• Home
 • »
 • News
 • »
 • lifestyle
 • »
 • Pithecellobium Dulce: ಕೆಟ್ಟ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಕಾಡು ಜಿಲೇಬಿ ಹಣ್ಣು!

Pithecellobium Dulce: ಕೆಟ್ಟ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಕಾಡು ಜಿಲೇಬಿ ಹಣ್ಣು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಡು ಜಿಲೇಬಿ ಹಣ್ಣು ಅನೇಕ ರೀತಿಯ ಕಾಯಿಲೆಗಳ ನಿವಾರಣೆಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಗರಗಳಲ್ಲಿ ವಾಸಿಸುವ ಎಷ್ಟೋ ಜನರಿಗೆ ಈ ಹಣ್ಣಿನ ಬಗ್ಗೆ ತಿಳಿದಿಲ್ಲ. ಆದರೆ ಹಳ್ಳಿಯ ಜನರು ಈ ಹಣ್ಣನ್ನು ನೋಡಿದ್ದಾರೆ ಮತ್ತು ತಿಂದಿದ್ದಾರೆ. ಹಾಗೂ ತುಂಬಾ ಜನರು ತಿನ್ನಲು ಇಷ್ಟ ಪಡುತ್ತಾರೆ.

ಮುಂದೆ ಓದಿ ...
 • Share this:

  ಕಾಡು ಜಿಲೇಬಿ (Pithecellobium Dulce) ಅಂದ್ರೆ ಮದ್ರಾಸ್ ಮುಳ್ಳು ಎಂದು ಕರೆಯಲ್ಪಡುವ ಒಂದು ತರಹದ ಹಣ್ಣು (Fruit) ಇದೆ. ಇದು ಜಿಲೇಬಿಯಂತೆ ವಕ್ರವಾಗಿ ದುಂಡಗೆ ಸುತ್ತಿಕೊಂಡಿರುತ್ತದೆ. ಹಾಗಾಗಿ ಇದನ್ನು ಕಾಡು ಜಿಲೇಬಿ ಎಂದು ಕರೆಯುತ್ತಾರೆ. ಈ ಕಾಡು ಜಿಲೇಬಿ ಹಣ್ಣು ಹೆಚ್ಚಾಗಿ ಕಾಡುಗಳಲ್ಲಿ (Forest) ಕಂಡು ಬರುತ್ತದೆ. ಕಾಡು ಜಿಲೇಬಿ ಸಿಪ್ಪೆಯನ್ನು ತೆಗೆದರೆ ಬಿಳಿಯ ಅಂಶ ಮತ್ತು ಕಪ್ಪು ಬೀಜವಿರುತ್ತದೆ. ಬಿಳಿ ಅಂಶವನ್ನು ತಿಂದಾಗ ಇದು ಸ್ವಲ್ಪ ಸಿಹಿ ಮತ್ತು ಒಗರಾಗಿರುತ್ತದೆ. ಅಂದ ಹಾಗೆ ಈ ಕಾಡು ಜಿಲೇಬಿ ಹಣ್ಣನ್ನು ಹಲವು ಭಾಗಗಳಲ್ಲಿ ಹಲವು ಹೆಸರಿನಿಂದ (Name) ಕರೆಯುತ್ತಾರೆ.


  ಕಾಡು ಜಿಲೇಬಿ ಹಣ್ಣು ಪ್ರಯೋಜನಗಳು


  ಮೀತಿ ಹುಣಸೆಹಣ್ಣು, ಗಂಗಾ ಜಲೇಬಿ, ಮದ್ರಾಸ್ ಸಿಂಹಾಸನ, ಗ್ವಾಮುಚಿಲ್ ಹೀಗೆ ವಿವಿಧ ಹೆಸರುಗಳನ್ನು ಕಾಡು ಜಿಲೇಬಿ ಹೊಂದಿದೆ. ಈ ಹಣ್ಣು ತಿನ್ನಲು ರುಚಿ ಹಾಗೂ ಒಗರು ಸ್ವಭಾವ ಹೊಂದಿದೆ. ಈ ಕಾಡು ಜಿಲೇಬಿ ಹಣ್ಣು ಆರೋಗ್ಯ ಪ್ರಯೋಜನ ನೀಡುತ್ತದೆ.


  ಕಾಡು ಜಿಲೇಬಿ ಹಣ್ಣು ಅನೇಕ ರೀತಿಯ ಕಾಯಿಲೆಗಳ ನಿವಾರಣೆಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಗರಗಳಲ್ಲಿ ವಾಸಿಸುವ ಎಷ್ಟೋ ಜನರಿಗೆ ಈ ಹಣ್ಣಿನ ಬಗ್ಗೆ ತಿಳಿದಿಲ್ಲ. ಆದರೆ ಹಳ್ಳಿಯ ಜನರು ಈ ಹಣ್ಣನ್ನು ನೋಡಿದ್ದಾರೆ ಮತ್ತು ತಿಂದಿದ್ದಾರೆ. ಹಾಗೂ ತುಂಬಾ ಜನರು ತಿನ್ನಲು ಇಷ್ಟ ಪಡುತ್ತಾರೆ.


  ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


  ಕಾಡು ಜಿಲೇಬಿಯ ಔಷಧೀಯ ಗುಣಗಳು?


  ಎನ್ ಸಿಬಿಐ ಪ್ರಕಾರ, ಸಸ್ಯದ ಸಾರದ ವಿವಿಧ ಭಾಗಗಳು ಆಂಟಿ ಆಕ್ಸಿಡೆಂಟ್, ಉರಿಯೂತ, ಆಂಟಿಮೈಕ್ರೊಬಿಯಲ್, ಆಂಟಿ ಡಯಾಬಿಟಿಕ್, ಕಾರ್ಡಿಯೋ ಪ್ರೊಟೆಕ್ಟಿವ್, ಆಂಟಿ ಡೈರಿಯಾಲ್, ಆಂಟಿ ಅಲ್ಸರೋಜೆನಿಕ್, ಲಾರ್ವಿಸಿಡಲ್ ಮತ್ತು ಅಂಡಾಶಯದ ಗುಣಲಕ್ಷಣ ಹೊಂದಿವೆ.


  ಇದರೊಂದಿಗೆ ಫ್ಲೇವನಾಯ್ಡ್‌ಗಳು, ಸಪೋನಿನ್‌ಗಳು, ಟ್ಯಾನಿನ್‌, ಆಲ್ಕಲಾಯ್ಡ್‌ಗಳು ಮುಂತಾದ ಜೈವಿಕ ಕ್ರಿಯಾಶೀಲ ಫೈಟೊಕಾಂಪೌಂಡ್‌ಗಳು ಸಹ ಇದರಲ್ಲಿ ಕಂಡುಬರುತ್ತವೆ. ಇದಲ್ಲದೆ, ಇದು ವಿಟಮಿನ್ ಸಿ, ವಿಟಮಿನ್ ಬಿ 1, ಬಿ 2, ಬಿ 3,ವಿಟಮಿನ್ ಕೆ, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪ್ರೋಟೀನ್, ಆಹಾರದ ಫೈಬರ್, ಸೋಡಿಯಂ ಮತ್ತು ವಿಟಮಿನ್ ಎ ಕೂಡ ಇದೆ.


  ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ


  ಮಧುಮೇಹದಲ್ಲಿ ಕಾಡು ಜಿಲೇಬಿಯ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಜಂಗಲ್ ಜಲೇಬಿ ಪಾಡ್ ಸಾರವು ಆಂಟಿ ಹೈಪರ್ಗ್ಲೈಸೆಮಿಕ್ ಗುಣಲಕ್ಷಣ ಹೊಂದಿದೆ. ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್‌ನಿಂದ ಬಳಲುತ್ತಿರುವ ಜನರಿಗೆ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು ಮಧುಮೇಹಿಗಳು ಇದನ್ನು ನಿಯಮಿತವಾಗಿ ಸೇವಿಸಬಹುದು.


  ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ


  ಕಾಡು ಜಿಲೇಬಿ ಹಣ್ಣು ಸೇವನೆ ರಕ್ತದ ಕೆಟ್ಟ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೂ ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಪೊಟ್ಯಾಸಿಯಮ್ ಹೃದಯದ ಆರೋಗ್ಯ ಕಾಪಾಡಲು ಕೆಲಸ ಮಾಡುತ್ತದೆ. ಕಾಡು ಜಿಲೇಬಿ ಹಣ್ಣು ಹೃದ್ರೋಗಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಿವೆ ಅಧ್ಯಯನಗಳು.


  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


  ಕಾಡಿನಲ್ಲಿ ಬೆಳೆಯುವ ಜಿಲೇಬಿಯಂತೆ ಕಾಣುವ ಈ ಕಾಡು ಜಿಲೇಬಿ ಹಣ್ಣಿನಲ್ಲಿ ಹಲವು ಬಗೆಯ ಆ್ಯಂಟಿ ಆಕ್ಸಿಡೆಂಟ್ ಗಳು ಇವೆ. ರೋಗಗಳು ಮತ್ತು ವೈರಸ್‌ಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ.


  ಕಾಡು ಜಿಲೇಬಿಯಲ್ಲಿ ಉರಿಯೂತ ನಿವಾರಕ ಗುಣ ಹೊಂದಿದೆ. ಈ ಗುಣವು ರಕ್ತದ ಯೂರಿಕ್ ಆಮ್ಲದ ಪ್ರಮಾಣ ನಿಯಂತ್ರಿಸಲು ಸಹಕಾರಿ ಆಗಿದೆ. ನೀವು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದರೆ ಕಾಡು ಜಿಲೇಬಿ ಹಣ್ಣು ನಿಮಗೆ ಪ್ರಯೋಜನಕಾರಿ ಆಗಿದೆ.


  ಕಾಡು ಜಿಲೇಬಿ ಹಣ್ಣಯನ್ನು ಯಾವುದೇ ಹಣ್ಣಿನಂತೆ ಸಿಪ್ಪೆ ತೆಗೆದು ತಿನ್ನಬಹುದು. ಅದರ ಬೀಜಗಳು ಹೊಟ್ಟೆಗೆ ಹೋಗುವುದಿಲ್ಲ. ಬೀಜವನ್ನು ಇದನ್ನು ಒಣಗಿಸಿ ಅಥವಾ ಮುರಬ್ಬ ಮಾಡಿ ತಿನ್ನಬಹುದು.


  ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


  ಯಾರಿಗೆ ಕಾಡು ಜಿಲೇಬಿ ಸೇವನೆ ಹಾನಿಕರ?


  ಕಾಡು ಜಿಲೇಬಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಆದರೆ ಕೆಲವರು ಇದರ ಸೇವನೆ ತಪ್ಪಿಸಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು, ಯಾವುದೇ ದೀರ್ಘಕಾಲದ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿರುವವರು ಮೊದಲು ವೈದ್ಯಕೀಯ ಸಲಹೆ ಪಡೆದು ನಂತರ ಸೇವಿಸಬೇಕು.

  Published by:renukadariyannavar
  First published: