• Home
  • »
  • News
  • »
  • lifestyle
  • »
  • Relationship Tips: ನಿಮ್ಮ ಸಂಬಂಧದಲ್ಲಾಗುವ ಈ ಬದಲಾವಣೆ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತೆ, ಎಚ್ಚರ!

Relationship Tips: ನಿಮ್ಮ ಸಂಬಂಧದಲ್ಲಾಗುವ ಈ ಬದಲಾವಣೆ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತೆ, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Relationship Signs: ಸಂಗಾತಿಯೊಂದಿಗಿನ ಸಂಬಂಧದಲ್ಲಿ ಶಾಂತಿ ನೆಮ್ಮದಿ ಮುಖ್ಯ ಅನ್ನೋದು ನೆನಪಿಡಿ. ಅದಿಲ್ಲದೇ ಹೋದಲ್ಲಿ ಸಮಸ್ಯೆ ಎಲ್ಲಿದೆ ಅನ್ನೋದನ್ನು ಗುರುತಿಸಿ, ಅದರ ಬಗ್ಗೆ ಚರ್ಚಿಸಿ ಬಗೆಹರಿಸಲು ಯತ್ನಿಸುವುದು ಬಹಳ ಮುಖ್ಯ.

  • Share this:

ಸಂಬಂಧಗಳು (Relationship) ಪ್ರತಿಯೊಬ್ಬ ವ್ಯಕ್ತಿಯ ಜೀವನದ (Life) ಪ್ರಮುಖ ಭಾಗವಾಗಿದೆ. ಉತ್ತಮ ಸಂಬಂಧಗಳನ್ನು ಹೊಂದಿರುವುದು ಒಳ್ಳೆಯ ಮಾನಸಿಕ ಆರೋಗ್ಯಕ್ಕೆ (Metal Health) ಬಹಳ ಮುಖ್ಯ. ನಮ್ಮ ಮಾನಸಿಕ ಶಾಂತಿಗೆ ಧಕ್ಕೆಯಾಗುವ ಸಂಬಂಧದಲ್ಲಿ ಇಂತಹ  ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸಲು ಕಲಿಯಬೇಕಾಗಿದೆ. ಪ್ರೀತಿಯ ಮತ್ತು ಸುರಕ್ಷಿತ ಸಂಬಂಧಗಳ ಜೊತೆ ನಾವಿದ್ದಾಗ ಮಾತ್ರ ನಮ್ಮ ಮನಸ್ಸು ಶಾಂತಿಯಿಂದ ಇರುತ್ತೆ. ಆದ್ರೆ ನಿಮ್ಮ ಸಂಬಂಧದ ಬಗ್ಗೆ ನೀವು ನಿರಂತರವಾಗಿ ಸಂದೇಹದಲ್ಲಿದ್ದರೆ, ನಿಮಗೆ ತೊಂದರೆ ಉಂಟುಮಾಡುವ ವಿಷಯಗಳನ್ನು ನಿರ್ಣಯಿಸುವುದು ಬಹಳ ಮುಖ್ಯವಾಗುತ್ತದೆ.


ಫೋರ್ಟಿಸ್ ಹೆಲ್ತ್‌ಕೇರ್‌ನ ಮನಶ್ಶಾಸ್ತ್ರಜ್ಞರಾದ ಡಾ ಕಾಮ್ನಾ ಚಿಬ್ಬರ್ ಅವರು ನಿಮ್ಮ ಮಾನಸಿಕ ಆರೋಗ್ಯದ ಸಲುವಾಗಿ ಗಮನಿಸಬೇಕಾದ ಮತ್ತು ಸರಿಪಡಿಸಬೇಕಾದ ಸಂಬಂಧದಲ್ಲಿನ 3 ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ಹೇಳುತ್ತಾರೆ.


1. ನಿಮ್ಮ ಸಂಗಾತಿಯೊಂದಿಗೆ ಸಂಭಾಷಣೆ ನಡೆಸಲು ಸಾಧ್ಯವಾಗದಿರುವುದು: ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಅನುಭವಗಳ ಬಗ್ಗೆ ಮಾತನಾಡುವುದು ಬಹಳ ಮುಖ್ಯ. ಒಮ್ಮೆ ಅದು ಸಾಧ್ಯವಾಗದೇ ಹೋದಲ್ಲಿ ನಿಗ್ರಹಿಸಿದ ಭಾವನೆಗಳಿಗೆ ಮತ್ತು ಕದಡಿದ ಮನಶ್ಶಾಂತಿಗೆ ಕಾರಣವಾಗಬಹುದು.


"ಸಂಭಾಷಣೆಗಳ ಬಗ್ಗೆ ನಿರಂತರವಾಗಿ ಚಿಂತಿಸುವುದು, ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳದಿರುವುದು, ನಿರಂತರವಾಗಿ ನಿರ್ಣಯಿಸಲ್ಪಡುತ್ತೀರಿ ಅಥವಾ ಅಪಹಾಸ್ಯಕ್ಕೊಳಗಾಗಿದ್ದೀರಿ ಎಂದು ಅನಿಸುವುದು ಇವೆಲ್ಲವೂ ದೊಡ್ಡ ಮಟ್ಟದ ರೆಡ್‌ ಫ್ಲಾಗ್ ಗಳು" ಎಂದು ಡಾ ಚಿಬ್ಬರ್ ಹೇಳುತ್ತಾರೆ. ‌


2. ಕೆಟ್ಟ ಮನಸ್ಥಿತಿಯಲ್ಲಿರುವುದು: ಮತ್ತೊಂದು ಎಚ್ಚರಿಕೆಯ ಚಿಹ್ನೆಯೆಂದರೆ ನಿಮ್ಮ ಸಂಗಾತಿಯ ಸುತ್ತಲೂ ಇರುವಾಗ ಅಥವಾ ಅವರೊಂದಿಗೆ ಮಾತುಕತೆ ನಡೆಸುವುದು ನಿಮ್ಮ ಮನಸ್ಥಿತಿಯ ಮೇಲೆ ಪ್ರಭಾವ ಬೀರುವ ಅಂಶ ಎಂದು ಡಾ ಚಿಬ್ಬರ್ ಹೇಳುತ್ತಾರೆ. ನಿಮ್ಮ ಸಂಗಾತಿ ಜೊತೆಗಿರುವ ಎಲ್ಲ ಸಮಯದಲ್ಲೂ ಕುಸಿದ ಹಾಗೆ ಭಾವನೆ, ದುಃಖ, ಕೋಪ ಅಥವಾ ಕೆರಳಿಸುವ ಭಾವನೆ ಉಂಟಾಗುವುದು ನಿಮ್ಮ ಮಾನಸಿಕ ಆರೋಗ್ಯವು ರಾಜಿಯಾಗುವುದರ ಒಂದು ನಿರ್ದಿಷ್ಟ ಸಂಕೇತವಾಗಿದೆ ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ಹಗಲುಗನಸು ಕಾಣೋದು ಲೈಫ್​ನಲ್ಲಿ ಈ ಬದಲಾವಣೆಗೆ ಕಾರಣವಾಗುತ್ತಂತೆ


3. ನಿಮ್ಮ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳದಿರುವುದು: ಸಂಗಾತಿಯೊಂದಿಗಿನ ಸಂಬಂಧಕ್ಕಾಗಿ ನೀವು ಮೂಲಭೂತ ಅಗತ್ಯಗಳಾದ ನಿದ್ರೆಯನ್ನು ಕಳೆದುಕೊಳ್ಳುವುದು ಹಾಗೂ ಹಸಿವನ್ನು ನಿಗ್ರಹಿಸಬೇಕಾದ ಸಂದರ್ಭ ಬಂದಲ್ಲಿ ಅದು ನಿಮ್ಮ ಸಂಬಂಧದ ಬಹುದೊಡ್ಡ ಎಚ್ಚರಿಕೆಯ ಚಿಹ್ನೆ ಎಂಬುದಾಗಿ ಹೇಳ್ತಾರೆ ಡಾ ಚಿಬ್ಬರ್.




ಉದ್ವಿಗ್ನತೆ, ಆತಂಕ ಅಥವಾ ಖಿನ್ನತೆಯು ನಿಮ್ಮನ್ನು ನಿಮ್ಮ ದೈನಂದಿನ ಮೂಲಭೂತ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇರಿಸಿದರೆ, ನಿಮ್ಮ ಸಂಬಂಧವನ್ನು ಮರು ಮೌಲ್ಯಮಾಪನ ಮಾಡುವ ಸಮಯ ಬಂದಿದೆ ಅಂತಲೇ ಅರ್ಥ.


ನೆನಪಿಡಿ, ಇವು “ಬ್ರೇಕ್‌ ಇಟ್‌ ಆಫ್‌” ಪಾಯಿಂಟ್‌ ಗಳಲ್ಲ!


ಆದ್ರೆ, ಚಿಂತಿಸಬೇಡಿ. ಇವುಗಳು "ಬ್ರೇಕ್ ಇಟ್ ಆಫ್" ಪಾಯಿಂಟ್‌ ಗಳಾಗಿರುವುದಿಲ್ಲ. ಇದರಿಂದ ಇಬ್ಬರೂ ಬೇರೆಯಾಗಬೇಕಾಗಿಲ್ಲ. ಬದಲಾಗಿ ಇಬ್ಬರೂ ಸಿದ್ಧರಿದ್ದರೆ ಈ ಪರಿಸ್ಥಿತಿಗಳನ್ನು ಸರಿಯಾಗಿ ನಿಭಾಯಿಸಬಹುದು.


ಡಾ ಚಿಬ್ಬರ್ ಸೂಚಿಸಿದಂತೆ ನಿಮ್ಮ ಸಂಬಂಧವನ್ನು ನೋಡಿಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ:


1. ಶಾಂತ ಸ್ಥಿತಿಯಲ್ಲಿ ಸಂಭಾಷಣೆಗಳನ್ನು ನಡೆಸಲು ಪ್ರಯತ್ನಿಸಿ.


2. ಸಮಸ್ಯೆಗಳನ್ನು ಸಣ್ಣ ತುಂಡುಗಳಾಗಿ ವಿಂಗಡಿಸಿ ಮತ್ತು ಅವುಗಳನ್ನು ಸಣ್ಣ ಬಿಟ್‌ ಗಳಲ್ಲಿ ಚರ್ಚಿಸಲು ಪ್ರಯತ್ನಿಸಿ.


3. ನೀವು ಹೇಳುವ ಮಾತು ಅಥವಾ ಹೇಳಲು ಉದ್ದೇಶಿಸಿರೋ ವಿಷಯ ಮತ್ತೊಬ್ಬರನ್ನು ತಲುಪುತ್ತಿಲ್ಲ ಎಂದಾದಲ್ಲಿ ಅದನ್ನು ಮತ್ತೊಂದು ವಿಧಾನದಲ್ಲಿ ಬೇರೆ ಶಬ್ದಗಳನ್ನು ಬಳಸಿ ಹೇಳಲು ಯತ್ನಿಸಿ.


4. ಸಮಸ್ಯೆಗಳ ಬಗ್ಗೆ ಮಾತನಾಡಲು ನಿರಾಕರಿಸಬೇಡಿ.


5. ಪರಸ್ಪರರ ಅನುಭವಗಳನ್ನು ತಿರಸ್ಕರಿಸಬೇಡಿ.


6. ಸರಳವಾಗಿ ಒಬ್ಬರನ್ನೊಬ್ಬರು ದೂಷಿಸುವುದನ್ನು ತಪ್ಪಿಸಿ.


7. ಇಬ್ಬರು ಒಂದೇ ಪರಿಸ್ಥಿತಿಯನ್ನು ವಿಭಿನ್ನವಾಗಿ ಅನುಭವಿಸುತ್ತಾರೆ ಎಂಬುದನ್ನು ನೆನಪಿಡಿ.


8. ವಿಷಯಗಳು ಬಗೆಹರಿಯದಿದ್ದಲ್ಲಿ ಸಮಸ್ಯೆಯನ್ನು ಪರಿಹರಿಸಲು ಬೇರೆಯವರ ಸಹಾಯ ತೆಗೆದುಕೊಳ್ಳಿ. ಅಥವಾ ತಜ್ಞರನ್ನು ಸಂಪರ್ಕಿಸಿ.


ಇದನ್ನೂ ಓದಿ: ಸಸ್ಯಾಹಾರಿಗಳಲ್ಲಿ ಹೆಚ್ಚಾಗ್ತಿದೆ ವಿಟಮಿನ್ ಬಿ12 ಕೊರತೆ, ಇದು ಅಪಾಯದ ಸೂಚನೆ ಅಂತಾರೆ ವೈದ್ಯರು


ಒಟ್ಟಾರೆ, ಸಂಗಾತಿಯೊಂದಿಗಿನ ಸಂಬಂಧದಲ್ಲಿ ಶಾಂತಿ ನೆಮ್ಮದಿ ಮುಖ್ಯ ಅನ್ನೋದು ನೆನಪಿಡಿ. ಅದಿಲ್ಲದೇ ಹೋದಲ್ಲಿ ಸಮಸ್ಯೆ ಎಲ್ಲಿದೆ ಅನ್ನೋದನ್ನು ಗುರುತಿಸಿ, ಅದರ ಬಗ್ಗೆ ಚರ್ಚಿಸಿ ಬಗೆಹರಿಸಲು ಯತ್ನಿಸುವುದು ಬಹಳ ಮುಖ್ಯ. ಅಲ್ಲದೇ ಹೋದಲ್ಲಿ ನಿಮ್ಮ ಮಾನಸಿಕ ಆರೋಗ್ಯ ಹಾಳಾಗುತ್ತದೆ ಅನ್ನೋದನ್ನು ನೆನಪಿಡಿ.

Published by:Sandhya M
First published: