. ನಮ್ಮ ಗ್ರಾಹಕರ ಪ್ರತಿ ಕ್ಷಣದಲ್ಲೂ ಖುಷಿ ಮತ್ತು ಸಂತೃಪ್ತಿಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಸೂರ್ಯನ ಕಿರಣಗಳೊಂದಿಗೆ ಪ್ರೇರಿತ ಈ ವಿನ್ಯಾಸದ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.”

    ರಿಲಾಯನ್ಸ್‌ ಜ್ಯುವೆಲ್ಸ್‌ ‌ ಬಗ್ಗೆ:

    ರಿಲಾಯನ್ಸ್‌ಜ್ಯುವೆಲ್ಸ್‌ ‌ ‌ ಎಂಬುದು ಭಾರತದಲ್ಲಿ ಅಗ್ರ 10 ವಿಶ್ವಾಸಾರ್ಹ ರಿಟೇಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ರಿಲಾಯನ್ಸ್‌ ರಿಟೇಲ್‌ ಲಿ. ಭಾಗವಾಗಿದೆ. ಬ್ರ್ಯಾಂಡ್‌ ಆಕರ್ಷಕವಾದ ಮತ್ತು ವಿಶಾಲ ಶ್ರೇಣಿಯ ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣ ಸಂಗ್ರಹವನ್ನು ಒದಗಿಸುತ್ತದೆ. ವಿನ್ಯಾಸ ಮತ್ತು ಕರಕುಶಲತೆಯ ಮೇಲೆ ಗಮನ ಹರಿಸಲಾಗಿದ್ದು, ಕಲೆ, ಕ್ರಾಫ್ಟ್‌ ಮತ್ತು ಭಾರತೀಯ ಸಂಪ್ರದಾಯದಿಂದ ಪ್ರೇರಿತ ಗ್ರಾಹಕರಿಗೆ ವಿಶೇಷ ಮತ್ತು ವಿಶಿಷ್ಟವಾದ ಡಿಸೈನರ್ ಕಲೆಕ್ಷನ್‌ ಅನ್ನು ಒದಗಿಸುವುದರ ಮೇಲೆ ಗಮನ ಹರಿಸಿದೆ. ರಿಲಾಯನ್ಸ್‌ ಜ್ಯುವೆಲ್ಸ್‌ ತನ್ನ ಗ್ರಾಹಕರ ಜೀವನದಲ್ಲಿ ವಿಶೇಷ ಕ್ಷಣವನ್ನು ಸಂಭ್ರಮಿಸುವುದರಲ್ಲಿ ನಂಬಿಕೆ ಇರಿಸಿದೆ.



    ಇದನ್ನು ಓದಿ: Gold And Silver Price Today: ದೇಶದಲ್ಲಿ ಇಳಿಕೆಯಾದ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಎಷ್ಟಿದೆ ದರ?

    ರಿಲಾಯನ್ಸ್‌ ಜ್ಯುವೆಲ್ಸ್‌ ‌ ‌ 125 ಕ್ಕ ಹೆಚ್ಚು ನಗರಗಳಲ್ಲಿ 250 ಕ್ಕೂ ಹೆಚ್ಚು ಫ್ಲಾಗ್‌ಶಿಪ್‌ ಶೋರೂಮ್‌ಗಳು ಮತ್ತು ಶಾಪ್ ಇನ್ ಶಾಪ್‌ಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತಿದೆ ಮತ್ತು ಇದು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅಭೂತಪೂರ್ವ ಸೇವೆಗಳು ಮತ್ತು ವಿಶಿಷ್ಟ ಆಭರಣ ಶಾಪಿಂಗ್‌ ಅನುಭವವನ್ನು ಬ್ರ್ಯಾಂಡ್‌ ತನ್ನ ಗ್ರಾಹಕರಿಗೆ ಎಂದಿಗೂ ಒದಗಿಸುತ್ತದೆ. ರಿಲಾಯನ್ಸ್‌ ಜ್ಯುವೆಲ್ಸ್‌ ‌ ‌ನಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳು ಅತ್ಯಂತ ಸ್ಫರ್ಧಾತ್ಮಕ ದರದಲ್ಲಿ ಲಭ್ಯವಿದೆ. ಶೂನ್ಯ ವೇಸ್ಟೇಜ್‌ ಮತ್ತು ಸ್ಫರ್ಧಾತ್ಮಕ ಮೇಕಿಂಗ್ ಚಾರ್ಜ್‌ಗಳು ಗ್ರಾಹಕರಿಗೆ 100% ಸಂತೃಪ್ತಿಯನ್ನು ಒದಗಿಸುತ್ತದೆ. ರಿಲಾಯನ್ಸ್‌ ಜ್ಯುವೆಲ್ಸ್‌ ‌ 100 ಶೇಕಡಾ ಶುದ್ಧತೆ, ಪಾರದರ್ಶಕ ಬೆಲೆ ನಿಗದಿ ಮತ್ತು ಖಚಿತ ಗುಣಮಟ್ಟವನ್ನು ಪ್ರತಿ ಆಭರಣದಲ್ಲೂ ಒದಗಿಸುತ್ತದೆ. 100 ಶೇಕಡಾ ಬಿಐಎಸ್‌ ಹಾಲ್‌ಮಾರ್ಕ್‌ ಮಾಡಿದ ಚಿನ್ನವನ್ನು ಮಾತ್ರ ನಿರ್ವಹಿಸುತ್ತದೆ ಮತ್ತು ಬಳಸಿದ ಪ್ರತಿ ವಜ್ರವೂ ಸ್ವತಂತ್ರ ಪ್ರಮಾಣೀಕರಣ ಲ್ಯಾಬೊರೇಟರಿಗಳಿಂದ ಪ್ರಮಾಣಿಕರಿಸಲ್ಪಟ್ಟಿದೆ. ಎಲ್ಲ ರಿಲಾಯನ್ಸ್‌ ಜ್ಯುವೆಲ್ಸ್‌ ‌ ಶೋರೂಮ್‌ಗಳು ರಿಪೇರಿಗಳಿಗಾಗಿ ಕ್ಯೂಸಿ ಟೆಕ್‌ ಟೀಮ್‌ಗಳು, ಕ್ಯಾರಟ್‌ ಮೀಟರುಗಳನ್ನು ಹೊಂದಿದ್ದು, ಗ್ರಾಹಕರು ಉಚಿತವಾಗಿ ಚಿನ್ನದ ಶುದ್ಧತೆಯನ್ನು ವಿಶ್ಲೇಷಿಸಬಹುದು. ಇದರ ಹೊರತಾಗಿ, ಪ್ರತಿ ಖರೀದಿಯ ಮೇಲೆ ಲಾಯಲ್ಟಿ ಪಾಯಿಂಟ್‌ಗಳನ್ನೂ ಬ್ರ್ಯಾಂಡ್‌ ಹೊಂದಿದೆ.

    ಪ್ರತಿ ಕಲೆಕ್ಷನ್‌ನಲ್ಲಿ ವಿವಿಧ ವಿನ್ಯಾಸಗಳನ್ನು ಹೊಂದಿರುವ, ರಿಲಾಯನ್ಸ್‌ ಜ್ಯುವೆಲ್ಸ್‌ ‌ ಪ್ರತಿ ವ್ಯಕ್ತಿತ್ವ ಮತ್ತು ಪ್ರತಿ ಸನ್ನಿವೇಶಕ್ಕೂ ಆಭರಣ ಹೊಂದಿದೆ.

    ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ http://www.reliancejewels.com

    ಫೇಸ್​ಬುಕ್​ : https://www.facebook.com/RelianceJewels/

    ಇನ್‌ಸ್ಟಾಗ್ರಾಮ್‌: https://www.instagram.com/reliancejewels/

    ಯೂಟ್ಯೂಬ್‌: ಭೇಟಿ ಮಾಡಿ ಹಾಗೂ 🔔 ಇಲ್ಲಿ ಸಬ್‌ಸ್ಕ್ರೈಬ್‌ ಮಾಡಿ - https://bit.ly/3CFj3Y5
    Published by:Harshith AS
    First published: