Reliance: ಭಾರತದಲ್ಲಿ ಸೂಪರ್ ಐಷಾರಾಮಿ ಬ್ರಾಂಡ್ ಬಲೆನ್ಸಿಯಾಗ ಉತ್ಪನ್ನಗಳನ್ನು ಮಾರಾಟ ಮಾಡಲಿರುವ ರಿಲಯನ್ಸ್

Balenciaga: ರಿಲಯನ್ಸ್ ಬ್ರ್ಯಾಂಡ್ ಲಿಮಿಟೆಡ್‌ನ ಎಂಡಿ ದರ್ಶನ್ ಮೆಹ್ತಾ ಅವರು ಈ ಸಂಬಂಧದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, "ವಿಶ್ವದ ಕೆಲವು ಬ್ರ್ಯಾಂಡ್‌ಗಳು ಬಲೆನ್ಸಿಯಾಗ ಅಳವಡಿಸಿಕೊಂಡಿರುವಂತಹ ಸೃಜನಶೀಲತೆಯನ್ನು ಅಳವಡಿಸಿಕೊಂಡಿವೆ.

ಬಲೆನ್ಸಿಯಾಗ

ಬಲೆನ್ಸಿಯಾಗ

 • Share this:
  ನವದೆಹಲಿ, ಆಗಸ್ಟ್ 2022: ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (RBL) ವಿಶ್ವದ ಸೂಪರ್ ಐಷಾರಾಮಿ ಬ್ರಾಂಡ್ ಬಲೆನ್ಸಿಯಾಗ (Balenciaga) ಅನ್ನು ಭಾರತೀಯ ಮಾರುಕಟ್ಟೆಗಳಿಗೆ ತರಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ದೀರ್ಘಾವಧಿಯ ಫ್ರಾಂಚೈಸಿ ಒಪ್ಪಂದದ ಅಡಿಯಲ್ಲಿ, ಭಾರತದಲ್ಲಿ ಬಾಲೆನ್ಸಿಯಾಗದ ಏಕೈಕ ಪಾಲುದಾರನಾಗಿ ಆರ್‌ಬಿಎಲ್‌ ಹೊರಹೊಮ್ಮಲಿದೆ.ಸ್ಪ್ಯಾನಿಷ್ (Spanish) ಮೂಲದ ಕ್ರಿಸ್ಟೋಬಲ್ ಬಲೆನ್ಸಿಯಾಗ 1937 ರಲ್ಲಿ ಪ್ಯಾರಿಸ್‌ನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು. ಬಲೆನ್ಸಿಯಾಗ ಫ್ಯಾಷನ್ ಜಗತ್ತಿನಲ್ಲಿ ದೊಡ್ಡ ಹೆಸರಾಗಿದ್ದು, ಆಧುನಿಕ ಉಡುಪು ಮತ್ತು ಫ್ಯಾಷನ್‌ನಲ್ಲಿನ (Fashion) ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಡೆಮ್ನಾ 2015 ರಿಂದ ಬಲೆನ್ಸಿಯಾಗದ ಕಲಾತ್ಮಕ ನಿರ್ದೇಶಕರಾಗಿದ್ದಾರೆ ಮತ್ತು ಅಂದಿನಿಂದ ಬ್ಯಾಲೆನ್ಸಿಯಾಗ ಹೊಸ ಎತ್ತರಕ್ಕೆ ಏರುತ್ತಿದೆ. ಬಲೆನ್ಸಿಯಾಗ ಅವರ ಸಂಗ್ರಹವು ಪುರುಷರು ಮತ್ತು ಮಹಿಳೆಯರಿಗೆ ವ್ಯಾಪಕ ಶ್ರೇಣಿಯ ಸಿದ್ಧ ಉಡುಪುಗಳು ಮತ್ತು ಪರಿಕರಗಳನ್ನು ಒಳಗೊಂಡಿದೆ.

  ರಿಲಯನ್ಸ್ ಬ್ರ್ಯಾಂಡ್ ಲಿಮಿಟೆಡ್‌ನ ಎಂಡಿ ದರ್ಶನ್ ಮೆಹ್ತಾ ಅವರು ಈ ಸಂಬಂಧದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ, "ವಿಶ್ವದ ಕೆಲವು ಬ್ರ್ಯಾಂಡ್‌ಗಳು ಬಲೆನ್ಸಿಯಾಗ ಅಳವಡಿಸಿಕೊಂಡಿರುವಂತಹ ಸೃಜನಶೀಲತೆಯನ್ನು ಅಳವಡಿಸಿಕೊಂಡಿವೆ. ತಮ್ಮ ಸೊಗಸಾದ ಮತ್ತು ಅದ್ಭುತ ವಿನ್ಯಾಸಗಳ ಮೂಲಕ ಜಗತ್ತಿನಲ್ಲಿ ತಮ್ಮ ವಿಶಿಷ್ಟ ಸ್ಥಾನವನ್ನು ಸಾಧಿಸಿದ್ದಾರೆ.

  ಭಾರತೀಯ ಐಷಾರಾಮಿ ಗ್ರಾಹಕರು ಪ್ರಬುದ್ಧರಾಗಿರುವುದರಿಂದ ಮತ್ತು ತಮ್ಮ ವ್ಯಕ್ತಿತ್ವದ ಸೃಜನಶೀಲ ಅಭಿವ್ಯಕ್ತಿಯಾಗಿ ಫ್ಯಾಷನ್ ಅನ್ನು ಬಳಸುತ್ತಿರುವಾಗ ದೇಶಕ್ಕೆ ಈ ಬ್ರ್ಯಾಂಡ್ ಅನ್ನು ಪರಿಚಯಿಸುವ ಸಮಯ ಇದೀಗ ಬಂದಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Gujarat ಪ್ರಾಣಿ ಸಂಗ್ರಹಾಲಯಕ್ಕೆ 1000 ಮೊಸಳೆಗಳ ಸ್ಥಳಾಂತರ; ಹೈಕೋರ್ಟ್‌ ಸಮ್ಮತಿ

  Reliance Jewels: ವರಲಕ್ಷ್ಮಿ ಕಲೆಕ್ಷನ್ 2022 ಅನಾವರಣಗೊಳಿಸಿದ ರಿಲಯನ್ಸ್‌ ಜ್ಯುವೆಲ್ಸ್‌!

  ಭಾರತದ ಪ್ರಮುಖ ಆಭರಣ ಬ್ರ್ಯಾಂಡ್‌ ರಿಲಯನ್ಸ್‌ ಜ್ಯುವೆಲ್ಸ್‌ (Reliance jewels) ವಿಶೇಷ ವರಲಕ್ಷ್ಮಿ ಕಲೆಕ್ಷನ್‌ 2022 (Varalakshmi Collection 2022) ಅನ್ನು ಅನಾವರಣಗೊಳಿಸಿದೆ. ಇದು ವರಲಕ್ಷ್ಮಿ ವ್ರತದ ಸಂದರ್ಭದಲ್ಲಿ ಅನಾವರಣಗೊಂಡಿರುವುದು ಅತ್ಯಂತ ವಿಶೇಷವಾಗಿದೆ. 'ಗ್ಲೋ ಲೈಕ್ ಎ ಗಾಡೆಸ್‌' ಎಂಬ ಹೆಸರಿನ ಕಲೆಕ್ಷನ್‌ ಒಳಗೊಂಡಿರುವ ಬ್ರ್ಯಾಂಡ್‌ನ ಕ್ಯಾಂಪೇನ್‌ ದೇವತೆಯಂತಹ ಮಹಿಳೆಯರು (Womens) ಈ ಹಬ್ಬವನ್ನು ಸಂಭ್ರಮಾಚರಣೆ ಮಾಡಲು ಅನುವು ಮಾಡುವ ಉದ್ದೇಶವನ್ನು ಹೊಂದಿದೆ. ಲಕ್ಷ್ಮಿ (Laxmi) ದೇವಿಯ ದೈವೀ ಭಾವದಿಂದ ಸ್ಫೂರ್ತಿಗೊಂಡಿರುವ ಈ ಕಲೆಕ್ಷನ್‌ ಮಹಿಳೆಯರು ತಮ್ಮೊಳಗಿನ ದೈವೀ ಭಾವವನ್ನು ಸ್ಫುರಿಸುವುದಕ್ಕೆ ಸ್ಫೂರ್ತಿಯಾಗಲಿದೆ. ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೇಳೈಸಿರುವ ಈ ಆಭರಣವು ಪ್ರಾದೇಶಿಕತೆ, ಸಾಂಸ್ಕೃತಿಕ ಸಂಗತಿಗಳು ಮತ್ತು ಸ್ಟೈಲ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ. ವಿನ್ಯಾಸ ಮತ್ತು ಕ್ಯಾಂಪೇನ್‌ "ಕಲ್ಪವೃಕ್ಷ"ದ ಸ್ಪೂರ್ತಿಯನ್ನು ಹೊಂದಿದೆ. ಇದು ಆಳವಾದ ಅಧ್ಯಾತ್ಮ ಭಾವವನ್ನು ನೀಡುತ್ತದೆ ಎಂದು ಭಾವಿಸಲಾಗಿದ್ದು, ಸಮುದ್ರ ಮಂಥನದ ಪುರಾತನ ಐತಿಹ್ಯಕ್ಕೂ ಇದು ಸಂಬಂಧ ಹೊಂದಿದೆ.

  ಇದನ್ನೂ ಓದಿ: Parle G: 25 ವರ್ಷ ಜಸ್ಟ್ 4 ರೂಪಾಯಿಗೆ ಮಾರಾಟವಾಗ್ತಿತ್ತು ಪಾರ್ಲೆ ಜಿ, ಇದರ ಹಿಂದಿದೆ ಒಂದು ರಣ ರೋಚಕ ಕಾರಣ!

  ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಸಾಂಪ್ರದಾಯಿಕ ಆಭರಣದಲ್ಲಿ ನೆಕ್‌ಲೇಸ್‌ಗಳು, ಕಿವಿಯೋಲೆಗಳು, ಬಳೆಗಳು ಮತ್ತು ರಿಂಗ್‌ಗಳು ಇವೆ. 22 ಕ್ಯಾರೆಟ್‌ ಹಳದಿ ಚಿನ್ನದಲ್ಲಿ ವಿನ್ಯಾಸ ಮಾಡಲಾಗಿದೆ. ಪುರಾತನ ಚಿನ್ನದ ದೇಗುಲ ವಿನ್ಯಾಸಗಳು ಮತ್ತು ವರ್ಣಮಯ ಹವಳಗಳನ್ನು ಒಳಗೊಂಡಿದೆ. ಪ್ರತಿ ಚಿನ್ನದ ಆಭರಣದ ವಿನ್ಯಾಸವೂ ವಿಭಿನ್ನವಾಗಿದ್ದು, ಕಲೆಕ್ಷನ್‌ ಎಲ್ಲ ರೀತಿಯಲ್ಲೂ ವಿಶಿಷ್ಟವಾಗಿದೆ. ಅತ್ಯಾಕರ್ಷಕ ವಜ್ರದ ಕಲೆಕ್ಷನ್‌ನಲ್ಲಿ ಚೋಕರ್‌ಗಳು ಮತ್ತು ಹರಾಮ್‌ ಸೆಟ್‌ಗಳಿವೆ. ಜೊತೆಗೆ ವಜ್ರಗಳು, ವಿವಿಧ ಬಣ್ಣಗಳ ಹವಳಗಳು ಮತ್ತು ಪರ್ಲ್‌ ಡ್ರಾಪ್‌ಗಳೂ ಕೂಡ ಇದರಲ್ಲಿವೆ. ಆಭರಣದ ಪ್ರತಿ ತುಣುಕಿನಲ್ಲೂ ದೇವಿಯ ದೈವಿಭಾವ, ಸಮೃದ್ಧಿಯನ್ನು ಚಿತ್ರಿಸಲಾಗಿದೆ ಮತ್ತು ಹಬ್ಬದ ಸಂದರ್ಭದಲ್ಲಿ ಪ್ರತಿ ಮಹಿಳೆಗೂ ಇದು ಅತ್ಯಂತ ಹೊಂದುವ ಆಭರಣವಾಗಿರಲಿದೆ.


  ಕಲೆಕ್ಷನ್‌ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್‌ "ಈ ಮಂಗಳಕರ ಹಬ್ಬದ ಭಾವವನ್ನು ಮೂಡಿಸುವುದು ನಮ್ಮ ಇಡೀ ಕಲೆಕ್ಷನ್‌ ಧ್ಯೇಯವಾಗಿದೆ. ಈ ವಿಶಿಷ್ಟ ಸ್ಟೈಲ್‌ಗಳನ್ನು ಈ ಪ್ರದೇಶದ ಗ್ರಾಹಕರ ಆಸಕ್ತಿಗೆ ತಕ್ಕಂತೆ ರೂಪಿಸಿದ್ದೇವೆ. ದಕ್ಷಿಣ ಭಾರತದ ನಮ್ಮ ಅತ್ಯಂತ ಕುಶಲ ವಿನ್ಯಾಸ ತಂಡವು ಈ ಕಲೆಕ್ಷನ್‌ ರೂಪಿಸುವಲ್ಲಿ ಅಪಾರ ಶ್ರಮ ವಹಿಸಿದೆ. ಪ್ರತಿ ಸೂಕ್ಷ್ಮ ವಿನ್ಯಾಸವನ್ನೂ ಇದು ಅತ್ಯಂತ ಕಾಳಜಿಯಿಂದ ರೂಪಿಸಿದೆ.

  First published: