Yoga And Health: ಬೆಳಗಿನ ಜಾವ ನಿಯಮಿತವಾಗಿ ಮಾಡುವ ಯೋಗ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

ನಿಯಮಿತವಾಗಿ ಬೆಳಿಗ್ಗೆ ಯೋಗ ಮಾಡುವುದು ಕೆಲವು ಪ್ರಮುಖ ಆರೋಗ್ಯ ಪ್ರಯೋಜನ ನೀಡುತ್ತದೆ. ದಿನದ ಮೊದಲ ಉಸಿರಾಟವು ತುಂಬಾ ಶಕ್ತಿಯುತವಾಗಿರುತ್ತದೆ. ಇದು ದಿನವಿಡೀ ತಾಜಾ ಮತ್ತು ಆರೋಗ್ಯವಾಗಿರಲು ಶಕ್ತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿಯಮಿತವಾಗಿ ಯೋಗಾಭ್ಯಾಸ (Yoga) ಮಾಡುವುದು ನಿಮ್ಮ ಆರೋಗ್ಯಕರ ಜೀವನಶೈಲಿಗೆ (Healthy Lifestyle) ಸಾಕಷ್ಟು ಪ್ರಯೋಜನ (Benefits) ತಂದು ಕೊಡುತ್ತದೆ. ಇದು ದೇಹ ಮತ್ತು ಮನಸ್ಸನ್ನು (Body and Mind) ಸಮತೋಲನದಲ್ಲಿಡಲು ಕೆಲಸ ಮಾಡುತ್ತದೆ. ನೀವು ಬೆಳಗಿನ ಜಾವ ಯೋಗ ಮಾಡಿದರೆ ಅದು ಸಾಮಾನ್ಯ ಯೋಗಕ್ಕಿಂತ ಹಲವು ಪಟ್ಟು ಹೆಚ್ಚು ಆರೋಗ್ಯ ಪ್ರಯೋಜನ ನೀಡುತ್ತದೆ. ನಿಮ್ಮ ಯೋಗದ ಸಮಯ ಯಾವುದು ಎಂಬ ಬಗ್ಗೆ ನಿಮಗೆ ಗೊಂದಲ ಇದ್ದರೆ ಅದನ್ನು ಇಲ್ಲಿ ನೋಡೋಣ. ಸಬಲೀಕರಣ ತರಬೇತುದಾರ ಜಾಗೃತಿ ಕಜಾರಿಯಾ ನಿಯಮಿತವಾಗಿ ಬೆಳಿಗ್ಗೆ ಯೋಗ ಮಾಡುವುದು ಕೆಲವು ಪ್ರಮುಖ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದಿದ್ದಾರೆ.

    ಬೆಳಗಿನ ಜಾವ ನಿಯಮಿತವಾಗಿ ಮಾಡುವ ಯೋಗದ ಐದು ಪ್ರಮುಖ ಪ್ರಯೋಜನಗಳು ಹೀಗಿವೆ

    ಬೆಳಗಿನ ಜಾವದ ನಿಯಮಿತ ಯೋಗವು ಉಸಿರಾಟ ಸಮಸ್ಯೆ ನಿವಾರಿಸುತ್ತದೆ

    ದಿನದ ಮೊದಲ ಉಸಿರಾಟವು ತುಂಬಾ ಶಕ್ತಿಯುತವಾಗಿರುತ್ತದೆ. ಇದು ದಿನವಿಡೀ ತಾಜಾ ಮತ್ತು ಆರೋಗ್ಯವಾಗಿರಲು, ಶಕ್ತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ ನೀವು ಬೆಳಿಗ್ಗೆ ನಿಮ್ಮ ಕಣ್ಣು ತೆರೆದಾಗ, ನಿಮ್ಮ ಇಂದ್ರಿಯಗಳು ಕೆಲಸ ಮಾಡಲು ಪ್ರಾರಂಭಿಸಿದಾಗ ಅದೇ ವೇಳೆ ನಿಮ್ಮ ದಿನವನ್ನು ಪ್ರಾರಂಭಿಸಿ.

    ನೀವು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗಿರದೇ ಹೋಗಿದ್ದರೆ ನಿಮ್ಮ ದಿನವು ಅನಾರೋಗ್ಯವಾಗಿರುತ್ತದೆ. ಹೀಗೆ ನಿಮಗೆ ಅನುಭವವಾದರೆ ಮೌನವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿ ಕುಳಿತು ಆಳವಾದ ಉಸಿರನ್ನು ತೆಗೆದುಕೊಳ್ಳಿ .

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ಮತ್ತು ನಂತರ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ಹೀಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಅದೇ ವೇಳೆ ದಿನದ ಮೊದಲ ಒಂದು ಗಂಟೆಯನ್ನು ಯೋಗ ಮತ್ತು ವ್ಯಾಯಾಮಕ್ಕೆ ಮೀಸಲಿಡಿ.

    ಯೋಗವು ದೇಹವನ್ನು ಬೆಚ್ಚಗಾಗಿಸುತ್ತದೆ

    ನಾವು ಬೆಳಿಗ್ಗೆ ಎದ್ದಾಗ ದೇಹವು ತಂಪಾಗಿರುತ್ತದೆ ಮತ್ತು ಸ್ಥಿರವಾಗಿರುತ್ತದೆ. ಮತ್ತೊಂದೆಡೆ ನೀವು ಬೆಳಿಗ್ಗೆ ಯೋಗ ಮಾಡುವಾಗ, ದೇಹವು ಬಿಸಿಯಾಗುತ್ತದೆ. ಮತ್ತು ಅದು ಶಕ್ತಿಯಾಗಿ ರೂಪಾಂತರವಾಗುತ್ತದೆ. ನಿಮ್ಮ ಮನಸ್ಸು ಆಂತರಿಕ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ.

    ಮತ್ತು ಬಲವಾದ ಮಾನಸಿಕ ಆರೋಗ್ಯ ಕಾಪಾಡುತ್ತದೆ. ದೇಹ, ಮನಸ್ಸು ಮತ್ತು ಬುದ್ಧಿ ಈ 3 ಘಟಕಗಳನ್ನು ಬಳಸುವುದು ಇಡೀ ದಿನವನ್ನು ಆರೋಗ್ಯಕರವಾಗಿರಿಸುತ್ತದೆ. ಯೋಗವು ಈ ಮೂರು ಅಂಶಗಳನ್ನು ಸಮತೋಲನಗೊಳಿಸುತ್ತದೆ.

    ದೇಹದ ಸುತ್ತ ಕಂಪನಗಳನ್ನು ಹರಡುತ್ತದೆ

    ನಮ್ಮ ದೇಹವು ನಿದ್ರಿಸುವಾಗ ದೇಹವು ನಿಶ್ಚಲವಾಗಿರುತ್ತದೆ. ಏಕೆಂದರೆ ಮಲಗಿದಾಗ ದೇಹದ ಕಂಪನವು ತುಂಬಾ ಕಡಿಮೆ ಆವರ್ತನದಲ್ಲಿರುತ್ತದೆ. ಬೆಳಿಗ್ಗೆ ಎದ್ದಾಗ ಜೀವಕೋಶಗಳು ಕ್ರಮೇಣ ಕಂಪನದ ಆವರ್ತನ ಹೆಚ್ಚಿಸುತ್ತವೆ. ಯೋಗವು ಈ ಕಂಪನವನ್ನು ಸಮತೋಲನದಲ್ಲಿಡಲು ಸಹಕಾರಿ.

    ವಿಟಮಿನ್ ಡಿ ಮತ್ತು ದೇಹವನ್ನು ಸಮನ್ವಯಗೊಳಿಸುತ್ತದೆ

    ನಮ್ಮ ಜೀವಕೋಶಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ನಮ್ಮ ದೇಹದ ಕಾರ್ಯಗಳನ್ನು ಕಿಕ್‌ಸ್ಟಾರ್ಟ್ ಮಾಡುತ್ತದೆ. ಕತ್ತಲಾದ ನಂತರ ಬೆಳಕಿಗೆ ಬರುವ ಮೂಲಕ ನಮ್ಮ ಮನಸ್ಸು ಮೆಲಟೋನಿನ್ ಉತ್ಪಾದನೆ ನಿಲ್ಲಿಸುತ್ತದೆ. ಹಾಗೂ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ಸ್ನಾಯುಗಳು ಗಟ್ಟಿಯಾಗುತ್ತವೆ.

    ಬೆಳಗಿನ ಯೋಗವು ದೇಹದ ಲಯವನ್ನು ಕಾಪಾಡುತ್ತದೆ. ಜೊತೆಗೆ ಮೆಲಟೋನಿನ್ ಅನ್ನು ಉತ್ಪಾದಿಸಲು ಮೆದುಳಿಗೆ ಸಹಾಯ ಮಾಡುತ್ತದೆ. ಹಾಗಾಗಿ ಸೂರ್ಯ ನಮಸ್ಕಾರದ ವಿವಿಧ ವಿಸ್ತರಣೆಗಳು ಬೆಳಕಿನ ಮೂಲವಾದ ಸೂರ್ಯನೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.

    ಯೋಗವು ನಿಮ್ಮ ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತವೆ. ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ಒತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ

    ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ. ಬೆಳಗ್ಗೆ ಯೋಗ ಮಾಡುವುದರಿಂದ ದಿನವಿಡೀ ಮಾನಸಿಕ ನೆಮ್ಮದಿ ಸಿಗುತ್ತದೆ. ಬೆಳಿಗ್ಗೆ ಎದ್ದು ಮುಕ್ತ ವಾತಾವರಣದಲ್ಲಿ ಯೋಗ ಮಾಡಲು ಪ್ರಯತ್ನಿಸಿ. ಅದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ಮನಸ್ಸಿನಿಂದ ಎಲ್ಲಾ ರೀತಿಯ ನಕಾರಾತ್ಮಕತೆ ತೆಗೆದು ಹಾಕುತ್ತದೆ.
    Published by:renukadariyannavar
    First published: