Urine Holding problem: ಆಗಾಗ ಮೂತ್ರ ನಿಯಂತ್ರಿಸುವುದು ತುಂಬಾ ಡೇಂಜರ್! ಅಭ್ಯಾಸ ಬದಲಾಯಿಸಿ

ನೀವು ಬರುವ ಮೂತ್ರವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಅದು ದೇಹದ ನೈಸರ್ಗಿಕ ಪ್ರಕ್ರಿಯೆಯಲ್ಲಿ ಅಡಚಣೆ ಉಂಟು ಮಾಡುತ್ತದೆ. ಪರಿಣಾಮ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಮೂತ್ರ ಬಂದಾಗ ಅದನ್ನು ತಡೆಯುವುದು ಅಥವಾ ನಿಯಂತ್ರಣ ಮಾಡಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಕ್ತದಿಂದ (Blood) ತ್ಯಾಜ್ಯ (Waste) ಮತ್ತು ಹೆಚ್ಚುವರಿ ನೀರನ್ನು (Over Water) ಫಿಲ್ಟರ್ ಮಾಡುವ ಮೂಲಕ ನಮ್ಮ ಮೂತ್ರಪಿಂಡಗಳು ( Kidneys) ಮೂತ್ರ ತಯಾರಿಸುತ್ತವೆ. ಇದು ದೇಹದಿಂದ (Body) ಅನುಪಯುಕ್ತ ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕುವ ಕ್ರಿಯೆ ಆಗಿದೆ. ಹಾಗಾಗಿ ದೇಹದಲ್ಲಿ ಮೂತ್ರ ವಿಸರ್ಜನೆ ಮತ್ತು ಮಲ ವಿಸರ್ಜನೆ ಉಂಟಾಗುವುದನ್ನು ಮಾತ್ರ ತಡೆದುಕೊಳ್ಳಬಾರದು. ಮೂತ್ರ ವಿಸರ್ಜನೆ ಬಂದಾಗ ಅದನ್ನು ನಿಗ್ರಹಿಸುವ ತಪ್ಪು ಮಾಡಬೇಡಿ. ಯಾಕೆಂದರೆ ಇದು ನಿಮ್ಮ ದೇಹದ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟು ಮಾಡಿ, ಬೇರೊಂದು ಕಾಯಿಲೆ ಉಂಟು ಮಾಡುತ್ತದೆ. ಮೂತ್ರ ವಿಸರ್ಜನೆ ಬಯಕೆ ಆದಾಗ ಅದನ್ನು ತಡೆಯುವುದು ದೇಹದ ಅನಗತ್ಯ ಚಟುವಟಿಕೆಗಳಲ್ಲಿ ಒಂದಾಗಿದೆ.

    ಮೂತ್ರ ತಡೆಯುವುದು ದೇಹದ ನೈಸರ್ಗಿಕ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುತ್ತದೆ

    ಅಂತಹ ಸ್ಥಿತಿಯಲ್ಲಿ, ನೀವು ಬರುವ ಮೂತ್ರವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಅದು ದೇಹದ ನೈಸರ್ಗಿಕ ಪ್ರಕ್ರಿಯೆಯಲ್ಲಿ ಅಡಚಣೆ ಉಂಟು ಮಾಡುತ್ತದೆ. ಪರಿಣಾಮ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ.

    ಆಯುರ್ವೇದ ವೈದ್ಯೆ ಐಶ್ವರ್ಯಾ ಸಂತೋಷ್ ಅವರು, ಇತ್ತೀಚೆಗೆ ಮೂತ್ರ ನಿಯಂತ್ರಿಸುವ ಫಲಿತಾಂಶದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮತ್ತು ಮೂತ್ರ ಬಂದಾಗ ಅದನ್ನು ತಡೆಯುವುದು ಅಥವಾ ನಿಯಂತ್ರಣ ಮಾಡದಂತೆ ಸಲಹೆ ನೀಡಿದ್ದಾರೆ. ಆಯುರ್ವೇದವು 13 ನೈಸರ್ಗಿಕ ಪ್ರಚೋದನೆಗಳನ್ನು ವಿವರಿಸುತ್ತದೆ ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

    ಹಾಗಾಗಿ ಎಂದಿಗೂ ಮೂತ್ರ ವಿಸರ್ಜನೆಯನ್ನು ನಿಗ್ರಹಿಸಬಾರದು. ವಿಶೇಷವಾಗಿ ಮಹಿಳೆಯರು ಅನೇಕ ಕಾರಣಗಳಿಂದ ಮೂತ್ರ ವಿಸರ್ಜನೆಯ ಪ್ರಚೋದನೆಯನ್ನು ನಿಗ್ರಹಿಸುತ್ತಾರೆ. ಹೀಗೆ ಮಾಡುವುದು ನಿಮ್ಮ ಅಸ್ವಸ್ಥತೆ ಹಾಗೂ ಇತರೆ ಕಾಯಿಲೆಗಳನ್ನು ಹೆಚ್ಚಿಸುವ ಸಾಧ್ಯತೆ ತುಂಬಾ ಇದೆ.

    ಮೂತ್ರ ವಿಸರ್ಜನೆ ನಿಯಂತ್ರಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು

    ಗಾಳಿಗುಳ್ಳೆಯ ಸಾಮರ್ಥ್ಯವು ವಯಸ್ಸನ್ನು ಅವಲಂಬಿಸಿರುತ್ತದೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ವ್ಯಕ್ತಿಯ ವಯಸ್ಸನ್ನು ಅವಲಂಬಿಸಿರುತ್ತದೆ. ವಯಸ್ಕರರ ಮೂತ್ರಕೋಶವು 2 ಕಪ್ ಮೂತ್ರ ಹಿಡಿದಿಟ್ಟುಕೊಳ್ಳುತ್ತದೆ.

    ಹಾಗೆಯೇ ಮಕ್ಕಳಲ್ಲಿ ಮೂತ್ರವನ್ನು ಸಂಗ್ರಹಿಸುವ ಸಾಮರ್ಥ್ಯವು ಅದರ ಅರ್ಧದಷ್ಟು ಇರುತ್ತದೆ. ಇದೇ ಕಾರಣಕ್ಕೆ ಮಕ್ಕಳು ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಾರೆ.

    ಮೂತ್ರ ವಿಸರ್ಜನೆ ಮಾಡದೇ ನಿಯಂತ್ರಿಸುವುದು ಯಾವಾಗ ಸಮಸ್ಯೆಯಾಗುತ್ತದೆ?

    ಆಯುರ್ವೇದ ತಜ್ಞರ ಪ್ರಕಾರ, ಮೂತ್ರ ವಿಸರ್ಜನೆ ನಿಲ್ಲಿಸುವುದು ನೈಸರ್ಗಿಕ ಕರೆ ಎಂದು ಹೇಳುತ್ತಾರೆ. ಮತ್ತು ನೀವು ಅದನ್ನು ತಡೆಯಲು ಪ್ರಯತ್ನಿಸಿದಾಗ, ನೀವು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಒಂದು ಅಥವಾ ಎರಡು ಬಾರಿ ಮೂತ್ರ ಹಿಡಿದಿಟ್ಟುಕೊಳ್ಳುವುದು ಉತ್ತಮ.

    ಆದರೆ ನಿಯಮಿತವಾಗಿ ಮೂತ್ರವನ್ನು ತಡೆ ಹಿಡಿದಾಗ ಅಥವಾ ನಿಯಂತ್ರಿಸಿದಾಗ ಅದು ಅನೇಕ ರಚನಾತ್ಮಕ ಮತ್ತು ಕ್ರಿಯಾತ್ಮಕ ಅಸಹಜತೆ ಉಂಟು ಮಾಡುತ್ತದೆ.

    ಮೂತ್ರ ವಿಸರ್ಜನೆ ವೇಳೆ ನೋವು ಮತ್ತು ಯುಟಿಐ ಅಪಾಯ

    ಸಾಮರ್ಥ್ಯಕ್ಕಿಂತ ಹೆಚ್ಚು ಮೂತ್ರವನ್ನು ಮೂತ್ರಕೋಶದಲ್ಲಿ ಹಿಡಿದಿದ್ದರೆ, ಅದು ಸೋಂಕಿಗೆ ಕಾರಣವಾಗುತ್ತದೆ. ವಾಸ್ತವದಲ್ಲಿ ಮೂತ್ರವು ದೇಹದ ಅನೇಕ ಅನುಪಯುಕ್ತ ಬ್ಯಾಕ್ಟೀರಿಯಾ  ಹೊಂದಿರುತ್ತದೆ. ಸಮಯಕ್ಕೆ ಅದನ್ನು ತೆಗೆದು ಹಾಕದಿದ್ದಾಗ, ಅವುಗಳ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಸೋಂಕು ಸಂಭವಿಸುತ್ತದೆ.

    ಹಾಗಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಏಕೆಂದರೆ ಅನೇಕ ಕಾರಣಗಳಿಂದ ಮಹಿಳೆಯರು ಮೂತ್ರ ವಿಸರ್ಜಿಸುವ ಪ್ರಚೋದನೆಯನ್ನು ನಿಗ್ರಹಿಸುತ್ತಾರೆ.

    ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಕಾಡಬಹುದು

    ಮೂತ್ರವನ್ನು ಆಗಾಗ್ಗೆ ನಿಯಂತ್ರಿಸುವ ಅಭ್ಯಾಸವು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗೆ ಉತ್ತೇಜನ ನೀಡುತ್ತದೆ. ಆಹಾರ ಪದ್ಧತಿ, ಅಧಿಕ ತೂಕ, ವೈದ್ಯಕೀಯ ಪರಿಸ್ಥಿತಿಗಳು ಮತ್ತು ಔಷಧಗಳು ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗುತ್ತವೆ.

    ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

    ಸ್ನಾಯುಗಳಲ್ಲಿ ತೊಂದರೆ

    ಮೂತ್ರ ನಿಯಂತ್ರಣ ಮಾಡುವುದು ಗಾಳಿಗುಳ್ಳೆಯ ಗೋಡೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಈ ಸ್ಥಿತಿಯು ದೀರ್ಘ ಕಾಲ ಇದ್ದರೆ, ಮೂತ್ರಕೋಶಕ್ಕೆ ಹಾನಿಯಾಗುತ್ತದೆ. ಇದು ಮೂತ್ರದ ಸೋರಿಕೆಗೆ ಕಾರಣ. ಮೂತ್ರವನ್ನು ದೀರ್ಘ ಕಾಲ ಹಿಡಿದಿಟ್ಟರೆ ಮೂತ್ರಕೋಶ ಮತ್ತು ಖಾಸಗಿ ಭಾಗದಲ್ಲಿ ನೋವುಂಟಾಗುತ್ತದೆ.
    Published by:renukadariyannavar
    First published: