• Home
  • »
  • News
  • »
  • lifestyle
  • »
  • Health Care: ಬೆಳಗಿನ ತಿಂಡಿ ಸೇವನೆ ತಪ್ಪಿಸಿದರೆ ಉಂಟಾಗುವ ಆರೋಗ್ಯ ತೊಂದರೆಗಳು ಏನು?

Health Care: ಬೆಳಗಿನ ತಿಂಡಿ ಸೇವನೆ ತಪ್ಪಿಸಿದರೆ ಉಂಟಾಗುವ ಆರೋಗ್ಯ ತೊಂದರೆಗಳು ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಹಾರ ತಪ್ಪಿಸುತ್ತಿದ್ದರೆ ಈ ತಪ್ಪು ಮಾಡಬೇಡಿ. ಬೆಳಗಿನ ಉಪಹಾರವು ದಿನದ ಮೊದಲ ಮತ್ತು ಪ್ರಮುಖ ಊಟ ಎಂದು ಕರೆಯಲಾಗುತ್ತದೆ. ಅಂತಹ ವೇಳೆ ಈ ಉಪಹಾರವನ್ನು ಒಂದು ದಿನವೂ ತಪ್ಪದೇ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಬೆಳಗಿನ ಉಪಾಹಾರ ಸೇವನೇ ಮಾಡದೇ ಇದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.

ಮುಂದೆ ಓದಿ ...
  • Share this:

    ದಿನವೂ ಬೆಳಗಿನ ಉಪಹಾರವನ್ನು (Morning Breakfast) ತಪ್ಪದೇ ಸೇವಿಸುವಂತೆ ತಜ್ಞರು (Experts) ಸಲಹೆ ನೀಡುತ್ತಾರೆ. ನೀವು ದಿನವೂ (Daily) ನಿಯಮಿತವಾಗಿ (Regular) ಬೆಳಗಿನ ತಿಂಡಿ ಸೇವನೆ ಮಾಡುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಬೆಳಗಿ ತಿಂಡಿ ಸೇವನೆ ಮಾಡದೇ ಇರುವುದು ಸಾಕಷ್ಟು ಆರೋಗ್ಯ ತೊಂದರೆ (Health Problem) ಉಂಟು ಮಾಡುತ್ತದೆ. ಹಾಗಾಗಿ ನೀವು ನಿಯಮಿತವಾಗಿ ಉಪಹಾರ ಮಾಡುತ್ತಿದ್ದೀರಾ ಇಲ್ಲವಾ ಎಂದು ನೋಡಿಕೊಳ್ಳಿ. ಒಂದು ವೇಳೆ ಬೆಳಗಿನ ಉಪಹಾರ ತಪ್ಪಿಸುತ್ತಿದ್ದರೆ ಈ ತಪ್ಪು ಮಾಡಬೇಡಿ. ಬೆಳಗಿನ ಉಪಾಹಾರವು ದಿನದ ಮೊದಲ ಮತ್ತು ಪ್ರಮುಖ ಊಟ ಎಂದು ಕರೆಯಲಾಗುತ್ತದೆ. ಅಂತಹ ವೇಳೆ ಈ ಉಪಹಾರವನ್ನು ಒಂದು ದಿನವೂ ತಪ್ಪದೇ ಸೇವನೆ ಮಾಡಲು ಸಲಹೆ ನೀಡುತ್ತಾರೆ.


    ಬೆಳಗಿನ ತಿಂಡಿ ಸೇವನೆ ಯಾಕೆ ತಪ್ಪದೇ ಸೇವಿಸಬೇಕು?


    ಫ್ಯಾಷನ್‌ ಹೇಗೆ ದಿನವೂ ಹೊಸ ರೂಪ ಪಡೆಯುತ್ತದೆಯೋ ಹಾಗೆಯೇ ಇಂದಿನ ದಿನಗಳಲ್ಲಿ ಆಹಾರ ಪ್ರಕ್ರಿಯೆಗಳಲ್ಲೂ ಬದಲಾವಣೆ, ಹೊಸ ರೂಪ ಸಿಗುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಆಹಾರದ ಬಗ್ಗೆ ಅನೇಕ ಪ್ರವೃತ್ತಿಗಳು ಇವೆ. ಇವುಗಳಲ್ಲಿ ಕೆಲವು ಊಟಗಳ ನಡುವಿನ ಹೆಚ್ಚಿನ ಅಂತರವು ನಿಮಗೆ ದೀರ್ಘಾಯುಷ್ಯ, ತೂಕ ನಷ್ಟ, ಇತ್ಯಾದಿ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗುತ್ತದೆ.


    ಆದರೆ ವಾಸ್ತವದಲ್ಲಿ ನೀವು ದೀರ್ಘಕಾಲ ಏನನ್ನೂ ತಿನ್ನದಿದ್ದಾಗ ಕೋಪ, ಕಿರಿಕಿರಿ, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆ ಎದುರಾಗುತ್ತವೆ. ಬೆಳಗಿನ ಉಪಹಾರ ಸೇವನೇ ಮಾಡದೇ ಇದ್ದರೆ ನಿಮಗೇ ಹಲವು ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಖ್ಯಾತ ಪೌಷ್ಟಿಕತಜ್ಞ ರುಜುತಾ ದಿವೇಕರ್.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಬೆಳಗಿನ ಉಪಹಾರ ಬಹಳ ಮುಖ್ಯ. ಬೆಳಗಿನ ಉಪಾಹಾರ ಸೇವಿಸುವ ಜನರಿಗೆ ರಾತ್ರಿಯಲ್ಲಿ ಸಂಭವಿಸುವ ಆಹಾರದ ಹಸಿವು ಇರಲ್ಲ. ದೀರ್ಘಕಾಲ ಏನನ್ನೂ ತಿನ್ನದೇ ಇದ್ದರೆ ಯಾವುದೇ ವಿಶೇಷ ಪ್ರಯೋಜನವಿಲ್ಲ ಎಂದು ಸಂಶೋಧನೆ ಸಹ ತೋರಿಸುತ್ತದೆ. ನಿಮ್ಮ ಸಾಮಾನ್ಯ ಆಹಾರ ಪದ್ಧತಿಯಿಂದ ನೀವು ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ತಜ್ಞರು ಹೇಳ್ತಾರೆ.


    ಸಂಶೋಧನೆ ಏನು ಹೇಳುತ್ತದೆ?


    ಎನ್ ಸಿಬಿಐ ನಲ್ಲಿ ಪ್ರಕಟವಾದ ವರದಿ ಪ್ರಕಾರ ಬೆಳಗಿನ ಉಪಾಹಾರ ಸೇವಿಸದ ಜನರು ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಪ್ರತಿಕೂಲ ಲಿಪಿಡ್ ಪ್ರೊಫೈಲ್, ಮಧುಮೇಹ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ಸೇರಿ ಹೆಚ್ಚಿನ ಕಾರ್ಡಿಯೋಮೆಟಾಬಾಲಿಕ್ ಅಪಾಯ ಹೊಂದಿರುತ್ತಾರೆ ಎಂದು ಹಲವು ಅಧ್ಯಯನ ಹೇಳಿವೆ.


    ಬೆಳಗಿನ ಉಪಹಾರದ ಪ್ರಯೋಜನಗಳು


    ಬೆಳಗಿನ ಉಪಹಾರ ನಿಯಮಿತವಾಗಿ ಸೇವನೆ ಮಾಡುವವರು ಬೆಳಗಿನ ಉಪಹಾರದ ಬಗ್ಗೆ ಗಮನ ಹರಿಸದವರಿಗಿಂತ ಅವರ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು.


    ಜೊತೆಗೆ ನಿಯಮಿತ ಉಪಹಾರ ಸೇವಿಸುವುದು ಹೃದಯದ ತೊಂದರೆ ತಡೆಯುತ್ತದೆ. ಚಯಾಪಚಯ ಸಮತೋಲಿತವಾಗಿರುತ್ತದೆ. ಆರೋಗ್ಯಕರ ತೂಕ ಕಾಪಾಡಲು ಸಹಕಾರಿ. ಶಕ್ತಿಯು ದಿನವಿಡೀ ದೇಹದಲ್ಲಿ ಉಳಿಯುತ್ತದೆ ಮತ್ತು ಮಧುಮೇಹದ ಅಪಾಯ ಕಡಿಮೆ ಆಗುತ್ತದೆ.


    ಉಪಾಹಾರ ಸೇವನೆ ಮಾಡದಿದ್ದರೆ ಏನಾಗುತ್ತದೆ?


    ಆಮ್ಲೀಯತೆ, ಊತ, ಎಂಜಾಯಿಟಿ, ತಲೆನೋವು, ಮೈಗ್ರೇನ್, ಅನಿಯಮಿತ ಅವಧಿ, ವಿಟಮಿನ್ ಬಿ 12, ಡಿ ಕೊರತೆ, ಪ್ರೋಟೀನ್ ಕೊರತೆ ತೊಂದರೆ ಉಂಟಾಗುತ್ತದೆ.


    ಯಾವ ಉಪಹಾರ ಸೇವಿಸುವುದು?


    ಬೆಳಗಿನ ಉಪಹಾರದ ಜೊತೆಗೆ ನೀವು ಏನು ತಿನ್ನುತ್ತಿದ್ದೀರಿ ಎಂಬುದು ಕೂಡ ಮುಖ್ಯ. ಪ್ಯಾಕ್ ಮಾಡಿದ ಆಹಾರದ ಬದಲಿಗೆ ಮನೆಯಲ್ಲಿಯೇ ತಾಜಾ ಉಪಹಾರ ಮಾಡಿ ಸೇವಿಸಿ. ಬೆಳಗಿನ ಉಪಹಾರ ಮಾಡಲು ಸಮಯವಿಲ್ಲದೇ ಇದ್ದರೆ ಬೀಜಗಳನ್ನು ತಿನ್ನುವುದು ಸಹ ಪ್ರಯೋಜನಕಾರಿ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ಈ ಜನರು ಬೆಳಗಿನ ಉಪಾಹಾರ ತಪ್ಪಿಸಬಾರದು


    ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು, ದೊಡ್ಡ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುತ್ತಿರುವವರು, ಒತ್ತಡದ ಕೆಲಸದಲ್ಲಿರುವವರು, ಋತುಬಂಧ ಮತ್ತು ಗರ್ಭಿಣಿಯರು, ಕ್ರೀಡಾಪಟುಗಳು, ದೀರ್ಘಕಾಲದ ಕಾಯಿಲೆಯ ರೋಗಿಗಳು ನಿಯಮಿತವಾಗಿ ಬೆಳಗಿನ ಉಪಾಹಾರ ಸೇವನೆ ತಪ್ಪಿಸಬಾರದು.

    Published by:renukadariyannavar
    First published: