• Home
 • »
 • News
 • »
 • lifestyle
 • »
 • Health Care: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ

Health Care: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುನಕ್ಕ ಒಣದ್ರಾಕ್ಷಿ ಸೇವನೆ ಮಾಡುವುದು ಅನೇಕ ಪ್ರಯೋಜನ ನೀಡುತ್ತದೆ. ಇದು ತಂಪಾಗಿಸುವ ಪರಿಣಾಮ ಹೊಂದಿದೆ. ದೇಹದಲ್ಲಿ ವಾತ ಮತ್ತು ಪಿತ್ತ ದೋಷ ಸಮತೋಲನ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿ.

 • Share this:

  ಮುನಕ್ಕ (Munakka) ಇದೊಂದು ಒಣ ಹಣ್ಣು (Dry Fruit). ಇದು ಒಣದ್ರಾಕ್ಷಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಇದನ್ನು ವಿವಿಧ ಬಗೆಯ ಒಣ ದ್ರಾಕ್ಷಿಗಳಿಂದ ತಯಾರು ಮಾಡ್ತಾರೆ. ಇದು ಸಿಹಿ (Sweet) ರುಚಿ (Taste) ಹೊಂದಿದೆ. ಮತ್ತು ಇದನ್ನು ಸಾಮಾನ್ಯವಾಗಿ ಔಷಧೀಯ (Medicinal) ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ. ಆದರೂ ಜನರು ಇದನ್ನು ಖಾಲಿ ಅಥವಾ ಹಸಿ ಅಥವಾ ಕಚ್ಚಾ (Raw) ರೂಪದಲ್ಲಿ ಸೇವನೆ ಮಾಡುತ್ತಾರೆ. ಹೆಚ್ಚಿನ ಜನರು ತಮ್ಮ ಜೀರ್ಣಾಂಗ ವ್ಯವಸ್ಥೆ ಸರಿಪಡಿಸಲು ಇದನ್ನು ಸೇವನೆ ಮಾಡುತ್ತಾರೆ. ಆದರೆ ಒಣದ್ರಾಕ್ಷಿ ಸೇವನೆ ಮಾಡುವುದು ಅನೇಕ ಪ್ರಯೋಜನ ನೀಡುತ್ತದೆ. ಇದು ತಂಪಾಗಿಸುವ ಪರಿಣಾಮ ಹೊಂದಿದೆ.


  ಮತ್ತು ದೇಹದಲ್ಲಿ ವಾತ ಮತ್ತು ಪಿತ್ತ ದೋಷ ಸಮತೋಲನ ಮಾಡಲು ಸಹಾಯ ಮಾಡುತ್ತದೆ. ನೀವೂ ಇದನ್ನು ತಿನ್ನುವ ಯೋಚನೆಯಲ್ಲಿ ಇದ್ದರೆ ಅದನ್ನು ಸೇವಿಸುವ ಸರಿಯಾದ ಮಾರ್ಗ ಯಾವುದು ಎಂದು ತಿಳಿದುಕೊಳ್ಳಿ. ಆದರೆ ಅದಕ್ಕೂ ಮೊದಲು ಅದರ ಪ್ರಯೋಜನಗಳ ಬಗ್ಗೆ ನೋಡೋಣ.


  ಮುನಕ್ಕ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?


  ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ


  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ಒಣದ್ರಾಕ್ಷಿ ಪೊಟ್ಯಾಸಿಯಮ್ ಅನ್ನು ಹೊಂದಿದೆ. ಇದು ರಕ್ತನಾಳಗಳ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದೆ.


  ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


  ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ


  ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್ ಇಂಟರ್ನ್ಯಾಷನಲ್ ಪ್ರಕಾರ ಇದು ಕ್ಯಾಟೆಚಿನ್ ಮತ್ತು ಕೆಂಪ್ಫೆರಾಲ್ ಅನ್ನು ಹೊಂದಿದೆ. ಇದು ಒಂದು ರೀತಿಯ ಫ್ಲೇವನಾಯ್ಡ್ ಆಂಟಿ-ಆಕ್ಸಿಡೆಂಟ್. ಇದು ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆ ಕಡಿಮೆ ಮಾಡಲು ಸಹಕಾರಿ ಆಗಿದೆ.


  ಕಣ್ಣುಗಳಿಗೆ ಪ್ರಯೋಜನಕಾರಿ


  ಒಣದ್ರಾಕ್ಷಿಗಳು ಪಾಲಿಫಿನಾಲಿಕ್‌ ನ ಉತ್ತಮ ಮೂಲ. ಇದು ಒಂದು ರೀತಿಯ ಫೈಟೊನ್ಯೂಟ್ರಿಯೆಂಟ್ ಆಗಿದೆ. ಅದು ಕಣ್ಣುಗಳಿಗೆ ಒಳ್ಳೆಯದು. ಇದರ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ ಮತ್ತು ನಿಮ್ಮ ಕಣ್ಣುಗಳನ್ನು ಗ್ಲುಕೋಮಾದಿಂದ ರಕ್ಷಣೆ ಮಾಡುತ್ತದೆ. ರಾತ್ರಿ ಕುರುಡುತನ ಮತ್ತು ಕಣ್ಣಿನ ಪೊರೆ ಇತ್ಯಾದಿ  ತಡೆಯುತ್ತದೆ.


  ದೈಹಿಕ ಶಕ್ತಿ ನೀಡುತ್ತದೆ


  ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಾರ ಒಣದ್ರಾಕ್ಷಿ ಅನೇಕ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ರಂಜಕ ಖನಿಜ ಹೊಂದಿವೆ. ಇದು ದೇಹವು ಇತರ ಪೋಷಕಾಂಶ ಹೀರಿಕೊಳ್ಳಲು ಸಹಕಾರಿ ಆಗಿದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


  ಮುನಕ್ಕವನ್ನು ಆಹಾರದಲ್ಲಿ ಸೇರಿಸಲು ಸರಿಯಾದ ಮಾರ್ಗ ಯಾವುದು?


  ಆರೋಗ್ಯವಂತ ವ್ಯಕ್ತಿಯು ದಿನವಿಡೀ 5 ರಿಂದ 6 ಒಣದ್ರಾಕ್ಷಿ ಸೇವಿಸಬಹುದು. ನೀವು ಅವುಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನಬಹುದು. ಇದು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


  ಒಣದ್ರಾಕ್ಷಿ ಸೇವಿಸಲು, ನೀವು ರಾತ್ರಿಯಲ್ಲಿ ಬೆಚ್ಚಗಿನ ಹಾಲಿನ ಜೊತೆ ಸೇವಿಸಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.


  ಸಂಜೆಯ ತಿಂಡಿಯಾಗಿ ಇತರ ಡ್ರೈ ಫ್ರೂಟ್ಸ್ ಜೊತೆಗೆ ಮುನಕ್ಕ ಸೇರಿಸಿ ಸೇವಿಸಿ. ಇದು ನಿಮ್ಮ ಮೂಳೆಗಳು ಮತ್ತು ಕೂದಲನ್ನು ಬಲಪಡಿಸುತ್ತದೆ.


  ಡ್ರೈ ಫ್ರೂಟ್ ಲಡ್ಡು ತಯಾರಿಸುವಾಗ ಸೇರಿಸಿ. ಪ್ರತಿದಿನ ಒಂದರಿಂದ ಎರಡು ಲಡ್ಡು ಸೇವಿಸಬಹುದು. ಇದು ಗರ್ಭಾವಸ್ಥೆಯಲ್ಲಿ ನಿಮಗೆ ಸರಿಯಾದ ಪೋಷಣೆ ನೀಡುತ್ತದೆ.


  ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


  ಒಣ ಕೆಮ್ಮಿನಿಂದ ತ್ವರಿತ ಪರಿಹಾರ ನೀಡಲು ಒಣ ದ್ರಾಕ್ಷಿ, ಕರಿಮೆಣಸು ಮತ್ತು ಖರ್ಜೂರವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ನ ಒಂದು ಟೀ ಚಮಚವನ್ನು ದಿನಕ್ಕೆ ಮೂರು ಬಾರಿ ತಿನ್ನಿರಿ. ಒಣ ದ್ರಾಕ್ಷಿಯನ್ನು ತಿನ್ನುವಾಗ ಅದರ ಬೀಜಗಳನ್ನು ತೆಗೆದು ಚೆನ್ನಾಗಿ ಜಗಿದು ತಿನ್ನಬೇಕು.

  Published by:renukadariyannavar
  First published: