• Home
  • »
  • News
  • »
  • lifestyle
  • »
  • Tourist Places: ನಿವೃತ್ತಿಯ ಜೀವನ ನಿಮಗೆ ನೀರಸ ಎಣಿಸುತ್ತಿದ್ಯಾ? ಹಾಗಿದ್ರೆ ಮಜಾ ಮಾಡಲು ಮಿಸ್ ಮಾಡ್ದೆ ಈ ಸ್ಥಳಗಳಿಗೆ ಹೋಗಿ

Tourist Places: ನಿವೃತ್ತಿಯ ಜೀವನ ನಿಮಗೆ ನೀರಸ ಎಣಿಸುತ್ತಿದ್ಯಾ? ಹಾಗಿದ್ರೆ ಮಜಾ ಮಾಡಲು ಮಿಸ್ ಮಾಡ್ದೆ ಈ ಸ್ಥಳಗಳಿಗೆ ಹೋಗಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಯಸ್ಸಿನವರಿಗೆ ಪ್ರವಾಸ ಮಾಡಲು ಅನುಕೂಲಕರವಾದ ಮತ್ತು ಸುರಕ್ಷಿತವಾದ ಸ್ಥಳ ಇರಬಹುದೇ? ಈ ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ – ಖಂಡಿತಾ ಹೌದು. ಅಂತಹ ಕೆಲವು ಸ್ಥಳಗಳ ಕುರಿತ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ. ನಿವೃತ್ತಿಯ ಜೀವನ ನಿಮಗೆ ನೀರಸ ಎನಿಸುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸದ ಮಜಾವನ್ನು ಆನಂದಿಸಿ.

ಮುಂದೆ ಓದಿ ...
  • Share this:

ಹೊಸ ಹೊಸ ಜಾಗಗಳನ್ನು ನೋಡುತ್ತಾ, ಅಲ್ಲಿನ ಬಗೆಬಗೆಯ ವಿಶೇಷ ತಿನಿಸುಗಳನ್ನು ಸವಿಯುತ್ತಾ ಸುತ್ತಾಡುವ ಆಸೆ ಎಲ್ಲಾ ವಯೋಮಾನದವರಿಗೂ ಇರುತ್ತದೆ. ಯುವಕರಿಗೆ (Youths) ಮತ್ತು ಮಧ್ಯ ವಯಸ್ಕರಿಗೆ ಇಂತಹ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದು ದೊಡ್ಡ ಸಂಗತಿಯೇನಲ್ಲ ಬಿಡಿ. ದೇಹದಲ್ಲಿ ಶಕ್ತಿ (Energy), ಜೇಬಿನಲ್ಲಿ ದುಡ್ಡು (Money) ಮತ್ತು ಸಮಯಾವಕಾಶ (Time) ಇದ್ದರಂತೂ ಅದಿನ್ನೂ ಸುಲಭ. ಆದರೆ 60ರ ಆಸುಪಾಸಿನ ವಯಸ್ಸಿನವರು ಕೂಡ ತಮಗಿಚ್ಚೆ ಬಂದ ಕಡೆ ತಾವೇ ಸ್ವತಃ ಪ್ರಯಾಣ (Travel) ಮಾಡಿ, ಅಲ್ಲಿನ ಸುಂದರ ನೋಟ, ನಾಲಗೆ ಚಪ್ಪರಿಸುವಂತಹ ತಿನಿಸುಗಳ ಸ್ವಾದವನ್ನು ಸವಿಯುವುದು ಸಾಧ್ಯವೆ ಎಂದು ಯೋಚನೆ ಮಾಡುವುದನ್ನು ಬಿಟ್ಟುಬಿಡಿ .


ಈ ವಯಸ್ಸಿನವರಿಗೆ ಪ್ರವಾಸ ಮಾಡಲು ಅನುಕೂಲಕರವಾದ ಮತ್ತು ಸುರಕ್ಷಿತವಾದ ಸ್ಥಳ ಇರಬಹುದೇ? ಈ ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ– ಖಂಡಿತಾ ಹೌದು. ಅಂತಹ ಕೆಲವು ಸ್ಥಳಗಳ ಕುರಿತ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ. ನಿವೃತ್ತಿಯ ಜೀವನ ನಿಮಗೆ ನೀರಸ ಎನಿಸುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸದ ಮಜಾವನ್ನು ಆನಂದಿಸಿ.


ಒಡಿಶಾ
ಒಡಿಶಾ ಎಂದರೆ ನಮಗೆ ಮೊದಲು ನೆನಪಾಗುವುದು ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯ. ಹಾಗಂತ ಇಲ್ಲಿ ನಿಮಗೆ ಜಗನ್ನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುವ ಅವಕಾಶ ಮಾತ್ರ ಸಿಗುತ್ತದೆ ಎಂದರೆ , ನಿಮ್ಮ ಊಹೆ ತಪ್ಪು. ಕಡಲ ಕಿನಾರೆಗಳ ಮನಮೋಹಕ ಸೂರ್ಯಾಸ್ತ, ಸೂರ್ಯೋದಯಗಳ ಸೊಬಗನ್ನು ಕೂಡ ನೀವು ಕಣ್ತುಂಬಿಕೊಳ್ಳಬಹುದು. ಒಡಿಶಾದಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ.


ಇದನ್ನೂ ಓದಿ: Fort: ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಎಷ್ಟು ಸುಂದರ ಕೋಟೆ ಕಟ್ಟಿಸಿದ್ದರು ನೋಡಿ! ಫೋಟೋಗಳು ಇಲ್ಲಿವೆ


ಅಕ್ಟೋಬರ್‍ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯ ಎನ್ನಲಾಗುತ್ತದೆ. ಮನಸ್ಸಿಗೆ ನೆಮ್ಮದಿಯನ್ನು ನೀಡುವ ಕಡಲ ಕಿನಾರೆಗಳಲ್ಲಿ ಸಮಯ ಕಳೆದು, ಖುಷಿಯಿಂದ ಪ್ರವಾಸದ ಮಜಾವನ್ನು ಆನಂದಿಸಿ. ಜೊತೆಗೆ ನೀವು ಸಮುದ್ರ ಆಹಾರ ಭಕ್ಷ್ಯಗಳನ್ನು ಇಷ್ಟಪಡುವಿರಾದರೆ, ಒಡಿಶಾ ನಿಮಗೆ ಹೇಳಿ ಮಾಡಿಸಿದಂತಹ ಜಾಗ ಎನ್ನಲು ಅಡ್ಡಿಯಿಲ್ಲ.


ರಾಜಸ್ಥಾನ
ಪುರಾತನ ವಾಸ್ತುಶಿಲ್ಪದ ಬಗೆಗೆ ಆಕರ್ಷಣೆ ಉಳ್ಳವಳು ನೀವಾಗಿದ್ದರೆ ಮತ್ತು ಅರಮನೆಗಳಲ್ಲಿ ತಂಗುವ ಅನುಭವವನ್ನು ಪಡೆಯುವ ಬಯಕೆ ನಿಮಗಿದ್ದರೆ, ಅದಕ್ಕೆ ರಾಜಸ್ಥಾನ ಅತ್ಯುತ್ತಮ ಸ್ಥಳ. ರಾಜಸ್ಥಾನದಲ್ಲಿ ಹಳೆಯ ಹಲವಾರು ಅರಮನೆಗಳನ್ನು ಸಂರಕ್ಷಿಸಲಾಗಿದೆ ಮತ್ತು ಅವುಗಳನ್ನು ಹೊಟೇಲ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ ನೀವು ವೈಭವೋಪಿತ ಜೀವನದ ಅನುಭವ ಪಡೆಯಬಹುದು.


ಅಷ್ಟೇ ಅಲ್ಲ, ರಣತಂಬೋರ್ ನ್ಯಾಶನಲ್ ಪಾರ್ಕ್, ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಭರತ್‍ಪುರ ಪಕ್ಷಿಧಾಮದಲ್ಲಿ ವೈಲ್ಡ್‍ಲೈಫ್ ಸಫಾರಿಯ ಆನಂದ ಪಡೆಯಬಹುದು. ಇದು ವಿಭಿನ್ನ ಆಹಾರ ತಿನಿಸುಗಳ ರುಚಿಯನ್ನು ಉಣಬಡಿಸುವ ತಾಣವೂ ಹೌದು. ಅದರಲ್ಲೂ ಮುಖ್ಯವಾಗಿ, ರಾಜಸ್ಥಾನಕ್ಕೆ ಭೇಟಿ ನೀಡಿದಾಗ ಸಸ್ಯಹಾರಿಗಳು ದಾಲ್ ಭಾಟಿ ಚೂರ್ಮಾ ಮತ್ತು ಗಟ್ಟೆ ಕಿ ಸಭ್ಜಿ ಹಾಗೂ ಸಸ್ಯಹಾರಿಗಳು ಲಾಲ್ ಮಾಸ್ ಅನ್ನು ಸವಿಯದಿದ್ದರೆ ಪ್ರವಾಸ ಅಪೂರ್ಣವೆನಿಸುವುದು ಖಂಡಿತಾ.


ಕೇರಳ
ದೇವರ ನಾಡು ಕೇರಳ ನಿಮ್ಮನ್ನು ಆಧ್ಯಾತ್ಮದ ಅನುಭವದಲ್ಲಿ ತೇಲುವಂತೆ ಮಾಡುತ್ತದೆ ಎಂಬುವುದು ನಿಜವಾದರೆ, ಇನ್ನೊಂದೆಡೆ ಅಲ್ಲಿನ ನಿಸರ್ಗ ಸೌಂದರ್ಯ ಕಣ್ಣುಗಳಿಗೆ ರಸದೌತಣ ನೀಡುತ್ತದೆ. ಕೇರಳದ ಆಹ್ಲಾದಕರ ಹವಾಮಾನ, ಶಾಂತವಾದ ಬೆಟ್ಟಗಳು, ಪ್ರಶಾಂತ ಹಿನ್ನೀರಿನ ಪ್ರದೇಶಗಳು, ಕಡಲ ಕಿನಾರೆಗಳು ನಿಮ್ಮ ಪ್ರವಾಸವನ್ನು ಎಂದೆಂದಿಗೂ ಮರೆಯಲಾರದ ಅನುಭವವನ್ನಾಗಿ ಪರಿವರ್ತಿಸುತ್ತವೆ ಎನ್ನುವುದರಲ್ಲಿ ಸಂಶಯಿವಿಲ್ಲ.


ಇದನ್ನೂ ಓದಿ: Pink River: ದೇವರ ನಾಡಿನಲ್ಲಿ 'ಪಿಂಕ್ ನದಿ'! ಈ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಹೇಳಿದ್ದೇನು?


ನಗರದ ಗದ್ದಲದಿಂದ ದೂರವಾಗಿ, ಶಾಂತವಾದ ಪ್ರಕೃತಿಯ ನಡುವೆ ವಿಶ್ರಾಂತಿಯನ್ನು ಪಡೆಯುವ ಹಂಬಲ ನಿಮಗಿದ್ದರೆ, ಮುನ್ನಾರ್, ವಯನಾಡ್, ಕೋವಲಂ, ಅಲಪ್ಪುಳ, ಅಲೆಪ್ಪಿ ಮತ್ತು ಕುಮಾರಕೊಮ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದು ಸೂಕ್ತ. ಈ ಸ್ಥಳಗಳಲ್ಲಿನ ಪ್ರಾಕೃತಿಕ ಸೊಬಗು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಬದಲಿಗೆ ಮನಸ್ಸಿಗೆ ಶಾಂತಿ ಮತ್ತು ಸಂತೋಷ ನೀಡುತ್ತವೆ. ನೀವು ಮಾಂಸಹಾರಿಗಳಾಗಿದ್ದಲ್ಲಿ, ಕೇರಳದ ಸಮುದ್ರ ಆಹಾರ ಭಕ್ಷ್ಯಗಳನ್ನು ಸವಿಯಲು ಖಂಡಿತಾ ಮರೆಯಬೇಡಿ.

Published by:Ashwini Prabhu
First published: